ದೇಶಿ ಗೋವುಗಳ ಸಂಖ್ಯೆ ಮತ್ತು ಹಾಲಿನ ಉತ್ಪನ್ನವನ್ನು ಹೆಚ್ಚಿಸಲು ಅಮೇರಿಕಾದಿಂದ ತಂತ್ರಜ್ಞಾನವನ್ನು ಆಮದು ಮಾಡಲಿದೆ ಕೇಂದ್ರಸರಕಾರ !

ದೇಶದಲ್ಲಿ ಗೋಹತ್ಯೆಯಾಗುತ್ತಿರುವಾಗ ಅದನ್ನು ತಡೆಯದೇ ಹಾಲಿನ ಉತ್ಪನ್ನವನ್ನು ಹೆಚ್ಚಿಸಲು ಅಮೇರಿಕಾದಿಂದ ತಂತ್ರಜ್ಞಾನವನ್ನು ತರಲು ಪ್ರಯತ್ನಿಸುವ ರಾಜಕಾರಣಿಗಳು ರಾಷ್ಟ್ರಹಿತವನ್ನು ಹೇಗೆ ಸಾಧಿಸುವರು ?
ಮೇಕ್ ಇನ್ ಇಂಡಿಯಾದ ಘೋಷಣೆ ಮಾಡುವವರ ‘ಭಾರತ ನಿರ್ಮಾಣ’ವೆಂದರೆ ಇದೇನಾ ?
ನವ ದೆಹಲಿ : ದೇಶಿ ಗೋವುಗಳ ಸಂಖ್ಯೆ ಮತ್ತು ಗೋವುಗಳ ಹಾಲಿನ ಉತ್ಪನ್ನವು ಹೆಚ್ಚಾಗಿ ಗೋಪಾಲನೆಗೆ ಅತ್ಯಧಿಕ ಲಾಭದಾಯಕವಾಗಬೇಕೆಂದು ಕೇಂದ್ರ ಸರಕಾರ ಅಮೇರಿಕಾದ ಎ.ಬಿ.ಎಸ್. ಜೀನಸ್ ಮತ್ತು ಸೆಕ್ಸಿಂಗ್ ಟೆಕ್ನಾಲಾಜಿಸ್ ಈ ಕಂಪನಿಯೊಂದಿಗೆ ವಿಚಾರವಿನಿಮಯ ಮಾಡುತ್ತಿದೆ. ಜಗತ್ತಿನ ಏಕಮೇವವಾಗಿರುವ ಈ ಕಂಪನಿಯು ನೀಡುವ ಸಲಹೆಗನುಸಾರ ಲಿಂಗಾಧಾರಿತ ವೀರ್ಯವನ್ನು ಉಪಯೋಗಿಸಿ ಕೃತಕ ರೇತಸ್ಸಿನಿಂದ ಜನಿಸುವ ಕರು ಗೋವು ಆಗಿರುತ್ತದೆ, ಎಂಬುದು ಖಚಿತವಾಗಿರುತ್ತದೆ. ಇವೆರಡೂ ಕಂಪನಿಗಳಲ್ಲಿರುವ ತಂತ್ರಜ್ಞಾನ ಮತ್ತು ಉಪಕರಣಗಳನ್ನು ಖರೀದಿಸಿ ಭಾರತ ಸರಕಾರದ ಉಪಕ್ರಮವು ಇಂತಹ ತಂತ್ರಜ್ಞಾನವನ್ನು ವಿಕಸಿತಗೊಳಿಸಬಹುದು.
ಈ ತಂತ್ರಜ್ಞಾನದಿಂದ ದೇಶದಲ್ಲಿ ಪ್ರತಿ ವರ್ಷ ೬೦ ಲಕ್ಷ ವಿಕಸಿತ ಗೋವುಗಳ ಉತ್ಪತ್ತಿ ಮಾಡಿ ಅವುಗಳಿಂದ ಹಾಲಿನ ವ್ಯಾಪಾರದಲ್ಲಿ ಲಾಭವನ್ನು ಹೆಚ್ಚಿಸುವ ಉದ್ದೇಶವನ್ನಿಟ್ಟುಕೊಳ್ಳಲಾಗಿದೆ. ಸರಕಾರದ ಲೆಕ್ಕಾಚಾರ ಕ್ಕನುಸಾರ ಸದ್ಯ ದೇಶದಲ್ಲಿ ೮ ಕೋಟಿ ೯೦ ಲಕ್ಷ ಗೋವು ಮತ್ತು ಎಮ್ಮೆಗಳಿವೆ. ಈ ವಿಷಯದಲ್ಲಿ ಕೇಂದ್ರೀಯ ಮಂತ್ರಿಮಂಡಲವು ಆಗಸ್ಟ್ ತಿಂಗಳಲ್ಲಿ ಈ ಪ್ರಸ್ತಾಪವನ್ನು ಅನುಮೋದಿಸುವುದು ಹಾಗೂ ಈ ತಂತ್ರಜ್ಞಾನದ ಮೊದಲ ಗೋವು ಏಪ್ರಿಲ್ ೨೦೧೭ ರಲ್ಲಿ ಜನಿಸುವುದು, ಎಂದು ಅಪೇಕ್ಷಿಸಲಾಗಿದೆ. (ಕೇಂದ್ರ ಸರಕಾರದ ಉದ್ದೇಶವು ಶ್ಲಾಘನೀಯವಾಗಿದ್ದರೂ, ಗೋವುಗಳ ಸಂಖ್ಯೆ ಕಡಿಮೆಯಾಗುವ ಹಿಂದಿನ ಈ ಮುಖ್ಯ ಕಾರಣ ಗೋಹತ್ಯೆಯೇ ಆಗಿದೆ, ಎಂಬುದು ಜನರಿಗೆ ಮತ್ತು ಸರಕಾರಕ್ಕೂ ತಿಳಿದಿದೆ. ಆದ್ದರಿಂದ ಹಾಲಿನ ವ್ಯವಸಾಯವನ್ನು ಹೆಚ್ಚಿಸಲು ಇಂತಹ ದುಬಾರಿ ಪರಿಹಾರೋಪಾಯವನ್ನು ಮಾಡದೆ ಇಡೀ ದೇಶದಲ್ಲಿ ಗೋಹತ್ಯಾ ನಿಷೇಧದ ಪರ್ಯಾಯವು ಸುಲಭ ವಲ್ಲವೇ ? ಇಲ್ಲಿ ಪ್ರತಿವರ್ಷ ೬೦ ಲಕ್ಷ ಗೋವುಗಳ ಉತ್ಪಾದನೆ ಮಾಡುವುದು ಹಾಗೂ ಕೋಟಿಗಟ್ಟಲೆ ಗೋವುಗಳನ್ನು ಕಸಾಯಿಗಳಿಗೆ ಒಪ್ಪಿಸುವುದು ಇಂತಹ ಕೃತ್ಯಗಳು ಆರಂಭವಾಗುವುದು. - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶಿ ಗೋವುಗಳ ಸಂಖ್ಯೆ ಮತ್ತು ಹಾಲಿನ ಉತ್ಪನ್ನವನ್ನು ಹೆಚ್ಚಿಸಲು ಅಮೇರಿಕಾದಿಂದ ತಂತ್ರಜ್ಞಾನವನ್ನು ಆಮದು ಮಾಡಲಿದೆ ಕೇಂದ್ರಸರಕಾರ !