ಶಿಷ್ಯನ ಪ್ರತಿಯೊಂದು ಹೆಜ್ಜೆಯಲ್ಲಿಯೂ ದಾರಿದೀಪವಾಗಿರುವ ಶ್ರೀಗುರುಗಳು ಸಿಂಹಾಸನದಲ್ಲಿ ಸಮರ್ಥರ ಪಾದುಕೆಗಳನ್ನಿಟ್ಟು ಸಮರ್ಥರ (ಗುರುಗಳ) ಪ್ರತಿನಿಧಿಯಾಗಿ ರಾಜ್ಯವನ್ನಾಳಿದ ಶಿವಾಜಿ ಮಹಾರಾಜರು !

ಒಂದು ದಿನ ಶಿವಾಜಿಯು ಅರಮನೆಯ ಮೇಲಂತಸ್ತಿನಿಂದ ಸಮರ್ಥ ರಾಮದಾಸ ಸ್ವಾಮಿಗಳು ರಸ್ತೆಯ ಮೇಲೆ ಭಿಕ್ಷೆ ಬೇಡುತ್ತಿರುವುದನ್ನು ನೋಡಿದರು. ಆಗ ನಾನು ಎಲ್ಲವನ್ನು ಗುರುಚರಣಗಳಿಗೆ ಅರ್ಪಿಸಿದ ಮೇಲೆ ಏಕೆ ಈ ರೀತಿ ಭಿಕ್ಷೆ ಬೇಡು ತ್ತಿದ್ದಾರೆಂದು ಶಿವಾಜಿಗೆ ಆಶ್ಚರ್ಯವಾಯಿತು. ಆದರೆ ಸಾಧುಗಳನ್ನು ಅರ್ಥ ಮಾಡಿಕೊಳ್ಳುವುದು ಕಠಿಣ ಎಂದು ತಿಳಿದುಕೊಂಡರು. ಅನಂತರ ಅವರು ತಮ್ಮ ಸಹಚರನಾದ ಬಾಲಾಜಿಯವರಲ್ಲಿ ಒಂದು ಚೀಟಿಯನ್ನು ನೀಡಿ ಸಮರ್ಥರು ಅರಮನೆಗೆ ಬಂದಾಗ ಇದನ್ನು ಅವರಿಗೆ ನೀಡುವಂತೆ ಹೇಳಿದರು. ಮಧ್ಯಾಹ್ನ ಅವರು ಅರಮನೆಗೆ ಬಂದಾಗ ಬಾಲಾಜಿ ಯವರು ಸಮರ್ಥರ ಚರಣಗಳಲ್ಲಿ ಆ ಚೀಟಿಯನ್ನು ಸಮರ್ಪಿಸಿದರು. ಆ ಚೀಟಿಯಲ್ಲಿ ಶಿವಾಜಿಯು ‘ನನ್ನ ಸಂಪೂರ್ಣ ಸಾಮ್ರಾಜ್ಯವನ್ನು ಸಮರ್ಥರಿಗೆ ಉಡುಗೊರೆಯಾಗಿ ಅರ್ಪಿಸಿದ್ದೇನೆ ಹಾಗೂ ನಿಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ’ ಎಂಬುದಾಗಿ ಬರೆದಿದ್ದರು. ಆಗ ಗುರುಗಳು ಬಾಲಾಜಿಯವರಲ್ಲಿ ‘ಆಯಿತು’ ಎಂದು ಹೇಳಿದರು. ಮಾರನೇ ದಿನ ಸಮರ್ಥರು ಶಿವಾಜಿಯನ್ನು ಕರೆದು ನೀನು ನನಗೆ ನಿನ್ನ ಎಲ್ಲ ಸಾಮ್ರಾಜ್ಯ ನೀಡಿದರೆ ನೀನೇನು ಮಾಡುವೆ ? ಎಂದು ಪ್ರಶ್ನಿಸಿದರು.
ಆಗ ಶಿವಾಜಿಯು ಅವರ ಪಾದಗಳಿಗೆ ಸಾಷ್ಟಾಂಗವೆರಗಿ ‘ನನ್ನ ಜೀವನವನ್ನು ನಿಮ್ಮ ಸೇವೆಯಲ್ಲಿ ಕಳೆಯಲು ಅವಕಾಶ ನೀಡಿದರೆ ನಾನು ಕೃತಾರ್ಥನಾಗುವೆನು ಹಾಗೂ ನನ್ನನ್ನು ನಾನು ಧನ್ಯನೆಂದು ತಿಳಿದುಕೊಳ್ಳುತ್ತೇನೆ ಎಂದು ಹೇಳಿದನು. ಅನಂತರ ರಾಮದಾಸ ಸ್ವಾಮಿಗಳು ‘ಹಾಗಾದರೆ ಈ ಭಿಕ್ಷಾಪಾತ್ರೆಯನ್ನು ನನ್ನೊಂದಿಗೆ ಭಿಕ್ಷಾಟನೆಗಾಗಿ ಹೊರಡು’ ಎಂದು ಆಜ್ಞಾಪಿಸಿ ದರು. ಅನಂತರ ರಾಮದಾಸ ಸ್ವಾಮಿ ಹಾಗೂ ಶಿವಾಜಿಯವರು ಭಿಕ್ಷಾಟನೆಗಾಗಿ ಊರೂರಿಗೆ ಹೊರಟರು. ಭಿಕ್ಷಾಟನೆಯಾದ ನಂತರ ಇಬ್ಬರು ನದಿತೀರಕ್ಕೆ ರಾಮದಾಸ ಸ್ವಾಮಿಗಳು ತಮ್ಮ ಸಾಮಾನ್ಯ ಭೋಜನವನ್ನು ತಯಾರಿಸಿದರು ಹಾಗೂ ಶಿವಾಜಿಯು ಗುರುಗಳು ಸೇವಿಸಿ ಉಳಿದಿದ್ದನ್ನು ಸ್ವೀಕರಿಸಿದರು. ಅನಂತರ ಶಿವಾಜಿಯವರು ಸಮರ್ಥರಲ್ಲಿ ನನ್ನನ್ನು ಓರ್ವ ಭಿಕ್ಷುಕನನ್ನಾಗಿಸಿ ಏನು ಮಾಡಲಿ ದ್ದೀರಿ ಎಂದು ಕೇಳಿದರು. ಆಗ ಸಮರ್ಥರು, ಈಗ ಓರ್ವ ಆದರ್ಶ ರಾಜನು ನಿರ್ಮಾಣವಾಗುವ ಸಮಯವು ಬಂದಿದೆ ಎಂದು ಅರಿತರು. ‘ನಾನು ಸಂನ್ಯಾಸಿ ನೀನು ರಾಜನಾಗಿದ್ದೀಯಾ. ನಾನು ಎಲ್ಲ ವನ್ನು ತ್ಯಾಗ ಮಾಡಿರುವಾಗ ನಿನ್ನ ರಾಜ್ಯವನ್ನು ಹೇಗೆ ನೋಡಿಕೊಳ್ಳಲಿ ? ಆದುದರಿಂದ ನೀನು ನನಗೆ ಅರ್ಪಿಸಿದ ರಾಜ್ಯವನ್ನು ನನ್ನ ಹೆಸರಿನಲ್ಲಿ (ಸಮರ್ಥ ರಾಮದಾಸ ಸ್ವಾಮಿಗಳ ಹೆಸರಿನಲ್ಲಿ) ಆಳು, ನನ್ನ ಕಾವೀ ಶಾಲನ್ನು ನಿನ್ನ ಧ್ವಜವನ್ನಾಗಿಸಿಕೋ ಹಾಗೂ ಅದರ ಗೌರವವನ್ನು ನಿನ್ನ ಪ್ರಾಣವನ್ನು ಪಣಕ್ಕಿಟ್ಟು ಕಾಪಾಡು. ಅಲ್ಲದೇ ಈ ರಾಜ್ಯವನ್ನು ನಿನ್ನದೆಂದು ಭಾವಿಸದೇ ದೇವರಿಗೆ ಅಪೇಕ್ಷಿತವಿದ್ದಂತೆ, ನ್ಯಾಯದಿಂದ ನನ್ನ ಪ್ರತಿನಿಧಿಯಾಗಿ ನಡೆಸು’ ಎಂದು ಉಪದೇಶಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಿಷ್ಯನ ಪ್ರತಿಯೊಂದು ಹೆಜ್ಜೆಯಲ್ಲಿಯೂ ದಾರಿದೀಪವಾಗಿರುವ ಶ್ರೀಗುರುಗಳು ಸಿಂಹಾಸನದಲ್ಲಿ ಸಮರ್ಥರ ಪಾದುಕೆಗಳನ್ನಿಟ್ಟು ಸಮರ್ಥರ (ಗುರುಗಳ) ಪ್ರತಿನಿಧಿಯಾಗಿ ರಾಜ್ಯವನ್ನಾಳಿದ ಶಿವಾಜಿ ಮಹಾರಾಜರು !