ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನವನ್ನು ಪಡೆಯುವ ಶಾಸ್ತ್ರೀಯ ಪದ್ಧತಿ

ದೇವರ ದರ್ಶನಕ್ಕಿಂತ ಮೊದಲು ಏನು ಮಾಡಬೇಕು ?
ಪಾದರಕ್ಷೆಗಳನ್ನು ದೇವಸ್ಥಾನದ ಹೊರಗಡೆ, ಆದಷ್ಟು ಎಡಬದಿಗೆ ತೆಗೆದಿಡಬೇಕು.
ಕಾಲು ತೊಳೆದುಕೊಳ್ಳುವ ವ್ಯವಸ್ಥೆ ಇದ್ದರೆ ಕಾಲುಗಳನ್ನು ತೊಳೆದುಕೊಂಡು ‘ಅಪವಿತ್ರಃ ಪವಿತ್ರೋ ವಾ’ ಎನ್ನುತ್ತಾ ನಮ್ಮ ಮೇಲೆ ೩ ಬಾರಿ ನೀರನ್ನು ಸಿಂಪಡಿಸಿಕೊಳ್ಳಬೇಕು.
ದೇವಸ್ಥಾನದ ಪ್ರಾಂಗಣದಿಂದ ಕಲಶದ ದರ್ಶನ ಪಡೆದುಕೊಂಡು ಕಲಶಕ್ಕೆ ನಮಸ್ಕರಿಸಬೇಕು.
ದೇವಸ್ಥಾನದ ಕಡೆಗೆ ಹೋಗುವಾಗ ಕೈಗಳನ್ನು ನಮಸ್ಕಾರದ ಮುದ್ರೆಯಲ್ಲಿ ಜೋಡಿಸಬೇಕು.
ದೇವಸ್ಥಾನದ ಮೆಟ್ಟಿಲುಗಳನ್ನು ಹತ್ತುವಾಗ ಬಲಗೈ ಬೆರಳುಗಳಿಂದ ಮೆಟ್ಟಿಲುಗಳನ್ನು ಸ್ಪರ್ಶಿಸಿ ಕೈ ಬೆರಳುಗಳನ್ನು ಭ್ರೂಮಧ್ಯದಲ್ಲಿ ತಾಗಿಸಬೇಕು.
ದೇವಸ್ಥಾನವನ್ನು ಪ್ರವೇಶಿಸುವುದಕ್ಕಿಂತ ಮೊದಲು ಪ್ರವೇಶದ್ವಾರಕ್ಕೆ ನಮಸ್ಕಾರ ಮಾಡಬೇಕು.
ದೇವಸ್ಥಾನವನ್ನು ಪ್ರವೇಶಿಸಿದ ನಂತರ ಗರ್ಭ ಗುಡಿಗೆ ಹೋಗುವಾಗ, ಎಡಬದಿಯಿಂದ ಹೋಗ ಬೇಕು ಮತ್ತು ಬಲಬದಿಯಿಂದ ಹೊರಗೆ ಬರಬೇಕು.
....................................
ದೇವತೆಯ ದರ್ಶನವನ್ನು ಹೇಗೆ ಪಡೆಯಬೇಕು ?
ದೇವಸ್ಥಾನದಲ್ಲಿ ಘಂಟೆಯನ್ನು ಅತ್ಯಂತ ಮೆಲುಧ್ವನಿಯಲ್ಲಿ ಬಾರಿಸಬೇಕು.
ದೇವತೆಯ ಮೂರ್ತಿ ಮತ್ತು ಅವಳ ಎದುರಿನಲ್ಲಿರುವ ಆಮೆಯ (ಶಿವನ ದೇವಸ್ಥಾನದಲ್ಲಿ ನಂದಿಯ) ಪ್ರತಿಕೃತಿಯ ನಡುವೆ ನಿಂತುಕೊಳ್ಳದೇ ಅಥವಾ ಕುಳಿತುಕೊಳ್ಳದೇ ಪ್ರತಿಕೃತಿಯ ಬದಿಯಲ್ಲಿ ನಿಂತುಕೊಂಡು ಕೈಗಳನ್ನು ಜೋಡಿಸಿ ನಮ್ರತೆಯಿಂದ ದರ್ಶನವನ್ನು ಪಡೆಯಬೇಕು.
ಮೊದಲು ದೇವತೆಯ ಚರಣಗಳಲ್ಲಿ ದೃಷ್ಟಿ ಯನ್ನು ಇಟ್ಟು ಲೀನರಾಗಬೇಕು, ಅನಂತರ ದೇವತೆಯ ಎದೆಯ ಮೇಲೆ ಮನಸ್ಸನ್ನು ಏಕಾಗ್ರ ಗೊಳಿಸಬೇಕು ಮತ್ತು ಕೊನೆಗೆ ದೇವತೆಯ ಕಣ್ಣುಗಳತ್ತ ನೋಡಿ ಅವಳ ರೂಪ ಕಣ್ಣುಗಳಲ್ಲಿ ತುಂಬಿಕೊಳ್ಳಬೇಕು.
ದೇವತೆಗಳಿಗೆ ಅರ್ಪಿಸುವ ವಸ್ತುಗಳನ್ನು (ಉದಾ. ಹೂವು, ಅಕ್ಷತೆ ಇತ್ಯಾದಿ) ದೇವರ ಮೈಮೇಲೆ ಎಸೆಯದೇ ಅವಳ ಚರಣಗಳಲ್ಲಿ ಅರ್ಪಿಸಬೇಕು. ಒಂದುವೇಳೆ ಮೂರ್ತಿ ದೂರದಲ್ಲಿದ್ದರೆ ಆ ವಸ್ತುಗಳನ್ನು ದೇವತೆಯ ಎದುರಿನಲ್ಲಿರುವ ತಟ್ಟೆಯಲ್ಲಿ ಅವುಗಳನ್ನು ಇಡಬೇಕು.
....................................
ದೇವಸ್ಥಾನದಲ್ಲಿ ಪ್ರದಕ್ಷಿಣೆಗಳನ್ನು ಹೇಗೆ ಹಾಕಬೇಕು ?
ಪ್ರದಕ್ಷಿಣೆಗಳನ್ನು ಹಾಕು ವುದಕ್ಕಿಂತ ಮೊದಲು ದೇವತೆಗೆ ಪ್ರಾರ್ಥನೆಯನ್ನು ಮಾಡಬೇಕು.
ದೇವತೆಗೆ ಪ್ರದಕ್ಷಿಣೆ ಯನ್ನು ಹಾಕುವಾಗ ಎರಡೂಕೈಗಳನ್ನು ಜೋಡಿಸಿಕೊಂಡು ಭಾವ ಪೂರ್ಣವಾಗಿ ನಾಮಜಪವನ್ನು ಮಾಡುತ್ತಾ ಮಧ್ಯಮ ಗತಿಯಲ್ಲಿ ಪ್ರದಕ್ಷಿಣೆಗಳನ್ನು ಹಾಕಬೇಕು.
ದೇವಸ್ಥಾನದಲ್ಲಿ ನಾಮಜಪ ಮಾಡುತ್ತಾ ಪ್ರದಕ್ಷಿಣೆಗಳನ್ನು ಹಾಕುವಾಗ ಗರ್ಭಗುಡಿಯನ್ನು ಸ್ಪರ್ಶಿಸಬಾರದು.
ಪ್ರದಕ್ಷಿಣೆಗಳನ್ನು ಹಾಕು ವಾಗ ಗರ್ಭಗುಡಿಯ ಹಿಂದಿನ ಬದಿಗೆ ಬಂದ ಮೇಲೆ ಸ್ವಲ್ಪ ಸಮಯ ನಿಂತು ದೇವತೆಗೆ ನಮಸ್ಕಾರ ಮಾಡಬೇಕು.
ದೇವರಿಗೆ ಸಮಸಂಖ್ಯೆ ಯಲ್ಲಿ (ಉದಾ. ,,) ಮತ್ತು ದೇವಿಗೆ ವಿಷಮ ಸಂಖ್ಯೆಯಲ್ಲಿ (ಉದಾ. ,,) ಪ್ರದಕ್ಷಿಣೆಗಳನ್ನು ಹಾಕಬೇಕು.
ಪ್ರತಿಯೊಂದು ಪ್ರದಕ್ಷಿಣೆಯು ಪೂರ್ಣವಾದ ನಂತರ ಸ್ವಲ್ಪ ನಿಂತುಕೊಂಡು ದೇವತೆಗೆ ನಮಸ್ಕಾರ ಮಾಡಿಯೇ ಮುಂದಿನ ಪ್ರದಕ್ಷಿಣೆಯನ್ನು ಹಾಕಬೇಕು.
...............................................
ಪ್ರದಕ್ಷಿಣೆಗಳನ್ನು ಹಾಕಿದ ನಂತರ ಏನು ಮಾಡಬೇಕು ?
ದೇವರಿಗೆ ಶರಣಾಗತ ಭಾವದಿಂದ ನಮಸ್ಕಾರ ಮಾಡಿ ಪ್ರಾರ್ಥನೆ ಮಾಡ ಬೇಕು.
ಬಲಗೈಯಿಂದ ತೀರ್ಥವನ್ನು ಸ್ವೀಕರಿಸಿ ಅಂಗೈಯನ್ನು ಕಣ್ಣು, ಹಣೆ, ತಲೆ ಮತ್ತು ಕುತ್ತಿಗೆಯ ಮೇಲೆ ಸವರಬೇಕು.
ದೇವಸ್ಥಾನದಲ್ಲಿ ನಮ್ರತೆಯಿಂದ ಸ್ವಲ್ಪ ಬಾಗಿ ಪ್ರಸಾದವನ್ನು ತೆಗೆದುಕೊಳ್ಳಬೇಕು.
ಪ್ರಸಾದವನ್ನು ಆದಷ್ಟು ದೇವಸ್ಥಾನದಲ್ಲಿಯೇ ಕುಳಿತು ಸೇವಿಸಬೇಕು.
ದೇವಸ್ಥಾನದಲ್ಲಿ ಸ್ವಲ್ಪ ಹೊತ್ತು ಕುಳಿತು ನಾಮಜಪ ಮಾಡಬೇಕು.
ಹಿಂದಿರುಗುವಾಗ ದೇವತೆಗೆ ಮತ್ತೊಮ್ಮೆ ಪ್ರಾರ್ಥನೆಯನ್ನು ಮಾಡಬೇಕು.
ದೇವಸ್ಥಾನದ ಹೊರಗೆ ಬಂದ ನಂತರ ಅಂಗಣದಿಂದ ಮತ್ತೊಮ್ಮೆ ಕಲಶಕ್ಕೆ ನಮಸ್ಕಾರ ಮಾಡಬೇಕು, ಅನಂತರವೇ ಹೊರಡಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಸ್ಥಾನಕ್ಕೆ ಹೋದಾಗ ದೇವರ ದರ್ಶನವನ್ನು ಪಡೆಯುವ ಶಾಸ್ತ್ರೀಯ ಪದ್ಧತಿ