ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಹಮಿದುಲ್ ರಹಮಾನ್ ಉಪಸ್ಥಿತಿಯಲ್ಲಿ ಮತಾಂಧರಿಂದ ಹಿಂದೂಗಳ ಹಾಗೂ ರಥಯಾತ್ರೆ ಮೇಲೆ ದಾಳಿ !

ದಾಳಿಗಾಗಿ ಬಾಂಬ್ ಬಳಕೆ ಪೊಲೀಸರು ನಿಷ್ಕ್ರಿಯ !
  • ಮತಾಂಧರನ್ನು ಬೆಂಬಲಿಸುವ ಮಮತಾ(ಬಾನೊ) ಬ್ಯಾನರ್ಜಿ ರಾಜ್ಯದಲ್ಲಿರುವ ಅಸುರಕ್ಷಿತ ಹಿಂದೂಗಳು ! 
  • ಕೇಂದ್ರ ಸರಕಾರ ಹಾಗೂ ದೊಡ್ಡ ಹಿಂದುತ್ವನಿಷ್ಠ ಸಂಘಟನೆಗಳು ಪಶ್ಚಿಮಬಂಗಾಲದಲ್ಲಿರುವ  ಹಿಂದೂಗಳ ರಕ್ಷಣೆಗಾಗಿ ಏನನ್ನೂ ಮಾಡುತ್ತಿಲ್ಲ. ಇದು ಅವರನ್ನು ಬೆಂಬಲಿಸುವ ಹಿಂದೂಗಳಿಗೆ ಲಜ್ಜಾಸ್ಪದ !
  •  ದಾದ್ರಿ ಪ್ರಕರಣದಲ್ಲಿ ಹಿಂದೂಗಳ ಹೆಸರಿನಿಂದ ಬೊಬ್ಬೆ ಹೊಡೆಯುವವರು ಈಗ ಎಲ್ಲಿದ್ದಾರೆ ?
ಬಂಗಾಲವು ಬಾಂಗ್ಲಾದೇಶವಾಗುವ ದಿಶೆಯತ್ತ ಮಾರ್ಗಕ್ರಮಣ !
ಆಕ್ರಮಣಕ್ಕೊಳಗಾಗಿರುವ ರಥ
ಕೋಲಕಾತಾ : ಬಂಗಾಲ ರಾಜ್ಯದ ಉತ್ತರ ದಿನಾಜಪೂರ ಜಿಲ್ಲೆಯ ರಾಮಗಂಜ ಗ್ರಾಮದಲ್ಲಿ ಹಿಂದೂಗಳ ರಥಯಾತ್ರೆಯ ಮೇಲೆ ಮತಾಂಧರ ಗುಂಪು ದಾಳಿ ನಡೆಸಿತು. ಈ ಸಮಯದಲ್ಲಿ ಪೊಲೀಸರು ಹಿಂದೂಗಳಿಗೆ ಯಾವುದೇ ರೀತಿಯಲ್ಲಿ ರಕ್ಷಣೆ ನೀಡಲು ಮುಂದಾಗದೇ ತಟಸ್ಥರಾಗಿದ್ದ ಕಾರಣ ಹಿಂದೂಗಳು ರಾಷ್ಟ್ರೀಯ ಹೆದ್ದಾರಿ ೩೧ರ ಮೇಲೆ ಸಾಗುವ ವಾಹನಗಳನ್ನು ತಡೆದರು. ಮರುದಿನ ಪಕ್ಕದ ಚೋಪರಾದ ಮುಸ್ಲಿಂ ಬಾಹುಳ್ಯವಿರುವ ತಾಲೂಕಿನಲ್ಲಿ ಮತಾಂಧರು ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಾಂಬ್ ಎಸೆದು ಆಕ್ರಮಣ ಮಾಡಿದರು. ಈ ಸಮಯದಲ್ಲಿ ತೃಣಮೂಲ ಕಾಂಗ್ರೆಸ್ಸಿನ ಶಾಸಕರಾದ ಹಮಿದುನ್ ರಹಮಾನ್ ಇವರು ಹಾಜರಿದ್ದರು. ಚೋಪರಾ ಬ್ಲಾಕ್‌ನಲ್ಲಿ ಶೇ. ೩೨ರಷ್ಟು ಹಿಂದೂಗಳಿದ್ದಾರೆ ಹಾಗೂ ಪಕ್ಕದ ಇಸ್ಲಾಂಪೂರ ಬ್ಲಾಕ್‌ನಲ್ಲಿ ಶೇ. ೨೫ರಷ್ಟು ಹಿಂದೂಗಳಿದ್ದಾರೆ. ಮತಾಂಧರು ಹಿಂದೂಗಳ ಅನೇಕ ಮನೆಗಳು ಸುಟ್ಟರು ಹಾಗೂ ಸಂಪತ್ತನ್ನು ಲೂಟಿ ಮಾಡಿದರು. ಅವರು ಮಾಡಿದ ಗೋಲಿಬಾರ್‌ನಲ್ಲಿ ಕೆಲವು ಹಿಂದೂಗಳು ಗಾಯಗೊಂಡಿದ್ದಾರೆ.
೧.ಅಲ್ಲಿಯ ನೈನಿತಾಲ ಕಾಲನಿಯನ್ನು ಸಂಪೂರ್ಣವಾಗಿ ಸುಡಲಾಗಿದೆ ಹಾಗೂ ಅಲ್ಲಿನ ಸಂಪತ್ತನ್ನು ಲೂಟಿ ಮಾಡಿ ಒಯ್ದಿದ್ದಾರೆ.

೨. ಚೋಪರಾ ತಾಲೂಕಿನ ಮಾರುಕಟ್ಟೆಯನ್ನು ಲೂಟಿ ಮಾಡಲಾಗಿದ್ದು, ತೃಣಮೂಲ ಕಾಂಗ್ರೆಸ್ಸಿನ ಬೆಂಬಲಿಗರಿಗೂ ಈ ಲೂಟಿಯಿಂದ ಪೆಟ್ಟು ಬಿದ್ದಿದೆ.
೩. ಪೊಲೀಸರು ಹಾಗೂ ಸರಕಾರ ಪ್ರಸಾರ ಮಾಧ್ಯಮಗಳ ಮೇಲೆ ಒತ್ತಡ ಹೇರಿ ಮತಾಂಧರ ದಾಳಿಯ ಸುದ್ದಿ ಹಬ್ಬದಂತೆ ಎಚ್ಚರಿಕೆ ವಹಿಸುತ್ತಿದ್ದರು. (ಇದಕ್ಕಾಗಿ ಒತ್ತಡ ಹೇರುವ ಅವಶ್ಯಕತೆ ಏನಿತ್ತು ? ಹೇಗೂ ಢೋಂಗಿ ಜಾತ್ಯತೀತ ಮಾಧ್ಯಮಗಳು ಹಿಂದೂಗಳ ಮೇಲಾಗುವ ದಾಳಿಯ ಸುದ್ದಿ ಬಿತ್ತರಿಸುವುದಿಲ್ಲ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕ ಹಮಿದುಲ್ ರಹಮಾನ್ ಉಪಸ್ಥಿತಿಯಲ್ಲಿ ಮತಾಂಧರಿಂದ ಹಿಂದೂಗಳ ಹಾಗೂ ರಥಯಾತ್ರೆ ಮೇಲೆ ದಾಳಿ !