ಮಹರ್ಷಿಗಳ ‘ನಾಡಿವಾಚನ ಕ್ರಮಾಂಕ ೮೨’ ರಲ್ಲಿ ೨೦೧೬ ರಲ್ಲಿ ಜರುಗಲಿರುವ ಗುರುಪೂರ್ಣಿಮೆಯ ಉತ್ಸವದ ಕುರಿತು ಭಾಷ್ಯ ಹೇಳುವುದು ಹಾಗೆಯೇ ಆ ನಾಡಿವಾಚನದಲ್ಲಿ ಗುರುಗಳ ಮಹಾತ್ಮೆಯನ್ನು ವರ್ಣಿಸುವುದು

ಪೂ. ಓಂ ಉಲಗನಾಥನ್
ಮಹರ್ಷಿಗಳು ಹೇಳುತ್ತಾರೆ-
೧. ಕುಂಭಮೇಳದ ಬಳಿಕ ಬರಲಿರುವ ಗುರುಪೂರ್ಣಿಮೆಗೆ ಅಧಿಕ ಮಹತ್ವವಿರುವುದು
‘ಕುಂಭಮೇಳವಾದ ನಂತರ ಬರಲಿರುವ  ಗುರುಪೂರ್ಣಿಮೆಗೆ ಹೆಚ್ಚಿನ ಮಹತ್ವವಿರುತ್ತದೆ. ಕಳೆದ ೧೨ ವರ್ಷಗಳ ಫಲವು ಇದೊಂದೇ ಗುರುಪೂರ್ಣಿಮೆಯಲ್ಲಿ ದೊರೆಯುತ್ತದೆ. ಈ ದಿನವು ಯಾರಿಗೆ ‘ಗುರು’ ಎಂದು ಸಂಬೋಧಿಸಲಾಗುತ್ತದೆಯೋ, ಅವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಾಗಿರುತ್ತದೆ. ಈಗ ಬರಲಿರುವ ಗುರುಪೂರ್ಣಿಮೆಯು ಉಜ್ಜೈನಿಯ ಕುಂಭಮೇಳದ ಬಳಿಕ ಬರಲಿರುವುದರಿಂದ ಇದಕ್ಕೆ ಹೆಚ್ಚು ಮಹತ್ವವಿದೆ.
೨. ಗುರುಪೂರ್ಣಿಮೆಯ ಕಥೆಯನ್ನು ಹೇಳುವಾಗ ಮಹರ್ಷಿಗಳು ಹೀಗೆನ್ನುತ್ತಾರೆ -
‘ವ್ಯಾಸ ಋಷಿಗಳ ರೂಪದಲ್ಲಿ ನಾನೇ, ಅಂದರೆ ಸ್ವಯಂ ನಾರಾಯಣನೇ ೮೮ ಸಾವಿರ ಋಷಿಮುನಿಗಳಿಗೆ ಗುರುವಾಗಿದ್ದೇನೆ’ ಎಂದು ಸ್ವಯಂ ಶ್ರೀವಿಷ್ಣುವೇ ಉದ್ಗರಿಸುವುದು
‘ಒಮ್ಮೆ ೮೮ ಸಾವಿರ ಋಷಿಮುನಿಗಳು ತ್ರಿಮೂರ್ತಿಗಳೆಡೆಗೆ ಹೋಗಿ ‘ನಮ್ಮ ಗುರುಗಳು ಯಾರು ?’ ಎಂದು ಕೇಳುತ್ತಾರೆ. ಆ ಸಮಯದಲ್ಲಿ ಮೂವರು ದೇವತೆಯರು ತ್ರಿಮೂರ್ತಿಗಳೆಡೆಗೆ ನೋಡುತ್ತಾರೆ. ಬಳಿಕ ಎಲ್ಲರೂ ಶ್ರೀವಿಷ್ಣುವಿನ ಕಡೆಗೆ ನೋಡತೊಡಗುತ್ತಾರೆ. ಆಗ ಶ್ರೀವಿಷ್ಣು ‘ನಿಮ್ಮೆಲ್ಲರ ಗುರು ನಾನೇ ಆಗಿದ್ದೇನೆ. ನಾನೇ ಮುಂದೆ ಶ್ರೀ ವ್ಯಾಸಮುನಿಗಳ ರೂಪದಲ್ಲಿ ಜನಿಸುವವನಿದ್ದೇನೆ. ವೇದಗಳನ್ನು ರಚಿಸುವವನಿದ್ದೇನೆ. ಈ ರೂಪವನ್ನು ಎಲ್ಲರೂ ‘ವೇದನಾರಾಯಣ’ ಎಂದೂ ಸಂಬೋಧಿಸುವರು. ವ್ಯಾಸ ಮಹರ್ಷಿಗಳೆಂದರೆ ಶ್ರೀವಿಷ್ಣು, ಶ್ರೀವಿಷ್ಣುವಿನ ಹೃದಯದಲ್ಲಿ ಶಿವ, ಶಿವನ ಹೃದಯದಲ್ಲಿ ಶ್ರೀವಿಷ್ಣು ಹಾಗೂ ಇವರಿಬ್ಬರೂ ಬ್ರಹ್ಮನಲ್ಲಿದ್ದಾರೆ. ಒಟ್ಟು ೧೨ ಪೂರ್ಣಿಮೆಗಳಿವೆ; ಆದರೆ ಬರಲಿರುವ ಪೂರ್ಣಿಮೆಯನ್ನು ಮಾತ್ರ ‘ವ್ಯಾಸಪೂರ್ಣಿಮೆ’ ಎನ್ನುತ್ತಾರೆ.
೩. ‘ಇವರು (ಪ.ಪೂ. ಡಾಕ್ಟರರು) ವೇದಗಳ ರಕ್ಷಣೆಗಾಗಿ ಹಾಗೂ ಸನಾತನ ಧರ್ಮದ ಪುನರುತ್ಥಾನಕ್ಕಾಗಿ
ಸದಾ ಚಡಪಡಿಸುವ ಗುರುವಾಗಿರುವುದರಿಂದ ಕೇವಲ ಇವರಿಗಾಗಿಯೇ 
ನಾವು ಈ ನಾಡಿವಾಚನವನ್ನು ಮಾಡುತ್ತಿದ್ದೇವೆ’ ಎಂದು ವಸಿಷ್ಠರು ಹೇಳುವುದು
ಈ ವಾಚನವು ಕೇವಲ ಪರಮ ಗುರುಗಳಿಗಾಗಿಯೇ (ಪ.ಪೂ. ಡಾಕ್ಟರರಿಗಾಗಿಯೇ) ಇದೆ.
ಓರ್ವ ಋಷಿ : ಪೃಥ್ವಿಯ ಮೇಲೆ ಅನೇಕ ಸಂತ- ಮಹಾತ್ಮರು ಇರುವಾಗಲೂ ಈ ಗುರುಗಳಿಗಾಗಿಯೇ ಈ ವಾಚನವೇಕೆ ?
ವಸಿಷ್ಠರು : ಇಂದಿನ ಸ್ಥಿತಿಯಲ್ಲಿ ಪೃಥ್ವಿಯ ಮೇಲೆ ವೇದಗಳು ನಾಶವಾಗುತ್ತಿವೆ. ಅವುಗಳ ರಕ್ಷಣೆಗಾಗಿ ಇವರು (ಪ.ಪೂ. ಡಾಕ್ಟರರು) ಕಾರ್ಯನಿರತರಾಗಿದ್ದಾರೆ. ಈ ರೀತಿ ಇವರು ಧರ್ಮದ ರಕ್ಷಣೆಯನ್ನು ಮಾಡುವ ಗುರುದೇವರಾಗಿದ್ದಾರೆ. ಎಲ್ಲ ದಿಕ್ಕುಗಳಿಂದಲೂ ‘ಸನಾತನ ಧರ್ಮದ ಪುನರುತ್ಥಾನವಾಗಬೇಕು ! ಎಲ್ಲಿ ಸನಾತನ ಸಂಸ್ಥೆ ಇದೆಯೋ, ಅಲ್ಲಿ ಸನಾತನ ಧರ್ಮವಿದೆ !’ ಎನ್ನುವ ಒಂದೇ ಧ್ವನಿ ಕೇಳಿ ಬರುತ್ತಿದೆ.
ಮೂಲದಲ್ಲಿ ಈಶ್ವರನ ಸ್ರೋತದಿಂದ ಸನಾತನದ ನಿರ್ಮಾಣವಾಗಿದೆ. ಬಾಲಾಜಿಯವರ ಮಗನಾಗಿರುವ, ಅಂದರೆ ಪರಮ ಗುರೂಜಿ (ಪ.ಪೂ. ಡಾಕ್ಟರರು) ಪೃಥ್ವಿ ಯಲ್ಲಿ ಧರ್ಮಸ್ಥಾಪನೆಗಾಗಿಯೇ ಜನಿಸಿದ್ದಾರೆ. ಅವರೇ ಇದೆಲ್ಲವನ್ನೂ ಮಾಡುವವರಿದ್ದಾರೆ.
೪. ವ್ಯಾಸರು ವೇದಗಳನ್ನು ವಿಂಗಡಿಸಿದ ದಿನವೇ ಗುರುಪೂರ್ಣಿಮೆ !
ಆಷಾಢ ಪೂರ್ಣಿಮೆಯಂದು ಬರುವ ಗುರುಪೂರ್ಣಿಮೆಗೆ ಹೆಚ್ಚು ಮಹತ್ವವಿದೆ. ಏಕೆಂದರೆ ಆ ದಿನದಂದು ವ್ಯಾಸರು ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದರು.
೫. ‘ಸನಾತನ ಧರ್ಮದ ಸ್ಥಾಪನೆ ಮಾಡುವ ಗುರುಗಳಿಗೆ ವೇದವ್ಯಾಸರ
ಆಶೀರ್ವಾದವಿದೆ’ ಎಂದು ಮಹರ್ಷಿಗಳು ಹೇಳುವುದು
ಐದು ಪಾಂಡವರಲ್ಲಿ ಅರ್ಜುನನನ್ನು ‘ವಿಜಯನ್’ ಎಂದು ಕರೆಯುತ್ತಾರೆ. ಹಾಗೆ ಪರಮ ಗುರುಗಳು ಕೂಡ ‘ವಿಜಯನ್’ ಆಗಿದ್ದಾರೆ. ವ್ಯಾಸರು ವೇದಗಳ ಮಹತ್ವವನ್ನು ಇಡೀ ಜಗತ್ತಿನೆದುರಿಗೆ ತಂದರು. ಅದರಂತೆಯೇ ಕಾರ್ಯವನ್ನು ಈ ಗುರುಗಳೂ ಮಾಡುತ್ತಿದ್ದಾರೆ. ಈ ಗುರುಗಳು ಸನಾತನ ಧರ್ಮದ ಸ್ಥಾಪನೆಯನ್ನು ಮಾಡುವವರಿದ್ದಾರೆ. ಇಂತಹ ಸನಾತನ ಧರ್ಮ ಸ್ಥಾಪನೆ ಮಾಡುವ ಗುರುಗಳಿಗೆ ವ್ಯಾಸರ ಆಶೀರ್ವಾದವಿದೆ. ಸಾಧಕರಿಗೆ ದೊರೆತಿರುವ ಇಂತಹ ಗುರುಗಳು ಸನಾತನ ಧರ್ಮವನ್ನು ಪುರಸ್ಕರಿಸುವವರಾಗಿದ್ದಾರೆ. ‘ಈ ಗುರುಗಳೇ ಸನಾತನದ ಸಾಧಕರಿಗೆ ದೊರೆಯುವರು’ ಎಂದು ನಾವು ಸಪ್ತರ್ಷಿಗಳು ಬರೆದಿದ್ದೇವೆ. ಈ ಗುರುಗಳೂ ಸಾಧಕರಿಗೆ ವರಪ್ರದಾನ ರೂಪದಲ್ಲಿ ದೊರೆತಿದ್ದಾರೆ.
೬. ‘ಶ್ರೀರಾಮ ಹಾಗೂ ಶ್ರೀಕೃಷ್ಣ ಇವರಿಬ್ಬರ ಅಂಶ ಪರಮ ಗುರುಗಳಲ್ಲಿದೆ ಹಾಗೂ ಇಂತಹ ಮಹಾನ್
ಗುರುಗಳ ಕೃಪಾಶೀರ್ವಾದ ಪಡೆಯಲು ಚಡಪಡಿಸಿ ಹಾಗೂ ಪ್ರಯತ್ನಿಸಿ !’,
ಎನ್ನುವ ಸಂದೇಶವನ್ನು ಮಹರ್ಷಿಗಳು ಸಾಧಕರಿಗೆ ನೀಡುವುದು
‘ಶ್ರೀರಾಮ ಹಾಗೂ ಶ್ರೀಕೃಷ್ಣ ಇವರ ಮಹಾನತೆ ಇನ್ನೂ ಕಡಿಮೆಯಾಗಿಲ್ಲ. ಪರಮ ಗುರುಗಳಲ್ಲಿ ಇವರಿಬ್ಬರ ಅಂಶವಿದೆ. ಇವರೇ ಆ ಗುರುಗಳಾಗಿದ್ದಾರೆ’. ಎನ್ನುವುದು ಈಗ ಎಲ್ಲರಿಗೂ ತಿಳಿಯಬೇಕು. ಇಂತಹ ಮಹಾನ್ ಗುರುಗಳ ಕೃಪೆಯನ್ನು ಪಡೆಯಲು ಚಡಪಡಿಸಿರಿ ಹಾಗೂ ಪ್ರಯತ್ನಿಸಿರಿ !
೭. ‘ಪರಮ ಗುರುಗಳ ಮಹಾನತೆಯನ್ನು ಈಗ ನಿಸರ್ಗವೇ ಹೇಳಲಿದೆ ಹಾಗೂ ಎಲ್ಲ ಸಾಧಕರಿಗೆ ಈಗ ವರುಣಾಶೀರ್ವಾದ ದೊರೆಯಲಿದೆ’, ಎಂದು ಮಹರ್ಷಿಗಳು ನುಡಿಯುವುದು
‘ಇವರೇ ಆ ಅವತಾರಿ ಗುರುಗಳಾಗಿದ್ದಾರೆ’, ಎಂದು ನುಡಿಯಲು ನಿಸರ್ಗವೇ ಬೇಕು ! ಇದಕ್ಕಾಗಿ ಈಗ ಸಂಪೂರ್ಣ ಜಗತ್ತಿನಲ್ಲಿ ಮಳೆಯಾಗಲಿದೆ ಹಾಗೂ ಆಕಾಶದಲ್ಲಿ ಮಂಗಳವಾದ್ಯಗಳು ಮೊಳಗಲಿವೆ (ಗುಡುಗು) ಈ ವರುಣಾಶೀರ್ವಾದದಿಂದ ಸಾಧಕರ ರೋಮ-ರೋಮಗಳು ನರ್ತಿಸಲಿದೆ ಹಾಗೂ ಸಾಧಕರೂ ನರ್ತಿಸುವರು. ಯಾವ ತ್ರಿಮೂರ್ತಿಗಳು ಈ ಪರಮ ಗುರುಗಳ ಉಲ್ಲೇಖವನ್ನು ಮಾಡಿದ್ದಾರೆಯೋ, ಅವರ ಉಲ್ಲೇಖವನ್ನು ಈಗ ನಿಸರ್ಗವೂ ಮಾಡಲಿದೆ. ಯಾವ ರೀತಿ ಭಗವಂತನು ‘ಈ ಹಣ್ಣಿನ ರಸವನ್ನು ಯಾರು ಪಡೆಯಲಿರುವರು ? ಈ ಪುಷ್ಪ ಯಾರಿಗೆ ದೊರೆಯಲಿದೆ ?’ ಎನ್ನುವುದನ್ನು ಮೊದಲೇ ಬರೆದಿಟ್ಟಿರುತ್ತಾನೆಯೋ, ಹಾಗೆಯೇ ‘ಈ ಗುರುಗಳ ವಿಷಯದಲ್ಲಿಯೂ, ಅವರ ಕಾರ್ಯದ ವಿಷಯದಲ್ಲಿಯೂ, ಅವರಿಗೆ ಯಾರ್ಯಾರು ಸಾಧಕರಿರುವರು, ಯಾರ್ಯಾರು ಶಿಷ್ಯರಿರುವರು’ ಎನ್ನುವುದನ್ನು ಸಹ ದೇವರು ಬರೆದಿಟ್ಟಿದ್ದಾನೆ.
೮. ‘ಪರಾಶರ ಋಷಿಗಳು ‘ಪರಾಶರಸ್ಮೃತಿಯ ರೂಪದಲ್ಲಿ ಈ ನಾಡಿಶಾಸ್ತ್ರವನ್ನು ಕಲಿಯುಗದಲ್ಲಿ ಪೃಥ್ವಿಯ ಮೇಲೆ ತಂದಿದ್ದಾರೆ ಹಾಗೂ ಇದರಲ್ಲಿ ಪರಮ ಗುರುಗಳ ಅವತಾರದ ಮಹಾತ್ಮೆಯನ್ನು ವರ್ಣಿಸ ಲಾಗಿದೆ. ಈ ಕಲಿಯುಗದಲ್ಲಿ ಅವರು ವೇದವಾಗಿದ್ದಾರೆ. ಇದಿಷ್ಟು ಸ್ಮೃತಿಯ ಮಹತ್ವವಾಗಿದೆ, ಎಂದು ಮಹರ್ಷಿಗಳು ತಿಳಿಸಿದರು.
೯.‘ವೇದಮ್ ಪ್ರಮಾಣಮ್ ’ ಈ ಜಪ ಮಾಡುವ ಮಹತ್ವ
ಹೇಳುವಾಗ ಮಹರ್ಷಿಗಳು ಒಂದು ಕಥೆಯನ್ನು ಹೇಳುವುದು
‘ವಿಶ್ವಾಮಿತ್ರರು ರಾಜರಾಗಿದ್ದ ಸಮಯದಲ್ಲಿ ಅವರಿಗೆ ವಸಿಷ್ಠರ ಆಶ್ರಮದಲ್ಲಿದ್ದ ನಂದಿನಿ ಹಸು ಬೇಕಾಗಿತ್ತು. ಇದಕ್ಕಾಗಿ ಅವರು ಸಾವಿರಾರು ಬಾಣಗಳನ್ನು ವಸಿಷ್ಠರ ಮೇಲೆ ಬಿಟ್ಟರು. ವಸಿಷ್ಠರು ತಮ್ಮ ಸ್ಥಳ ಬಿಟ್ಟು ಕದಲಲಿಲ್ಲ. ಅವರು ಕೇವಲ ‘ವೇದಮ್ ಪ್ರಮಾಣಮ್ ’ ಇಷ್ಟೇ ಶಬ್ದಗಳನ್ನು ಉಚ್ಛರಿಸಿದರು. ಏನಾಶ್ಚರ್ಯ ! ಆ ಸಾವಿರಾರು ಬಾಣಗಳು ಪುಷ್ಪಮಾಲೆಯಲ್ಲಿ ಪರಿವರ್ತನೆಗೊಂಡು ವಸಿಷ್ಠರ ಕೊರಳಲ್ಲಿ ಬಿದ್ದವು. ಇದನ್ನು ನಾವು ‘ಓಂ ಕಾರ’ ವೇದದಲ್ಲಿ ಮೊದಲೇ ಹೇಳಿದ್ದೇವೆ’, ಎಂದೂ ಮಹರ್ಷಿಗಳು ನುಡಿದರು. - (ಪೂ.) ಸೌ. ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು, (೨೫.೬.೨೦೧೬, ಬೆಳಗ್ಗೆ ೧೧.೪೭)

ಮಹರ್ಷಿಯ ದಿವ್ಯವಾಣಿ ಅಂದರೆ ಜೀವನಾಡಿಪಟ್ಟಿ ಅಂದರೇನು ?
ಅಖಿಲ ಮನುಕುಲದ ಬಗ್ಗೆ ಶಿವ-ಪಾರ್ವತಿಯರ ಮಧ್ಯೆ ನಡೆದ ಸಂವಾದವನ್ನು ಸಪ್ತರ್ಷಿಗಳು ಕೇಳಿದರು. ಅವರು ಮನುಕುಲದ ಕಲ್ಯಾಣಕ್ಕಾಗಿ ಮತ್ತು ಆಧ್ಯಾತ್ಮಿಕ ಜೀವಗಳ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು ಅದನ್ನು ಬರೆದಿಟ್ಟಿದ್ದಾರೆ. ಇದೇ ಆ ನಾಡಿಭವಿಷ್ಯ ! ನಾಡಿ ಭವಿಷ್ಯವನ್ನು ತಾಳಪತ್ರಗಳ ಹಲವು ಪಟ್ಟಿಗಳ ಮೇಲೆ ಬರೆದಿಟ್ಟಿರುತ್ತಾರೆ. ಇದರಲ್ಲಿ ‘ಜೀವನಾಡಿ ಜೀವಂತವಾಗಿದೆ. ಇದರ ಶ್ವಾಸೋಚ್ವಾಸ ನಡೆಯುತ್ತಿದೆ. ಓದುವಾಗ ಇವುಗಳಲ್ಲಿನ ಅಕ್ಷರಗಳು ತನ್ನಿಂದತಾನೆ ಬದಲಾಗುತ್ತವೆ. ನಾಡಿಯನ್ನು ಓದುವಾಗ ಸಾಕ್ಷಾತ್ ಶಿವ-ಪಾರ್ವತಿಯರು ನಾಡಿಯ ಮೇಲೆ ನರ್ತಿಸುತ್ತಾರೆ’, ಎಂದು ತಮಿಳುನಾಡಿನ ಪೂ. ಡಾ. ಉಲಗನಾಥನ್ ಹೇಳಿದ್ದಾರೆ. ಮಹರ್ಷಿಗಳು ಲಕ್ಷಗಟ್ಟಲೆ ವರ್ಷಗಳ ಮೊದಲೇ ಬರೆದಿಟ್ಟಂತಹ ನಾಡಿಭವಿಷ್ಯದ ಪಠಣ ಮಾಡುವ ಕೌಶಲ್ಯವು ಈಗ ಬಹಳ ಕಡಿಮೆ ಜನರಿಗೆ ತಿಳಿದಿದೆ. ಈಗ ಇಡೀ ವಿಶ್ವದಲ್ಲಿ ಜೀವನಾಡಿಯನ್ನು ಓದಬಲ್ಲಂಥ ಏಕೈಕ ವ್ಯಕ್ತಿ ಎಂದರೆ ಪೂ. ಡಾ. ಓಂ ಉಲಗನಾಥನ್ ಮಾತ್ರ. ತಮಿಳಿನಲ್ಲಿ ‘ನಾಡಿ’ ಶಬ್ದದ ಅರ್ಥ ‘ಹುಡುಕುವುದು’ ಸ್ವಲ್ಪದರಲ್ಲಿ ‘ಸ್ವ’ವನ್ನು ಹುಡುಕುವುದು ಎಂದಾಗಿದೆ. ‘ನಾಡಿ ತನ್ನ ಸ್ಥಾನವನ್ನು ಬಿಟ್ಟು ಎಲ್ಲಿಯೂ ಹೋಗುವುದಿಲ್ಲ. ಮನುಷ್ಯನಿಗೆ ನಾಡಿಯನ್ನು ಹುಡುಕುತ್ತಾ ಅದರ ಕಡೆಗೆ ಹೋಗಬೇಕಾಗುತ್ತದೆ. ಅದರ ದರ್ಶನವಾಗುವುದೇ ದುರ್ಲಭವಿದೆ’, ಹೀಗೆ ಮಹರ್ಷಿಗಳು ಬರೆದಿಟ್ಟಿದ್ದಾರೆ. ಆದರೂ ‘ಪರಾತ್ಪರ ಗುರು ಡಾ. ಆಠವಲೆಯವರ ನಾಡಿವಾಚನ ಮಾಡಲು ನಾನು ಸ್ವತಃ ನಿಮ್ಮಲ್ಲಿಗೆ ಬರುತ್ತೇನೆ’, ಎಂದು ಮಹರ್ಷಿಗಳು ಪರಾತ್ಪರ ಗುರು ಡಾ. ಆಠವಲೆಯವರಿಗೆ ಹೇಳಿದ್ದಾರೆ. ನಾಡಿ ಮೊದಲ ಬಾರಿ ಇತರೆಡೆಗೆ, ಅಂದರೆ ಸನಾತನ ಆಶ್ರಮಕ್ಕೆ ಬಂದಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಹರ್ಷಿಗಳ ‘ನಾಡಿವಾಚನ ಕ್ರಮಾಂಕ ೮೨’ ರಲ್ಲಿ ೨೦೧೬ ರಲ್ಲಿ ಜರುಗಲಿರುವ ಗುರುಪೂರ್ಣಿಮೆಯ ಉತ್ಸವದ ಕುರಿತು ಭಾಷ್ಯ ಹೇಳುವುದು ಹಾಗೆಯೇ ಆ ನಾಡಿವಾಚನದಲ್ಲಿ ಗುರುಗಳ ಮಹಾತ್ಮೆಯನ್ನು ವರ್ಣಿಸುವುದು