ಗುರುಮಂತ್ರವನ್ನು ನೀಡಿದ ನಂತರ ಗುರುಗಳು ಶಿಷ್ಯನಿಂದ ನಿರಪೇಕ್ಷವಾಗಿ ಸಾಧನೆಯನ್ನು ಮಾಡಿಸಿಕೊಂಡು ಅವನಿಗೆ ಅದರ ಫಲವನ್ನು ನೀಡುತ್ತಾರೆ !

ಮಂತ್ರಸಿದ್ಧಿ ಪ್ರಾಪ್ತಿಯಾಗಿರುವ ಗುರುಗಳಲ್ಲಿ ಆ ಮಂತ್ರದ ಬೀಜವಿರುತ್ತದೆ. (ಅವರು ಆ ಮಂತ್ರದೊಂದಿಗೆ ಏಕರೂಪ ವಾಗಿರುತ್ತಾರೆ.) ಗುರುಗಳು ಆ ಮಂತ್ರವನ್ನು ಶಿಷ್ಯನಿಗೆ ನೀಡುತ್ತಾರೆ. ಈ ಮಂತ್ರದ ಜಪವನ್ನು ಗುರುಗಳು ಶಿಷ್ಯನಿಂದ ಮಾಡಿಸಿಕೊಳ್ಳುತ್ತಾರೆ ಮತ್ತು ಶಿಷ್ಯನ ಅಂತರ್ಮನದಲ್ಲಿ ಮಂತ್ರರೂಪೀ ಬೀಜವನ್ನು ಬಿತ್ತುತ್ತಾರೆ, ಅದನ್ನು ಬೆಳೆಸುತ್ತಾರೆ ಮತ್ತು ಅದರ ಫಲವನ್ನು ನೀಡುತ್ತಾರೆ. ಸಾಧನೆಯ ಪಥದಲ್ಲಿ ಮಾರ್ಗಕ್ರಮಣ ಮಾಡುವ ತಳಮಳ ವಿರುವ ಜೀವಕ್ಕೆ ಅಧ್ಯಾತ್ಮದಲ್ಲಿ ಅದಕ್ಕಿಂತ ಉಚ್ಚ ಸ್ತರವಿರುವ ವ್ಯಕ್ತಿಯಿಂದ ಮಾರ್ಗದರ್ಶನ ಸಿಗುತ್ತದೆ. ಜೀವನದಲ್ಲಿ ಗುರುಗಳಿರುವುದು, ಶಿಷ್ಯನ ಪರಮಭಾಗ್ಯವೇ ಆಗಿರುತ್ತದೆ. ಗುರುಗಳು ನಿಷ್ಪಕ್ಷರಾಗಿದ್ದು ಅವರು ಶಿಷ್ಯನಲ್ಲಿ ಏನನ್ನೂ ಬೇಡುವುದಿಲ್ಲ. ಅವನಿಂದ ಪ್ರತಿಫಲವನ್ನೂ ಅಪೇಕ್ಷಿಸುವುದಿಲ್ಲ. ಸ್ವತಃ ಅತ್ಯುಚ್ಛ ಆನಂದದಲ್ಲಿದ್ದುಕೊಂಡು ಶಿಷ್ಯನೆಂದು ಆ ಜೀವವನ್ನು ಸ್ವೀಕರಿಸುತ್ತಾರೆ. ಶಿಷ್ಯನ ಅರ್ಹತೆ ಏನು ಎಂದು ಅವರಿಗೆ ಗೊತ್ತಿರುತ್ತದೆ. - ಪೂ. ಡಾ. ಓಂ ಉಲಗನಾಥನ್, ಚೆನೈ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಮಂತ್ರವನ್ನು ನೀಡಿದ ನಂತರ ಗುರುಗಳು ಶಿಷ್ಯನಿಂದ ನಿರಪೇಕ್ಷವಾಗಿ ಸಾಧನೆಯನ್ನು ಮಾಡಿಸಿಕೊಂಡು ಅವನಿಗೆ ಅದರ ಫಲವನ್ನು ನೀಡುತ್ತಾರೆ !