ಸಾಧಕರನ್ನು ರೂಪಿಸುವ ಪ.ಪೂ. ಡಾಕ್ಟರರ ಅಮೂಲ್ಯ ಸತ್ಸಂಗದಿಂದ ಆರಿಸಿದ ಕ್ಷಣಮುತ್ತುಗಳು !

ಪರಾತ್ಪರ ಗುರು ಡಾ. ಜಯಂತ ಆಠವಲೆ
೧. ಹೊಸಹೊಸ ವಿಷಯಗಳನ್ನು ಕಲಿಯುವುದರ ಆನಂದವನ್ನು ಪಡೆಯಬೇಕು !
ನ್ಯಾಯವಾದಿ ಯೋಗೇಶ ಜಲತಾರೆ
೨೦೦೬ ರ ಕೊನೆಯಲ್ಲಿ ನನ್ನ ಪ್ರಸಾರ ಸೇವೆಯನ್ನು ನಿಲ್ಲಿಸಿ ನನಗೆ ಗ್ರಂಥ ವಿಭಾಗದಲ್ಲಿ ಸೇವೆ ಮಾಡಲು ಹೇಳಲಾಯಿತು. ಆ ಕಾಲದಲ್ಲಿ ನನ್ನಲ್ಲಿ ಅಹಂ ತುಂಬ ಹೆಚ್ಚಾಗಿದ್ದರಿಂದ ನನ್ನ ಸೇವೆಯಲ್ಲಿ ತಪ್ಪುಗಳ ಪ್ರಮಾಣವೂ ಹೆಚ್ಚಾಗಿತ್ತು. ಹೀಗಿರುವಾಗ ಒಮ್ಮೆ ಪ.ಪೂ. ಡಾಕ್ಟರರು ನನಗೆ, ‘‘ನಿಮಗೆ ಈ ಬದಲಾವಣೆ ಹೇಗನಿಸಿತು ?’’ ಎಂದು ಕೇಳಿದಾಗ, ‘‘ನನಗೆ ಯಾವುದೇ ಸೇವೆ ನಡೆಯುತ್ತದೆ; ಆದರೆ ನಿಮ್ಮ ಚರಣದಲ್ಲಿಟ್ಟುಕೊಳ್ಳಿ’’, ಎಂದೆನು. ಆಗ ಅವರು, ‘‘ಇಂತಹ ಪ್ರತಿಕ್ರಿಯೆ ಬೇಡ. ಹೊಸ ವಿಷಯ ಕಲಿಯಲು ಸಿಗಲಿದೆ ಎಂಬುದರ ಆನಂದವನ್ನು ಪಡೆಯಬೇಕು. ನಾವು ನಿರಂತರ ಹೊಸಹೊಸ ವಿಷಯ ಕಲಿಯುವುದರ ಆನಂದವನ್ನು ಪಡೆಯಬೇಕು’’, ಎಂದರು. ಅನಂತರ ಮರುದಿನ ಒಂದು ಚೌಕಟ್ಟು ಪ್ರಕಟಿಸಲಾಯಿತು. ಅದರಲ್ಲಿ, ‘ಯಾವ ಸೇವೆಯನ್ನು ನಾವು ಹೆಚ್ಚು ಕೌಶಲ್ಯದಿಂದ ಹಾಗೂ ಆಸಕ್ತಿಯಿಂದ ಮಾಡಲು ಸಾಧ್ಯವಿದೆಯೋ, ಅದನ್ನು ಮಾಡುವುದರಿಂದ ಸೇವೆಯ ಫಲಶ್ರುತಿ ಹೆಚ್ಚಾಗುತ್ತದೆ. ಅದರಿಂದ ಶೀಘ್ರ ಆಧ್ಯಾತ್ಮಿಕ ಪ್ರಗತಿಯಾಗುತ್ತದೆ.’ ನನ್ನ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಆಗ ನನಗೆ ನನ್ನ ಆಸಕ್ತಿ ಹಾಗೂ ಕೌಶಲ್ಯದ ಅನುಭೂತಿ ಸಂಕಲನದ ಸೇವೆ ಸಿಕ್ಕಿತ್ತು.
೨. ಪ್ರತಿಯೊಂದು ವಿಷಯದ
ಮೂಲಕ್ಕೆ ಹೋಗುವುದೆಂದರೆ ಕಲಿಯುವುದು !
‘ನಾನು ಪ.ಪೂ. ಡಾಕ್ಟರರಿಗೆ ನಿರಂತರ ಪ್ರಾರ್ಥನೆ ಮಾಡುತ್ತಿದ್ದೆ, ‘ನನಗೆ ಕಲಿಯುವುದು ಹೇಗೆಂದು ತಿಳಿಯುವುದಿಲ್ಲ’, ‘ಹೇಗೆ ಕಲಿಯುವುದೆಂದು ನೀವೇ ಕಲಿಸಿರಿ.’ ಆಗ ಅವರು ನನಗೆ ‘ಗ್ರಂಥಗಳಿಗೆ ಬೇಕಾಗುವ ಕೋಷ್ಟಕಗಳನ್ನು ‘ಟೇಬಲ್ ಎಡಿಟರ್’ ಈ ಗಣಕಯಂತ್ರ ಪದ್ಧತಿಯಲ್ಲಿ ಹೇಗೆ ಮಾಡುವುದು ?’, ಎಂಬುದನ್ನು ಕಲಿತುಕೊಳ್ಳಲು ಹೇಳಿದ್ದರು. ಅದರಲ್ಲಿ ನನ್ನಿಂದ ಸಂರಚನೆಯಲ್ಲಿ ತಪ್ಪುಗಳಾಗುತ್ತವೆ, ಎಂಬುದು ಅರಿವಾದಾಗ ಅವರು ಸ್ವತಃ ನನಗೆ ಸಂರಚನೆ ಕಲಿಸಿ ‘‘ನಿಮಗೆ ‘ಹೇಗೆ ಕಲಿಯುವುದೆಂದು ತಿಳಿಯುತ್ತಿರಲಿಲ್ಲವಲ್ಲ ? ಅದಕ್ಕಾಗಿ ಈಗ ಇವರನ್ನೇ ಕರೆದು ಕಲಿಸೋಣ, ಎಂದೆನಿಸಿತು’, ಎಂದು ಹೇಳಿದರು. ಅದನ್ನು ಕೇಳಿ ನಾನು ಆಶ್ಚರ್ಯಚಕಿತನಾದೆ. ಅನಂತರ ತಕ್ಷಣ ಒಂದು ಕೋಷ್ಟಕ ‘ಎಕ್ಸೆಲ್’ ಈ ಗಣಕಯಂತ್ರದಲ್ಲಿತ್ತು. ಇದರಲ್ಲಿ ಕೆಳಗೆ ಅಂಕಣದಲ್ಲಿ ಮರಾಠಿ ಶಬ್ದಗಳು ಕಾಣಿಸುತ್ತಿದ್ದರೂ, ಮೇಲಿನ ಸಾಲಿನಲ್ಲಿ ಆಂಗ್ಲ ಅಕ್ಷರಗಳು ಮೂಡುತ್ತಿದ್ದವು. ಅದನ್ನು ನೋಡಿ ಪ.ಪೂ. ಡಾಕ್ಟರರು ನನಗೆ, ‘‘ಮೇಲೆ ಆಂಗ್ಲ ಅಕ್ಷರಗಳು ಏಕೆ ಮೂಡುತ್ತವೆ ? ಅಲ್ಲಿಯೂ ಮರಾಠಿಯೇ ಕಾಣಿಸಬೇಕಲ್ಲ ?’’ ಎಂದು ಕೇಳಿದರು. ಅದಕ್ಕೆ  ನಾನು, ‘‘ಹೌದು; ಅದು ಹಾಗೆಯೇ ಇದೆ’’, ಎಂದೆನು. ಆಗ ಅವರು, ‘‘ಗಣಕಯಂತ್ರ ದುರಸ್ತ್ತಿ ಮಾಡುವ ಸಾಧಕರಿಗೆ ವಿಚಾರಿಸಿ ಬಂದು ನನಗೆ ಹೇಳಿ’’, ಎಂದರು. ಅನಂತರ ನಾನು ಗಣಕಯಂತ್ರ ದುರಸ್ತಿ ಮಾಡುವ ಸಾಧಕರಿಗೆ ಕೇಳಿದಾಗ ಅವರು ನಾನು ಹೇಳಿದ ಉತ್ತರವನ್ನೇ ಹೇಳಿದರು. ಆಗ ಆ ಸಾಧಕರನ್ನು ಕರೆದು ಇನ್ನೂ ಮೂಲಕ್ಕೆ ಹೋಗಿ ಸಂಬಂಧಪಟ್ಟ ತಂತ್ರಾಂಶದ ತಜ್ಞರನ್ನು ಸಂಪರ್ಕಿಸಿ ವಿಚಾರಿಸಲು ಹೇಳಿದರು. ಆ ಸಾಧಕರು ಹೋದ ನಂತರ ಅವರು ನನಗೆ, ‘‘ಈಗ ತಿಳಿಯಿತೇ, ‘ಕಲಿಯುವುದೆಂದರೇನು ?’ ಎಂಬುದು, ಪ್ರತಿಯೊಂದು ವಿಷಯದ ಮೂಲಕ್ಕೆ ಹೋಗಿರಿ’’ ಎಂದು ಹೇಳಿದರು.
೩. ದೇವರು ನೀಡಿದ ಬುದ್ಧಿಯ ಬಗ್ಗೆ ವ್ಯಥೆ ಪಡದೇ
ಅದನ್ನು ಸಾಧನೆಗಾಗಿ ಉಪಯೋಗಿಸಬೇಕು !
‘ಒಂದು ದಿನ ‘ಬುದ್ಧಿಯ ಅಡಚಣೆಯಿಂದಾಗಿ ನಾನು ಸಾಧನೆಯಲ್ಲಿ ಮುಂದೆ ಹೋಗುವುದಿಲ್ಲ ’, ಎಂಬ ವಿಷಯದಿಂದ ನನಗೆ ಬೇಸರ ಬಂತು. ಆಗ ‘ದೇವರು ನನಗೆ ಬುದ್ಧಿಯನ್ನು ಏಕೆ ಕೊಟ್ಟರು ?’ ಎಂದು ಮನಸ್ಸಿನಲ್ಲಿ ವಿಚಾರ ಬಂದಿತು. ದೇವತಾನುಗ್ರಹದಿಂದ ಅದೇ ದಿನ ನಾನು ಏನೋ ಸೇವೆ ನಿಮಿತ್ತ ಪ.ಪೂ. ಡಾಕ್ಟರರಲ್ಲಿಗೆ ಹೋಗಬೇಕಾಯಿತು. ಅಲ್ಲಿ ನಾನು ಅವರಿಗೆ ಏನೂ ಹೇಳದಿದ್ದರೂ, ಅವರು ಅನಿರೀಕ್ಷಿತವಾಗಿ, ‘‘ನಿಮಗೆ ಆದಿ ಶಂಕರಾಚಾರ್ಯರ ಬಗ್ಗೆ ತಿಳಿದಿದೆಯೇ ?’’, ಎಂದು ಕೇಳಿದರು. ನಾನು ತಲೆ ಅಲ್ಲಾಡಿಸಿದೆ. ಅನಂತರ ಅವರು, ‘‘ಆದಿ ಶಂಕರಾಚಾರ್ಯರು ಎಲ್ಲರಿಗಿಂತ ಹೆಚ್ಚು ಬುದ್ಧಿವಂತರು ಹಾಗೂ ವಿದ್ವಾಂಸರಾಗಿದ್ದರು, ಆದರೂ ಅವರು ಅಧ್ಯಾತ್ಮದಲ್ಲಿ ಪರಮೋಚ್ಚ ಸ್ಥಾನವನ್ನು ಪಡೆದರು. ಅವರು ಸಂಪೂರ್ಣ ಭಾರತದಲ್ಲಿ ವೇದವನ್ನು ಪ್ರಸಾರ-ಪ್ರಚಾರ ಮಾಡಿ ಧರ್ಮರಕ್ಷಣೆಯನ್ನೂ ಮಾಡಿದರು. ಇದೆಲ್ಲವನ್ನೂ ಅವರು ಬುದ್ಧಿಯನ್ನು ಸಾಧನೆಗಾಗಿ ಉಪಯೋಗಿಸಿ ಮಾಡಿದರು’’, ಎಂದರು. ಆಗ ನನ್ನಲ್ಲಿನ ಬುದ್ಧಿಯ ವಿಷಯದಲ್ಲಿನ ವ್ಯಥೆ ದೂರವಾಯಿತು. ಮಾತು ಮುಗಿದ ನಂತರ ಅವರು ಸ್ವಲ್ಪ ಸಮಯ ಬಿಟ್ಟು, ‘ಆದರೆ ಶಂಕರಾಚಾರ್ಯರಲ್ಲಿ ಬುದ್ಧಿಯ ಜೊತೆಗೆ ಭಾವ ಸಹ ಇತ್ತು’ ಎಂದರು.
೪. ಪ್ರತಿಯೊಂದು ಸೇವೆಯನ್ನು ಪರಿಪೂರ್ಣಗೊಳಿಸುವುದರಿಂದಲೇ ದೇವರ
ಆಶೀರ್ವಾದ ಲಭಿಸಿ ಅಧ್ಯಾತ್ಮದಲ್ಲಿ ಪ್ರಗತಿಯಾಗುತ್ತದೆ !
ಧರ್ಮಸತ್ಸಂಗಗಳ ನಿರ್ಮಿತಿಯ ಸೇವೆ ನಡೆಯುತ್ತಿತ್ತು. ಆ ಸೇವೆಯಲ್ಲಿ ನಮ್ಮೆಲ್ಲ ಸಾಧಕರಿಂದ ಸಣ್ಣ-ಸಣ್ಣ ತಪ್ಪುಗಳಾಗುತ್ತಿದ್ದವು. ಪ.ಪೂ. ಡಾಕ್ಟರರು ಆ ತಪ್ಪುಗಳನ್ನು ಪದೇ ಪದೇ ಅರಿವು ಮಾಡಿಕೊಡುತ್ತಿದ್ದರು. ಒಂದು ದೂರಚಿತ್ರವಾಹಿನಿಯೊಂದಿಗೆ ಒಪ್ಪಂದವಾಗಿದ್ದ ಕಾರಣ ಪ್ರತಿದಿನ ೩೦ ನಿಮಿಷದ ಎರಡು ಸತ್ಸಂಗಗಳನ್ನು ಆ ವಾಹಿನಿಗೆ ಕಳುಹಿಸಬೇಕಾಗುತ್ತಿತ್ತು. ‘ಒಂದು ಸತ್ಸಂಗದಲ್ಲಿ ಅನೇಕ ತಪ್ಪುಗಳಿದ್ದ ಕಾರಣ ಆ ಅವಧಿಯಲ್ಲಿ ಸತ್ಸಂಗವನ್ನು ಪೂರ್ಣಗೊಳಿಸಿ ಕಳುಹಿಸಲು ಸಾಧ್ಯವಾಗಲಿಕ್ಕಿಲ್ಲ’, ಎಂದು ಎಲ್ಲ ಸಾಧಕರು ಹೇಳುತ್ತಿದ್ದರು.  ಅದಕ್ಕನುಸಾರ ಜವಾಬ್ದಾರ ಸಾಧಕರಿಗೆ ಹೇಳಿದಾಗ ಅವರು ಪ.ಪೂ. ಡಾಕ್ಟರರಿಂದ ಮಾರ್ಗದರ್ಶನ ತೆಗೆದುಕೊಳ್ಳಲು ಹೇಳಿದರು. ಆಗ ನನ್ನ ಮನಸ್ಸಿನಲ್ಲಿ, ‘ಸಣ್ಣ-ಸಣ್ಣ ತಪ್ಪುಗಳು ತಾಂತ್ರಿಕ ಸ್ವರೂಪದ್ದಾಗಿವೆ. ಆದ್ದರಿಂದ ಸಾಮಾನ್ಯ ವೀಕ್ಷಕರಿಗೆ ಅರಿವಾಗಲಿಕ್ಕೂ ಸಾಧ್ಯವಿಲ್ಲ; ಆದರೆ ಧರ್ಮಸತ್ಸಂಗಗಳ ಪ್ರಸಾರ ಸಮಯಕ್ಕನುಸಾರವಾದರೆ ಜನರಿಗೆ ಸತ್ಸಂಗದ ಲಾಭವಾಗಬಹುದು ಹಾಗೂ ವಾಹಿನಿಯೊಂದಿಗೆ ಸಂಸ್ಥೆಯ ಒಪ್ಪಂದವಿರುವುದರಿಂದ ಸಂಸ್ಥೆಯ ಹೆಸರೂ ಕೆಡುವುದಿಲ್ಲ’, ಎಂಬ ವಿಚಾರ ಬಂದಿತು. ಈ ವಿಷಯವನ್ನು ಪ.ಪೂ. ಡಾಕ್ಟರರಿಗೆ ಕೇಳಿದಾಗ ಅವರು ಹೀಗೆಂದರು, ‘‘ಈಶ್ವರ ಎಲ್ಲವನ್ನೂ ಪರಿಪೂರ್ಣ ಮಾಡುತ್ತಾನೆ. ನಾವು ಅವನಿಗಾಗಿ ಸೇವೆ ಮಾಡುತ್ತೇವೆ. ಪರಿಪೂರ್ಣಗೊಳಿಸಿದರೆ ಮಾತ್ರ ನಮಗೆ ಈಶ್ವರನ ಆಶೀರ್ವಾದ ಲಭಿಸಿ ನಮ್ಮ ಆಧ್ಯಾತ್ಮಿಕ ಪ್ರಗತಿಯಾಗುವುದು. ಆದ್ದರಿಂದ ಎಲ್ಲ ಸುಧಾರಣೆಗಳನ್ನು ಮಾಡಿಯೇ ಸತ್ಸಂಗವನ್ನು ಕಳುಹಿಸ ಬೇಕು’’, ಎಂದರು. ವಾಸ್ತವದಲ್ಲಿ, ನಮ್ಮ ತಪ್ಪಿನಿಂದಾಗಿ ಸತ್ಸಂಗ ಸಮಯಕ್ಕನುಸಾರ ತಲುಪದಿದ್ದರೆ ಸಂಸ್ಥೆಯ ಅಂದರೆ ಪ.ಪೂ. ಡಾಕ್ಟರರ ಅವಮಾನವಾಗುವುದಿತ್ತು, ಆದರೂ ಅವರು ಅದನ್ನು ಲೆಕ್ಕಿಸದೆ ನಾವು ಪರಿಪೂರ್ಣವಾಗಬೇಕೆಂಬುದಕ್ಕೇ ಒತ್ತು ಕೊಟ್ಟರು. ಆಶ್ಚರ್ಯದ ವಿಷಯವೆಂದರೆ, ಆ ಸತ್ಸಂಗವು ಆ ದೂರಚಿತ್ರವಾಹಿನಿಗೆ ಸಮಯಕ್ಕೆ ಸರಿಯಾಗಿ ತಲುಪಿತು.
೫. ಸೇವೆ ಮಾಡುವಾಗ ‘ಪರಿಚಾರಿಕೆ ಆಗದೆ
ತಾಯಿ’ಯಾದರೆ ಪರಿಪೂರ್ಣಸೇವೆ ಮಾಡಬಹುದು !
ಸೇವೆ ಮಾಡುವಾಗ ನನ್ನಿಂದ ಅನೇಕ ತಪ್ಪುಗಳಾಗುತ್ತಿದ್ದವು. ತಪ್ಪಾಗಬಾರದೆಂದು ನಾನು ಬುದ್ಧಿಯ ಸ್ತರದಲ್ಲಿ ಎಷ್ಟು ಸಾಧ್ಯವಿದೆಯೋ ಅದನ್ನೆಲ್ಲ ಮಾಡುತ್ತಿದ್ದೆ, ಆದರೂ ತಪ್ಪುಗಳ ಸಂಖ್ಯೆ ಕಡಿಮೆಯಾಗುತ್ತಿರಲಿಲ್ಲ. ಒಂದು ದಿನ ಬುದ್ಧಿನಿಶ್ಚಯ ಮಾಡಿ ನಾನು ಸುಧಾರಣೆಗಳನ್ನು ಪರಿಶೀಲನಾ ಪಟ್ಟಿ ತಯಾರಿಸಿ ಪೂರ್ಣಗೊಳಿಸಿದೆನು. ಆಗ ನನಗನಿಸಿತು, ‘ಇಂದು ಸುಧಾರಣೆಗೆ ಬರಲಿಕ್ಕಿಲ್ಲ; ಏಕೆಂದರೆ ನಾನು ಸಂಪೂರ್ಣ ಸೇವೆಯ ಪರಿಶೀಲನಾ ಪಟ್ಟಿ ಮಾಡಿ ಪುನಃ ಮಾಡಿದ್ದೇನೆ.’ ಆದರೂ ಅದರಲ್ಲಿ ತಪ್ಪು ಉಳಿಯಿತು. ಅನಂತರ ಮಾತ್ರ  ನನ್ನ ಮನಸ್ಸು ಹದಗೆಟ್ಟಿತು. ಅನಂತರ ಒಂದು ದಿನ ನಾನು ಹತಾಶನಾಗಿ ಪ.ಪೂ. ಡಾಕ್ಟರರಿಗೆ ಕೇಳಿದೆ, ‘‘ನಾನು ಏನು ಮಾಡಿದರೆ ನನ್ನ ಸೇವೆ ಪರಿಪೂರ್ಣವಾಗಬಹುದು ?’’ ಆಗ ಅವರು ಸ್ವಲ್ಪ ನಿಂತು ನನಗೆ ಹೀಗೆಂದರು, ‘ಒಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಅವನ ಸೇವೆಗಾಗಿ ಅಲ್ಲಿ ನರ್ಸ್ ಇರುತ್ತಾಳೆ. ಅವಳು ಅವನಿಗೆ ಸಮಯಕ್ಕೆ ಸರಿಯಾಗಿ ಔಷಧಿ ಕೊಡುತ್ತಾಳೆ. ಅವನಿಗೆ ಏನು ಬೇಕು-ಬೇಡ ಎಂಬುದನ್ನು ನೋಡಿಕೊಂಡು ಅವನ ಸಂಪೂರ್ಣ ಕಾಳಜಿ ತೆಗೆದುಕೊಳ್ಳುತ್ತಾಳೆ. ಅವನಿಗೆ ಏನೂ ಕಡಿಮೆಯಾಗದಂತೆ ನೋಡಿಕೊಳ್ಳುತ್ತಾಳೆ. ಅಲ್ಲಿಯೇ ಆ ಮಗುವಿನ ತಾಯಿ ಕೂಡ ಇದ್ದಾಳೆ. ಅವಳು ಸಹ ಆ ಮಗುವಿಗೆ ಏನು ಬೇಕು-ಬೇಡವೆಂಬುದರ ಕಾಳಜಿ ತೆಗೆದುಕೊಳ್ಳುತ್ತಾಳೆ. ಈಗ ಆ ನರ್ಸ್ ಮಾಡುತ್ತಿದ್ದ ಆ ಮಗುವಿನ ಸೇವೆ ಮತ್ತು ಮಗುವಿನ ತಾಯಿ ಮಾಡುತ್ತಿದ್ದ ಮಗುವಿನ ಸೇವೆಯಲ್ಲಿ ಏನು ವ್ಯತ್ಯಾಸವಿದೆ ?, ಎಂಬುದನ್ನು ನೀವು ತಿಳಿದುಕೊಂಡರೆ ನಿಮ್ಮ ಸೇವೆಯಲ್ಲಿ ಏನು ಕೊರತೆಯಿದೆ, ಎಂದು ನಿಮಗೆ ತಿಳಿಯಬಹುದು.’
೬. ಮಾಡುತ್ತಿರುವ ಸೇವೆಯಲ್ಲಿ ನಿಪುಣರಾಗಿ !
‘ಒಂದು ದಿನ ಒಂದು ಸಂಕಲನ ಮಾಡಿದ ದೃಕ್‌ಶ್ರವಣದ ಪ್ರಕಲ್ಪವನ್ನು ನೋಡಿ, ‘‘ಜಲತಾರೆ, ನಮ್ಮಲ್ಲಿ ಆಶ್ರಮದ ನಿರ್ಮಾಣ ಕಾರ್ಯಕ್ಕಾಗಿ ಗುತ್ತಿಗೆದಾರರ ಜೊತೆಗೆ ಕೆಲವು ಕಾರ್ಮಿಕರು ಬರುತ್ತಿದ್ದರು. ಎರಡು-ಮೂರು ಮಾಳಿಗೆ ಕಟ್ಟಿದ ನಂತರ ಈಗ ಆ ಕಾರ್ಮಿಕರು ಗುತ್ತಿಗೆದಾರರಾದರು’’,ಎಂದರು. ನಂತರ ಅವರು ಸ್ವಲ್ಪ ನಿಂತು ನನಗೆ, ‘‘ನಾನು ಏನು ಹೇಳುತ್ತೇನೆ ಎಂಬುದು ನಿಮಗೆ ತಿಳಿಯುತ್ತದೆಯೇ ?’’, ಎಂದು ಕೇಳಿದರು. ನನಗೆ ಅವರು ಹೇಳಿದ ವಿಷಯ ಸರಿಯಾಗಿ ಅರ್ಥವಾಗಲಿಲ್ಲ. ಆದ್ದರಿಂದ ನಾನು ಇಲ್ಲ ಎಂದು ತಲೆಯಲ್ಲಾಡಿಸಿದೆ. ಆಗ ಅವರು, ‘‘ನೀವು ಮಾಡುತ್ತಿರುವ ಸೇವೆಯನ್ನು ಈಗಲೂ ಪರಿಶೀಲಿಸ ಬೇಕಾಗುತ್ತದೆ. ಆ ಕಾರ್ಮಿಕರು ಕಲಿತು ಮುಂದೆ ಹೋದರು. ನೀವು ಯಾವಾಗ  ಹೋಗುವಿರಿ ?’’, ಎಂದು ಕೇಳಿದರು.
೭. ಪರಿಪೂರ್ಣವಾಗಿರುವ ಈಶ್ವರನನ್ನು
ಅನುಭವಿಸಲಿಕ್ಕಿದ್ದರೆ, ನಾವು ಪರಿಪೂರ್ಣರಾಗಬೇಕು !
ಒಮ್ಮೆ ಸೇವೆಯ ತಪ್ಪುಗಳಿಂದಾಗಿ ನಾನು ಧೈರ್ಯಗುಂದಿದೆ ಹಾಗೂ ಅವರಲ್ಲಿಗೆ ಹೋಗಿ ಹೇಳಿದೆ, ‘ನನಗೆ ಕೆಲವು ಸೇವೆ ಮಾಡಲು ಆಗುವುದಿಲ್ಲ. ನಿಮ್ಮ ಅಪೇಕ್ಷೆಯಂತೆ ನಾನು ಏನೂ ಮಾಡಲು ಆಗುವುದಿಲ್ಲ.’ ಆಗ ಅವರು, ‘ಈಶ್ವರ ಪರಿಪೂರ್ಣವಾಗಿದ್ದಾನಲ್ಲ ? ಅವನನ್ನು ಅನುಭವಿಸಲಿಕ್ಕಿದ್ದರೆ, ನಾವು ಸಹ ಪರಿಪೂರ್ಣರಾಗಬೇಕು’, ಎಂದರು.
೮. ಪರಿಪೂರ್ಣತೆಗಾಗಿ  ಆಗ್ರಹಿಸಿ ಸಾಧಕರಿಂದ
ಪ್ರಯತ್ನ ಮಾಡಿಸಿಕೊಳ್ಳುವ ಗುರುಮಾವುಲಿ !
‘ನಮಸ್ಕಾರ ಹೇಗೆ ಮಾಡಬೇಕು ?’, ಎಂಬ ವಿಷಯಕ್ಕೆ ಸಂಬಂಧಿಸಿದ ಹಿಂದಿ ಭಾಷೆಯ ಧರ್ಮಸತ್ಸಂಗದ ಒಂದು ಮಾಲಿಕೆ ಸಿದ್ಧಪಡಿಸುವ ಪ್ರಕ್ರಿಯೆ ನಡೆದಿತ್ತು. ಈ ವಿಷಯದಲ್ಲಿ ಪ.ಪೂ. ಡಾಕ್ಟರರಿಗೆ ಹೇಳಿದಾಗ ಅವರು ನನಗೆ, ‘ಸಾಷ್ಟಾಂಗ ನಮಸ್ಕಾರ ಹೇಗೆ ಮಾಡುತ್ತಾರೆ ?’, ಎಂದು ಕೇಳಿದರು. ನಾನು ಅವರಿಗೆ ನನಗೆ ತಿಳಿದಿರುವ ಪದ್ಧತಿಯನ್ನು ಹೇಳಿದೆ. ಆಗ ಅವರು, ‘ಯೋಗ್ಯ ಪದ್ಧತಿಯನ್ನು ಖಚಿತಪಡಿಸಿಕೊಳ್ಳಿ’, ಎಂದರು. ಅದಕ್ಕನುಸಾರ ನಾನು ಪುಣೆಯ ವೇದಮೂರ್ತಿಯೊಬ್ಬರನ್ನು ಸಂಪರ್ಕಿಸಿ ಸಾಷ್ಟಾಂಗ ನಮಸ್ಕಾರ ಮಾಡುವ ಪದ್ಧತಿಯನ್ನು ಕೇಳಿದೆ. ಅವರು ಅದರ ವಿಷಯದ ಒಂದು ಶ್ಲೋಕ ಹೇಳಿದರು. ಅದರಲ್ಲಿ ‘ಸಾಷ್ಟಾಂಗ ನಮಸ್ಕಾರ ಹೇಗೆ ಮಾಡಬೇಕು ?’ ಎಂಬುದರ ವರ್ಣನೆಯಿದೆ. ಅದಕ್ಕನುಸಾರ ನಾವು ಚಿತ್ರೀಕರಣ ಮಾಡಿದೆವು. ಅದನ್ನು ನೋಡಿ ಶ್ಲೋಕದಲ್ಲಿ ನಮ್ಮಿಂದಾದ ತಪ್ಪನ್ನು ಪ.ಪೂ. ಡಾಕ್ಟರರು ನಮಗೆ ತೋರಿಸಿದರು. ಆಗ ನನ್ನ ಮನಸ್ಸಿನಲ್ಲಿ ವಿಚಾರ ಬಂತು, ‘ಇತ್ತೀಚೆಗೆ ಯಾರಿಗೂ ಸಂಸ್ಕೃತ ಬರುವುದಿಲ್ಲ. ಆ ಶ್ಲೋಕದಲ್ಲಿನ ಇಂತಹ ಸೂಕ್ಷ್ಮ ತಪ್ಪುಗಳು ಯಾರಿಗೂ ಅರಿವಾಗಲಿಕ್ಕಿಲ್ಲ; ಆದರೆ ‘ಪ.ಪೂ. ಡಾಕ್ಟರರರು ಅದನ್ನು ತೋರಿಸಿದರು, ಆದ್ದರಿಂದ ಅದರಲ್ಲಿ ಏನಾದರೂ ಇರಬಹುದು’, ಎಂಬ ವಿಚಾರದಲ್ಲಿ ನನ್ನ ಮನಸ್ಸಿನ ನಕಾರಾತ್ಮಕ ವಿಚಾರ ಹೊರಟುಹೋಯಿತು. ಆ ಧರ್ಮಸತ್ಸಂಗದ ಮಾಲಿಕೆಯಲ್ಲಿ ಇನ್ನೂ ಕೆಲವು ಶ್ಲೋಕಗಳಿವೆ. ಅದರಲ್ಲಿನ ಒಂದು ತಪ್ಪು ಮಾತ್ರ ನಮ್ಮ ಕಣ್ತಪ್ಪಿ ಹೋಯಿತು. ಕೆಲವು ತಿಂಗಳ ನಂತರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರ ಶಿಷ್ಯರು ಮತ್ತು ಉತ್ತರಾಧಿಕಾರಿ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ನಮಸ್ಕಾರಕ್ಕೆ ಸಂಬಂಧಿಸಿದ ಆ ಸತ್ಸಂಗದ ಮಾಲಿಕೆಯನ್ನು ನೋಡಿದರು. ಅದರಲ್ಲಿ  ಹೇಳಿದಂತೆ ಅವರು ತಮ್ಮ ಶಿಷ್ಯರನ್ನು ಕರೆದು ಹಾಗೆ ಕೃತಿಯನ್ನೂ ಮಾಡಿಸಿಕೊಂಡರು. ಆಗ ಅವರು ‘ಸನಾತನದ ಸತ್ಸಂಗದಲ್ಲಿ ಸಾಷ್ಟಾಂಗ ನಮಸ್ಕಾರದ ಯೋಗ್ಯ ಪದ್ಧತಿಯನ್ನು ಹೇಳಲಾಗಿದೆ, ಅದೇ ರೀತಿಯಲ್ಲಿ ಎಲ್ಲರೂ ನಮಸ್ಕಾರ ಮಾಡಬೇಕು’, ಎಂದು ಹೇಳಿದರು. ಅನಂತರ ಸ್ವಲ್ಪ ದಿನಗಳಲ್ಲಿ ಅವರು ಪ್ರಸಾರದ ಓರ್ವ ಸಾಧಕಿಯನ್ನು ಕರೆದು ಈ ವಿಷಯವನ್ನು ಹೇಳಿದರು ಹಾಗೂ ಅದರೊಂದಿಗೆ ಇನ್ನೊಂದು ಸಂಸ್ಕೃತ ಶ್ಲೋಕದಲ್ಲಿನ ಸುಧಾರಣೆಯನ್ನು ಹೇಳಿದರು. ಆಗ ಅವರು ಹೀಗೆಂದರು, ‘ತಪ್ಪುಗಳನ್ನು ತೋರಿಸುತ್ತೇನೆಂದು ತಪ್ಪು ತಿಳಿದುಕೊಳ್ಳಬೇಡಿ. ಸತ್ಸಂಗ ಬಹಳ ಚೆನ್ನಾಗಿದೆ; ಆದರೆ ನನಗೆ ‘ಸನಾತನದ ಸತ್ಸಂಗದಲ್ಲಿ ಒಂದೂ ತಪ್ಪು ಇರಬಾರದೆಂದು ಅನಿಸುತ್ತದೆ’, ಅದಕ್ಕಾಗಿ ಆ ತಪ್ಪನ್ನು ಹೇಳಿದೆ, ಎಂದು ಹೇಳಿದರು.’ ಆ ಸಾಧಕಿ ಅದನ್ನು ನನಗೆ
ಹೇಳಿದಾಗ ಪ.ಪೂ. ಡಾಕ್ಟರರು ಸಂಸ್ಕೃತದ ಅತೀ ಸೂಕ್ಷ್ಮದ ತಪ್ಪುಗಳನ್ನೂ ಏಕೆ ಸುಧಾರಣೆ ಮಾಡಲು ಹೇಳುತ್ತಾರೆ, ಎಂಬುದು ಅರಿವಾಯಿತು. ನಂತರ ಮುಂದಿನ ಸಂಕಲನದ ಸಮಯದಲ್ಲಿ ಶ್ಲೋಕದಲ್ಲಿನ ಆ ಸುಧಾರಣೆಯನ್ನು ಮಾಡಿದರು. ಈ ಪ್ರಸಂಗದಿಂದ ಪ.ಪೂ. ಡಾಕ್ಟರರು ಪರಿಪೂರ್ಣತೆಗಾಗಿ ಏಕೆ ಆಗ್ರಹಿಸುತ್ತಾರೆಂಬುದು ತಿಳಿಯಿತು.’ - ನ್ಯಾಯವಾದಿ ಯೋಗೇಶ ಜಲತಾರೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರನ್ನು ರೂಪಿಸುವ ಪ.ಪೂ. ಡಾಕ್ಟರರ ಅಮೂಲ್ಯ ಸತ್ಸಂಗದಿಂದ ಆರಿಸಿದ ಕ್ಷಣಮುತ್ತುಗಳು !