ದೇಶದ ಹೆಚ್ಚಿನ ಮಾಧ್ಯಮಗಳು ವಿದೇಶಿಯರ ಧಾರ್ಮಿಕ ಅಡಿಯಾಳು !- ಸುರೇಶ ಚವ್ಹಾಣಕೆ, ಸಂಚಾಲಕ ಸಂಪಾದಕರು, ಸುದರ್ಶನ ನ್ಯೂಸ್

ಹಿಂದೂ ಧರ್ಮಕ್ಕಾಗಿ ಮಾಡಿದ ಅಮೂಲ್ಯ ಕಾರ್ಯಕ್ಕಾಗಿ ಸುರೇಶ ಚವ್ಹಾಣಕೆ ಇವರ ಸತ್ಕಾರ !
  •   ಹಿಂದುತ್ವವಾದಿ ಸಂಘಟನೆಗಳ ಉಪಕ್ರಮಗಳ ಪ್ರಸಿದ್ಧಿಗಾಗಿ ವಿಶೇಷ ಪ್ರಯತ್ನ ಮಾಡುವ ಆಶ್ವಾಸನೆ
  • ಸ್ಥಳೀಯ ವಾರ್ತಾವಾಹಿನಿ ಮತ್ತು ಆಕಾಶವಾಣಿ ಮೂಲಕ ಹಿಂದೂ ರಾಷ್ಟ್ರದ ಕಾರ್ಯ ಮಾಡುವ ಅಭಿನವ ಕಲ್ಪನೆ
ಶ್ರೀ. ಸುರೇಶ ಚವ್ಹಾಣಕೆ (ಎಡದಿಂದ ೨ ನೇಯವರು) ಇವರನ್ನು ಸತ್ಕರಿಸುತ್ತಿರುವ
ಪೂ. ಡಾ. ಚಾರುದತ್ತ ಪಿಂಗಳೆ, ಜೊತೆಗೆ ಶ್ರೀ. ಸುಭಾಷ ಚಕ್ರವರ್ತಿ
ಭಾರತದಲ್ಲಿ ೭೩೨ ದೂರಚಿತ್ರ ವಾಹಿನಿಗಳಿದ್ದು ಅವುಗಳಲ್ಲಿ ೪೨೦ ವಾರ್ತಾವಾಹಿನಿಗಳಾಗಿವೆ. ಇವುಗಳಲ್ಲಿ ಹೆಚ್ಚಿನ ವಾಹಿನಿಗಳಲ್ಲಿ ವಿದೇಶದ ಹಣವನ್ನು ಹೂಡಲಾಗಿದೆ. ಭಾರತದಲ್ಲಿ ದೇವಸ್ಥಾನಗಳಿಗೆ ಬಂದಿರುವ ಅರ್ಪಣೆಯನ್ನು ಬ್ಯಾಂಕಿನಲ್ಲಿಡಲು ಅವಕಾಶವಿದೆ; ಆದರೆ ಬೇರೆಲ್ಲೂ ಬಂಡವಾಳ ಹೂಡಲು ಅವಕಾಶವಿಲ್ಲ. ವಿದೇಶಗಳಲ್ಲಿ ಚರ್ಚ್‌ಗಳಿಗೆ ಮಾತ್ರ ಅವರ ಹಣವನ್ನು ವ್ಯವಸಾಯದ ಉದ್ದೇಶದಿಂದ ಶೇರ್ ಮಾರ್ಕೆಟ್‌ನಲ್ಲಿ ಬಂಡವಾಳ ಹೂಡುವ ಅಧಿಕಾರವಿದೆ. ಆದ್ದರಿಂದ ವಿವಿಧ ಚರ್ಚ್‌ಗಳು ಅವುಗಳ ಹಣವನ್ನು ವ್ಯಾವಹಾರಿಕ ಹಾಗೂ ಧಾರ್ಮಿಕ ಕಾರಣಕ್ಕಾಗಿ ಭಾರತೀಯ ಪ್ರಸಾರ ಮಾಧ್ಯಮಗಳಲ್ಲಿ ಹೂಡುತ್ತಿವೆ. ಅದರ ಪರಿಣಾಮವೆಂದು ಭಾರತದ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮದ ವಿರುದ್ಧ ಕಾರ್ಯನಿರತವಾಗಿವೆ, ಎಂಬ ವಾಸ್ತವಿಕತೆಯನ್ನು ಸುದರ್ಶನ ನ್ಯೂಸ್‌ನ ಸಂಚಾಲಕ ಸಂಪಾದಕರಾದ ಶ್ರೀ. ಸುರೇಶ ಚವ್ಹಾಣಕೆ ಇವರು ಬಹಿರಂಗಪಡಿಸಿದರು.
ಅವರು ಜೂನ್ ೨೧ ರಂದು ಸಾಯಂಕಾಲದ ಸತ್ರದಲ್ಲಿ 'ಹಿಂದೂ ರಾಷ್ಟ್ರ-ಸ್ಥಾಪನೆಯಲ್ಲಿ ಮಾಧ್ಯಮಗಳ ಭೂಮಿಕೆ' ಎಂಬ ವಿಷಯದಲ್ಲಿ ಮಾತನಾಡುತ್ತಿದ್ದರು. ಈ ಮಾರ್ಗದರ್ಶನದ ಮೊದಲು ಹಿಂದುತ್ವಕ್ಕಾಗಿ ಸಮರ್ಪಿಸಿಕೊಂಡಿರುವ ಸುದರ್ಶನ ವಾರ್ತಾವಾಹಿನಿಯ ಮೂಲಕ ಮಾಡಿದ ಅಮೂಲ್ಯ ಕಾರ್ಯಗಳಿಗಾಗಿ ಶ್ರೀ. ಚವ್ಹಾಣಕೆ ಇವರನ್ನು ಅಖಿಲ ಭಾರತೀಯ ಹಿಂದೂ ಅಧಿವೇಶನದ ವತಿಯಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಪೂ. (ಡಾ.) ಚಾರುದತ್ತ ಪಿಂಗಳೆಯವರ ಶುಭಹಸ್ತಗಳಿಂದ ಪುಷ್ಪ, ಪ್ರಸಾದ ಮತ್ತು ಶ್ರೀಕೃಷ್ಣನ ಪ್ರತಿಮೆಯನ್ನು ನೀಡಿ ಸತ್ಕರಿಸಲಾಯಿತು.
ಶ್ರೀ. ಚವ್ಹಾಣಕೆ ಇವರು ಈ ಮುಂದಿನ ವಿಷಯಗಳನ್ನು ಮಂಡಿಸಿದರು,
೧. ಇಂದು ವಿವಿಧ ವಾಹಿನಿಯ ಮಾಲಿಕೆಗಳಲ್ಲಿ ಜಾತ್ಯತೀತವನ್ನು ಕಾಪಾಡುವವರನ್ನು ಶಾಂತಿಪ್ರಿಯ ಹಾಗೂ ಹಿಂದುತ್ವವಾದಿಗಳನ್ನು ಆಕ್ರಮಕ ಹಾಗೂ ವಿಕೃತವಾಗಿ ತೋರಿಸಲಾಗುತ್ತದೆ.
೨. ಪ್ರೇಮಪ್ರಕರಣವಿದ್ದರೆ, ಅದರಲ್ಲಿ ಯುವತಿ ಹಿಂದೂ ಮತ್ತು ಯುವಕ ಮುಸಲ್ಮಾನನನ್ನು ತೋರಿಸಲಾಗುತ್ತದೆ.
೩. ಇಲ್ಲಿನ ವಾರ್ತಾವಾಹಿನಿಗಳು ಹಿಂದುತ್ವದ ಒಳ್ಳೆಯ ಕಾರ್ಯವನ್ನು ತೋರಿಸುವುದೇ ಇಲ್ಲ, ತದ್ವಿರುದ್ಧ ನಾಸ್ತಿಕವಾದಿಗಳ ವೈಭವೀಕರಣ ಮಾಡುತ್ತವೆ.
೪. ಇದರ ಹಿಂದಿನ ನಿಜವಾದ ಕಾರಣವೆಂದರೆ, ಅವರಿಗೆ ಭಾರತೀಯ ಸಂಸ್ಕೃತಿಯನ್ನು ನಾಶಗೊಳಿಸಿ ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸಲಿಕ್ಕಿದೆ.

ಹಿಂದೂದ್ರೋಹಕ್ಕೆ ಯೋಗ್ಯ ಪ್ರತ್ಯುತ್ತರ ನೀಡಲು ಶ್ರೀ. ಚವ್ಹಾಣಕೆ ಇವರು ಹೇಳಿದ ಅಭಿನವ ಸಂಕಲ್ಪನೆ !
ಶ್ರೀ. ಚವ್ಹಾಣಕೆ ಇವರ ಅಭಿಪ್ರಾಯದಂತೆ ಹಿಂದೂದ್ರೋಹಕ್ಕೆತಕ್ಕ ಪ್ರತ್ಯುತ್ತರ ನೀಡಲು ಹಿಂದೂಗಳು ಹೆಚ್ಚೇನೂ ಮಾಡುವ ಅವಶ್ಯಕತೆಯಿಲ್ಲ; ಅವರು ಸರಕಾರದಿಂದ ಸಿಗುವ ಯೋಜನೆಗಳ ಲಾಭ ಪಡೆಯಬೇಕು. ಭಾರತ ಸರಕಾರ ಸ್ಥಳೀಯ ದೂರಚಿತ್ರ ವಾಹಿನಿಗಳು ಮತ್ತು ಆಕಾಶವಾಣಿ (ಎಫ್.ಎಮ್.) ಕೇಂದ್ರಗಳಿಗಾಗಿ ೧೦೦ ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿದೆ. ಅದರಿಂದ ಅತೀ ಕಡಿಮೆ ಖರ್ಚಿನಲ್ಲಿ ತಯಾರಾಗುವ ಈ ಮಾಧ್ಯಮಗಳನ್ನು ಹಿಂದೂಗಳು ಆರಂಭಿಸಬೇಕು. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸಾರ ಮಾಡಿ. ಈ ಜಾಲತಾಣಗಳಿಂದ ನಮಗೆ ಸ್ವಲ್ಪಮಟ್ಟಿಗಾದರೂ ಸಹಾಯವಾಗಬಹುದು. ಇಂತಹ ವಿವಿಧ ಕಲ್ಪನೆಯ ಮೂಲಕ ಹಿಂದುತ್ವವಾದಿಗಳು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಾರ್ಯವನ್ನು ಹೆಚ್ಚು ಪ್ರಮಾಣದಲ್ಲಿ ಹಾಗೂ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಿದೆ.
ಹಿಂದುತ್ವವಾದಿಗಳೇ, ನಿಮ್ಮ ವಾರ್ತೆಗಳನ್ನು ನಮಗೆ ಕಳುಹಿಸಿ ! - ಶ್ರೀ. ಚವ್ಹಾಣಕೆ
ಹಿಂದುತ್ವವಾದಿ ಸಂಘಟನೆಗಳು ತಮ್ಮ ಉಪಕ್ರಮಗಳ ವಾರ್ತೆಗಳನ್ನು, ಅದರ ಚಿತ್ರೀಕರಣವನ್ನು ನಮಗೆ ಕಳುಹಿಸಿ. ಅದಕ್ಕಾಗಿ ನಾವು ಒಂದು ಸಂಪರ್ಕ ಕ್ರಮಾಂಕವನ್ನು ನೀಡುವೆವು. ಆ ವಾರ್ತೆಗಳಿಗೆ ನಾವು ಯೋಗ್ಯ ರೀತಿಯಲ್ಲಿ ಪ್ರಸಿದ್ಧಿ ನೀಡೋಣ, ಅದರಿಂದ ಹಿಂದುತ್ವವಾದಿ ಸಂಘಟನೆಗಳಿಗೆ ಲಾಭವಾಗಬಹುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇಶದ ಹೆಚ್ಚಿನ ಮಾಧ್ಯಮಗಳು ವಿದೇಶಿಯರ ಧಾರ್ಮಿಕ ಅಡಿಯಾಳು !- ಸುರೇಶ ಚವ್ಹಾಣಕೆ, ಸಂಚಾಲಕ ಸಂಪಾದಕರು, ಸುದರ್ಶನ ನ್ಯೂಸ್