ಎಲ್ಲವೂ ಗುರುಗಳದ್ದೇ ಆಗಿದೆ ಎಂದು ಅರಿವಾಗುವುದು

ನಮ್ಮ ಮನೆಯಿಂದ ಹೊರಡುವಾಗ ಬಾಬಾರವರು ನನಗೆ (ಡಾ. ಜಯಂತ ಆಠವಲೆಯವರಿಗೆ) ಕೇಳಿದರು, ‘ಇಲ್ಲಿ ನಮ್ಮದೇನಾದರೂ ಉಳಿದಿದೆಯೇ ? ಉಳಿದಿದ್ದರೆ ರಾತ್ರಿ ಮುಲುಂಡ್‌ಗೆ ಗಡಕರಿಯವರ ಮನೆಗೆ ಬರುವಾಗ ತೆಗೆದುಕೊಂಡು ಬನ್ನಿ.’ ಬಾಬಾರವರು ಮನೆಯಿಂದ ಹೊರಡುವಾಗ ತಮ್ಮದೇನಾದರೂ ಸಾಹಿತ್ಯ ಉಳಿದಿಲ್ಲವಲ್ಲ ಎಂದು ಪ್ರತಿಸಲ ನೋಡುವಂತೆ ಆಗಲೇ ನೋಡಿಯಾಗಿತ್ತು, ಆದುದರಿಂದ ‘ಏನೂ ಉಳಿದಿಲ್ಲ ಮತ್ತು ಏನಾದರೂ ಉಳಿದಿದ್ದರೆ ತರುತ್ತೇನೆ’ ಎಂದು ಹೇಳೋಣವೆಂದು ಅನಿಸಿತು; ಆದರೆ ಮರುಕ್ಷಣವೇ ನಾನು ‘ಇಲ್ಲಿರುವುದೆಲ್ಲವೂ ತಮ್ಮದೇ ಆಗಿದೆ ಮತ್ತು ತಾವು ಕೊಟ್ಟಿರುವುದು ಮಾತ್ರ (ನಾಮವು) ಇಲ್ಲಿಯೇ ಇದೆ. ಆದುದರಿಂದ ಏನನ್ನು ಹುಡುಕಲಿ ಮತ್ತು ಏನನ್ನು ತರಲಿ ?’ ಎಂದು ಕೇಳಿದೆ. ಆಗ ಬಾಬಾರವರು ‘ಈ ಉತ್ತರವೇ ಅಪೇಕ್ಷಿತವಿತ್ತು !’ ಎಂದರು.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಎಲ್ಲವೂ ಗುರುಗಳದ್ದೇ ಆಗಿದೆ ಎಂದು ಅರಿವಾಗುವುದು