ಗುರುಪೂರ್ಣಿಮೆಯ ನಿಮಿತ್ತ ಸನಾತನದ ಸಂತರ ಸಂದೇಶ

ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯ ತಲುಪಲು ಪ್ರತಿದಿನ ಸ್ವತಃ
ಧರ್ಮಾಚರಣೆ ಮಾಡಿ, ಸಮಾಜದ ಇತರರಿಗೂ ಇದರ ಬಗ್ಗೆ ತಿಳಿಸಿ ಹೇಳಬೇಕು
(ಪೂ.) ಶ್ರೀ. ಸತ್ಯವಾನ ಕದಮ
ಈಶ್ವರನ ಆಯೋಜನೆಗನುಸಾರ ನಮ್ಮ ಜನ್ಮವು ಮಹಾನ್ ಹಿಂದೂ ಧರ್ಮದಲ್ಲಿ  ಆಗಿದೆ ಮತ್ತು ಪ.ಪೂ. ಗುರುದೇವರಂತಹ ಗುರುಗಳು ನಮಗೆ ಲಭಿಸಿದ್ದಾರೆ. ಇದು ನಮ್ಮೆಲ್ಲರ  ಪ.ಪೂ. ಗುರುದೇವರು ನಮಗೆ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯನ್ನು ಹೇಳಿದ್ದಾರೆ. ವ್ಯಷ್ಟಿ ಸಾಧನೆಯಿಂದ ನಮ್ಮ ಆಧ್ಯಾತ್ಮಿಕ ಉನ್ನತಿಯಾಗಲಿದೆ ಮತ್ತು ಸಮಷ್ಟಿ ಸಾಧನೆಯಿಂದ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಹಾಯವಾಗಲಿದೆ. ನಮ್ಮಲ್ಲಿನ ದೋಷ ಮತ್ತು ಅಹಂ ತೊಲಗಿಸಲು ನಾವು ತಳಮಳದಿಂದ ಪ್ರಯತ್ನಗಳನ್ನು ಮಾಡಬೇಕು. ಈಶ್ವರನ ಅಧಿಷ್ಠಾನಕ್ಕಾಗಿ ನಾಮಜಪ, ಪ್ರಾರ್ಥನೆ ಹೆಚ್ಚಿಸಬೇಕು. ಹಿಂದೂ ರಾಷ್ಟ್ರದ ಸ್ಥಾಪನೆಯ ಧ್ಯೇಯವನ್ನು ತಲುಪಲು ಪ್ರತಿದಿನ ಸ್ವತಃ ಧರ್ಮಾಚರಣೆ ಮಾಡಿ ಸಮಾಜದ ಇತರರಿಗೂ ಇದರ ಬಗ್ಗೆ ತಿಳಿಸಿ ಹೇಳಬೇಕು. ರಾಷ್ಟ್ರ ಮತ್ತು ಧರ್ಮದ ಬಗ್ಗೆ ಇರುವ ನಮ್ಮ ಕರ್ತವ್ಯವನ್ನು ದಿನನಿತ್ಯ ಪಾಲಿಸಬೇಕು. ಹೀಗೆ ಮಾಡಿದರೆ ಮಾತ್ರ ನಮ್ಮ ವ್ಯಷ್ಟಿ ಮತ್ತು ಸಮಷ್ಟಿಯ ಗುರಿಯು ಸಾಧ್ಯವಾಗುತ್ತದೆ. ನಮ್ಮ ಜೀವನದ ಸಾರ್ಥಕತೆಯಾಗುತ್ತದೆ. ಪ.ಪೂ. ಗುರುದೇವರ ಚರಣಗಳಲ್ಲಿ, ಅವರು ನಮಗೆ ವ್ಯಷ್ಟಿ ಮತ್ತು ಸಮಷ್ಟಿ ಗುರಿ ಸಾಧಿಸಲಿಕ್ಕಾಗಿ ಶಕ್ತಿ ಮತ್ತು ಬುದ್ಧಿ ನೀಡಲಿ, ಎಂದು ಪ್ರಾರ್ಥಿಸುತ್ತೇನೆ.
- (ಪೂ.) ಶ್ರೀ. ಸತ್ಯವಾನ ಕದಮ, ಮೂಲ್ಕಿ

ಈಶ್ವರನ ಸಂಕಲ್ಪದಿಂದ ಹಿಂದೂ ರಾಷ್ಟ್ರ ಸ್ಥಾಪನೆಯಾಗಲಿದೆ,
ಹಾಗಾಗಿ ನಾವೆಲ್ಲರೂ ಸಾಧನೆಯ ಬಲವನ್ನು ಹೆಚ್ಚಿಸೋಣ !
(ಪೂ.) ಕೆ. ಉಮೇಶ ಶೆಣೈ
ಮನುಷ್ಯ ಜನ್ಮವೇ ದುರ್ಲಭ, ಅದರಲ್ಲೂ ಸದ್ಗುರುಗಳ ಮಾರ್ಗದರ್ಶನ ಪಡೆಯಲಂತೂ ಜನ್ಮ-ಜನ್ಮಾಂತರದ  ಪುಣ್ಯವಿರಬೇಕು. ಬರುವ ಕಾಲ ಬಹು ಕಠಿಣ ಮತ್ತು ಸಾವು ಬದುಕಿನ ಹೋರಾಟವಾಗಲಿದೆ. ಅದರ ಎಲ್ಲ ಲಕ್ಷಣಗಳು ಇಂದು ಜಗತ್ತಿನಾದ್ಯಂತ ಗೋಚರಿಸುತ್ತಿದೆ. ಭಾರತದಲ್ಲಂತೂ ಹಿಂದೂ ಧರ್ಮವನ್ನು ಮುಗಿಸಲು ನಿಧರ್ಮಿಗಳು, ಮತಾಂಧರು, ಸಮಾಜವಾದಿಗಳು, ಸಾಲದೆಂಬುದಕ್ಕೆ ಸರಕಾರವೂ ಟೊಂಕ ಕಟ್ಟಿ ನಿಂತಿದೆ. ಈ ಕಠಿಣ ಆಪತ್ಕಾಲದಲ್ಲಿ ಸಾಧನೆಯ ಬಲವಿಲ್ಲದೇ ಪರಿಸ್ಥಿತಿ ಎದುರಿಸುವುದು ಸಾಧ್ಯವಿಲ್ಲ. ದೈವೀ ಅಧಿಷ್ಠಾನ ಮತ್ತು ಸಂತರ ಸಂಕಲ್ಪದಿಂದಲೇ ಹಿಂದೂ ಸಂಘಟನೆಯಾಗಿ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಸ್ಥಾಪನೆ ಆಗಲಿದೆ ಎಂಬ ಸತ್ಯವನ್ನು ಈಗ ಹಿಂದೂ ಸಂಘಟನೆಗಳು ಅರಿತಿವೆ.
ಗೀತೆಯಲ್ಲಿ ಶ್ರೀಕೃಷ್ಣ ಹೇಳಿದಂತೆ ಈ ಧರ್ಮ-ಅಧರ್ಮದ ಯುದ್ಧದಲ್ಲಿ ಸಾಧಕರ ರಕ್ಷಣೆ ಆಗಲಿದೆ. ಶ್ರೀಕೃಷ್ಣನ ಕೃಪೆಯಿಂದ ಕೌರವಸೇನೆ ಎಷ್ಟು ದೊಡ್ಡದಿದ್ದರೂ ಅಂತಿಮ ವಿಜಯ ಪಾಂಡವರದ್ದೇ. ನಾವು ಪಾಂಡವರಾಗೋಣ ಮತ್ತು ಸಾಧನೆಯ ಬಲ ಹೆಚ್ಚಿಸೋಣ.
॥ ಸತ್ಯಮೇವ ಜಯತೆ ॥
- (ಪೂ.) ಕೆ. ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ್

ಸಾಧಕರು ಭಗೀರಥ ಪ್ರಯತ್ನ ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳಬೇಕು !
(ಪೂ.) ವಿನಾಯಕ ಕರ್ವೆ
ಸನಾತನದ ಎಲ್ಲ ಸಂತರು, ಸಾಧಕರು, ರಾಷ್ಟ್ರಾಭಿಮಾನಿಗಳು, ವಾಚಕರು, ಅರ್ಪಣದಾತಾರರು, ಜಾಹೀರಾತುದಾರರು, ಹಿಂದುತ್ವನಿಷ್ಠರು, ಹಿತಚಿಂತಕರು ಹಾಗೆಯೇ ಸತ್‌ಗಾಗಿ ಕಾರ್ಯನಿರತವಿರುವವರೆಲ್ಲರೂ ಭಾಗ್ಯವಂತರಾಗಿದ್ದಾರೆ. ಇದಕ್ಕೆ ಮೊದಲ  ಕಾರಣವೆಂದರೆ ನಮ್ಮ ಜನ್ಮವು ಈ ಭೂಲೋಕದಲ್ಲಿ ಭರತಖಂಡದಲ್ಲಾಗಿದೆ. ಎರಡನೆಯ ಸಂಗತಿಯೆಂದರೆ ೫೦೦೦ ವರ್ಷಗಳಿಗೊಮ್ಮೆ ಬರುವ ಇದು ಸಂಧಿಕಾಲದಲ್ಲಿ ಆಗಿದೆ. ಮೂರನೇ ಸಂಗತಿಯೆಂದರೆ ಸಾಧನೆಯ ಜಿಜ್ಞಾಸೆ, ಮುಮುಕ್ಷತ್ವದಿಂದ ನಾವು ಪ್ರೇರೇಪಿತರಾಗಿದ್ದೇವೆ. ಇಂತಹ ಈ ಪರಮಕಲ್ಯಾಣಯುತ, ಸದವಕಾಶದ ಲಾಭವನ್ನು ಸಾಧಕರು ಭಗೀರಥ ಪ್ರಯತ್ನ ಮಾಡಿ ಪ್ರಾಪ್ತ ಮಾಡಿಕೊಳ್ಳಬೇಕೆಂದು  ಶ್ರೀಮನ್ನಾರಾಯಣಸ್ವರೂಪ ಗುರುಚರಣಗಳಲ್ಲಿ ಪ್ರಾರ್ಥನೆ.
- (ಪೂ.) ವಿನಾಯಕ ಕರ್ವೆ, ಮಂಗಳೂರು

ಸನಾತನ ಧರ್ಮ ರಾಜ್ಯವು ಬೇಗನೇ ಬರಲಿ !
ವಿಶ್ವದಾದ್ಯಂತ ಗುರುಪೂರ್ಣಿಮೆಯು ನಿರ್ವಿಘ್ನವಾಗಿ ನೆರವೇರಲಿ. ಸನಾತನದ ಕೀರ್ತಿಯು ವಿಶ್ವದಾದ್ಯಂತ ಹರಡಲಿ ಮತ್ತು ಸನಾತನ ಧರ್ಮರಾಜ್ಯವು ಬೇಗನೇ ಬರಲಿ. - ಪೂ. ರಾಧಾ ಪ್ರಭು, ಮಂಗಳೂರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಪೂರ್ಣಿಮೆಯ ನಿಮಿತ್ತ ಸನಾತನದ ಸಂತರ ಸಂದೇಶ