ಅಧಿವೇಶನದ ಠರಾವುಗಳು

  • ವಿಶ್ವಕಲ್ಯಾಣಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಕಾನೂನುಮಾರ್ಗದಲ್ಲಿ ಏನೆಲ್ಲ  ಪ್ರಯತ್ನ ಮಾಡುವುದು ಆವಶ್ಯಕವಿದೆಯೋ ಅದನ್ನೆಲ್ಲವನ್ನು ಅಖಿಲ ಭಾರತೀಯ ಹಿಂದೂ ಅಧಿವೇಶನವು ಮಾಡುವುದು. ಭಾರತೀಯ ಸಂಸತ್ತು ದೇಶವನ್ನು ಹಿಂದೂರಾಷ್ಟ್ರವೆಂದು ಘೋಷಿಸಬೇಕು.
  • ನೇಪಾಳವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಲು ಪ್ರಯತ್ನಿಸುವ ಅಲ್ಲಿನ ಹಿಂದೂಗಳಿಗೆ ಈ ಅಖಿಲ ಭಾರತೀಯ ಹಿಂದೂ ಅಧಿವೇಶನವು  ನೈತಿಕ, ರಾಜಕೀಯ ಮತ್ತು ಎಲ್ಲ ರೀತಿಯಲ್ಲಿ ಬೆಂಬಲವಿರುವುದು. ನೇಪಾಳದ ಸಂಸತ್ತು ಸಂವಿಧಾನವನ್ನು ರದ್ದುಪಡಿಸಿ ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು.
  • ಕೇಂದ್ರಸರಕಾರವು ಇಡೀ ದೇಶದಲ್ಲಿ ಗೋಹತ್ಯೆ ನಿರ್ಬಂಧದ ಕಾನೂನನ್ನು ಕೂಡಲೇ ತರಬೇಕು ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
  • ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುವ ದೌರ್ಜನ್ಯದ ಬಗ್ಗೆ ಅಂತಾರಾಷ್ಟ್ರೀಯ ಮಾನವಾಧಿಕಾರ ಸಂಘಟನೆ ಮತ್ತು ಭಾರತ ಸರಕಾರವು ವಿಚಾರಣೆ ಮಾಡಬೇಕು. ಬಾಂಗ್ಲಾದೇಶದ ಸರಕಾರ ಅಲ್ಲಿನ ಹಿಂದೂಗಳನ್ನು ರಕ್ಷಿಸಲು ವಿಫಲವಾಗಿದೆ. ಹಾಗಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳಿಗೆ ಸ್ವತಂತ್ರ ಭೂಮಿ (homeland) ನಿರ್ಮಿಸಬೇಕು.
  • ನಿರಾಶ್ರಿತ ಕಾಶ್ಮೀರಿ ಹಿಂದೂಗಳಿಗೆ ಪುನಃ ಕಾಶ್ಮೀರದಲ್ಲಿ ಪುನರ್ವಸತಿ ನೀಡಬೇಕು.
  • ಶ್ರೀರಾಮ ಸೇನೆಯ ಸಂಸ್ಥಾಪಕ ಶ್ರೀ. ಪ್ರಮೋದ ಮುತಾಲಿಕ್ ಮೇಲೆ ಗೋವಾ ರಾಜ್ಯದಲ್ಲಿ ಅನ್ಯಾಯವಾಗಿ ಪ್ರವೇಶ ನಿಷೇಧವನ್ನು ಈ ಅಖಿಲ ಭಾರತೀಯ ಹಿಂದೂ ಅಧಿವೇಶನವು ಖಂಡಿಸುತ್ತದೆ.
  • ನಾಸ್ತಿಕವಾದಿಗಳ ಹತ್ಯೆ ಪ್ರಕರಣದಲ್ಲಿ ತನಿಖಾ ದಳಗಳಿಂದ ಸನಾತನದ ಅಮಾಯಕ ಸಾಧಕರನ್ನು ಹಿಂಸಿಸಬಾರದೆಂದು ಕೇಂದ್ರಸರಕಾರ ಕೃತಿ ಮಾಡಬೇಕು.
  •  ಕೇಂದ್ರಸರಕಾರವು ವಿಶ್ವವಿದ್ಯಾಲಯದ ಪರಿಸರದಲ್ಲಿ ರಾಷ್ಟ್ರವಿರೋಧಿ ಉಪಕ್ರಮ ನಡೆಸುವುದನ್ನು ನಿಷೇಧಿಸಬೇಕು. ಇಂತಹ ಪ್ರಕರಣಗಳಲ್ಲಿ ಸಹಭಾಗಿಯಾದ ವಿದ್ಯಾರ್ಥಿಗಳ ಮೇಲೆ ಕ್ರಮಕೈಗೊಳ್ಳಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಧಿವೇಶನದ ಠರಾವುಗಳು