ದೇವರೇ ನಮ್ಮೆಲ್ಲರ ಶಾಶ್ವತ ಮಿತ್ರ !

ಭವ್ಯ ಸಾಗರ, ಅಲ್ಲೊಂದು ಮೀನು ಕುಟುಂಬ. ಅದರಲ್ಲಿ ಹತ್ತಾರು ಮೀನುಗಳು. ಒಂದು ಮರಿ ಮೀನು ಒಮ್ಮೆ ಸಾಗರದಲ್ಲಿ ಅದು ತೇಲಾಡುತ್ತಾ ದೂರ ಹರಿದುಹೋಯಿತು. ತಿರುಗಿ ಬರುವುದರಲ್ಲಿ ಅದರ ಕುಟುಂಬದವರು ಯಾರೂ ಇರಲಿಲ್ಲ. ಅವರೆಲ್ಲರೂ ಮೀನುಗಾರನ ಬಲೆಗೆ ಬಿದ್ದು ಹೋಗಿದ್ದರು. ತಾಯಿ-ತಂದೆ, ಬಂಧು-ಬಳಗ ಎಲ್ಲವನ್ನೂ ಕಳೆದುಕೊಂಡ ಮರಿಮೀನು ದುಃಖಿಸತೊಡಗಿತು.
‘ನನಗೆ ಯಾರೂ ಇಲ್ಲ. ನಾನು ಅನಾಥನಾದೆ’ ಎಂದು ಗೋಳಿಡತೊಡಗಿತು. ಅಷ್ಟರಲ್ಲಿ ‘ನಾನಿದ್ದೇನೆ, ಚಿಂತಿಸಬೇಡ’ ಎಂಬ ಧ್ವನಿಯೊಂದು ಕೇಳಿಸಿತು. ಇದರಿಂದ ಸಂತಸಗೊಂಡ ಮರಿಮೀನು, ‘ಯಾರವರು ?’ ಎಂದಿತು. ‘ನಾನು ಸಾಗರ !’ ಎಂದಿತು ಆ ಧ್ವನಿ. ‘ನೀನು ಎಲ್ಲಿರುವೆ ?’ ಎಂದಿತು ಮೀನು. ‘ನೀನು ಇರುವಲ್ಲಿಯೇ ನಾನು ಇರುವೆ. ನೀನು ಜನಿಸಿದ್ದು, ಬಾಳಿ ಬೆಳೆಯುತ್ತಿರುವುದು ನನ್ನಲ್ಲಿಯೇ ! ನಾನು ನಿನ್ನನ್ನು ಸದಾ ರಕ್ಷಿಸುತ್ತೇನೆ, ಚಿಂತಿಸದಿರು !’ ಎಂದಿತು ಸಾಗರ. ಅದನ್ನು ಕೇಳಿದ ಮರಿಮೀನು ಮತ್ತೆ ಉತ್ಸಾಹದಿಂದ ಬದುಕಲು ಅಣಿಯಾಯಿತು.
ದಯಾಸಾಗರನಾದ ದೇವನು ಸಕಲ ಜೀವರಾಶಿ ಪೊರೆಯುವನು, ಅವನೇ ನಮ್ಮೆಲ್ಲರ ಶಾಶ್ವತ ಮಿತ್ರ !
ನಿರೂಪಣೆ : ಶ್ರೀ ಮುಪ್ಪಿನ ಕಾಡಸಿದ್ಧೇಶ್ವರ ಸ್ವಾಮಿಗಳು, ಸಿದ್ಧಗಿರಿಮಠ, ಕಣೇರಿ, ಕೊಲ್ಹಾಪುರ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವರೇ ನಮ್ಮೆಲ್ಲರ ಶಾಶ್ವತ ಮಿತ್ರ !