‘ಆಚಾರಧರ್ಮ’ವೆಂದರೆ ಜೀವನದ ಆಧ್ಯಾತ್ಮೀಕರಣ !

ಆಚಾರಧರ್ಮ’ವೆಂದರೆ ಯೋಗ್ಯ ಆಚಾರ-ವಿಚಾರಗಳ ಪಾಲನೆಯನ್ನು ಮಾಡುವುದು, ಕರ್ತವ್ಯಕರ್ಮಗಳು ಮತ್ತು ಧರ್ಮಾಚರಣೆಯ ಕೃತಿಗಳು, ಇಷ್ಟೇ ಹೆಚ್ಚಿನವರ ಕಣ್ಣೆದುರಿಗೆ ಬರುತ್ತವೆ. ಯಾರೂಆಚಾರಧರ್ಮದ ಬಗ್ಗೆ ಇಷ್ಟು ಸಂಕುಚಿತ ಅರ್ಥವನ್ನಿಟ್ಟುಕೊಳ್ಳಬಾರದು.
ಈಶ್ವರನ ಚರಣಗಳವರೆಗೆ ತಲುಪಲು ಸಹಾಯ ಮಾಡುವಜೀವನದ ಪ್ರತಿಯೊಂದು ಕೃತಿಗಳೆಂದರೆ‘ಆಚರಣೆ’ ಮತ್ತು ಅವುಗಳನ್ನು ಕಲಿಸುವ ಧರ್ಮವೆಂದರೆ ‘ಆಚಾರ ಧರ್ಮ’ ಎಂಬ ವ್ಯಾಪಕ ಅರ್ಥದಲ್ಲಿ ಅದರ ವ್ಯಾಖ್ಯೆಯನ್ನು ಮಾಡಬಹುದು. ಸಂಕ್ಷಿಪ್ತವಾಗಿ ಹೇಳುವು ದಾದರೆ ‘ಆಚಾರಧರ್ಮ’ವೆಂದರೆ ದೈನಂದಿನ ಜೀವನದಲ್ಲಿ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣ ಗೊಳಿಸುವುದು; ಅಂದರೆ ಪ್ರತಿಯೊಂದು ವಿಷಯವನ್ನು ಸಾತ್ತ್ವಿಕ ಮತ್ತು ಚೈತನ್ಯಮಯಗೊಳಿಸುವುದು. ಆದುದರಿಂದಲೇ ಆಚಾರಧರ್ಮದ ಪಾಲನೆಯಿಂದಈಶ್ವರಪ್ರಾಪ್ತಿಯ ಕಡೆಗೆ ಬೇಗನೇ ಮಾರ್ಗಕ್ರಮಣ ವಾಗಲು ಸಹಾಯವಾಗುತ್ತದೆ. ಕಸ ತೆಗೆಯುವಾಗ ಒಳಗಿನಿಂದ ಹೊರಗಿನ ದಿಕ್ಕಿನತ್ತ ಅಂದರೆ ಬಾಗಿಲಿನ ಕಡೆಗೆ ತೆಗೆಯುವುದು, ಪುರುಷರು ಪ್ಯಾಂಟ್-ಶರ್ಟ್ ಧರಿಸುವ ಬದಲು ಜುಬ್ಬಾ-ಪೈಜಾಮವನ್ನು ಧರಿಸುವುದು ಮತ್ತು ಸ್ತ್ರೀಯರು ಸಲ್ವಾರ್-ಕುರ್ತಾದ ಬದಲು ಸೀರೆಯನ್ನುಟ್ಟುಕೊಳ್ಳುವುದು, ಸ್ತ್ರೀಯರು ಕೂದಲನ್ನು ಬಾಚುವಾಗ ಜಡೆ ಅಥವಾ ತುರುಬು ಹಾಕಿಕೊಳ್ಳುವುದು, ಇಂತಹ ಅನೇಕ ವಿಷಯಗಳು ಆಚಾರಧರ್ಮದಲ್ಲಿ ಬರುತ್ತವೆ.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಆಚಾರಧರ್ಮ’ವೆಂದರೆ ಜೀವನದ ಆಧ್ಯಾತ್ಮೀಕರಣ !