ನಮ್ಮ ದಿನಚರಿ ಹೇಗಿರಬೇಕು ?

ಧರ್ಮಶಿಕ್ಷಣ ನೀಡುವ ಮಾಲಿಕೆ !
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯ ಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮ ಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ನೀರಿನಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು
ಅ. ಶಾಸ್ತ್ರ - ನೀರಿನಲ್ಲಿ ಮಲಮೂತ್ರ ವಿಸರ್ಜನೆ ಮಾಡಿದರೆ ನೀರು ಅಶುದ್ಧವಾಗಿ, ನೀರಿನ ಕಡೆಗೆ ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಆಕರ್ಷಿತವಾಗಿ ಸಂಪೂರ್ಣ ವಾಯು ಮಂಡಲವು ಅಶುದ್ಧವಾಗುವುದು : ನೀರು ಸರ್ವಸಮಾವೇಶಕವಾಗಿರುವುದರಿಂದ, ನೀರನ್ನು ಶುದ್ಧ ಮತ್ತು ಪವಿತ್ರವಾಗಿಟ್ಟರೆ, ಅದರ ಕಡೆಗೆ ಬ್ರಹ್ಮಾಂಡದಲ್ಲಿನ ದೇವತೆಗಳ ಸಾತ್ತ್ವಿಕ ಪಂಚತತ್ತ್ವಗಳ ಲಹರಿಗಳು ಆಕರ್ಷಿತವಾಗಿ ಜೀವಗಳ ದೇಹ ಹಾಗೂ ವಾಯುಮಂಡಲವೂ ಶುದ್ಧವಾಗಿರುತ್ತದೆ. ಇದರಿಂದ ಆ ಪರಿಸರದಲ್ಲಿ ವಾಸಿಸುವ ಅನೇಕ ಜೀವಗಳಿಗೆ ಲಾಭವಾಗುತ್ತದೆ. ನೀರಿನಲ್ಲಿ ಮಲಮೂತ್ರ ವಿಸರ್ಜನೆ ಮಾಡಿದರೆ ನೀರು ಅಶುದ್ಧವಾಗಿ, ಅದರ ಕಡೆಗೆ ಬ್ರಹ್ಮಾಂಡದಲ್ಲಿನ ರಜ-ತಮಾತ್ಮಕ ಲಹರಿಗಳು ಆಕರ್ಷಿತವಾಗಿ ಸಂಪೂರ್ಣ ವಾಯುಮಂಡಲವು ಅಶುದ್ಧವಾಗುತ್ತದೆ, ಅಲ್ಲದೆ ಇಂತಹ ಕೃತಿಯಿಂದ ಅನೇಕ ಅಪಾಯಕಾರಿ ರೋಗಗಳನ್ನು ಆಮಂತ್ರಿಸಿದಂತಾಗುತ್ತದೆ. ಇಂತಹ ನೀರನ್ನು ಕುಡಿಯುವುದರಿಂದ ನೀರಿನೊಂದಿಗೆ ಕೆಟ್ಟ ಶಕ್ತಿಗಳು ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯೂ ಇರುತ್ತದೆ.
ಜಲಾಶಯಗಳಿಂದ ಹತ್ತು ಕೈಗಳ ಅಂತರದವರೆಗಿನ ಜಾಗದಲ್ಲಿ
ಮಲಮೂತ್ರ ವಿಸರ್ಜನೆ ಮಾಡಬಾರದು
ಅ. ಶಾಸ್ತ್ರ - ಜಲಾಶಯಗಳಿಂದ (ನದಿ, ಕೆರೆ ಇತ್ಯಾದಿ) ಹತ್ತು ಕೈಗಳ ಅಂತರದವರೆಗಿನ ಜಾಗದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ವಾಯು ಮಂಡಲವು ದೂಷಿತವಾಗಿ ಸಂಪೂರ್ಣ ಪರಿಸರವು ಅಶುದ್ಧವಾಗುತ್ತದೆ ಮತ್ತು ಅನೇಕ ಕೆಟ್ಟ ಶಕ್ತಿಗಳು ಆ ಪರಿಸರದ ಆಶ್ರಯವನ್ನು ಪಡೆದುಕೊಂಡು ಆ ನೀರಿನಲ್ಲಿ ತ್ರಾಸದಾಯಕ ಶಕ್ತಿಯನ್ನು ಬಿಡುತ್ತವೆ  : ಜಲಾಶಯದಿಂದ ಹತ್ತು ಕೈಗಳ ಅಂತರದವರೆಗಿನ ಪರಿಸರವು ತೇವಭರಿತವಾಗಿರುವುದರಿಂದ ಅದು ಸೂಕ್ಷ್ಮ ದೃಷ್ಟಿಯಿಂದ ಎಲ್ಲ ರೀತಿಯ ಪಂಚತತ್ತ್ವಗಳ ಲಹರಿಗಳ ಹರಡುವಿಕೆಗೆ ಪೂರಕವಾಗಿರುತ್ತದೆ. ಈ ತೇವಭರಿತ ವಾಯುಮಂಡಲದಲ್ಲಿ (ಉದಾ. ನದಿ ತೀರದಲ್ಲಿ) ಅನೇಕ ದಿವ್ಯಾತ್ಮಗಳು ಸಾಧನೆಯನ್ನು ಮಾಡುತ್ತಿರುತ್ತವೆ. ಅಲ್ಲದೇ ಕೆಲವೊಂದು ಪಿತೃಗಳೂ ಇಂತಹ ಪರಿಸರದಲ್ಲಿ ಸಾಧನೆಯನ್ನು ಮಾಡುತ್ತಿರುತ್ತಾರೆ. ಆದುದರಿಂದ ನದಿ ತೀರದಲ್ಲಿ ಅಥವಾ ಯಾವುದೇ ಸರೋವರದ ತೀರದಲ್ಲಿ ಮಲಮೂತ್ರಾದಿ ವಿಸರ್ಜನೆ ಮಾಡಬಾರದು. ಇದರಿಂದ ವಾಯುಮಂಡಲವು ದೂಷಿತವಾಗಿ ಅದರಿಂದ ರಜ-ತಮಾತ್ಮಕ ಲಹರಿಗಳು ಎಲ್ಲೆಡೆ ಗಳಲ್ಲಿ ವೇಗವಾಗಿ ಹರಡಿ ಸಂಪೂರ್ಣ ಪರಿಸರವು ಅಶುದ್ಧವಾಗುತ್ತದೆ. ಇದರಿಂದ ಅನೇಕ ಕೆಟ್ಟ ಶಕ್ತಿಗಳು ಈ ಪರಿಸರದ ಆಶ್ರಯಕ್ಕೆ ಬಂದು ನೀರಿನಲ್ಲಿ  ತ್ರಾಸದಾಯಕ ಶಕ್ತಿಯನ್ನು ಬಿಡುತ್ತವೆ. ಇಂತಹ ದೂಷಿತ ನೀರಿನಿಂದ ಎಲ್ಲರಿಗೂ ಕೆಟ್ಟ ಶಕ್ತಿಗಳ ತೊಂದರೆಯಾಗುವ ಸಾಧ್ಯತೆಯಿರುತ್ತದೆ.
ಜೀರ್ಣ (ಹಳೆ) ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು
ಅ.  ಶಾಸ್ತ್ರ - ಜೀರ್ಣ ದೇವಸ್ಥಾನಗಳಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುಗಳು ಹರಡಿ ಪವಿತ್ರ ವಾಯುಮಂಡಲವು ಅಪವಿತ್ರವಾಗುತ್ತದೆ  : ‘ಜೀರ್ಣ’ ಎಂದರೆ ಅತ್ಯಂತ ಹಳೆಯ. ಕಾಲಕಳೆದಂತೆ ಇಂತಹ ದೇವಾಲಯಗಳ ಸ್ಥಳಗಳಲ್ಲಿ ಅಲ್ಲಿನ ದೇವತೆಗಳ ಶಕ್ತಿರೂಪೀ ವಾಯುಮಂಡಲವು ಭೂಮಂಡಲದೊಂದಿಗೆ ಘನೀಕೃತವಾಗಿರುತ್ತದೆ. ಜೀರ್ಣ ದೇವಸ್ಥಾನಗಳ ಭಗ್ನ ಅವಶೇಷಗಳಿಂದ ವಾಯುಮಂಡಲದಲ್ಲಿ ಹೊರಬೀಳುವ ದೇವತೆಯ ಚೇತನವು ಕಡಿಮೆಯಾಗಿದ್ದರೂ ಆ ದೇವತೆಯ ಪೃಥ್ವಿ ಮತ್ತು ಆಪತತ್ತ್ವಗಳೊಂದಿಗೆ ಸಂಬಂಧಿಸಿದ ಶಕ್ತಿಸ್ವರೂಪ ವಾಯುಮಂಡಲವು ಘನೀಕೃತವಾಗಿ ಸುಪ್ತ ರೂಪದಲ್ಲಿ ಇರುವುದರಿಂದ ಅದು ಒಂದು ಪವಿತ್ರ ವಾಯುಮಂಡಲವೇ ಆಗಿರುತ್ತದೆ. ಇಂತಹ ಪವಿತ್ರ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಮತ್ತು ವಾಯುಗಳ ಹರಡುವಿಕೆಗೆ ಕಾರಣವಾಗುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದರಿಂದ ಆ ಸ್ಥಳದಲ್ಲಿರುವ ಪವಿತ್ರ ವಾಯು ಮಂಡಲವು ಅಪವಿತ್ರವಾಗುತ್ತದೆ ಮತ್ತು ಇದು ಒಂದು ಪಾಪಭರಿತ ಕರ್ಮವಾಗುತ್ತದೆ.
ಯಜ್ಞವೇದಿಕೆ ಮತ್ತು ಭಸ್ಮವಿರುವ ಸ್ಥಳಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬಾರದು
ಅ.  ಶಾಸ್ತ್ರ - ಯಜ್ಞವೇದಿಕೆ (ಯಜ್ಞಕುಂಡ) ಮತ್ತು ಭಸ್ಮ ಇವುಗಳ ಸ್ಥಳದಲ್ಲಿ ಮಲಮೂತ್ರ ವಿಸರ್ಜನೆ ಮಾಡುವುದರಿಂದ ಆ ಸ್ಥಳದಲ್ಲಿನ ಪವಿತ್ರ ವಾಯುಮಂಡಲವು ಅಶುದ್ಧವಾಗುತ್ತದೆ : ಭಸ್ಮ ಮತ್ತು ಯಜ್ಞವೇದಿಕೆಗಳ ಸ್ಥಳದಲ್ಲಿ ತೇಜತತ್ತ್ವದ ಸುಪ್ತಶಕ್ತಿಸ್ವರೂಪ ವಾಯುಮಂಡಲವು ಆಯಾ ಟೊಳ್ಳಿನಲ್ಲಿ ಘನೀಕೃತ ಅವಸ್ಥೆಯಲ್ಲಿರುತ್ತದೆ. ಇಂತಹ ಸ್ಥಳದಲ್ಲಿ ರಜ-ತಮಾತ್ಮಕ ಲಹರಿಗಳ ಹಾಗೂ ರಜ-ತಮ ವಾಯುವಿನ ಹರಡುವಿಕೆಗೆ ಕಾರಣವಾಗಿರುವ ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡಿದರೆ ಆ ಸ್ಥಳದಲ್ಲಿರುವ ಪವಿತ್ರ ವಾಯು ಮಂಡಲವು ಅಶುದ್ಧವಾಗುತ್ತದೆ. ಇದು ಒಂದು ಪಾಪಜನ್ಯ ಕರ್ಮವಾಗಿದೆ. - ಓರ್ವ ವಿದ್ವಾಂಸ (ಸೌ.  ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯತ್ತಾರೆ.)
ಅಗ್ನಿ, ಸೂರ್ಯ, ಚಂದ್ರ, ಜಲ, ಬ್ರಾಹ್ಮಣ ಮತ್ತು ಹಸುವಿನ
ಎದುರು ಮಲಮೂತ್ರ ವಿಸರ್ಜನೆ ಮಾಡಬಾರದು
ಅ.  ಶಾಸ್ತ್ರ - ಅಗ್ನಿ, ಸೂರ್ಯ, ಚಂದ್ರ, ಜಲ, ಬ್ರಾಹ್ಮಣ ಮತ್ತು ಹಸುವಿನಂತಹ ಮಂಗಲಮಯ ಮತ್ತು ತೇಜವರ್ಧಕ ಘಟಕಗಳೆದುರು ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದನ್ನು ಮಹಾಪಾಪ ಎಂದು ಪರಿಗಣಿಸಲಾಗಿದೆ  : ‘ಅಗ್ನಿಯು ದಿವ್ಯತೇಜದ, ಸೂರ್ಯನು ಪ್ರತ್ಯಕ್ಷ ಅಥವಾ ಪ್ರಕಟ ತೇಜದ, ಚಂದ್ರನು ಶೀತಲ ತೇಜದ, ಜಲವು ಸರ್ವಸಮಾವೇಶಕವಾದಂತಹ ಪವಿತ್ರ ಕಾರ್ಯರೂಪೀ ಪಂಚತತ್ತ್ವಾತ್ಮಕ ತೇಜದ, ಬ್ರಾಹ್ಮಣನು ಬ್ರಾಹ್ಮತೇಜದ ಮತ್ತು ಹಸುವು ತೇಜತತ್ತ್ವದರ್ಶಕ ದೇವತ್ವರೂಪೀ ಪ್ರವಾಹದ ಪ್ರತೀಕವಾಗಿರುವುದರಿಂದ ಇಂತಹ ಮಂಗಲಮಯ ಮತ್ತು ತೇಜವರ್ಧಕ ಘಟಕಗಳೆದುರು ಮಲಮೂತ್ರ ವಿಸರ್ಜನೆಯಂತಹ ಕೃತಿಗಳನ್ನು ಮಾಡುವುದನ್ನು ಮಹಾಪಾಪವೆಂದು ಪರಿಗಣಿಸಲಾಗಿದೆ. ಮಲ ಮೂತ್ರಾದಿ ವಿಸರ್ಜನೆಯಿಂದ ಪ್ರಕ್ಷೇಪಿತವಾಗುವ ಸೂಕ್ಷ್ಮ ರಜ-ತಮಯುಕ್ತ ಲಹರಿಗಳು ಹಾಗೂ ವಾಯುವಿನಿಂದಾಗಿ ಈ ತೇಜದಾಯಕ ಘಟಕಗಳಿಂದ ತುಂಬಿದ ಪರಿಸರವನ್ನು ದೂಷಿತಗೊಳಿಸಿದ ಪಾಪವು ಜೀವಕ್ಕೆ ತಗಲುವ ಸಾಧ್ಯತೆ ಇರುತ್ತದೆ. ಆದುದರಿಂದ ಇಂತಹ ಪಾಪಜನ್ಯ ಕೃತಿಗಳನ್ನು ಮಾಡಬಾರದು.’ - ಓರ್ವ ವಿದ್ವಾಂಸ (ಸೌ.  ಅಂಜಲಿ ಗಾಡಗೀಳರವರು ಓರ್ವ ವಿದ್ವಾಂಸ ಈ ಅಂಕಿತನಾಮದಿಂದ ಬರೆಯತ್ತಾರೆ.)
(ಪ್ರಯಾಣ, ಆಪತ್ಕಾಲ ಮುಂತಾದ ಕಾರಣಗಳಿಂದಾಗಿ ರಸ್ತೆ ಅಥವಾ ಇತರ ಕಡೆಗಳಲ್ಲಿ ಮಲಮೂತ್ರ ವಿಸರ್ಜನೆ ಮಾಡಬೇಕಾಗಿಯೇ ಬಂದರೆ ಆ ಸಮಯದಲ್ಲಿ ದೇವರಲ್ಲಿ ಕ್ಷಮೆಯಾಚಿಸಿ ದೇವರಲ್ಲಿ ಪ್ರಾರ್ಥನೆ ಮಾಡಿ ನಾಮಜಪ ಮಾಡುತ್ತಾ ಈ ಕರ್ಮಗಳನ್ನು ಮಾಡಬಹುದು. - ಸಂಕಲನಕಾರರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ದಿನಚರಿ ಹೇಗಿರಬೇಕು ?