ಕರ್ನಾಟಕದ ಪ್ರಸ್ತಾವಿತ ಮೌಢ್ಯ ನಿಷೇಧ ಕಾನೂನು ವಿರೋಧಿಸಲು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ

ಸಮಾಜವನ್ನು ಅಧ್ಯಾತ್ಮದತ್ತ ಹೊರಳಿಸುವ
ಸನಾತನದ ಮೇಲೆ ನಿಷೇಧ ಬೇಡ ! - ಪ್ರಮೋದ ಮುತಾಲಿಕ್
ಎಡದಿಂದ ಶ್ರೀ. ದಯಾನಂದ ರಾವ್, ಶ್ರೀ. ಪ್ರಮೋದ ಮುತಾಲಿಕ್, ನ್ಯಾಯವಾದಿ ಶ್ರೀ. ಚೇತನ್ ಮಣೇರಿಕರ್
ಹುಬ್ಬಳ್ಳಿ : ಸನಾತನ ಸಂಸ್ಥೆ ಮತ್ತು ಹಿಂದೂ ಜನಜಾಗೃತಿ ಸಮಿತಿಯು ಇಡೀ ದೇಶದಲ್ಲಿ ಕಳೆದ ೨೦ ವರ್ಷಗಳಿಂದ ಅಧ್ಯಾತ್ಮದ ಶಿಕ್ಷಣ ನೀಡುತ್ತಿವೆ. ಇವತ್ತು ಸಾಮಾಜಿಕ ಜಾಲತಾಣಗಳ ಮುಖಾಂತರವೂ ಉತ್ತಮ ಸ್ಪಂದನ ದೊರೆಯುತ್ತಿದೆ. ಅದರ ಕಾರ್ಯ ಜಗತ್ತಿನ ೧೫೦ ದೇಶಗಳಲ್ಲಿ ವ್ಯಾಪಿಸಿದೆ. ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಹಿಂದುತ್ವನಿಷ್ಠ ಸರಕಾರವಿದ್ದರೂ ಸನಾತನ ವನ್ನು ನಿಷೇಧಿಸಲು ಅವರು ನಡೆಸಿದ ಪ್ರಯತ್ನ ಖಂಡನೀಯವಾಗಿದೆ, ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ. ಪ್ರಮೋದ ಮುತಾಲಿಕ್‌ರವರು ಟೀಕಿಸಿದ್ದಾರೆ. ಸನಾತನ ಸಂಸ್ಥೆಯನ್ನು ನಿಷೇಧಿಸುವ ಪ್ರಯತ್ನವನ್ನು ವಿರೋಧಿಸಲು ಹಿಂದುತ್ವನಿಷ್ಠರು ಜುಲೈ ೯ ರಂದು ಸುದ್ದಿಗೋಷ್ಠಿ ಆಯೋಜಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ನ್ಯಾಯವಾದಿ ಚೇತನ ಮಣೇರಿಕರ್, ಹಿಂದೂ ಮುಖಂಡ ಶ್ರೀ. ದಯಾನಂದ ಇವರು ಸಹ ಉಪಸ್ಥಿತರಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕರ್ನಾಟಕದ ಪ್ರಸ್ತಾವಿತ ಮೌಢ್ಯ ನಿಷೇಧ ಕಾನೂನು ವಿರೋಧಿಸಲು ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ