ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಒಡಿಶಾದ ಶ್ರೀ. ಪ್ರೇಮ ಪ್ರಕಾಶ ಕುಮಾರ್ !

ಇದು ಕೇವಲ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆ ! - ಶ್ರೀ. ಪ್ರೇಮ ಪ್ರಕಾಶ ಕುಮಾರ್
ಶ್ರೀ. ಪ್ರೇಮ ಪ್ರಕಾಶ ಕುಮಾರ್ (ಬಲಬದಿಗೆ)
ಇವರನ್ನು ಸತ್ಕರಿಸುವಾಗ ಪೂ. ನಂದಕುಮಾರ್ ಜಾಧವ
‘ನನ್ನ ಆಧ್ಯಾತ್ಮಿಕ ಮಟ್ಟ ಘೋಷಣೆಯಾಗುವುದರಲ್ಲಿ ನನ್ನ ಯಾವುದೇ ಕ್ಷಮತೆ ಇಲ್ಲ. ನಾನು ಏನೂ ಮಾಡಿಲ್ಲ. ಅಧ್ಯಾತ್ಮದಲ್ಲಿ ಮಾಡುವವರು ಯಾರಾದರೂ (ಗುರು) ಇರುತ್ತಾರೆ ಹಾಗೂ ಅದರ ಲಾಭ ಯಾರಿಗಾದರೂ (ಶಿಷ್ಯನಿಗೆ) ಆಗುತ್ತಾ ಇರುತ್ತದೆ. ಆಧ್ಯಾತ್ಮಿಕ ಪ್ರಗತಿಗಾಗಿ ನಾನು ಅನರ್ಹನಾಗಿದ್ದೇನೆ. ಇದೆಲ್ಲ ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಾಗಿದೆ’, ಎಂಬ ಭಾವೋದ್ಗಾರವನ್ನು ಒಡಿಶಾದ ಹಿಂದೂ ಧರ್ಮಾಭಿಮಾನಿ ಶ್ರೀ. ಪ್ರೇಮ ಪ್ರಕಾಶ ಕುಮಾರ್ ಇವರು ವ್ಯಕ್ತಪಡಿಸಿದರು.
ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಜೂನ್ ೨೨ ರಂದು ಸಾಯಂಕಾಲದ ಸತ್ರದಲ್ಲಿ ಶ್ರೀ. ಪ್ರೇಮ ಪ್ರಕಾಶ ಕುಮಾರ್ ಇವರು ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದರೆಂದು ಘೋಷಿಸಲಾಯಿತು. ಸನಾತನ ಸಂಸ್ಥೆಯ ಧರ್ಮಪ್ರಸಾರಸೇವಕರಾದ ಪೂ. ನಂದಕುಮಾರ ಜಾಧವ ಇವರ ಶುಭಹಸ್ತಗಳಿಂದ ಸನಾತನ ನಿರ್ಮಿತ ಶ್ರೀಕೃಷ್ಣನ ಪ್ರತಿಮೆ ಮತ್ತು ಪುಷ್ಪವನ್ನು ನೀಡಿ ಅವರನ್ನು ಸತ್ಕರಿಸಲಾಯಿತು. ಹಿಂದೂ ಜನಜಾಗೃತಿ ಸಮಿತಿಯ ಒಡಿಶಾದ ಕಾರ್ಯಕರ್ತರಾದ ಶ್ರೀ. ಪ್ರಕಾಶ ಮಾಲೋಂಡಕರ್‌ರವರು ಹೀಗೆಂದರು, ಶ್ರೀ. ಪ್ರೇಮ ಪ್ರಕಾಶ ಕುಮಾರ್ ಇವರ ಪತ್ನಿಯನ್ನು ಸಂಪರ್ಕಿಸಿದಾಗ ಅವರು, ಶ್ರೀ. ಪ್ರೇಮ ಪ್ರಕಾಶ ಕುಮಾರ್ ಇವರು ಅಧಿವೇಶನಕ್ಕೆ ಹೋದ ನಂತರ ಮನೆಯನ್ನು ಸಂಪರ್ಕಿಸಲೇ ಇಲ್ಲ. ಈಗ ಅವರು ಆಧ್ಯಾತ್ಮಿಕ ಪ್ರಗತಿ ಮಾಡಿಕೊಂಡೇ ಬರುವರು ಎಂದು ಅನಿಸಿತು, ಎಂದು ಹೇಳಿದರು. ಇಂದು ನಿಜವಾಗಿಯೂ ಅವರ ಸತ್ಕಾರವಾಯಿತು.
ಪ್ರೇಮ ಪ್ರಕಾಶ ಕುಮಾರ್ ಇವರ ಗುಣವೈಶಿಷ್ಟ್ಯಗಳು ಮತ್ತು ಕಾರ್ಯ !
ಶ್ರೀ. ಪ್ರೇಮ ಪ್ರಕಾಶ ಕುಮಾರ್ ಇವರು ವಿಶ್ವ ಹಿಂದೂ ಪರಿಷತ್ತಿನ ಮೂಲಕ ೧೦ ವರ್ಷ ಹಿಂದುತ್ವದ ಕಾರ್ಯ ಮಾಡಿದರು. ಕಾರ್ಯಕ್ಕೆ ಬೃಹತ್ಪ್ರಮಾಣದಲ್ಲಿ ಯಶಸ್ಸು ಸಿಕ್ಕಿತು; ಆದರೆ ಅವರು ಮನಃಶಾಂತಿಯ ಶೋಧದಲ್ಲಿದ್ದರು. ಮೂರನೇ ಅಧಿವೇಶನದಿಂದ ಅವರು ನಿಯಮಿತವಾಗಿ ಅಧಿವೇಶನಕ್ಕೆ ಬರುತ್ತಾರೆ. ಅವರ ಆರ್ಥಿಕ ಸ್ಥಿತಿ ಉತ್ತಮವಾಗಿಲ್ಲದಿದ್ದರೂ ಅವರು ಧರ್ಮಕಾರ್ಯಕ್ಕಾಗಿ ಪತ್ನಿ ಸಮೇತ ಪೂರ್ಣ ವೇಳೆ ಸೇವೆಯನ್ನು ಆರಂಭಿಸಿದರು. ಅವರಿಗೆ ೪ ವರ್ಷದ ಮಗನಿದ್ದಾನೆ. ಅವರು ಕಳೆದ ವರ್ಷವಿಡೀ ನಾಮಜಪ, ಪ್ರಾರ್ಥನೆ ಮತ್ತು ಸೇವೆ ಮಾಡಿದರು. ಗುಡ್ಡಗಾಡು ಪ್ರದೇಶಗಳಲ್ಲಿ ಅನೇಕ ಕಷ್ಟಗಳನ್ನು ಸಹಿಸಿಕೊಂಡು ಧರ್ಮಪ್ರಸಾರ ಮಾಡಿದರು. ಜೂನ್ ೨೧ ರಂದು ಅವರು ಅಧಿವೇಶನದಲ್ಲಿ ಅವರ ಅನುಭೂತಿಯನ್ನು ಹೇಳಿದಾಗ ಎಲ್ಲರಿಗೂ ಭಾವಜಾಗೃತಿಯಾಯಿತು. ನಮ್ರತೆ, ಆಜ್ಞಾಧಾರಕತೆ, ಸಂಯಮ ಮತ್ತು ಧ್ಯೇಯನಿಷ್ಠೆ ಇದು ಅವರ ಗುಣ ವೈಶಿಷ್ಟ್ಯಗಳಾಗಿವೆ, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೇ. ೬೧ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿದ ಒಡಿಶಾದ ಶ್ರೀ. ಪ್ರೇಮ ಪ್ರಕಾಶ ಕುಮಾರ್ !