ಚಾತುರ್ಮಾಸ

ಶ್ರೀವಿಷ್ಣುವಿನ ಶಯನದ ಬಗ್ಗೆ ವೈಜ್ಞಾನಿಕ ದೃಷ್ಟಿಕೋನ
ಚಾತುರ್ಮಾಸದಲ್ಲಿ ಜಗತ್ಪಾಲಕ ಶ್ರೀವಿಷ್ಣುವು ಕ್ಷೀರಸಾಗರದಲ್ಲಿ ನಿದ್ರಿಸುತ್ತಾನೆ. ಹೀಗಿರುವಾಗ ಯಾರ ಮನಸ್ಸಿನಲ್ಲಾದರೂ ‘ಈ ಕಾಲದಲ್ಲಿ ಸೃಷ್ಟಿಯ ಕಾರ್ಯವು ಹೇಗಾಗುತ್ತದೆ ?’ ಎಂಬ ಪ್ರಶ್ನೆಯು ಉಂಟಾಗಬಹುದು. ಆದ್ದರಿಂದ ಇದನ್ನು ವೈಜ್ಞಾನಿಕ ದೃಷ್ಟಿಯಿಂದ ಅರಿತು ಕೊಳ್ಳುವುದು ಉಪಯುಕ್ತವಾಗಿದೆ. ಶ್ರೀವಿಷ್ಣುವಿನ ಒಂದು ಹೆಸರು ‘ಹರಿ’. ಹರಿ ಶಬ್ದದ ಅರ್ಥವೇನೆಂದರೆ ಸೂರ್ಯ, ಚಂದ್ರ, ವಾಯು ಇತ್ಯಾದಿ. ಚಾತುರ್ಮಾಸದಲ್ಲಿ ಪರಮೇಶ್ವರನ ಈ ಶಕ್ತಿಗಳೂ ಕ್ಷೀಣಿಸುತ್ತವೆ ಎಂಬ ಅಂಶವನ್ನು ಯಾರೂ ಅಲ್ಲಗಳೆಯುವುದಿಲ್ಲ. ಚಾತುರ್ಮಾಸದಲ್ಲಿ ಅತಿಯಾದ ಮಳೆಯಿಂದ ನಮಗೆ ಸೂರ್ಯ, ಚಂದ್ರರ ದರ್ಶನವಾಗುವುದಿಲ್ಲ ಹಾಗೂ ವಾಯುವು ಕ್ಷೀಣವಾದ ನಂತರವೇ ಮಳೆಯಾಗುತ್ತದೆ. ಈ ಕ್ರಿಯೆಯು ಇತರ ಋತುಗಳಲ್ಲಿ ಆಗುವುದಿಲ್ಲ. ಈ ದೃಷ್ಟಿಯಲ್ಲಿ ಚಾತುರ್ಮಾಸವು ಸೂರ್ಯ, ಚಂದ್ರ, ವಾಯುವಿನ ಅಂದರೆ ಶ್ರೀವಿಷ್ಣುವಿನ ಶಯನ ಕಾಲವಾಗಿದೆ. ಚಾತುರ್ಮಾಸದ ಕಾಲ ಮಹಿಮೆಯ ಮೂರನೆಯ ಅಂಶ ಮುಂದಿನಂತಿದೆ.

ಈ ವೇಳೆ ಮಾಡುವ ದಾನ, ಪುಣ್ಯ, ತಪ, ವ್ರತಾದಿಗಳು ಫಲದಾಯಕ ವಾಗಿರುತ್ತವೆ. ಚಾತುರ್ಮಾಸದಲ್ಲಿ ಮಾಡಲ್ಪಡುವ ತೀರ್ಥಯಾತ್ರೆ, ದಾನ, ತಪ, ವ್ರತ ಇತ್ಯಾದಿಗಳು ಶ್ರೀವಿಷ್ಣುವಿನ ಚರಣಗಳಲ್ಲಿ ಅರ್ಪಿತವಾಗು ತ್ತವೆ. ಯಾರು ಚಾತುರ್ಮಾಸದಲ್ಲಿ ತೀರ್ಥಕ್ಷೇತ್ರದಲ್ಲಿ ನದಿಸ್ನಾನವನ್ನು ಮಾಡುತ್ತಾರೆಯೋ, ಅವರ ಅನೇಕ ಪಾಪಗಳು ನಾಶವಾಗುತ್ತವೆ. ಕಾರಣ ಮಳೆ ನೀರು ವಿಭಿನ್ನ ಸ್ಥಾನಗಳಿಂದ ಮಣ್ಣಿನ ಮಾಧ್ಯಮದಿಂದ ಪ್ರಾಕೃತಿಕ ಶಕ್ತಿಯನ್ನು ತನ್ನೊಂದಿಗೆ ಹರಿಯುತ್ತಾಕೊಂಡೊಯ್ಯುತ್ತದೆ ಮತ್ತು ಸಮುದ್ರದೆಡೆಗೆ ಒಯ್ಯುತ್ತದೆ. ಇಲ್ಲಿ ಚಾತುರ್ಮಾಸದಲ್ಲಿ ಶ್ರೀವಿಷ್ಣುವು ನೀರಿನಲ್ಲಿ ಮಲಗಿ ನಿದ್ರಿಸುವುದೆಂದರೆ, ನೀರಿನಲ್ಲಿ ಅವನ ತೇಜ ಮತ್ತು ಶಕ್ತಿ ಅಂಶಗಳಿರುತ್ತವೆ ಎಂದರ್ಥ. ಈ ತೇಜಯುಕ್ತ ನೀರಿನಲ್ಲಿ ಸ್ನಾನ ಮಾಡು ವುದು ತೀರ್ಥಯಾತ್ರೆ ತುಲನೆಯಲ್ಲಿ ಹೆಚ್ಚು ಫಲಕಾರಿ.
ಚಾತುರ್ಮಾಸದ ವ್ರತಕಾಲದ ಭೋಜನ ನಿಯಮ
ಭೌಗೋಲಿಕವಾಗಿ ಚಾತುರ್ಮಾಸದ ಅವಧಿಯು ಬಹಳ ಸೊಗಸಾಗಿದೆ; ಏಕೆಂದರೆ ಮಳೆಗಾಲವಾದ್ದರಿಂದ ಧರಣಿಯ ರೂಪವು ಬದಲಾಗುವಂತೆಯೇ ಮನುಷ್ಯನ ಮಾನಸಿಕ ರೂಪವೂ ಬದಲಾಗಿರುತ್ತದೆ. ಆದುದರಿಂದ ಜನಸಾಮಾನ್ಯರು ಚಾತುರ್ಮಾಸದಲ್ಲಿ ಕೆಳಗಿನಂತೆ ಭೋಜನ ನಿಯಮಗಳನ್ನು ಪಾಲಿಸುತ್ತಾರೆ. ಈ ಭೋಜನ
ನಿಯಮಗಳು ಒಂದು ರೀತಿಯ ವ್ರತಗಳೇ ಆಗಿವೆ.
ಪರ್ಣಭೋಜನ (ಎಲೆಯಲ್ಲಿ ಊಟ ಮಾಡುವುದು), ಏಕಭುಕ್ತ (ಒಂದು ಬಾರಿ ಊಟ ಮಾಡು ವುದು), ಅಯಾಚಿತ (ಯಾಚಿಸದೇ ಸಿಕ್ಕಷ್ಟು ಊಟ ಮಾಡುವುದು), ಏಕವಾಡಿ (ಒಂದೇ ಬಾರಿ ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಊಟ ಮಾಡು ವುದು), ಮಿಶ್ರಭೋಜನ (ಎಲ್ಲ ಪದಾರ್ಥಗಳನ್ನು ಬಡಿಸಿಕೊಂಡು ಅವೆಲ್ಲವನ್ನೂ ಕಲಸಿ ತಿನ್ನುವುದು) ಅನೇಕ ಸ್ತ್ರೀಯರು ಚಾತುರ್ಮಾಸದಲ್ಲಿ ಧರಣೆ- ಪಾರಣೆ (ಒಂದು ದಿನ ಭೋಜನ ಮತ್ತು ಮರುದಿನ ಉಪವಾಸ ಹೀಗೆ ಸತತ ನಾಲ್ಕು ತಿಂಗಳು ಮಾಡುವುದು) ಎನ್ನುವ ಹೆಸರಿನ ವ್ರತವನ್ನು ಮಾಡುತ್ತಾರೆ. ಕೆಲವರು ಒಂದು ಅಥವಾ ಎರಡು ಧಾನ್ಯಗಳ ಆಹಾರವನ್ನು ಮಾತ್ರ ಸೇವಿಸುತ್ತಾರೆ. ಕೆಲವರು ಪಂಚಾಮೃತ ಬಿಡುತ್ತಾರೆ.

ಚಾತುರ್ಮಾಸದಲ್ಲಿ ವರ್ಜ್ಯ ಮತ್ತು ಅವರ್ಜ್ಯ ವಿಷಯಗಳು
ವರ್ಜ್ಯ : ಚನ್ನಂಗಿಬೇಳೆ (ಮಸ್ಸೂರಿಬೇಳೆ), ಮಾಂಸ, ಅವರೆಕಾಯಿ, ಅಲಸಂದೆ, ಉಪ್ಪಿನಕಾಯಿ, ಬದನೆ, ಕಲ್ಲಂಗಡಿ, ಬಹಳಷ್ಟು ಬೀಜವಿದ್ದ ಅಥವಾ ನಿರ್ಬೀಜ ಫಲ, ಮೂಲಂಗಿ, ಹಾಲುಗುಂಬಳ, ಬೋರೇ ಹಣ್ಣು, ನೆಲ್ಲಿಕಾಯಿ, ಹುಣಸೆಹಣ್ಣು, ಈರುಳ್ಳಿ, ಬೆಳ್ಳುಳ್ಳಿ, ಮಂಚದ ಮೇಲೆ ಮಲಗುವುದು, ಋತುಕಾಲ ಬಿಟ್ಟು ಸ್ತ್ರೀಸಂಗ, ಪರಾನ್ನ ಇತ್ಯಾದಿ.
ಅವರ್ಜ್ಯ : ಅಕ್ಕಿ, ಹೆಸರು, ಜವೆ, ಎಳ್ಳು, ಬಟಾಣಿ, ಗೋಧಿ, ಸಮುದ್ರದ ಉಪ್ಪು, ಹಸುವಿನ ಹಾಲು, ಮೊಸರು, ತುಪ್ಪ, ಹಲಸು, ಮಾವು, ತೆಂಗಿನಕಾಯಿ, ಬಾಳೆಹಣ್ಣು ಇತ್ಯಾದಿ. ಇವುಗಳಿಗೆ ಹವಿಷ್ಯಾನ್ನ ಎಂದು ಹೇಳಬಹುದು. ಹವಿಷ್ಯಾನ್ನಗಳು ಸತ್ತ್ವ ಗುಣ ಪ್ರಧಾನವಾಗಿ ಇರುವುದರಿಂದ ಲಾಭವಾಗುತ್ತದೆ.
ಚಾತುರ್ಮಾಸದಲ್ಲಿ ಸತ್ತ್ವ ಪ್ರಧಾನವಾದಂತಹ ಅನ್ನ ಪದಾರ್ಥ ಅಂದರೆ ಯಜ್ಞದಲ್ಲಿ ಆಹುತಿ ನೀಡುವಂತಹ ಪದಾರ್ಥಗಳನ್ನು ಸೇವಿಸುವುದು ಯೋಗ್ಯವಾಗಿದೆ. ಏಕೆಂದರೆ ಚಾತುರ್ಮಾಸದಲ್ಲಿ ವರ್ಜ್ಯ ಪದಾರ್ಥಗಳು ರಜ-ತಮೋಗುಣಯುಕ್ತವಾಗಿರುತ್ತವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚಾತುರ್ಮಾಸ