ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ತಳಮಳ ಮತ್ತು ಭಾವ ಈ ಎರಡು ಘಟಕಗಳ ಅವಶ್ಯಕತೆ

ಕು. ಮಧುರಾ ಭೋಸಲೆ
ಸಾಧನೆಯಲ್ಲಿ ಬೇಗನೇ ಉನ್ನತಿಯಾಗಲು ತಳಮಳ ಮತ್ತು ಭಾವ ಈ ಎರಡು ಘಟಕಗಳ ಅವಶ್ಯಕತೆಯಿರುತ್ತದೆ. ಇವೆರಡು ಘಟಕಗಳು ಪರಸ್ಪರ ಪೂರಕವಾಗಿರುತ್ತವೆ. ಕೇವಲ ಭಾವದಿಂದ ಅಧ್ಯಾತ್ಮದಲ್ಲಿ ಬಹಳ ಉನ್ನತಿಯಾಗುವುದಿಲ್ಲ ಅಥವಾ ಕೇವಲ ತಳಮಳದ ಬಲದಿಂದ ಜೀವವು ಬಹಳ ಪ್ರಗತಿ ಮಾಡುತ್ತದೆ ಎಂದೂ ಇಲ್ಲ. ಇದಕ್ಕಾಗಿ ಇವೆರಡೂ ಗುಣಗಳನ್ನು ಯೋಗ್ಯರೀತಿಯಲ್ಲಿ ಜೋಡಿಸುವುದು ಅತ್ಯಂತ ಅವಶ್ಯಕವಾಗಿದೆ.
ಸಾಧನೆಯಲ್ಲಿ ತಳಮಳ ಈ ಘಟಕಕ್ಕೆ ಶೇ.೮೦ ರಷ್ಟು ಮಹತ್ವವಿದೆ. ಸೇವೆಯನ್ನು ಮಾಡುವಾಗ ಈಶ್ವರಪ್ರಾಪ್ತಿಯ ತೀವ್ರ ತಳಮಳವಿರುವ ಸಾಧಕರಿಗೆ ದೇವರು ಸತತವಾಗಿ ಸಹಾಯ ಮಾಡುತ್ತಾನೆ. ಅದರಲ್ಲಾಗುವ ತಪ್ಪುಗಳನ್ನು ಗಮನಕ್ಕೆ ತಂದು ಕೊಟ್ಟು ಅದನ್ನು ತಡೆಗಟ್ಟಲು ಪ್ರಯತ್ನ ಮಾಡಿಸಿಕೊಳ್ಳುತ್ತಾನೆ. ಪ್ರತಿಕೂಲ ಪರಿಸ್ಥಿತಿಯಲ್ಲಿ ಸೇವೆ, ಸತ್ಸಂಗವನ್ನು ಒದಗಿಸಿ ಕೊಡುತ್ತಾನೆ. ಇತರ ಎಲ್ಲ ಗುಣಗಳ ಜೊತೆಗೆ ಈಶ್ವರಪ್ರಾಪ್ತಿಯ ತೀವ್ರ ತಳಮಳವಿದ್ದಲ್ಲಿ ಸಾಧಕರ ಆಧ್ಯಾತ್ಮಿಕ ಉನ್ನತಿಯು ಬೇಗನೇ ಆಗುತ್ತದೆ. ಗುರುಗಳ ಕೃಪೆಯನ್ನು ಸಂಪಾದಿಸಲು ಸಹಾಯ ಮಾಡುವಂತಹ ತಳಮಳ ಎಂಬ ಗುಣದ ವಿಷಯದಲ್ಲಿ ಇಲ್ಲಿ ಅರಿತುಕೊಳ್ಳೋಣ.
೧. ತಳಮಳದ ಮಹತ್ವ
ತಳಮಳದಿಂದಾಗಿ ಆಧ್ಯಾತ್ಮಿಕ ಮಟ್ಟ ಹೆಚ್ಚಾಗುತ್ತಿದ್ದರೂ ಸ್ಥಿರವಾಗಿ ಉಳಿಯದಿರುವುದು : ತಳಮಳದಿಂದಾಗಿ ಜೀವದ ಆಧ್ಯಾತ್ಮಿಕ ಉನ್ನತಿಯು ಬೇಗನೇ ಆಗುತ್ತದೆ. ಅಂದರೆ ಕಡಿಮೆ ಕಾಲಾವಧಿಯಲ್ಲಿ ಮಟ್ಟ ಹೆಚ್ಚಾಗುತ್ತದೆ. ಇದಕ್ಕಾಗಿ ಪ್ರತಿಯೊಂದು ಹಂತದಲ್ಲಿ ತಳಮಳದ ಜ್ಯೋತಿಯನ್ನು ಬೆಳಗಿಸಿಡುವುದು ಅತ್ಯಂತ ಅವಶ್ಯಕವಾಗಿರುತ್ತದೆ. ಎಷ್ಟು ಉನ್ನತ ಮಟ್ಟ ಗಳಿಸಿದರೂ ಅದಕ್ಕಿಂತ ಉನ್ನತ ಮಟ್ಟವಿರುತ್ತದೆ. ಮೋಕ್ಷ ಸಿಗುವ ತನಕ ಅಂದರೆ ಜೀವದ ವ್ಯಷ್ಟಿ ಮತ್ತು ಸಮಷ್ಟಿ ಮಟ್ಟವು ಶೇ. ೧೦೦ ರಷ್ಟಾಗುವ ತನಕ ಅದರಲ್ಲಿ ತಳಮಳವಿರಲೇಬೇಕು. ಇಲ್ಲಿ ತಳಮಳ ಅಂದರೆ ‘ನನ್ನ ಆಧ್ಯಾತ್ಮಿಕ ಉನ್ನತಿಯಾಗಬೇಕು’ ಎಂಬುದರ ಬಗ್ಗೆ ಜೀವದಲ್ಲಿರುವ ತೀವ್ರ ಇಚ್ಛೆ, ಅಂದರೆ ತೀವ್ರ ಮುಮುಕ್ಷತ್ವ. ತಳಮಳದಿಂದಾಗಿ ಮಟ್ಟ ಹೆಚ್ಚಾಗುತ್ತದೆ ಆದರೆ ಅದು ಸ್ಥಿರವಾಗಿ ಉಳಿಯುವುದಿಲ್ಲ.
೨. ಭಾವದ ಮಹತ್ವ
ಭಾವದಿಂದ ಆಧ್ಯಾತ್ಮಿಕ ಮಟ್ಟವು ಸ್ಥಿರವಾಗಿ ಉಳಿಯಲು ಸಹಾಯವಾಗುತ್ತದೆ : ಭಾವದಿಂದಾಗಿ ಜೀವದ ಮಟ್ಟವು ಸ್ಥಿರವಾಗಿರಲು ಸಹಾಯವಾಗುತ್ತದೆ. ‘ಭಾವವಿದ್ದಲ್ಲಿ ದೇವ’ ಎಂಬ ನ್ಯಾಯಕ್ಕನುಸಾರ ಜೀವದಲ್ಲಿ ಭಾವವಿದ್ದಲ್ಲಿ ಅದರ ಮಟ್ಟವನ್ನು ಸ್ಥಿರವಾಗಿರಿಸುವ ಕಾರ್ಯವನ್ನು ದೇವರು ಅಂದರೆ ಈಶ್ವರನೇ ಸೂಕ್ಷ್ಮದಿಂದ ಮಾಡುತ್ತಾನೆ. ಸಾಧನೆಯಲ್ಲಿ ಹೇಗೆ ಶೀಘ್ರಗತಿಯಿಂದ ಪ್ರಗತಿಯನ್ನು ಸಾಧಿಸಲಾಗುತ್ತದೆಯೋ ಅದೇರೀತಿ ಅಧೋಗತಿಯೂ ಆಗುವ ಸಾಧ್ಯತೆಯಿದೆ. ಸಾಧನೆಯಲ್ಲಿ ಬರುವ ಅಡಚಣೆಗಳನ್ನು ಹಿಮ್ಮೆಟ್ಟಿ ಮುಂದೆ ಸಾಗಲು ಭಾವದ ಅವಶ್ಯಕತೆ ನಿರಂತರವಾಗಿರುತ್ತದೆ. ಭಾವದಿಂದಾಗಿಯೇ ಆ ಮಟ್ಟವು ಸ್ಥಿರವಾಗಿ ಉಳಿಯುತ್ತದೆ, ಆದರೆ ಮಟ್ಟ ಹೆಚ್ಚಾಗುವುದಿಲ್ಲ.
೩. ಭಾವ ಮತ್ತು ತಳಮಳದ ಜೋಡಣೆ
ಯಾವ ಜೀವದಲ್ಲಿ ಭಾವ ಮತ್ತು ತಳಮಳವಿರುತ್ತದೆಯೋ ಆ ಜೀವವೇ ಅಧ್ಯಾತ್ಮದಲ್ಲಿ ಕಡಿಮೆ ಕಾಲಾವಧಿಯಲ್ಲಿ ಹೆಚ್ಚು ಉನ್ನತಿ ಮಾಡಿಕೊಳ್ಳುತ್ತದೆ. ತಳಮಳದಿಂದಾಗಿ ಇಂತಹ ಜೀವದ ಮಟ್ಟವು ಹೆಚ್ಚುತ್ತಾ ಹೋಗುತ್ತದೆ ಮತ್ತು ಅದರ ಜೊತೆಗೆ ಭಾವದಿಂದಾಗಿ ಹೆಚ್ಚಾಗಿರುವ ಆಧ್ಯಾತ್ಮಿಕ ಮಟ್ಟವು ಸ್ಥಿರವಾಗಿ ಉಳಿಯುತ್ತದೆ. ಭಾವ ಮತ್ತು ತಳಮಳದ ಜೊತೆಗೆ ಗುರುಕೃಪೆಯೇ ಬೇಕಾಗುತ್ತದೆ. ಅಜ್ಞಾನದಿಂದಾಗಿ ಜೀವಕ್ಕೆ ಭಾವ ಮತ್ತು ತಳಮಳದ ಯೋಗ್ಯ ಜೊತೆಯನ್ನು ಹೇಗೆ ಕೂರಿಸುವುದು ಎಂಬುದು ಗೊತ್ತಿರುವುದಿಲ್ಲ.
೪. ಶರಣಾಗತ ಭಾವವಿರುವ ಜೀವದ ಮೇಲೆ ಗುರುಗಳ ಕೃಪೆಯಾಗಿ
ಕಡಿಮೆ ಕಾಲಾವಧಿಯಲ್ಲಿ ಅದು ನಿರ್ಗುಣದೆಡೆಗೆ ತಲುಪುತ್ತದೆ
ಇತರ ರೀತಿಯ ಭಾವಗಳಲ್ಲಿ ಅಹಂ ಇರುತ್ತದೆ. ಆದರೆ ಕೇವಲ ಶರಣಾಗತಭಾವದಲ್ಲಿಯೇ ಅಹಂ ಶೇ.ಶೂನ್ಯದಷ್ಟಿರುತ್ತದೆ. ಆದುದರಿಂದ ಜೀವದ ಮೇಲೆ ಗುರುಗಳ ಕೃಪೆಯು ತುಂಬಿ ಹರಿಯುತ್ತದೆ ಮತ್ತು ಅದು ಈಶ್ವರನೆಡೆಗೆ ಅಂದರೆ ನಿರ್ಗುಣದೆಡೆಗೆ ಕಡಿಮೆ ಸಮಯದಲ್ಲಿ ತಲುಪುತ್ತದೆ. ಇದರ ಸರ್ವೋತ್ಕೃಷ್ಠ ಉದಾಹರಣೆಯೆಂದರೆ ಶ್ರೀರಾಮಭಕ್ತ ಹನುಮಂತ. ಅವನಲ್ಲಿ ಉತ್ತಮ ಶಿಷ್ಯನ ಎಲ್ಲ ಗುಣಗಳಿದ್ದವು ಜೊತೆಗೆ ತಳಮಳ ಮತ್ತು ಶರಣಾಗತಭಾವವಿತ್ತು. ಹಾಗೆಯೇ ಅವನಲ್ಲಿ ಅಹಂ ಶೇ.೦ ರಷ್ಟಿತ್ತು. ಇದರಿಂದ ಅವನ ಮೇಲೆ ಶ್ರೀರಾಮಚಂದ್ರನ ಕೃಪೆಯ ಸುರಿಮಳೆ ಸತತವಾಗಿ ಆಗುತ್ತಿತ್ತು ಮತ್ತು ಅವನು ಶ್ರೀರಾಮನ ಅತ್ಯಂತ ಪ್ರೀತಿಯ ಭಕ್ತನಾಗಿದ್ದನು. - ಈಶ್ವರ (ಕು. ಮಧುರಾ ಭೋಸಲೆ ಇವರು ‘ಈಶ್ವರ’ ಈ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳಲು ತಳಮಳ ಮತ್ತು ಭಾವ ಈ ಎರಡು ಘಟಕಗಳ ಅವಶ್ಯಕತೆ