ಕೆಟ್ಟ ಶಕ್ತಿಗಳಿಂದಾಗಿ ತೊಂದರೆಯಾಗುತ್ತಿರುವಾಗ ಯಾವುದೇ ಉಪಾಯಗಳಿಂದ ಲಾಭವಾಗದಿದ್ದರೆ ಮಾಡಬೇಕಾದ ಉಪಾಯ

ಕೆಟ್ಟ ಶಕ್ತಿಗಳಿಂದಾಗಿ ತೊಂದರೆಯಾಗುತ್ತಿದ್ದರೆ ‘ಪ್ರಾಣಶಕ್ತಿವಹನ ವ್ಯೆಹದಲ್ಲಿನ ಅಡಚಣೆಗಳಿಂದಾಗುವ ರೋಗಗಳಿಗೆ ಉಪಾಯ’ ಈ ಗ್ರಂಥದಲ್ಲಿ ನೀಡಿದಂತೆ (ಸದ್ಯ ಈ ಗ್ರಂಥ ಮರಾಠಿ, ಹಿಂದಿ, ಆಂಗ್ಲ ಭಾಷೆಯಲ್ಲಿದ್ದು, ಮುಂದೆ ಕನ್ನಡ ಭಾಷೆಯಲ್ಲಿಯೂ ಬರಲಿದೆ.) ಜಪ, ಮುದ್ರೆ ಮತ್ತು ನ್ಯಾಸವನ್ನು ಕಂಡುಹಿಡಿದು ಅದಕ್ಕನುಸಾರ ಉಪಾಯ ಮಾಡಬೇಕು. ಅದು ಸಾಧ್ಯವಾಗದಿದ್ದರೆ ‘ಎಲ್ಲರಿಗಾಗಿನ ಉಪಾಯ’ದಲ್ಲಿ ನೀಡಿದಂತೆ ಮಾಡಬೇಕು.
ತೊಂದರೆಯಾಗುತ್ತಿದ್ದಾಗ ವಿವಿಧ ನಾಮಜಪ, ಮುದ್ರೆ ಮತ್ತು ನ್ಯಾಸ ೩-೪ ಬಾರಿ ಕಂಡುಹಿಡಿದು ಹಾಗೆ ಉಪಾಯ ಮಾಡಿದರೂ ಅದರ ಲಾಭವಾಗದಿದ್ದರೆ ಕೊನೆಯ ಉಪಾಯವೆಂದು ಮುಂದಿನಂತೆ ಮಾಡಬೇಕು.
೧. ‘ಶೂನ್ಯ’, ‘ಮಹಾಶೂನ್ಯ’, ‘ॐ’ ಅಥವಾ ‘ನಿರ್ಗುಣ’ ಇವುಗಳಲ್ಲಿ ಯಾವುದಾದರೊಂದು ಶಬ್ದದ ಜಪ ಮಾಡಬೇಕು. ಈ ಸಮಯದಲ್ಲಿ ಅಂಗೈಯಿಂದ ತೊಂದರೆಯಾಗುತ್ತಿರುವ ಕುಂಡಲಿನಿಚಕ್ರ ಅಥವಾ ಅವಯವಗಳ ಭಾಗಗಳಲ್ಲಿ ಶರೀರದಿಂದ ೧-೨ ಸೆ.ಮೀ. ದೂರದಿಂದ ನ್ಯಾಸ ಮಾಡಬೇಕು ಅಥವಾ ನ್ಯಾಸ ಮಾಡದೇ ಧ್ಯಾನ ಮಾಡುವಾಗ ಯಾವ ರೀತಿ ಮಾಡುತ್ತೇವೆ ಅದರಂತೆ ಎರಡೂ ಕೈಗಳ ಕೇವಲ ಹೆಬ್ಬೆರಳು ಮತ್ತು ತರ್ಜನಿ (ಹೆಬ್ಬೆರಳಿನ ಪಕ್ಕದ ಬೆರಳು)ಯ ತುದಿಯನ್ನು ಪರಸ್ಪರ ಜೋಡಿಸಿ ಮುದ್ರೆ ಮಾಡಬೇಕು.
೨. ಮೇಲಿನ ಉಪಾಯದಿಂದಲೂ ಲಾಭವಾಗದಿದ್ದರೆ ನಮಸ್ಕಾರದ ಮುದ್ರೆ ಮಾಡಿ ಮತ್ತು ಅದನ್ನು ಎದೆಗೆ ತಾಗಿಸಿ ದೇವರಿಗೆ ಸಂಪೂರ್ಣ ಶರಣಾಗಿ ಭಾವಾವಸ್ಥೆಯಲ್ಲಿರಬೇಕು ಅಥವಾ ಆಕಾಶದ ನೀಲಿ ಬಣ್ಣವನ್ನು ಕಣ್ಣೆದುರು ತರಬೇಕು. ಇದು ನಿರ್ಗುಣ ಸ್ತರದ ಉಪಾಯವಾಗಿದೆ. ಸಮಷ್ಟಿಗಾಗಿ ಕಾರ್ಯ ಮಾಡುವ ಸಂತರು ಮತ್ತು ಸಾಧಕರಿಗೆ ಕೆಟ್ಟ ಶಕ್ತಿಗಳ ನಿರ್ಗುಣ ಸ್ತರದ ಆಕ್ರಮಣವನ್ನು ಹೆಚ್ಚು ಎದುರಿಸಬೇಕಾಗುತ್ತದೆ. ಇಂತಹವರಿಗೆ ಯಾವುದೇ ರೀತಿಯ ಉಪಾಯದಿಂದ ಲಾಭವಾಗದಿದ್ದರೆ ಈ ಉಪಾಯದಿಂದ ಲಾಭವಾಗುವುದು.’ - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೆಟ್ಟ ಶಕ್ತಿಗಳಿಂದಾಗಿ ತೊಂದರೆಯಾಗುತ್ತಿರುವಾಗ ಯಾವುದೇ ಉಪಾಯಗಳಿಂದ ಲಾಭವಾಗದಿದ್ದರೆ ಮಾಡಬೇಕಾದ ಉಪಾಯ