ಇತರ ಸಂತರು ಮತ್ತು ಪ.ಪೂ. ಡಾ. ಆಠವಲೆ ಇವರಲ್ಲಿ ವ್ಯತ್ಯಾಸ !

ನ್ಯಾಯವಾದಿ ಯೋಗೇಶ ಜಲತಾರೆ
‘ಸಂತರ ತುಲನೆಯನ್ನು ಮಾಡಬಾರದು’, ಎಂಬ ಒಂದು ಸಾಮಾನ್ಯ ನಿಯಮವು ಅಧ್ಯಾತ್ಮಮಾರ್ಗದಲ್ಲಿ ಪ್ರಯಾಣಿಸುವವರಿಗೆ ಅನ್ವಯಿಸುತ್ತದೆ. ಇದರ ಕಾರಣಗಳೂ ಸಾಕಷ್ಟಿವೆ; ಏಕೆಂದರೆ ನಮಗೆ ಸಂತರ ಆಳವನ್ನು ಕಂಡುಹಿಡಿಯುವುದು ಕಷ್ಟಸಾಧ್ಯವಾಗಿದೆ. ನಮ್ಮಲ್ಲಿ ಅಷ್ಟೇನೂ ಆಳವಾದ ಅಧ್ಯಯನವಿರುವುದಿಲ್ಲ. ಆದ್ದರಿಂದ ಸಾಧಕರು ಹಾಗೆ ಮಾಡಬಾರದು, ಆದರೂ  ಇಲ್ಲಿ ಕೆಲವು ವಿಷಯಗಳನ್ನು ಮಂಡಿಸಬೇಕೆನಿಸಿತು, ಅದು ಯಾವುದೇ ಸಂತರನ್ನು ಕಡಿಮೆ ಎಣಿಸಬೇಕಂದಲ್ಲ, ಅದು ‘ಪರಾತ್ಪರ ಗುರು ಡಾ. ಆಠವಲೆಯವರ ಭಿನ್ನತೆ ಏನಿದೆ ?’, ಎಂಬುದು ಸುಲಭದಿಂದ ಅಧ್ಯಯನ ಮಾಡಲು ಸಾಧ್ಯವಾಗಬೇಕೆಂಬುದಕ್ಕಾಗಿ ಈ ಲೇಖನವಿದೆ.
___________________________

೧. ಸ್ವತಃ ಉಡುಗೆತೊಡುಗೆಯಲ್ಲಿ ಸಿಲುಕಿಕೊಳ್ಳದಿರುವುದು ಹಾಗೂ ಸಾಧಕರನ್ನೂ ಅದರಲ್ಲಿ ಸಿಲುಕಿಸದಿರುವುದು : ಇತರ ಸಂಪ್ರದಾಯ ಅಥವಾ ಸಂತರಲ್ಲಿ ಉಡುಗೆ-ತೊಡುಗೆ ವಿಷಯದಲ್ಲಿ ಕೆಲವು ನಿಯಮಗಳಿರುತ್ತವೆ. ಕೆಲವು ಕಡೆಗಳಲ್ಲಿ ಕೇಸರಿ ವಸ್ತ್ರಧಾರಣೆ ಮಾಡುವುದು ಕಡ್ಡಾಯವಿರುತ್ತದೆ, ಕೆಲವು ಕಡೆಗಳಲ್ಲಿ ಪಂಚೆ ಉಡುವುದು ಅನಿವಾರ್ಯವಿರುತ್ತದೆ. ಪ.ಪೂ. ಡಾಕ್ಟರರು ಮಾತ್ರ ಯಾವುದೇ ಉಡುಗೆ-ತೊಡುಗೆಯಲ್ಲಿ ಸಿಲುಕಲಿಲ್ಲ ಹಾಗೂ ಅವರು ಸಾಧಕರನ್ನೂ ಸಿಲುಕಿಸಲಿಲ್ಲ. ‘ಹಿಂದೂ ಸಂಸ್ಕೃತಿಗನುಸಾರ ಉಡುಗೆ-ತೊಡುಗೆ ಮಾಡಬೇಕು’, ಎಂದು ಅವರು ಬೋಧಿಸಿದ್ದಾರೆ; ಆದರೆ ಅದನ್ನು ಆಗ್ರಹಿಸಲಿಲ್ಲ. ಸಹಜಾವಸ್ಥೆಯಲ್ಲಿಯೂ ಅಧ್ಯಾತ್ಮ ಜೀವನ ನಡೆಸಬಹುದೆಂದು ಅವರು ತೋರಿಸಿಕೊಟ್ಟರು.
೨. ಆಹಾರ, ನಿದ್ರೆ, ಯಮ, ನಿಯಮಗಳ ಆಚೆಗೆ ಕೊಂಡೊಯ್ಯುವ ಪ.ಪೂ. ಡಾಕ್ಟರ್ ! : ಇತರರಲ್ಲಿ ಆಹಾರ, ನಿದ್ರೆ, ಯಮ, ನಿಯಮ ವಿಷಯದಲ್ಲಿ ಏನಾದರೂ ನಿಯಮಗಳಿದ್ದೇ ಇರುತ್ತವೆ; ಆದರೆ ಪ.ಪೂ. ಡಾಕ್ಟರರು ಸಾಧಕರನ್ನು ಈ ನಿಯಮಗಳ ಆಚೆಗೆ ಕೊಂಡೊಯ್ದಿದ್ದಾರೆ. ಯಾವ ಸಾಧಕನಿಗೂ ಅವರು ‘ಮಾಂಸಾಹಾರ ಬಿಡಬೇಕು, ಬೇಗನೆ ಮಲಗಬೇಕು, ಬೇಗನೆ ಏಳಬೇಕು’, ಇತ್ಯಾದಿ ಯಾವುದೇ ರೀತಿಯಲ್ಲಿ ಆಗ್ರಹಿಸಲಿಲ್ಲ. ‘ಪ್ರತಿಯೊಬ್ಬರೂ ತಮ್ಮ ಪ್ರಕೃತಿಗನುಸಾರ ಸಾಧನೆ ಮಾಡಿ ಆನಂದ ಪಡೆಯಬೇಕು’, ಎಂದು ಅವರು ಹೇಳುತ್ತಾರೆ, ಆದರೂ ಹೆಚ್ಚುಕಡಿಮೆ ಎಲ್ಲ ಸಾಧಕರು ಸಾಧನೆಯಲ್ಲಿ ಸ್ಥಿರವಾದ ನಂತರ ಅವರ ಮಾಂಸಾಹಾರದ ಇಚ್ಛೆ ಇಲ್ಲದಂತಾಯಿತು. ಇಂದು ಯಾರಿಗೆ ರಾತ್ರಿ ಜಾಗರಣೆ ಮಾಡಿ ಸೇವೆ ಮಾಡಲು ಸಾಧ್ಯವಿದೆಯೋ, ಅವರು ರಾತ್ರಿ ಜಾಗರಣೆ ಮಾಡಿ ಹಾಗೂ ಯಾರಿಗೆ ಬೆಳಗ್ಗೆ ಬೇಗನೆ ಎದ್ದು ಸೇವೆ ಮಾಡಲು ಸಾಧ್ಯವಿದೆ, ಅವರು ಬೆಳಗ್ಗೆ ಬೇಗನೆ ಎದ್ದು ಸೇವೆ ಮಾಡುತ್ತಿದ್ದಾರೆ.
೩. ಸಾಧಕರಿಗೆ ಗುರುಮಂತ್ರದ ಅವಶ್ಯಕತೆಯ ಅರಿವಾಗಲು ಬಿಡದಿರುವುದು : ಕೆಲವು ಸಂತರು ಸಾಧಕರ ಸಂಪರ್ಕವಾದ ತಕ್ಷಣ ಅಥವಾ ಸ್ವಲ್ಪ ಸಮಯದ ನಂತರ ಅವರಿಗೆ ಗುರುಮಂತ್ರ ಕೊಡುತ್ತಾರೆ ಹಾಗೂ ಆ ಸಾಧನೆಯನ್ನೇ ನಿಯಮಿತವಾಗಿ  ಹೇಳುತ್ತಾರೆ. ಪ.ಪೂ. ಡಾಕ್ಟರರು ಮಾತ್ರ ಸಾಧಕರಿಗೆ ಗುರುಕೃಪಾಯೋಗಾನುಸಾರ ಸಾಧನೆಯನ್ನು ಹೇಳಿ ಗುರುಮಂತ್ರದ ಅವಶ್ಯಕತೆಯಿದೆಯೆಂದು ಅನಿಸಲು ಬಿಡಲೇ ಇಲ್ಲ. ಅವರು ಕಾಲಾನುಸಾರ ಸಾಧಕರಿಗೆ ಮುಂದುಮುಂದಿನ ಹಂತದ ಸಾಧನೆಯನ್ನು ಮಾಡಲು ಕಲಿಸಿದರು.
೪. ತನ್ನ ದರ್ಶನ ಸಮಾರಂಭವನ್ನು ಆಯೋಜನೆ ಮಾಡದಿರುವುದು : ಇತರ ಸಂತರ ದರ್ಶನವು ಅವರ ಭಕ್ತರಿಗೆ ಅಷ್ಟು ಸುಲಭವಾಗಿ ಆಗುವುದಿಲ್ಲ. ಪ.ಪೂ. ಡಾಕ್ಟರರು ಮಾತ್ರ ಆರೋಗ್ಯ ಚೆನ್ನಾಗಿದ್ದರೆ ಎಲ್ಲ ಸಾಧಕರನ್ನು ಭೇಟಿಯಾಗುತ್ತಾರೆ. ಕೆಲವು ಸಂತರ ದರ್ಶನ ಸಮಾರಂಭವನ್ನು ಆಯೋಜಿಸಲಾಗುತ್ತದೆ. ಪ.ಪೂ. ಡಾಕ್ಟರರು ಮಾತ್ರ ಹಾಗೆ ಮಾಡಲು ಬಿಡುವುದಿಲ್ಲ; ಏಕೆಂದರೆ, ಅವರು ಹೀಗೆನ್ನುತ್ತಾರೆ, ‘‘ದರ್ಶನಕ್ಕೆ ಬರುವ ದರ್ಶನಾರ್ಥಿಗಳು ಮತ್ತು ಭಕ್ತರು ಸ್ವಾರ್ಥಿಗಳಾಗಿರುತ್ತಾರೆ. ಅವರಿಗೆ  ಸಾಧನೆಯ ಬಗ್ಗೆ ಆಸಕ್ತಿ ಇದೆಯೆಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿ ನಮ್ಮ ಸಮಯ ವ್ಯರ್ಥವಾಗಬಾರದು. ನಿಜವಾದ ಸಾಧಕರು ಎಲ್ಲಿಂದಾದರೂ ನಮ್ಮೊಂದಿಗೆ  ಜೋಡಿಸಲ್ಪಡುವರು.’’ ಇಂದು ನಿಜವಾಗಿಯೂ ಹಾಗೆಯೇ ಆಗುತ್ತಿದೆ. ತಳಮಳವಿರುವ ಸಾಧಕರು ತಾವಾಗಿಯೇ ಸನಾತನದೊಂದಿಗೆ ಜೋಡಿಸಲ್ಪಡುತ್ತಿದ್ದಾರೆ.
೫. ಯಾವುದೇ ಮಾನಸನ್ಮಾನದ ಅಪೇಕ್ಷೆಯನ್ನಿಡದಿರುವುದು : ಪ.ಪೂ.ಡಾಕ್ಟರರು ಸಾಧಕರಿಗೆ ಹೀಗೆ ಕಲಿಸಿದರು, ‘ನೀವು ಹಾರ-ಪುಷ್ಪಗುಚ್ಛಗಳ ಹಿಂದೆ ಹೋದರೆ ಅಲ್ಲಿಂದ ನಿಮ್ಮ ಸಾಧಕತ್ವದ ಅವನತಿ ಆರಂಭವಾಯಿತು ಎಂದು ತಿಳಿಯಿರಿ. ಅಲ್ಲಿಂದಲೇ ಅಧ್ಯಾತ್ಮದಿಂದ ಕುಸಿತ ಆರಂಭವಾಗುತ್ತದೆ.’ ಅವರು ಸ್ವತಃ ಯಾವುದೇ ಮಾನಸನ್ಮಾನದ ಅಪೇಕ್ಷೆಯನ್ನಿಡದೆ ಒಬ್ಬ ಸಾಧಕನ ಹಾಗೆ ಜೀವನ ನಡೆಸುತ್ತಿದ್ದಾರೆ. ಇತರ ಸಂಪ್ರದಾಯಗಳಲ್ಲಿ ಮಾತ್ರ ಹೀಗೆ ಕಂಡುಬರುವುದಿಲ್ಲ. ಅಲ್ಲಿ ಕೆಲವೊಮ್ಮೆ ಮಾನಸನ್ಮಾನದಿಂದಾಗಿ ಜಗಳವಾಗುತ್ತದೆ.
೬. ಎಲ್ಲ ಸಾಧಕರನ್ನು ಇತರ ಸಂತರಲ್ಲಿಗೆ ಕಲಿಯಲು ಕಳುಹಿಸುವುದು : ಪ.ಪೂ. ಡಾಕ್ಟರರು ಸಾಧಕರನ್ನು ಎಲ್ಲ ಸಂತರಲ್ಲಿಗೆ ಕಲಿಯಲು ಕಳುಹಿಸುತ್ತಾರೆ. ‘ಗುರುತತ್ತ್ವ ಒಂದೇ ಇರುತ್ತದೆ’, ಎಂಬುದನ್ನು ಸಾಧಕರ ಮನಸ್ಸಿನಲ್ಲಿ ಬಿಂಬಿಸಿ ಇತರ ಸಂತರನ್ನು ಯಥಾಯೋಗ್ಯ ಸನ್ಮಾನ ಮಾಡಲು ಕಲಿಸುತ್ತಾರೆ. ಅವರು ಸಾಧಕರನ್ನು ಎಲ್ಲಿಯೂ ‘ನಾವು ಸನಾತನದವರು’, ಎಂಬ ಸಂಕುಚಿತ ವಿಚಾರದಲ್ಲಿ ಸಿಲುಕಲು ಬಿಡಲಿಲ್ಲ. ಆದ್ದರಿಂದ ಸಾಧಕರು ಸಹ ಅನೇಕ ಸಂತರ ಮನಸ್ಸನ್ನು ಗೆದ್ದರು. ಆದ್ದರಿಂದ ಆ ಸಂತರ ಶುಭಾಶೀರ್ವಾದ ಸಾಧಕರಿಗೆ ಲಭಿಸಿತು.
೭. ವ್ಯಾವಹಾರಿಕ ಸಮಸ್ಯೆಗಳತ್ತ ಆಧ್ಯಾತ್ಮಿಕ ದೃಷ್ಟಿ ಯಿಂದ ನೋಡಲು ಕಲಿಸುವ ಪ.ಪೂ. ಡಾಕ್ಟರ್ ! : ಸಾಮಾನ್ಯವಾಗಿ ಎಲ್ಲ ಸಂತರಲ್ಲಿ ‘ಪ್ರೀತಿ’ ಎಂಬ ಆಧ್ಯಾತ್ಮಿಕ ಗುಣವಿರುವುದರಿಂದ ಅವರಿಗೆ ಭಕ್ತರ ಬಗ್ಗೆ ಕಳವಳ ಇದ್ದೇ ಇರುತ್ತದೆ. ಆ ಕಳವಳದಿಂದಾಗಿ ಅವರು ತಾಯಿಯ ವ್ಸಾತ್ಸಲ್ಯದಿಂದ ತಮ್ಮ ಭಕ್ತರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ‘ಭಕ್ತರ ಜೀವನದಲ್ಲಿ ಅಡಚಣೆಗಳು ದೂರವಾಗಿ ಅವರ ಸಾಧನೆಯು ಸುಲಭವಾಗಬೇಕು’, ಎಂಬುದು ಅವರ ಅಪೇಕ್ಷೆ ಇರುತ್ತದೆ; ಆದರೆ ಹೀಗೆ ಮಾಡುವಾಗ ಸಂಬಂಧಪಟ್ಟ ಭಕ್ತನು ಸಾಧನೆ ಮಾಡುತ್ತಾನೆಯೇ ಇಲ್ಲವೇ, ಎಂಬುದನ್ನು ಅವರು ನೋಡುವುದಿಲ್ಲ. ಆದ್ದರಿಂದ ಅವರು ತನ್ನ ತಪೋಬಲವನ್ನು ಉಪಯೋಗಿಸಿಯೋ ಅಥವಾ ಸಂಕಲ್ಪದಿಂದಲೋ, ಭಕ್ತರ ವ್ಯಾವಹಾರಿಕ ಅಡಚಣೆಗಳನ್ನು ನಿವಾರಿಸುತ್ತಾ ಇರುತ್ತಾರೆ. ಇದರಲ್ಲಿ ಯಾರಾದರೂ ಒಬ್ಬನ ವಿವಾಹ ಕೂಡಿ ಬರದಿದ್ದರೆ, ಅದು ಕೂಡಿ ಬರಲಿ, ನೌಕರಿ ಸಿಗಲಿ, ಮಕ್ಕಳಾಗದಿದ್ದರೆ, ಅದಕ್ಕಾಗಿ ಅನುಷ್ಠಾನ ಮಾಡು, ಯಾರಿಗಾದರೂ ಒಬ್ಬನಿಗೆ ಮೃತ್ಯುಯೋಗವಿದ್ದರೆ ಅದನ್ನು ತಪ್ಪಿಸುವುದು ಇತ್ಯಾದಿ ವಿಷಯಗಳನ್ನು ಸಂತರು ಮಾಡುತ್ತಾ ಇರುತ್ತಾರೆ. ಪ.ಪೂ.ಡಾಕ್ಟರರು ಮಾತ್ರ ಸಾಧಕರಿಗೆ ಇಂತಹ ಎಲ್ಲ ವಿಷಯಗಳನ್ನು ಆಧ್ಯಾತ್ಮಿಕ ದೃಷ್ಟಿಯಿಂದ ನೋಡಲು ಕಲಿಸುತ್ತಾರೆ. ಜನ್ಮ, ವಿವಾಹ ಮತ್ತು ಮೃತ್ಯು ಈ ಮೂರೂ  ವಿಷಯಗಳು ಪ್ರಾರಬ್ಧಕ್ಕನುಸಾರ ನಡೆಯುತ್ತವೆ, ಎಂಬ ಶಾಸ್ತ್ರವನ್ನು ಅವರು ಸಾಧಕರಿಗೆ ಹೇಳಿಟ್ಟಿದ್ದಾರೆ. ಆದ್ದರಿಂದ ಅವರು ಇದಕ್ಕೆ ಸಂಬಂಧಿಸಿದ ಸಾಧಕರ ಅಡಚಣೆಗಳನ್ನು, ಸಮಸ್ಯೆಗಳನ್ನು ಯಾವತ್ತೂ ನಿವಾರಿಸುವುದಿಲ್ಲ ಅಥವಾ ಸಾಧಕರ ಆಂತರಿಕ ತಳಮಳದಿಂದ ಪ.ಪೂ. ಡಾಕ್ಟರರ ಕೃಪೆಯಿಂದ ಅಥವಾ ಅವರ ಅಸ್ತಿತ್ವದಿಂದ ನಿವಾರಣೆ ಯಾದರೂ ಅದರ ಕರ್ತೃತ್ವವನ್ನು ಪ.ಪೂ. ಡಾಕ್ಟರರು ಯಾವತ್ತೂ ತನ್ನಿಂದ ಆಯಿತು ಎಂದು ಹೇಳುವುದಿಲ್ಲ. ಅವರು ಸಾಧಕರಿಗೆ ಎಲ್ಲ ಸಮಸ್ಯೆಗಳಿಗೆ ‘ಸಾಧನೆ’ ಒಂದೇ ಉಪಾಯ ಎಂದು ಹೇಳಿದ್ದಾರೆ.
೮. ‘ರಾಷ್ಟ್ರ ಹಾಗೂ ಧರ್ಮ ರಕ್ಷಣೆಯೇ ಕಾಲಾನುಸಾರ ಸಾಧನೆಯಾಗಿದೆ’, ಎಂದು ಕಲಿಸುವುದು : ಕೆಲವು ಸಂತರು ತಮ್ಮ ಸಂಪ್ರದಾಯದ ಬಗ್ಗೆ ಮಾತ್ರ ವಿಚಾರ ಮಾಡುತ್ತಾರೆ. ಆದ್ದರಿಂದ ಅವರಿಗೆ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಏನೂ ಸಂಬಂಧವಿರುವುದಿಲ್ಲ ಹಾಗೂ ಕೆಲವು ಸಂತರು ಈ ವಿಷಯದಲ್ಲಿ ಅಲ್ಪ-ಸ್ವಲ್ಪ ವಿಚಾರ ಮಾಡುತ್ತಾರೆ. ಪ.ಪೂ.ಡಾಕ್ಟರರು ಮಾತ್ರ ಸಾಧಕರಿಗೆ ಹೀಗೆ ಕಲಿಸಿದರು, ‘ರಾಷ್ಟ್ರ ಮತ್ತು ಧರ್ಮ ಉಳಿದರೆ, ಮಾತ್ರ ಮುಂದೆ ನಾವು ಸಾಧನೆ ಮಾಡಲು ಸಾಧ್ಯವಿದೆ. ಆದ್ದರಿಂದ ಮೊದಲು ಅದರ ರಕ್ಷಣೆಯಾಗಬೇಕು. ಅದೇ ನಮ್ಮ ಕಾಲಾನುಸಾರ ಸಾಧನೆಯಾಗಿದೆ.’ ಈ ಮೇಲಿನ ವಿಷಯಗಳು ಕೆಲವು ಉದಾಹರಣೆಗಳಾಗಿವೆ. ಪ.ಪೂ. ಡಾಕ್ಟರರ ಭಿನ್ನತೆ ಯನ್ನು ತೋರಿಸುವ ಇಂತಹ ಅನೇಕ ವಿಷಯಗಳನ್ನು ಸಾಧಕರು ಅನುಭವಿಸಿದ್ದಾರೆ.’
- ನ್ಯಾಯವಾದಿ ಯೋಗೇಶ ಜಲತಾರೆ, ಸನಾತನ ಆಶ್ರಮ, ರಾಮನಾಥಿ ಗೋವಾ. (೯.೪.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇತರ ಸಂತರು ಮತ್ತು ಪ.ಪೂ. ಡಾ. ಆಠವಲೆ ಇವರಲ್ಲಿ ವ್ಯತ್ಯಾಸ !