ಭಾರತದಲ್ಲಿ ೫೧ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಶ್ರೀಗುರುಗಳಿಗೆ ಭಾವಪುಷ್ಪಾಂಜಲಿ ಅರ್ಪಣೆ !

ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಇತರ 
ಸಮವಿಚಾರಿ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಗುರುಪೂರ್ಣಿಮಾ ಮಹೋತ್ಸವದ ಆಚರಣೆ !
ಪನವೇಲ್ (ದೇವದ್) :ಸಾಧಕರು, ಹಿಂದೂ ಧರ್ಮಾಭಿಮಾನಿಗಳು ಮತ್ತು ಸನಾತನದ ಹಿತಚಿಂತಕರು ಗುರುಗಳ ಬಗ್ಗೆ ಅಪಾರ ಕೃತಜ್ಞತೆಯ ಭಾವಾಶ್ರುವಿನ ಸುಮನಾಂಜಲಿಯನ್ನು ಶ್ರೀಗುರುಗಳ ಚರಣಕಮಲಗಳಿಗೆ ಅರ್ಪಿಸುತ್ತಾ ಆಷಾಢ ಹುಣ್ಣಿಮೆಯಂದು ಗುರುಪೂರ್ಣಿಮಾ ಮಹೋತ್ಸವವನ್ನು ಆಚರಿಸಿದರು. ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಮತ್ತು ಸಮವಿಚಾರಿ ಸಂಘಟನೆಗಳ ವತಿಯಿಂದ ಸಂಯುಕ್ತವಾಗಿ ಇಡೀ ಭಾರತದಲ್ಲಿ ೫೧ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಲಾಗಿತ್ತು.


ಕಪಿಲೇಶ್ವರಿ, ಫೋಂಡಾ (ಗೋವಾ) ದ ಸೌ. ಸುಮನ ನಾಯಿಕ್ (೬೭ ವರ್ಷ), ನಾಗೋಠಣೆ (ಮಹಾರಾಷ್ಟ್ರ) ಯ ಶ್ರೀ. ಅನಂತ (ತಾತ್ಯಾ) ಪಾಟೀಲ (೮೩ ವರ್ಷ) ಮತ್ತು ಜೋಧಪುರ (ರಾಜಸ್ಥಾನ)ದ ಸೌ. ಸುಶೀಲಾ ಮೋದಿ ಇವರನ್ನು ಸಂತ ಪದವಿಯಲ್ಲಿ ಹಾಗೂ ದೇವದ್ ಪನವೇಲ್‌ನ ಸನಾತನ ಆಶ್ರಮದ ೬ ನೇ ಸಂತರಾದ ಪೂ. ರಾಜೇಂದ್ರ ಶಿಂದೆ ಇವರನ್ನು ಸದ್ಗುರುಪದವಿಯಲ್ಲಿ ವಿರಾಜಮಾನಗೊಳಿಸಿ ಭಗವಂತನು ಸಾಧಕರಿಗೆ ಇನ್ನೂ ಒಂದು ಅಮೂಲ್ಯವಾದ ಉಡುಗೊರೆಯನ್ನು ನೀಡಿದನು. ದೇಶಾದ್ಯಂತ ೬೮ ಸಾಧಕರು ಶೇ. ೬೦ ಮತ್ತು ಅದಕ್ಕಿಂತಲೂ ಹೆಚ್ಚು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರೆಂದು ಘೋಷಿಸಲಾಯಿತು. ಗುರುಪೂರ್ಣಿಮಾ ಮಹೋತ್ಸವದ ಕಾರ್ಯಕ್ರಮಗಳಲ್ಲಿ ಪರಾತ್ಪರ ಗುರು ಡಾ. ಜಯಂತ ಆಠವಲೆ ಮತ್ತು ಜೀವನಾಡಿಯ ಸಪ್ತರ್ಷಿಯವರ ಸಂದೇಶಗಳನ್ನು ವಾಚನ ಮಾಡಲಾಯಿತು. ಅದರೊಂದಿಗೆ ಸಪ್ತರ್ಷಿ ಜೀವನಾಡಿಯ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿನ ಮಾರ್ಗದರ್ಶನ ಮತ್ತು ‘ಸನಾತನಪರ್ ಬಂಧಿಕಾ ವಾರ್ ಪುನಃ ಏಕ್ ಬಾರ್’ ಈ ಎರಡು ಕಿರುಚಿತ್ರಗಳನ್ನು ತೋರಿಸಲಾಯಿತು. ಸಾಮಾಜಿಕ ದುಷ್ಪ್ರವೃತ್ತಿಗಳನ್ನು ಸಂಘಟಿತರಾಗಿ ಪ್ರತಿಕಾರ ಮತ್ತು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಎಂಬ ವಿಷಯದಲ್ಲಿ ವಕ್ತಾರರು ಮಾರ್ಗದರ್ಶನ ಮಾಡಿದರು. ಕೆಲವು ಸ್ಥಳಗಳಲ್ಲಿ ಹಿಂದುತ್ವನಿಷ್ಠರನ್ನು ಸತ್ಕರಿಸಲಾಯಿತು ಹಾಗೂ ಕೆಲವು ಸ್ಥಳಗಳಲ್ಲಿ ಸನಾತನದ ಕಾರ್ಯದಲ್ಲಿ ಭಾಗವಹಿಸುವ ವಕೀಲರು ಮಾರ್ಗದರ್ಶನ ಮಾಡಿದರು. ನಾಗೋಠಣೆಯಲ್ಲಿನ ಶ್ರೀ. ಅನಂತ ಪಾಟೀಲ ಇವರು ೬೧ ನೇ,ಗೋವಾದ ಕಪಿಲೇಶ್ವರಿಯ ಸೌ. ಸುಮನ ನಾಯಿಕ್ ೬೨ ನೇ ಮತ್ತು ಜೋಧಪುರದ ಸೌ. ಸುಶೀಲಾ ಮೋದಿಯವರು ೬೩ ನೇ ಸಂತಪದವಿಯಲ್ಲಿ ವಿರಾಜಮಾನರಾದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತದಲ್ಲಿ ೫೧ ಗುರುಪೂರ್ಣಿಮಾ ಮಹೋತ್ಸವಗಳಲ್ಲಿ ಶ್ರೀಗುರುಗಳಿಗೆ ಭಾವಪುಷ್ಪಾಂಜಲಿ ಅರ್ಪಣೆ !