ಚಾತುರ್ಮಾಸ

ಕಾಲಗಣನೆ : ಆಷಾಢ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿ ವರೆಗಿನ ಅಥವಾ ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆ ವರೆಗಿನ ಕಾಲವನ್ನು ‘ಚಾತುರ್ಮಾಸ’ ಎನ್ನುತ್ತಾರೆ. ಚಾತುರ್ಮಾಸದ ಆರಂಭದಲ್ಲಿ ಬರುವ ಏಕಾದಶಿಯನ್ನು ಕೆಲವೆಡೆ ‘ಶಯನಿ ಏಕಾದಶಿ’ ಮತ್ತು ಕೆಲವೆಡೆ ‘ದೇವಶಯನಿ ಏಕಾದಶಿ’ ಎಂದೂ ಹೇಳುತ್ತಾರೆ. ಚಾತುರ್ಮಾಸದ ಮುಕ್ತಾಯದ ಏಕಾದಶಿಯನ್ನು ‘ದೇವತ್ಥಾನಿ’ ಅಥವಾ ‘ಪ್ರಬೋಧಿನಿ’ ಏಕಾದಶಿ ಎನ್ನುತ್ತಾರೆ. ಚಾತುರ್ಮಾಸದ ಕಾಲಮಹಿಮೆ ಮುಂದಿನಂತಿದೆ,
೧. ಚಾತುರ್ಮಾಸ ದೇವತೆಗಳ ಶಯನಕಾಲವಾಗಿದೆ - ಮನುಷ್ಯನ ಒಂದು ವರ್ಷವು ದೇವತೆಗಳ ಒಂದು ಅಹೋರಾತ್ರಿಯಾಗಿದೆ. ಸಾಮಾನ್ಯವಾಗಿ ರಾತ್ರಿಯ ಕಾಲವನ್ನು ೧೨ ಗಂಟೆಗಳ ಅವಧಿಯೆಂದು ಪರಿಗಣಿಸಲಾಗಿದೆ. ಒಂದು ಪೂರ್ಣಹಗಲು ಮತ್ತು ಒಂದು ಪೂರ್ಣರಾತ್ರಿ ಸೇರಿ ಅಹೋರಾತ್ರಿಯಾಗುತ್ತದೆ. ಮಕರ ಸಂಕ್ರಾಂತಿಯಿಂದ ಕರ್ಕಸಂಕ್ರಾಂತಿ ವರೆಗೆ ಉತ್ತರಾಯಣವಿರುತ್ತದೆ ಮತ್ತು ಕರ್ಕಸಂಕ್ರಾಂತಿಯಿಂದ ಮಕರ ಸಂಕ್ರಾಂತಿವರೆಗೆ ದಕ್ಷಿಣಾಯನವಿರುತ್ತದೆ. ದೇವತೆಗಳಿಗೆ, ಉತ್ತರಾಯಣವು ಹಗಲಾದರೆ ದಕ್ಷಿಣಾಯಣವು ರಾತ್ರಿಯಾಗಿದೆ.
ಕರ್ಕ ಸಂಕ್ರಾಂತಿಗೆ ಉತ್ತರಾಯಣವು ಪೂರ್ಣವಾಗಿ ದಕ್ಷಿಣಾಯಣ ಪ್ರಾರಂಭವಾಗುತ್ತದೆ, ಅಂದರೆ ದೇವತೆಗಳಿಗೆ ರಾತ್ರಿಯು ಆರಂಭವಾಗುತ್ತದೆ. ಕರ್ಕ ಸಂಕ್ರಾಂತಿಯು ಆಷಾಢ ಮಾಸದಲ್ಲಿ ಬರುತ್ತದೆ; ಆದ್ದರಿಂದ ಆಷಾಢ ಶುಕ್ಲ ಏಕಾದಶಿಗೆ ಶಯನಿ ಏಕಾದಶಿ ಎನ್ನುತ್ತಾರೆ. ಅಂದು ದೇವತೆಗಳು ನಿದ್ರಿಸುತ್ತಾರೆ ಎನ್ನುತ್ತಾರೆ. ಕಾರ್ತಿಕ ಶುಕ್ಲ ಏಕಾದಶಿಯಂದು ದೇವತೆಗಳು ನಿದ್ರೆಯಿಂದ ಎಚ್ಚರವಾಗುತ್ತಾರೆ. ಆದ್ದರಿಂದ ಅದನ್ನು ‘ದೇವೋತ್ಥಾನಿ ಏಕಾದಶಿ’ ಅಥವಾ ‘ಪ್ರಬೋಧಿನಿ ಏಕಾದಶಿ’ ಎನ್ನುತ್ತಾರೆ. ವಾಸ್ತವದಲ್ಲಿ ದಕ್ಷಿಣಾಯಣವು ೬ ತಿಂಗಳಿರುವುದರಿಂದ ದೇವತೆಗಳ ರಾತ್ರಿಯೂ ಅದಕ್ಕೆ ಸಮಾನವಾಗಿರಬೇಕು; ಆದರೆ ಪ್ರಬೋಧಿನಿ ಏಕಾದಶಿ ವರೆಗೆ ೪ ತಿಂಗಳು ಪೂರ್ಣವಾಗುತ್ತವೆ. ಇದರರ್ಥ ದೇವತೆಗಳು ತಮ್ಮ ರಾತ್ರಿಯ ೩ ನೇ ಒಂದು ಭಾಗ ಇನ್ನೂ ಉಳಿದಿರುವಾಗಲೇ ಜಾಗೃತರಾಗಿ ತಮ್ಮ ಕಾರ್ಯದಲ್ಲಿ ತೊಡಗುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಚಾತುರ್ಮಾಸ