ಶ್ರದ್ಧೆ

ತಮ್ಮ ಮೇಲೆ (ಗುರುಗಳ ಮೇಲೆ) ಶಿಷ್ಯನ ಶ್ರದ್ಧೆ ಕಡಿಮೆಯಾದಾಗ ಅವನಿಗೆ ಅದರ ಅರಿವು ಮಾಡಿಕೊಡುವುದು
‘ಕ್ರಿ.ಶ. ೧೯೯೩ ರಿಂದ ನನಗೆ ಸೊಂಟ ನೋವಿನ ತೊಂದರೆಯಿದೆ. ಭಾರವಾದ ಸಾಮಾನುಗಳನ್ನು ಎತ್ತುವಾಗ ಸೊಂಟ ನೋಯುತ್ತದೆ. ಪ.ಪೂ. ಡಾಕ್ಟರರೊಂದಿಗೆ ಅಧ್ಯಾತ್ಮ ಪ್ರಸಾರಕ್ಕಾಗಿ ಪ್ರವಾಸಕ್ಕೆ ಹೋಗುವಾಗ ನಾನು ವಾಹನವನ್ನು ಚಲಾಯಿಸುತ್ತಿದ್ದೆ. ವಾಹನವನ್ನು ಚಲಾಯಿಸುವಾಗ ವಾಹನದ ವೇಗ ವನ್ನು ಹೆಚ್ಚು ಮಾಡಲು ಮತ್ತು ಕಡಿಮೆ ಮಾಡಲು ನೋವಿರುವ ಕಾಲನ್ನೇ ಉಪಯೋಗಿಸಬೇಕಾಗುತ್ತಿತ್ತು. ಆಗ ಬಹಳ ವೇದನೆಯಾಗುತ್ತಿತ್ತು; ಆದರೆ ಪ.ಪೂ. ಡಾಕ್ಟರರ ಕೃಪೆಯಿಂದ ವೇದನೆಯನ್ನು ಸಹಿಸಲು ಆಗುತ್ತಿತ್ತು.
ಕ್ರಿ.ಶ. ೨೦೦೫ ರಲ್ಲಿ ದೇವದ್ (ಪನವೇಲ್) ನ ಸನಾತನ ಆಶ್ರಮದಲ್ಲಿ ವಾಸ್ತವ್ಯಕ್ಕಿರುವಾಗ ನನಗೆ ಸೊಂಟನೋವು ಬಹಳ ಹೆಚ್ಚಾಯಿತು. ಔಷಧೋಪಚಾರಗಳು ನಡೆಯುತ್ತಿದ್ದವು. ಅಷ್ಟರಲ್ಲಿ ‘ಅಧ್ಯಾತ್ಮಪ್ರಸಾರಕ್ಕಾಗಿ ಪ್ರವಾಸಕ್ಕೆ ಹೋಗಲಿಕ್ಕಿದೆ, ನೀನು ವಾಹನವನ್ನು ಚಲಾಯಿಸಲು ಬಾ’ ಎಂದು ಪ.ಪೂ. ಡಾಕ್ಟರರ ಸಂದೇಶ ಬಂದಿತು. ಪ್ರವಾಸವು ಸುಮಾರು ೧,೫೦೦ ಕಿ.ಮೀ. ನದ್ದಾಗಿತ್ತು. ನನ್ನ ಸ್ಥಿತಿ ಸರಿಯಿರಲಿಲ್ಲ. ವಾಹನದಲ್ಲಿ ಕೇವಲ ನಾನು ಮತ್ತು ಪ.ಪೂ. ಡಾಕ್ಟರ ಇರಲಿದ್ದೆವು. ಆಗ ‘ಮಧ್ಯದಲ್ಲಿಯೇ ಸೊಂಟನೋವು ಹೆಚ್ಚಾದರೆ ಮತ್ತು ವಾಹನ ನಡೆಸಲು ಆಗದಿದ್ದರೆ ಅವರಿಗೆ ಹೇಗೆ ಹೇಳುವುದು ? ಅದಕ್ಕಿಂತ ಪ್ರಯಾಣಕ್ಕೆ ಹೋಗದಿರುವುದೇ ಉತ್ತಮ’ ಎಂದು ವಿಚಾರ ಮಾಡಿ ಪ.ಪೂ. ಡಾಕ್ಟರರಿಗೆ ‘ಸೊಂಟ ನೋಯುತ್ತಿರುವುದ ರಿಂದ ನಾನು ವಾಹನ ಚಲಾಯಿಸಲಾರೆ. ಆದುದರಿಂದ ನನಗೆ ಬರಲು ಸಾಧ್ಯವಾಗುವುದಿಲ್ಲ’ ಎಂಬ ಸಂದೇಶ ವನ್ನು ಕಳುಹಿಸಿದೆ.

ಒಂದು ವಾರದ ನಂತರ ಪ.ಪೂ. ಡಾಕ್ಟರರ ಸಂದೇಶ ಬಂದಿತು, ‘ನಿನ್ನ ಆಧುನಿಕ ವೈದ್ಯರು (ಡಾಕ್ಟರ್) ಯಾರು ? ಅವರಿಗೆ ಸೊಂಟವನ್ನು ತೋರಿಸಿ ನನಗೆ ತಿಳಿಸು.’ ಇದರಿಂದ ನನಗೆ ಏನು ತಿಳಿದುಕೊಳ್ಳಬೇಕಾಗಿತ್ತೋ ಅದನ್ನು ತಿಳಿದುಕೊಂಡೆ ಮತ್ತು ಕೂಡಲೇ ಅವರಿಗೆ ‘ಬರುತ್ತೇನೆ’ ಎಂದು ಸಂದೇಶ ಕಳುಹಿಸಿದೆ. ಸಂಪೂರ್ಣ ಪ್ರವಾಸದಲ್ಲಿ ನಾವು ವಾಸ್ತವ್ಯ ಕ್ಕಾಗಿ ಉಳಿಯುವವರ ಮನೆಯಲ್ಲಿ ಪ.ಪೂ. ಡಾಕ್ಟರರು ನನಗೆ ವಿಶ್ರಾಂತಿ ಮಾಡಲು ಹೇಳುತ್ತಿದ್ದರು ಮತ್ತು ಸ್ವತಃ ಕಾರ್ಯಕ್ರಮಕ್ಕೆ ಇನ್ನೊಂದು ವಾಹನದಲ್ಲಿ ಹೋಗುತ್ತಿದ್ದರು. ಇದರಿಂದ ಸಂಪೂರ್ಣ ಪ್ರವಾಸದಲ್ಲಿ ನನಗೆ ಸೊಂಟನೋವಿನ ತೊಂದರೆ ಆಗಲೇ ಇಲ್ಲ. ಕೊನೆಗೆ ಜಳಗಾವ್‌ನಿಂದ ದೇವದ್ ಆಶ್ರಮಕ್ಕೆ ಹಿಂದಿರುಗಲು ಹೊರಟಾಗ ಪ.ಪೂ. ಡಾಕ್ಟರರು ‘ಏನೆನ್ನುತ್ತದೆ ನಿನ್ನ ಸೊಂಟನೋವು ?’ ಎಂದು ಕೇಳಿದರು. ನಾನು ‘ಸರಿಯಿದೆ. ನೋಯಿಸು ವುದಿಲ್ಲ’ ಎಂದು ಹೇಳಿದೆನು. ಅದಕ್ಕೆ ಅವರು, ‘ನನ್ನ (ಗುರುಗಳ) ಮೇಲಿನ ಶ್ರದ್ಧೆ ಕಡಿಮೆ ಬಿದ್ದಿತು’ ಎಂದರು. - ಶ್ರೀ. ದಿನೇಶ ಶಿಂದೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರದ್ಧೆ