ಕಾಶ್ಮೀರಿ ಹಿಂದೂಗಳ ಹಕ್ಕುಗಳಿಗಾಗಿ ಕರ್ನೂಲ್ (ಆಂಧ್ರಪ್ರದೇಶ)ನಲ್ಲಿ ಹಿಂದೂಸಂಘಟನೆಯ ಆವಿಷ್ಕಾರ !

ಸಭೆಯನ್ನು ಸಂಬೋಧಿಸುತ್ತಿರು
ಶ್ರೀಪ್ರಮೋದ ಮುತಾಲಿಕ್ಜೊತೆಯಲ್ಲಿ ೨ಶ್ರೀರಮೇಶ ಶಿಂದೆಟಿ.ಎನ್ಮುರಾರಿ ಮತ್ತು ಇತರ ಹಿಂದುತ್ವನಿಷ್ಠ ನಾಯಕರು

ಕರ್ನೂಲ್ (ಆಂಧ್ರಪ್ರದೇಶ) : ಭಾರತದಾದ್ಯಂತ ಕಟ್ಟಿದ ಸಾವಿರಾರು ಮಸೀದಿಗಳಿಗೆ ಅಕ್ರಮವಾಗಿ ಹಣವನ್ನು ಪೂರೈಸಲಾಗುತ್ತದೆ. ಅದಕ್ಕಾಗಿ ನೂರಾರು ದೇವಸ್ಥಾನಗಳನ್ನು ಬೀಳಿಸಲಾಗುತ್ತಿದೆ. ಇಂತಹ ಮಸೀದಿ ಮತ್ತು ಮದರಸಾಗಳ ಮಾಧ್ಯಮದಿಂದ ಮತಾಂಧ ಮುಸಲ್ಮಾನರ ಸಂಘಟನೆಯ ಕಾರ್ಯ ಹಬ್ಬುತ್ತಿದೆ. ಅದರ ಪರಿಣಾಮದಿಂದಾಗಿ ಸಮಾಜದಲ್ಲಿ ಕಟ್ಟರತೆ ಮತ್ತು ಜಿಹಾದಿ ಮಾನಸಿಕತೆಯು ತೀವ್ರವಾಗಿ ಪ್ರಸಾರವಾಗುತ್ತಿದೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್‌ರವರು ಪ್ರತಿಪಾದಿಸಿದರು.
ಪನೂನ್ ಕಾಶ್ಮೀರ ಸಹಿತ ಭಾರತದಾದ್ಯಂತದ ೧೬೦ ಹಿಂದುತ್ವನಿಷ್ಠ ಮತ್ತು ರಾಷ್ಟ್ರನಿಷ್ಠ ಸಂಘಟನೆಗಳ ಮುಂದಾಳತ್ವದಲ್ಲಿ ಕಾಶ್ಮೀರಿ ಹಿಂದೂಗಳ ಪುನರ್‌ವಸತಿಗಾಗಿ ‘ಏಕ್ ಭಾರತ ಅಭಿಯಾನ್ - ಕಾಶ್ಮೀರ ಕಿ ಓರ್’ ಹೆಸರಿನ ಅಭಿಯಾನವನ್ನು ಆರಂಭಿಸಲಾಗಿದೆ. ಈ ಅಭಿಯಾನದ ಅಂತರ್ಗತ ಕರ್ನೂಲ್‌ದಲ್ಲಿ ಜುಲೈ ೨೪ ರಂದು ಒಂದು ಬಹಿರಂಗ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಮಯದಲ್ಲಿ ಶ್ರೀ. ಪ್ರಮೋದ ಮುತಾಲಿಕ್‌ರವರು ಮುಖ್ಯ ವಕ್ತಾರರೆಂದು ಮಾತನಾಡಿದರು. ಈ ರಾಷ್ಟ್ರವ್ಯಾಪಿ ಅಭಿಯಾನದ ಅಂತರ್ಗತ ಇದು ಐದನೇ ಸಭೆಯಾಗಿತ್ತು.
ಶಿವಸೇನೆ ತೆಲಂಗಾಣ-ಆಂಧ್ರಪ್ರದೇಶ, ಶ್ರೀರಾಮ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಈ ಸಭೆಯನ್ನು ಆಯೋಜಿಸಲಾಗಿತ್ತು.
ನಿಜವಾದ ಶಿವಸೈನಿಕರೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವರು !
- ಶ್ರೀ. ಟಿ.ಎನ್. ಮುರಾರಿ, ರಾಜ್ಯಾಧ್ಯಕ್ಷರು, ಶಿವಸೇನಾ ತೆಲಂಗಾಣ-ಆಂಧ್ರಪ್ರದೇಶ
ಶ್ರೀರಾಮನ ಮರದ ಮೂರ್ತಿ ಮತ್ತು ರಾವಣನ ಬಂಗಾರದ ಮೂರ್ತಿ ಇದರಲ್ಲಿ ಶ್ರೀರಾಮನ ಮೂರ್ತಿ ಆರಿಸುವವನೇ ನಿಜವಾದ ಶಿವಸೈನಿಕ ! ಇಂತಹ ಶಿವಸೈನಿಕರೇ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವರು. ಶಿವಸೇನೆ ಭಾರತ ಸರಕಾರವನ್ನು ಕಳಕಳಿಯಿಂದ ಕರೆ ನೀಡುತ್ತಿದೆ, ಸರಕಾರ ಕಾಶ್ಮೀರ ಸಹಿತ ಇಡೀ ದೇಶದ ಇಸ್ಲಾಮೀಕರಣದ ವಿರುದ್ಧ ತಕ್ಷಣ ಹೆಜ್ಜೆಯನ್ನಿಡಬೇಕು. ಇಲ್ಲದಿದ್ದರೆ ಪಾಕಿಸ್ತಾನ, ಅಫ್ಘಾನಿಸ್ತಾನ, ಸಿರಿಯಾ ಅಥವಾ ಇರಾಕ್‌ನಂತಹ ಇಸ್ಲಾಮೀ ರಾಜ್ಯ ನೋಡುವ ಪ್ರಮೇಯ ಬರಬಹುದು. ಭಾರತ ಸರಕಾರ ಕಾಶ್ಮೀರದಲ್ಲಿ ತಲೆ ಎತ್ತಲು ಪ್ರಯತ್ನಿಸುವ ಮತಾಂಧರ ವಿರುದ್ಧ ಹಾಗೂ ಇಡೀ ದೇಶವನ್ನು ಕಬಳಿಸುವ ಜಾಗತಿಕ ಜಿಹಾದ್ ವಿರುದ್ಧ ಜಾಗರೂಕರಾಗಿರುವ ಆವಶ್ಯಕತೆ ಇದೆ.
೨೬ ಜನವರಿ ೨೦೧೭ ರಂದು ಹಿಂದೂಗಳು ಕಾಶ್ಮೀರದಲ್ಲಿ ಭಾರತದ ಧ್ವಜ ಏರಿಸುವರು ! - ಶ್ರೀ. ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
ಕಾಶ್ಮೀರದಲ್ಲಿ ನಮ್ಮ ರಾಷ್ಟ್ರಧ್ವಜಕ್ಕೆ ವಿರೋಧವಾಗುವುದನ್ನು ನಾವು ಖಂಡಿಸುತ್ತೇವೆ. ಅಲ್ಲದೇ ಮುಂದಿನ ವರ್ಷ ೨೬ ಜನವರಿಯಂದು ಪ್ರಜಾಪ್ರಭುತ್ವ ದಿನದಂದು ಕಾಶ್ಮೀರದಲ್ಲಿ ನಾವು ಭಾರತದ ಧ್ವಜ ಹಾರಿಸುವೆವು. ಕಾಶ್ಮೀರದಲ್ಲಿ ನಡೆಯುತ್ತಿರುವ ಭಯೋತ್ಪಾದನೆ ಇಂದು ಎಲ್ಲೆಡೆ ಹಬ್ಬುತ್ತಿದೆ. ಹಾಗಾಗಿ ನಾವು ಕಾಶ್ಮೀರಕ್ಕೆ ಹೋಗಿ ರಾಷ್ಟ್ರನಿಷ್ಠೆಯ ಪ್ರಸಾರ ಮಾಡೋಣ. ನಾವು ಇಡೀ ದೇಶದಿಂದ ಹಿಂದೂಗಳನ್ನು ೧೯ ಜನವರಿ ೨೦೧೭ ರಂದು ಕಾಶ್ಮೀರಕ್ಕೆ ಕರೆದೊಯ್ಯಲಿದ್ದೇವೆ.

ಈ ಸಮಯದಲ್ಲಿ ಸನಾತನದ ಆಂಗ್ಲಭಾಷೆಯ ‘ಕರೆಕ್ಟ್ ಮೆಥಡ್ ಆಫ್ ಕುಕ್ಕಿಂಗ್ ಎ ಮೀಲ್’ (ಆಹಾರ ತಯಾರಿಸುವ ಯೋಗ್ಯ ಪದ್ಧತಿ ಯಾವುದು ?) ಈ ಗ್ರಂಥವನ್ನು ಹಿಂದುತ್ವನಿಷ್ಠ ನಾಯಕರ ಶುಭಹಸ್ತದಿಂದ ಪ್ರಕಾಶಿಸಲಾಯಿತು .

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರಿ ಹಿಂದೂಗಳ ಹಕ್ಕುಗಳಿಗಾಗಿ ಕರ್ನೂಲ್ (ಆಂಧ್ರಪ್ರದೇಶ)ನಲ್ಲಿ ಹಿಂದೂಸಂಘಟನೆಯ ಆವಿಷ್ಕಾರ !