ಗುರುಚರಣಗಳಿಗೆ ಹೆಜ್ಜೆ ಹೆಜ್ಜೆಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ನಿಜವಾದ ಗುರುದಕ್ಷಿಣೆ !

೧. ‘ಒಮ್ಮೆ ನನಗೆ ಕೇರಳದ ಸನಾತನದ ಸಾಧಕಿ ಶ್ರೀಮತಿ ಕೈಮಲರು ದಾರಿಯಲ್ಲಿ ಭೇಟಿಯಾದರು. ನಾವಿಬ್ಬರೂ ಪರಸ್ಪರರಿಗೆ ನಮಸ್ಕರಿಸಿ, ಹೊರಟು ಹೋದೆವು. ‘ಆ ಕೆಲವು ಕ್ಷಣಗಳ ಭೇಟಿಯಿಂದಲೇ ಅವರ ಭಾವಜಾಗೃತಿಯಾಯಿತು’ ಎಂದು ನನಗೆ ನಂತರ ತಿಳಿಯಿತು. ನಮ್ಮಿಬ್ಬರಿಗೂ ವಿಶೇಷವಾದ ಪರಿಚಯ ವಿಲ್ಲದಿದ್ದರೂ ಅವರ ಭಾವಜಾಗೃತಿ ಏಕಾಯಿತು ? ಸಾಧಕರಿಗೆ ಪ.ಪೂ. ಡಾಕ್ಟರರ ಕುರಿತು ಅಪಾರವಾದ ಭಾವವಿದೆ ಹಾಗೂ ಗುರುತತ್ತ್ವವು ಸೂಕ್ಷ್ಮದಿಂದ ಪ್ರತಿ ಯೊಬ್ಬ ಸಾಧಕರಲ್ಲಿಯೂ ವಾಸವಾಗಿರುತ್ತದೆ ಹಾಗೂ ನನ್ನಲ್ಲಿರುವ ಗುರುತತ್ತ್ವದಿಂದಾಗಿಯೇ ಶ್ರೀಮತಿ ಕೈಮಲರ ಭಾವಜಾಗೃತಿಯಾಯಿತು ಎಂದು ನನಗನಿಸಿತು.
ಗುರುಗಳು ನಮ್ಮ ಹೃದಯದಲ್ಲಿ ವಾಸಿಸಿ ನಮ್ಮನ್ನು ರಕ್ಷಿಸುತ್ತಾರೆ. ನಮ್ಮನ್ನು ಸಾಧನೆಯ ಮಾರ್ಗದಲ್ಲಿ ಮುಂದೆ ಕರೆದೊಯ್ಯುತ್ತಾರೆ ಮತ್ತು ನಮ್ಮ ಕಲ್ಯಾಣಕ್ಕಾಗಿಯೇ ಎಲ್ಲವನ್ನೂ ಮಾಡುತ್ತಾರೆ. ಹೀಗಿರುವಾಗ ನಮಗೇಕೆ ನಮ್ಮ ಬಗ್ಗೆ ಅಭಿಮಾನವಿರಬೇಕು ?
೨. ‘ವೇದಧರ್ಮ ಹೆಸರಿನ ಗುರುಗಳೊಬ್ಬರಿದ್ದರು. ಒಂದು ದಿನ ಅವರು ಅವರ ಎಲ್ಲ ಶಿಷ್ಯರನ್ನು ಕರೆದು ‘ನಾನು ಪೂರ್ವಜನ್ಮದಲ್ಲಿ ಮಾಡಿದ ಒಂದು ಪಾಪಕರ್ಮವಿದೆ. ಈ ಪಾಪ ತೀರಿಸಲು ನಾನು ಕಾಶಿಗೆ ಹೋಗುವವನಿದ್ದೇನೆ. ನೀವು ನನ್ನನ್ನು ಕಾಶಿಗೆ ಕರೆದುಕೊಂಡು ಹೋಗಿರಿ. ನಾನು ಆ ಪಾಪವನ್ನು ನನ್ನ ದೇಹದಿಂದ ಭೋಗಿಸುತ್ತೇನೆ, ಆ ಸಮಯದಲ್ಲಿ ನೀವು ನನ್ನನ್ನು ರಕ್ಷಿಸಬೇಕು’ ಎಂದು ಹೇಳಿದರು. ಆಗ ದೀಪಕ್ ಹೆಸರಿನ ಒಬ್ಬ ಶಿಷ್ಯನು ಗುರುಗಳಿಗೆ ‘ಸ್ವಾಮಿ ನನಗೆ ಆಜ್ಞೆ ನೀಡಿ. ನಾನು ನನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ತಮ್ಮ ಸೇವೆಯನ್ನು ಮಾಡುತ್ತೇನೆ’, ಎಂದು ಹೇಳಿ ದನು. ದೀಪಕನ ಮಾತನ್ನು ಕೇಳಿ ಗುರುಗಳು ‘ಆ ಪಾಪದಿಂದ ನಾನು ಕುಷ್ಟರೋಗಿಯಾಗಿ, ಕುರುಡ-ಕುಂಟನಾಗುವೆನು. ನನ್ನನ್ನು ೨೧ ವರ್ಷಗಳ ವರೆಗೆ ರಕ್ಷಿಸಬೇಕಾಗುವುದು’ ಎಂದು ಹೇಳಿದರು. ಅದಕ್ಕೆ ದೀಪಕನು ‘ಆಗಬಹುದು’ ಎಂದು ಒಪ್ಪಿಕೊಂಡನು.
ಮುಂದೆ ಕಾಶಿಯಲ್ಲಿ ಗುರುಗಳಿಗೆ ಸರ್ವಾಂಗ ಕುಷ್ಟ ವ್ಯಾಪಿಸಿತು. ಆ ವೃಣಗಳಿಂದ ಕೀವು, ಕ್ರಿಮಿ ಹಾಗೂ ರಕ್ತ ಸೋರುತ್ತಿತ್ತು. ಅದರಿಂದಲೇ ಅವರಿಗೆ ದಮ್ಮು ಬರತೊಡಗಿತು. ದೀಪಕನು ಒಮ್ಮೆ ಭಿಕ್ಷೆಯನ್ನು ತಂದಾಗ ಅತ್ಯಲ್ಪ ಭಿಕ್ಷೆಯನ್ನು ತಂದಿರುವಿಯೆಂದು ಗುರುಗಳು ಕೋಪಿಸಿಕೊಂಡು ನೆಲದ ಮೇಲೆ ಬಿಸಾಡಿದರು. ಎರಡನೇ ದಿನ ಶಿಷ್ಯನು ಬಹಳಷ್ಟು ಭಿಕ್ಷೆಯನ್ನು  ತಂದಾಗ ಪಕ್ವಾನ್ನಗಳನ್ನು ಏಕೆ ತಂದಿಲ್ಲವೆಂದು ಗುರುಗಳು ಸಿಡಿಮಿಡಿಗೊಂಡು ಶಿಷ್ಯನಿಗೆ ಹೊಡೆಯಲು ಹೋದರು. ಮರುದಿನ ಶಿಷ್ಯನು  ಗುರುಗಳು ಕೇಳಿದ ಎಲ್ಲ ಪದಾರ್ಥಗಳನ್ನು ತಂದನು; ಆದರೆ ಗುರುಗಳು ಅದೆಲ್ಲವನ್ನೂ ವ್ಯರ್ಥಗೊಳಿಸಿದರು ಹಾಗೂ ಶಿಷ್ಯನಿಗೆ ಬೈಯ್ದರು. ಅವರು ದೀಪಕನಿಗೆ ‘ಹೇ ಪಾಪಿ ! ನನ್ನ ಕೀವು, ಮಲ, ಮೂತ್ರಗಳನ್ನು ನೀನು ಆಗಾಗ  ಏಕೆ ಸ್ವಚ್ಛಗೊಳಿಸುವುದಿಲ್ಲ ? ಎಂದು ಕೇಳುತ್ತಿದ್ದರು.
ಗುರುಗಳನ್ನು ವಿಶ್ವನಾಥನ ರೂಪವೆಂದು ಭಾವಿಸಿ, ದೀಪಕನು ನಿತ್ಯವೂ ಭಿಕ್ಷಾನ್ನವನ್ನು ಬೇಡಿ ತಂದು ಭಕ್ತಿಯಿಂದ ಮತ್ತು ನಿಷ್ಠೆಯಿಂದ ಗುರುಗಳ ಸೇವೆಯನ್ನು ದೀಪಕನ ಈ ಸೇವೆಯಿಂದ ಸಾಕ್ಷಾತ್ ಭಗವಂತನು ಪ್ರಸನ್ನನಾಗಿ, ವರವನ್ನು ಕೋರಲು ಹೇಳಿದರು. ಆಗ ದೀಪಕನು ನನ್ನ ಮನಸ್ಸಿನಲ್ಲಿ ಮತ್ತಷ್ಟು ಅಧಿಕ ಗುರುಭಕ್ತಿ ನಿರ್ಮಾಣವಾಗುವಂತೆ ವರ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿದನು.
ದೀಪಕನು ಕೋರಿದ ವರ ಕೇಳಿ ಗುರುಗಳೂ ಸಂತೋಷಗೊಂಡರು ಹಾಗೂ ಅವರು ದೀಪಕನಿಗೆ ಮನದುಂಬಿ ಆಶೀರ್ವಾದಿಸಿದರು. ಶಿಷ್ಯನನ್ನು ಪರೀಕ್ಷಿಸುವ ಸಲುವಾಗಿಯೇ ಗುರುಗಳು ಲೀಲೆಯಿಂದ ‘ಕುಷ್ಟರೋಗಿಯಾಗಿ ಕಷ್ಟವನ್ನು ಅನುಭವಿಸಿ ತೋರಿಸುತ್ತಿದ್ದರು. ಅವರು ಪರಮ ತಪಸ್ವಿಗಳಾಗಿದ್ದರು ಹಾಗೂ ಸಂಪೂರ್ಣ ಪಾಪರಹಿತರಾಗಿದ್ದರು. (ಆಧಾರ : ಸನಾತನದ ಗ್ರಂಥ ‘ಶಿಷ್ಯ’)
ಶಿಷ್ಯೋತ್ತಮ ದೀಪಕನಂತೆ ನಮ್ಮ ಗುರುಸೇವೆಯಲ್ಲಿ ಇಷ್ಟು ಅನನ್ಯಭಾವವಿದೆಯೇ ? ಗುರುಗಳಿಗಾಗಿ ನಾವು ಏನನ್ನೂ ಮಾಡುತ್ತಿಲ್ಲ, ಆದರೆ ಗುರುಗಳೇ ನಮಗಾಗಿ ಎಲ್ಲವನ್ನೂ ಮಾಡುತ್ತಿದ್ದಾರೆ !
ಮಹರ್ಷಿಗಳು ಒಂದು ನಾಡಿವಾಚನದಲ್ಲಿ ಹೇಳಿದಂತೆ ಸಾಧಕರ ಮೇಲೆ ಆಗುವ ಅಸುರಿ ಶಕ್ತಿಯ ಆಕ್ರಮಣವನ್ನು ಪ.ಪೂ. ಡಾಕ್ಟರರು ಸ್ವತಃ ತಾವೇ ಅನುಭವಿಸುತ್ತಿದ್ದಾರೆ. ‘ಯೋಗಕ್ಷೇಮಂ ವಹಾಮ್ಯಹಮ್!’, ಈ ವಚನದಂತೆ ಪ.ಪೂ. ಡಾಕ್ಟರರೇ ಎಲ್ಲ ರೀತಿಯಿಂದಲೂ ನಮ್ಮನ್ನು ರಕ್ಷಿಸುತ್ತಿದ್ದಾರೆ. ಸನಾತನದ ಆಶ್ರಮದಲ್ಲಿ ವಾಸಿಸುತ್ತಿರುವ ಸಾಧಕರಿಗೆ ಪವಿತ್ರವಾದಂತಹ ಪ್ರಸಾದ ಸೇವನೆಯೊಂದಿಗೆ ಸುಖಕರವಾಗಿರುವ ಆವಾಸಸ್ಥಾನದವರೆಗೆ ಎಲ್ಲ ಸುಖ ಸೌಲಭ್ಯಗಳು ಪ.ಪೂ.ಡಾಕ್ಟರರ ಕೃಪೆಯಿಂದಲೇ ಸುಲಭವಾಗಿ ಲಭಿಸುತ್ತಿದೆ.  ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಲು ಪ.ಪೂ. ಡಾಕ್ಟರರು ವಿವಿಧ ಸಮಷ್ಟಿ ಸೇವೆಯನ್ನು ಒದಗಿಸಿಕೊಟ್ಟಿದ್ದಾರೆ. ಗ್ರಂಥಗಳು ಹಾಗೂ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಪ.ಪೂ. ಡಾಕ್ಟರರು ಪ್ರತಿದಿನ ಸಾಧನೆಯನ್ನು ಕಲಿಸುತ್ತಿದ್ದಾರೆ. ಪ್ರಸಾರದಲ್ಲಿರುವ ಹಾಗೂ ಆಶ್ರಮದಲ್ಲಿರುವ ಸಾಧಕರಿಗೆ ವಿಭಾಗ-ಸೇವಕರ ಮಾಧ್ಯಮದಿಂದ ಪ.ಪೂ. ಡಾಕ್ಟರರೇ ಅತ್ಯಂತ ಪ್ರೀತಿಯಿಂದ ತಪ್ಪುಗಳನ್ನು ಹಾಗೂ ದೋಷಗಳನ್ನು ತೋರಿಸಿ ಅವರಲ್ಲಿರುವ ಸಾಧಕತ್ವವನ್ನು ವೃದ್ಧಿಸುತ್ತಿದ್ದಾರೆ. ಪ.ಪೂ.ಡಾಕ್ಟರರು ಎಲ್ಲ ರೀತಿಯಿಂದಲೂ ಆದರ್ಶವಾಗಿರುವ ಹಿಂದೂ ರಾಷ್ಟ್ರದ ಸ್ಥಾಪನೆಯ ಸುಂದರವಾದ ಧ್ಯೇಯವನ್ನು ಸಾಧಕರೆದುರಿಗೆ ಇಟ್ಟಿದ್ದಾರೆ. ಗುರುಗಳು ನಮಗಾಗಿ ಮತ್ತಿನ್ನೇನು  ಮಾಡಬೇಕು ? ಈ ವಿಷಯದಲ್ಲಿ ನಮ್ಮಿಂದ ಹೆಜ್ಜೆ ಹೆಜ್ಜೆಗೂ ಕೃತಜ್ಞತೆ ವ್ಯಕ್ತವಾಗುತ್ತಿದೆಯೇ ?
ಪ.ಪೂ. ಡಾಕ್ಟರರೇ, ‘ನಾವು ಕೇಳದೆಯೇ ನಮ್ಮ ಕಲ್ಯಾಣಕ್ಕಾಗಿ ಯಾವುದರ ಅವಶ್ಯಕತೆಯಿದೆಯೋ ಅದನ್ನೆಲ್ಲ ತಾವೇ ನಮಗೆ ನೀಡುತ್ತಿದ್ದೀರಿ. ತಮ್ಮ ಚರಣ ಗಳಿಗೆ ಹೆಜ್ಜೆಹೆಜ್ಜೆಗೂ ಕೃತಜ್ಞರಾಗಿರುವಂತೆ, ತಾವು ನಮಗೆ ಕೃತಜ್ಞತಾಭಾವವನ್ನು ನೀಡಬೇಕು, ಇದೇ ತಮ್ಮ ಚರಣಗಳಲ್ಲಿ ನಮ್ಮ ಪ್ರಾರ್ಥನೆ ! -(ಪೂ) ಶ್ರೀ ಸಂದೀಪ ಆಳಶಿ, ರಾಮನಾಥಿ ಆಶ್ರಮ, ಗೋವಾ. (೬.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಚರಣಗಳಿಗೆ ಹೆಜ್ಜೆ ಹೆಜ್ಜೆಗೂ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ನಿಜವಾದ ಗುರುದಕ್ಷಿಣೆ !