ಪಂಚಮ 'ಅಖಿಲ ಭಾರತೀಯ ಹಿಂದೂ ಅಧಿವೇಶನ'ದ ಸಮಾರೋಪದಲ್ಲಿ ಗಣ್ಯರ ಮಾರ್ಗದರ್ಶನ

ಮುಂಬರುವ ಕಾಲದಲ್ಲಿ ಮುಸ್ಲಿಂ ರಾಷ್ಟ್ರ ಅಥವಾ ಹಿಂದೂ ರಾಷ್ಟ್ರ ಇವೆರಡೇ ಪರ್ಯಾಯಗಳಿವೆ !
- ಪೂ. ಡಾ. ಚಾರುದತ್ತ ಪಿಂಗಳೆ
ಯಾವಾಗ ಧರ್ಮವು ಅಧರ್ಮದ ಸ್ವರೂಪ ಪಡೆಯುತ್ತದೆಯೋ, ಆಗ ಧರ್ಮಶಾಸ್ತ್ರದಲ್ಲಿ ಅದನ್ನು ಭೀಕರ ಕಾಲವೆನ್ನುತ್ತಾರೆ. ಇಂದು ಧರ್ಮವಿರೋಧಿ ಶಕ್ತಿಗಳ ವೈಭವೀಕರಣವಾಗುತ್ತಿದೆ. ವಿಶ್ವಾದ್ಯಂತ ಐಸಿಸ್‌ನ ಸಂಕಟವೂ ಹೆಚ್ಚಾಗುತ್ತಿದೆ. ಇದರಿಂದ ಮುಂಬರುವ ಕಾಲದಲ್ಲಿ ಧರ್ಮನಿರಪೇಕ್ಷ ರಾಷ್ಟ್ರವೋ ಅಥವಾ ಹಿಂದೂ ರಾಷ್ಟ್ರವೋ ಎಂದಲ್ಲ ಮುಸ್ಲಿಂ ರಾಷ್ಟ್ರವೋ ಅಥವಾ ಹಿಂದೂ ರಾಷ್ಟ್ರವೋ ಎಂಬ ಪ್ರಶ್ನೆ ನಿರ್ಮಾಣವಾಗಲಿದೆ. ಆದುದರಿಂದ ಹಿಂದೂಗಳು ಸಂಘಟನೆಯೊಂದಿಗೆ ಸಂಘರ್ಷದ ಸಿದ್ಧತೆಯಲ್ಲಿರಬೇಕೆಂದು ಪೂ. ಡಾ. ಚಾರುದತ್ತ ಪಿಂಗಳೆಯವರು ಹಿಂದೂಗಳಿಗೆ ಕರೆ ನೀಡಿದರು.

ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ಮೋದಿ ಸರಕಾರವು ನೇತೃತ್ವ ವಹಿಸಬೇಕು !
- ಶ್ರೀ. ರಮೇಶ ಶಿಂದೆ, ಹಿಂದೂ ಜನಜಾಗೃತಿ ಸಮಿತಿ
ಭಾರತದಲ್ಲಿ ಜಾತ್ಯತೀತತೆ ಹೆಸರಿನಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ತುಷ್ಟೀಕರಣ ಮತ್ತು ಹಿಂದೂಗಳ ಮೇಲಾಗುತ್ತಿರುವ ಅನ್ಯಾಯವನ್ನು ನೋಡುವಾಗ ಮೋದಿ ಸರಕಾರವು ನೇಪಾಳದ ಜಾತ್ಯತೀತ ಸಂವಿಧಾನ ರದ್ದುಗೊಳಿಸುವಂತೆ ಮಾಡಬೇಕು ಮತ್ತು ನೇಪಾಳವನ್ನು ಪುನಃ ಹಿಂದೂ ರಾಷ್ಟ್ರವನ್ನಾಗಿ ಘೋಷಿಸಲು ನೇತೃತ್ವ ವಹಿಸಬೇಕು, ಎಂದು ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನದ ಮೂಲಕ ಆಗ್ರಹಿಸಲಾಯಿತು. ನೇಪಾಳದ ಈಗಿನ ಸರಕಾರಕ್ಕೆ  ಬಾಂಧವ್ಯವು ಅಂತ್ಯವಾಗುವ ಹಂತದಲ್ಲಿದ್ದು, ಚೀನಾವು ಇದರ ದುರುಪಯೋಗಪಡಿಸಿಕೊಳ್ಳಲು ನೋಡುತ್ತಿದೆ. ನೇಪಾಳದಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವವು ಭಾರತದ ಭದ್ರತೆಯ ದೃಷ್ಟಿಯಿಂದ ಅಹಿತಕರವಾಗಲಿದೆ, ಆದ್ದರಿಂದ  ಈ ಕೂಡಲೇ ಮಧ್ಯ ಪ್ರವೇಶಿಸಿ ನೇಪಾಳವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು,

ಇಂದಿನ ತುಚ್ಛ ರಾಜಕೀಯದಲ್ಲಿ ಸಿಲುಕುವುದಕ್ಕಿಂತ ಧರ್ಮಕಾರ್ಯ ಮಾಡಿ !
- ಶಾಸಕ ರಾಜಾಸಿಂಗ್ ಠಾಕೂರ್
ಮೊದಲು ತತ್ವಾಧಾರಿತ ರಾಜಕಾರಣವನ್ನು ಮಾಡುತ್ತಿದ್ದರು; ಆದರೆ ಇಂದಿನ ರಾಜಕಾರಣ ಬದಲಾಗಿದೆ. ಈಗಿನ ರಾಜಕಾರಣಿಗಳು ಮಾತನಾಡುವುದೊಂದು ಮಾಡುವುದಿನ್ನೊಂದು ಇರುತ್ತದೆ ! ರಾಜಕಾರಣಕ್ಕೆ ಸೇರಿದ ಬಳಿಕ ಧರ್ಮಕಾರ್ಯವನ್ನು ಮಾಡಲು ಅನೇಕ ಬಂಧನಗಳು ಬರುತ್ತವೆ. ಹಾಗಾಗಿ ಇಂತಹ ತುಚ್ಛ ರಾಜಕಾರಣ ಮಾಡುವುದಕ್ಕಿಂತ ನಿರ್ಭಯವಾಗಿ ಧರ್ಮ ಕಾರ್ಯ ಮಾಡಿರಿ. ಧರ್ಮಕಾರ್ಯವನ್ನು ಮಾಡುವವರನ್ನು ಸಾಕ್ಷಾತ್ ಈಶ್ವರನೇ ರಕ್ಷಿಸುತ್ತಾನೆ. ಎನ್ನುವ ಅಭಿಪ್ರಾಯವನ್ನು ತೆಲಂಗಾಣದ ಭಾಜಪದ ಶಾಸಕರಾದ ರಾಜಾಸಿಂಗ್ ಠಾಕೂರ ಇವರು ವ್ಯಕ್ತಪಡಿಸಿದರು. ಭಾಜಪ ಸರಕಾರವು ಎರಡು ವರ್ಷಗಳ ತನ್ನ ಆಡಳಿತಾವಧಿಯನ್ನು ಪೂರ್ಣಗೊಳಿಸಿದೆ; ಆದರೆ ಈ ಎರಡು ವರ್ಷಗಳಲ್ಲಿ ಹಿಂದೂಗಳ ಮೇಲಾಗುತ್ತಿರುವ ಅನ್ಯಾಯ ಕಡಿಮೆಯಾಗಿರುವುದು ಇಂದಿಗೂ ಕಂಡು ಬರುತ್ತಿಲ್ಲ. ಸಾಧು ಸಂತರನ್ನು ಸುಳ್ಳು ಆರೋಪದಡಿ ಜೈಲಿಗೆ ಕಳುಹಿಸಲಾಗುತ್ತಿದೆ. ಇಂದು ಗೋಹತ್ಯೆ, ಲವ್ ಜಿಹಾದ್ ಮತ್ತು ಹಿಂದೂಗಳನ್ನು ಮೋಸಗೊಳಿಸಿ ಮತಾಂತರ ಮಾಡುವವರ ಮೇಲೆ ಕ್ರಮ ಕೈಕೊಳ್ಳದೇ, ಅದನ್ನು ತಡೆಯುವ ಹಿಂದೂಗಳ ಮೇಲೆಯೇ ಸರಕಾರವು ಕ್ರಮ ಜರುಗಿಸುತ್ತಿದೆ. ಹಿಂದೂಗಳ ಸರಕಾರವಿದ್ದರೂ ಹಿಂದೂ ಹಾಗೂ ಹಿಂದುತ್ವದ ಮೇಲೇಕೆ ಅನ್ಯಾಯವಾಗುತ್ತಿದೆ ? ಎಂದು ಅವರು ಪ್ರಶ್ನಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಚಮ 'ಅಖಿಲ ಭಾರತೀಯ ಹಿಂದೂ ಅಧಿವೇಶನ'ದ ಸಮಾರೋಪದಲ್ಲಿ ಗಣ್ಯರ ಮಾರ್ಗದರ್ಶನ