ಈಶ್ವರನ ಮೇಲೆ ಶ್ರದ್ಧೆ ಇಡುವುದರಿಂದ ಮೆದುಳಿನ ಮೇಲಾಗುವ ಪರಿಣಾಮವೇನು ?

ಅಂತರ್ಮುಖಗೊಳಿಸುವ ಶ್ರದ್ಧೆ !
ಈಶ್ವರನ ಮೇಲೆ ಶ್ರದ್ಧೆಯಿಡುವುದರಿಂದ ಮನುಷ್ಯನು ಮೆದುಳಿನ ಚಿಕಿತ್ಸಕ ವಿಚಾರ ಮಾಡುವ ಭಾಗವನ್ನು ಒತ್ತಿಡುತ್ತಾನೆ ಮತ್ತು ಭಾವ-ಭಾವನೆಗಳೊಂದಿಗೆ ಸಮರಸತೆಯಾಗಲು ಕಾರಣವಾಗಿರುವ ಭಾಗವನ್ನು ಉಪಯೋಗಿಸುತ್ತಾನೆ, ಎಂದು ಒಂದು ಸಂಶೋಧನೆಯ ಮೂಲಕ ಕಂಡುಬಂದಿದೆ. ಅದೇ ಯಾವಾಗ ಅವನು ಮಾಯೆಯ ವಿಚಾರಗಳಲ್ಲಿ ತೊಡಗಿರುತ್ತಾನೆಯೋ ಆಗ ಈ ಪ್ರಕ್ರಿಯೆಯು ಇದರ ಸರಿಯಾಗಿ ವಿರುದ್ಧವಾಗಿ ನಡೆಯುತ್ತದೆ.
ಮೇಲಿನ ಸಂಶೋಧನೆ ಮಾಡುವ ಗುಂಪಿನ ಮುಖ್ಯಸ್ಥರಾದ ಪ್ರಾಧ್ಯಾಪಕರಾದ ಟೊನಿ ಜ್ಯಾಕ್ ಹೀಗೆನ್ನುತ್ತಾರೆ, ‘ಶ್ರದ್ಧೆಯ ದೃಷ್ಟಿಕೋನದಿಂದ ನೋಡಿದಾಗ ಚಿಕಿತ್ಸಕ ಬುದ್ಧಿಯನ್ನು ಬಳಸುವುದು ಮೂರ್ಖತೆಯಾಗುತ್ತದೆ. ಮೆದುಳಿನ ಕಾರ್ಯದ ಅಧ್ಯಯನ ಮಾಡಿದಾಗ ಆಧ್ಯಾತ್ಮಿಕ ಮಾತುಗಳಲ್ಲಿರುವ ವಿಶ್ವಾಸವು ಶ್ರದ್ಧೆಯಲ್ಲಿ ಪರಿವರ್ತನೆಯಾಗುತ್ತದೆ. ಆಗ ಮೆದುಳಿನ ಟೀಕಾತ್ಮಕ ಅಥವಾ ಚಿಕಿತ್ಸಕ ವಿಚಾರಗಳನ್ನು ದೂರ ಸರಿಸಿದರೆ ನಮಗೆ ಸಾಮಾಜಿಕ ಮತ್ತು ಭಾವನಾತ್ಮಕ ಸ್ತರದಲ್ಲಿ ಹೆಚ್ಚು ಅಂತರ್ಮುಖತೆ ಪ್ರಾಪ್ತವಾಗುತ್ತದೆ.’
ಶ್ರದ್ಧೆಯಿಲ್ಲದ ವ್ಯಕ್ತಿಗಳಿಗಿಂತ ಶ್ರದ್ಧೆಯುಳ್ಳವನು ಹೆಚ್ಚು ಯಶಸ್ವಿ
ಒಂದು ವೈಜ್ಞಾನಿಕ ಸಂಶೋಧನೆ ವಿಷಯದ ನಿಯತಕಾಲಿಕೆಯಲ್ಲಿ ಪ್ರಕಟವಾದ ಲೇಖನದಲ್ಲಿ ೮ ಪ್ರಯೋಗಗಳ ನಿಷ್ಕರ್ಷಗಳನ್ನು ನೀಡಲಾಗಿವೆ. ಅದರಂತೆ ಶ್ರದ್ಧೆಯುಳ್ಳ ವ್ಯಕ್ತಿಯು ಇತರರ ಭಾವನೆಗಳನ್ನು ಅರಿತುಕೊಂಡು ಅವರೊಂದಿಗೆ ಸಾಮರಸ್ಯ ಕಾಪಾಡಲು ಶ್ರದ್ಧೆಯಿಲ್ಲದ ವ್ಯಕ್ತಿಗಿಂತ ಹೆಚ್ಚು ಯಶಸ್ವಿಯಾಗಿರುವುದು ಕಂಡುಬಂದಿದೆ. ಸಂಶೋಧಕರು ಈಶ್ವರನ ಮೇಲಿನ ಶ್ರದೆ, ಚಿಕಿತ್ಸಕ ವಿಚಾರಸರಣಿ ಮತ್ತು ನೈತಿಕತೆಯೊಂದಿಗೆ ಸಂಬಂಧಿಸಿದ ಸಂಗತಿಗಳ ಸಂಬಂಧ ಕಂಡುಹಿಡಿಯಲು ೧೫೯ ರಿಂದ ೫೨೭ ವ್ಯಕ್ತಿಗಳ ಸಂದರ್ಶನ ಪಡೆದರು. ಕೇವಲ ಧಾರ್ಮಿಕ ಉತ್ಸವಗಳಲ್ಲಿ ಅನ್ನಸಂತರ್ಪಣೆಯಂತಹ ಭೋಜನಾಲಯದಲ್ಲಾಗುವ ಸಾಮಾಜಿಕ ಸಂಪರ್ಕವು ಶ್ರದ್ಧೆ ಮೇಲೆ ಅಷ್ಟೇನು ಪ್ರಭಾವ ಬೀರುವುದಿಲ್ಲ.
ವೈಜ್ಞಾನಿಕ ಉಪಕರಣಗಳ ಮೂಲಕ ಭಾವ-ಭಾವನೆಗಳ ಶೋಧ
ಇದರ ಮೊದಲು ಪ್ರಾಧ್ಯಾಪಕ ಟೊನಿ ಜ್ಯಾಕ್ ಇವರು ಮೆದುಳಿನ ಚಿಕಿತ್ಸಕ ವಿಚಾರ ಮಾಡುವ ಭಾಗ ಮತ್ತು ಭಾವ-ಭಾವನೆಗಳೊಂದಿಗೆ ಸಾಮರಸ್ಯ ಕಾಪಾಡಲು ಕಾರಣವಾಗಿರುವ ಭಾಗಗಳ ಅಧ್ಯಯನ ಮಾಡಲು ‘ಫಂಕ್ಶನಲ್ ಮ್ಯಾಗ್ನೆಟಿಕ್ ರಝೊನೆನ್ಸ ಇಮೆಜಿಂಗ್’ ಈ ಉಪಕರಣವನ್ನು ಬಳಸಿದರು. ಮೆದುಳಿನ ಇವೆರಡು ಭಾಗಗಳಲ್ಲಿ ಒತ್ತಡ ಹೆಚ್ಚಾಗಿದ್ದರಿಂದ ಮಾಯೆಯ ವಿಚಾರಗಳ ಬಗ್ಗೆ ಬೇಸರ ಬರುವ ಪ್ರವೃತ್ತಿ ಬೆಳೆಯುತ್ತದೆ ಮತ್ತು ಸಾಮಾಜಿಕ ಮತ್ತು ಭಾವನಾತ್ಮಕ ಕಡೆಗೆ ವಾಲುತ್ತದೆ. ಮನುಷ್ಯನು ಪೂರ್ವ ಇತಿಹಾಸದಿಂದ ಮನುಷ್ಯನ ಆಧ್ಯಾತ್ಮಿಕ ಸಂಸ್ಕೃತಿಯೆಡೆಗೆ ಹೊರಳಲು ಇದೇ ಮುಖ್ಯ ಕಾರಣವಾಗಿದೆ. ಮನುಷ್ಯನ ಮೆದುಳು ಇವೆರಡು ಭಾಗಗಳ ಬಳಕೆ ಮಾಡಿ ಜಗತ್ತಿನ ನಿರೀಕ್ಷಣೆ ಮಾಡುತ್ತದೆ, ಎಂದು ಸಂಶೋಧಕರಿಗೆ ಕಂಡುಬಂದಿದೆ. ಯಾವಾಗ ಮಾಯೆಯ ಪ್ರಶ್ನೆ ಉದ್ಭವಿಸುತ್ತದೆ ಅಥವಾ ಭಾವನಾತ್ಮಕ ವಿಚಾರಗಳ ಆವಶ್ಯಕತೆ ಇರುತ್ತದೆಯೋ ಆಗ ಮೆದುಳಿಗೆ ಸಂಬಂಧಿಸಿದ ಭಾಗವು ಜಾಗೃತವಾಗುತ್ತದೆ ಮತ್ತು ಮತ್ತೊಂದು ಒತ್ತಿಹಿಡಿಯುತ್ತದೆ. ಈ ರೀತಿಯ ಒತ್ತಡದಿಂದ ವಿಜ್ಞಾನ ಮತ್ತು ಧರ್ಮಗಳಲ್ಲಿ ಸಂಘರ್ಷವಾಗುತ್ತದೆ. (ಆಧಾರ : ಟೈಮ್ಸ್ ಆಫ್ ಇಂಡಿಯಾ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಈಶ್ವರನ ಮೇಲೆ ಶ್ರದ್ಧೆ ಇಡುವುದರಿಂದ ಮೆದುಳಿನ ಮೇಲಾಗುವ ಪರಿಣಾಮವೇನು ?