‘ಆಚಾರಧರ್ಮ’ವು ಧರ್ಮ ಮತ್ತು ಸಾಧನೆಯ ಅಡಿಪಾಯವಾಗಿದೆ !

ಆಚಾರಃ ಪ್ರಭವೋ ಧರ್ಮಃ’ ಅಂದರೆ ‘ಧರ್ಮವು ಆಚಾರದಿಂದ ಉತ್ಪನ್ನವಾಗಿದೆ’. ನಮ್ಮಧಾರ್ಮಿಕ ಜೀವನದ ನಿರ್ಮಿತಿಯು (ರಚನೆಯು)ಆಚಾರಧರ್ಮದ ಮೇಲೆ ಅವಲಂಬಿಸಿರುತ್ತದೆ. ಧರ್ಮಾಚರಣೆಯ, ಸಾಧನೆಯ ಉದ್ದೇಶವು‘ಈಶ್ವರಪ್ರಾಪ್ತಿ’ಯಾಗಿರುತ್ತದೆ.
ಧರ್ಮಾಚರಣೆ ಯನ್ನು, ಸಾಧನೆಯನ್ನು ಮಾಡುವ ಮನಸ್ಸಿನಪ್ರವೃತ್ತಿಯು ಸತ್ತ್ವಗುಣದ ಮೇಲೆ ಅವಲಂಬಿಸಿರು ತ್ತದೆ. ಸಾಮಾನ್ಯ ಜನರು ರಜೋಗುಣಿ-ತಮೋಗುಣಿಯಾಗಿರುವುದರಿಂದ ಅವರು ಕೂಡಲೇ ಸಾಧನೆಯಕಡೆಗೆ ಹೊರಳುವುದಿಲ್ಲ. ಆಚಾರ ಧರ್ಮದ ಪಾಲನೆಯಿಂದ ಜನರ ಸಾತ್ತ್ವಿಕತೆಯು ನಿಧಾನ ವಾಗಿ ಹೆಚ್ಚಾಗತೊಡಗಿದಂತೆ ಮುಂದೆ ಅವರು ಸಾಧನೆಯ ಕಡೆಗೆ ಹೊರಳುತ್ತಾರೆ. ಅಲ್ಲದೇ ಆಚಾರ ಧರ್ಮದ ಪಾಲನೆಯನ್ನು ದಿನದ ೨೪ ಗಂಟೆ ಮಾಡಬೇಕಾಗುವುದರಿಂದ ಮುಂದೆ ದಿನವಿಡೀ ಸಾಧನೆಯನ್ನು ಮಾಡುವ ಅಡಿಪಾಯವೂ ನಿರ್ಮಾಣವಾಗುತ್ತದೆ. ಉನ್ನತ ಸಾಧಕರ ಮತ್ತು ಸಂತರ ಸಾಧನೆಯು ಅಂತರ್ಮನದಲ್ಲಿ ಸತತ ವಾಗಿ ನಡೆಯುತ್ತಿರುವುದರಿಂದ ಅವರು ಪ್ರತಿನಿತ್ಯ ಅಧ್ಯಾತ್ಮಿಕ ಜೀವನವನ್ನೇ ಜೀವಿಸುತ್ತಿರುತ್ತಾರೆ. ಆದುದರಿಂದ ಅವರಿಗೆ ಮಾನಸಿಕ ಮತ್ತು ಬೌದ್ಧಿಕ ಸ್ತರದಲ್ಲಿನ ಆಚಾರಧರ್ಮದ ಪಾಲನೆಯ ಅವಶ್ಯಕತೆ ಯಿರುವುದಿಲ್ಲ. ಅವರು ಆಚಾರಧರ್ಮದ ಆಚೆಗೆ ಹೋಗಿರುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಆಚಾರಧರ್ಮ’ವು ಧರ್ಮ ಮತ್ತು ಸಾಧನೆಯ ಅಡಿಪಾಯವಾಗಿದೆ !