ಅಪ್ರಾಪ್ತ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ತಯಾರಿಸುವ ಕಾನೂನನ್ನು ವಿರೋಧಿಸಲು ಚರ್ಚ್‌ನಿಂದ ೧ ಸಾವಿರದ ೩೦೦ ಕೋಟಿ ರೂಪಾಯಿಗಳಷ್ಟು ಖರ್ಚು !

ಹಿಂದೂಗಳ ಸಂತರ ಮೇಲಿನ ತಥಾಕಥಿತ ಲೈಂಗಿಕ ಶೋಷಣೆಯ ಆರೋಪದಿಂದ ಅವರನ್ನು ಅವಮಾನಿಸುವವರು ಕ್ರೈಸ್ತರ ಚರ್ಚ್‌ಗಳಿಂದಾಗುವ ಲೈಂಗಿಕ ಶೋಷಣೆ ವಿಷಯದಲ್ಲಿ ಮಾತ್ರ ಮೌನವಿರುತ್ತವೆ !
ನ್ಯೂಯಾರ್ಕ್ : ಅಪ್ರಾಪ್ತ ಮಕ್ಕಳ ಮೇಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳ ವಿರುದ್ಧ  ನ್ಯಾಯಾಲಯಗಳಲ್ಲಿ ನಡೆಯುವ ಖಟ್ಲೆಗಳಲ್ಲಿ ಆರೋಪಿಗಳ ಮೇಲೆ ದಿವಾಣಿ ದಾವೆ ಹೂಡಿ ಪರಿಹಾರವನ್ನು ಕೇಳುವುದು ಸುಲಭವಾಗಬೇಕೆಂದು; ನ್ಯೂಯಾರ್ಕ್ ರಾಜ್ಯದ ಕಾನೂನು ಮಂಡಳದಲ್ಲಿ ಹೊಸ ಕಾನೂನು ಮಾಡುವ ಪ್ರಸ್ತಾಪವನ್ನು ಮಂಡಿಸಲಾಗಿತ್ತು. ಈ ಕಾನೂನು ಆಗಬಾರದೆಂದು ಅಮೇರಿಕಾದ ಕೆಥೊಲಿಕ್ ಚರ್ಚ್ ಕಾನೂನು ಮಂಡಳದ ಸದಸ್ಯರ ಮೇಲೆ ಒತ್ತಡ ತಂದು ಅವರ ಮನಸ್ಸನ್ನು ಬದಲಾಯಿಸಲು ಒತ್ತಡ ಗುಂಪುಗಳ ಸಹಾಯ ಪಡೆಯಿತು. ಈ ಒತ್ತಡಗುಂಪುಗಾಗಿ ಸುಮಾರು ೧ ಸಾವಿರದ ೩೦೦ ಕೋಟಿ ರೂಪಾಯಿ ಗಳಷ್ಟು ಖರ್ಚು ಮಾಡಲಾಗಿದೆ. ಲೈಂಗಿಕ  ಕಿರುಕುಳಗಳ ಆರೋಪಗಳಿಂದ ಚರ್ಚ್‌ನ ಘನತೆ  ಮಣ್ಣು ಪಾಲಾಗಿದೆ. ಇಂದು ಅನೇಕ ಪೀಡಿತ ಮಕ್ಕಳು ವಯೋಮಿತಿಯಿಂದಾಗಿ ಪರಿಹಾರದ ಖಟ್ಲೆಗಳನ್ನು ದಾಖಲಿಸಲು ಅಸಮರ್ಥ ರಾಗಿದ್ದಾರೆ, ಅವರ ಕುಟುಂಬದವರು ಸಮಾಜದಲ್ಲಿ ಆಗುವ ಅವಮಾನಕ್ಕೂ ಅಂಜುತ್ತಾರೆ. ಹೊಸ ಕಾನೂನಿನಿಂದ ಈ ಮಕ್ಕಳಿಗೆ ಮತ್ತು ಅವರ ಪಾಲಕರಿಗೆ ಚರ್ಚ್‌ಗಳ ವಿರುದ್ಧ ಖಟ್ಲೆಗಳನ್ನು ದಾಖಲಿಸಲು ಸುಲಭವಾಗುವುದು; ಆದ್ದರಿಂದ ಚರ್ಚ್‌ಗಳು ಇದನ್ನು ವಿರೋಧಿಸಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಪ್ರಾಪ್ತ ಮಕ್ಕಳ ಮೇಲಾಗುವ ಲೈಂಗಿಕ ದೌರ್ಜನ್ಯಗಳ ವಿರುದ್ಧ ತಯಾರಿಸುವ ಕಾನೂನನ್ನು ವಿರೋಧಿಸಲು ಚರ್ಚ್‌ನಿಂದ ೧ ಸಾವಿರದ ೩೦೦ ಕೋಟಿ ರೂಪಾಯಿಗಳಷ್ಟು ಖರ್ಚು !