ಕಳೆದ ವರ್ಷದಂತೆಯೇ ಈ ವರ್ಷವೂ ರಾ.ಸ್ವ.ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್‌ದಿಂದ ಪಾಕ್ ಸಮೇತ ೧೪೦ ದೇಶಗಳ ರಾಯಭಾರಿಗಳಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ !

ನವ ದೆಹಲಿ : ಜುಲೈ ೨ ರಂದು ಸಾಯಂಕಾಲ ಸಂಸತ್ ಭವನದ ಪರಿಸರದಲ್ಲಿ ನಡೆಯುವ ಅಂತರರಾಷ್ಟ್ರೀಯ ಇಫ್ತಾರ್ ಕೂಟಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಪಾಕ್ ಸಮೇತ ೧೪೦ ದೇಶದ ರಾಯಭಾರಿಗಳಿಗೆ ಆಮಂತ್ರಣ ನೀಡಿದೆ. ಈ ಕೂಟಕ್ಕೆ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಹಾಗೂ ಕೇಂದ್ರೀಯ ಮಂತ್ರಿಮಂಡಳದ ಮಂತ್ರಿಗಳು ಉಪಸ್ಥಿತರಿರುವರು. ಮಂಚ್‌ನ ಮಾರ್ಗದರ್ಶಕರಾದ ಇಂದ್ರೇಶ ಕುಮಾರ್ ಇವರು ಈ ಆಯೋಜನೆಯನ್ನು ರಾಜಕೀಯ ದೃಷ್ಟಿಯಿಂದ ನೋಡಬಾರದು, ಭಾರತದಲ್ಲಿ ಎಲ್ಲ ಧರ್ಮದ ಜನರಿಗೆ ಸಮಾನ ಮಹತ್ವ ನೀಡಲಾಗುತ್ತದೆ, ಎಂಬುದನ್ನು ಜಗತ್ತಿಗೆ ತೋರಿಸುವ ಅವಶ್ಯಕತೆಯಿದೆ, ಎಂದು ಹೇಳಿದರು. (ಭಾರತದ ಅನೇಕ ರಾಜ್ಯಗಳಲ್ಲಿ ಹಿಂದೂಗಳ ಮೇಲೆ ಜಿಹಾದಿಗಳಿಂದ ದಾಳಿಯಾಗುತ್ತದೆ, ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಮೋಸಗೊಳಿಸಲಾಗುತ್ತದೆ, ಈಶಾನ್ಯ ಭಾರತ ಸಹಿತ ಅನೇಕ ರಾಜ್ಯಗಳಲ್ಲಿ ಕ್ರೈಸ್ತ ಮಿಶನರಿಗಳಿಂದ ಹಿಂದೂಗಳ ಮತಾಂತರ ಮಾಡಲಾಗುತ್ತದೆ, ಇದನ್ನು ಸಮಾನ ಮಹತ್ವವೆಂದು ತಿಳಿದುಕೊಳ್ಳಬೇಕೆ ? - ಸಂಪಾದಕರು )

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಳೆದ ವರ್ಷದಂತೆಯೇ ಈ ವರ್ಷವೂ ರಾ.ಸ್ವ.ಸಂಘದ ಮುಸ್ಲಿಂ ರಾಷ್ಟ್ರೀಯ ಮಂಚ್‌ದಿಂದ ಪಾಕ್ ಸಮೇತ ೧೪೦ ದೇಶಗಳ ರಾಯಭಾರಿಗಳಿಗೆ ಇಫ್ತಾರ್ ಕೂಟಕ್ಕೆ ಆಹ್ವಾನ !