ಮಂಗಳೂರಿನಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳಿಂದ ಸನಾತನದ ಸಾಧಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಬಗ್ಗೆ ವಿಚಾರಣೆ

ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿಗಳ ಅನಾವಶ್ಯಕ ವಿಚಾರಣೆ ಮಾಡಲು ಸಮಯ ವ್ಯರ್ಥಗೊಳಿಸುವ ಪೊಲೀಸರು ಇಂತಹ ವಿಚಾರಣೆಯನ್ನು ಭಯೋತ್ಪಾದಕರಿಗೆ ಮಾಡಿದ್ದರೆ, ಇಷ್ಟೊತ್ತಿಗೆ ದೇಶ ಭಯೋತ್ಪಾದನೆಯಿಂದ ಮುಕ್ತವಾಗಿರುತ್ತಿತ್ತು!
‘೨೮.೬.೨೦೧೬ ರಂದು ಗುಪ್ತಚರ ಇಲಾಖೆಯ ೨ ಅಧಿಕಾರಿಗಳು ಮಂಗಳೂರಿನ ಸನಾತನದ ಸೇವಾಕೇಂದ್ರದಲ್ಲಿ ಹೋಗಿ ಸನಾತನದ ಸಾಧಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಬಗ್ಗೆ ವಿಚಾರಣೆ ಮಾಡಿದರು.
೧. ಈ ಅಧಿಕಾರಿಗಳು ಸೇವಾಕೇಂದ್ರದ ಸಾಧಕರಿಗೆ ‘ಉಲ್ಲೇಖಿತ ಕಾರ್ಯಕರ್ತರ ಬಗ್ಗೆ ನಮ್ಮಲ್ಲಿರುವ ಮಾಹಿತಿಯ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕಾಗಿದೆ’ ಎಂದು ಹೇಳಿದರು. ಆ ಪೊಲೀಸ್ ಅಧಿಕಾರಿಯ ಬಳಿ ಈ ಕಾರ್ಯಕರ್ತರ ವಿಳಾಸ ಮತ್ತು ದೂರವಾಣಿ ಕ್ರಮಾಂಕಗಳಿದ್ದವು.
೨. ಸಾಧಕರು ಅಧಿಕಾರಿಗಳಿಗೆ ‘ನಿಮಗೆ ಬೇಕಾದ ಮಾಹಿತಿಯನ್ನು ಸಂಬಂಧಿತ ಕಾರ್ಯಕರ್ತರ ಬಳಿ ವಿಚಾರಿಸಿ’ ಎಂದು ಹೇಳಿದರು.
೩. ಇದಕ್ಕೆ ಪೊಲೀಸು ಅಧಿಕಾರಿಗಳು ‘ನಮಗೆ ಬೇರೆ ಏನೂ ಮಾಹಿತಿ ಬೇಡ’ ಎಂದು ಹೇಳಿದರು.
೪. ನಂತರ ಪೊಲೀಸು ಅಧಿಕಾರಿಗಳು ಅಲ್ಲಿನ ಜಾಗದ ಬಗ್ಗೆ ವಿಚಾರಿಸಿದಾಗ ಸಾಧಕರು ಅದರ ಮಾಹಿತಿ ನೀಡಿದರು.
೫. ಅನಂತರ ಪೊಲೀಸು ಅಧಿಕಾರಿಗಳು ‘ನಾವು ನಮ್ಮ ಕಾರ್ಯಾಲಯಕ್ಕೆ ಹೋಗಿ ಸಂಬಂಧಿತ ಕಾರ್ಯಕರ್ತರಿಗೆ ದೂರವಾಣಿ ಮಾಡುತ್ತೇವೆ’ ಎಂದರು.
೬. ಅನಂತರ ಆ ಪೊಲೀಸು ಅಧಿಕಾರಿಗಳು ಸನಾತನ ಸಂಸ್ಥೆಯ ಓರ್ವ ಪದಾಧಿಕಾರಿಗೆ ಕರೆ ಮಾಡಿ ಅವರ ವಿಳಾಸ, ದೂರವಾಣಿ ಕ್ರಮಾಂಕ, ವಯಸ್ಸು, ಹಾಗೆಯೇ ಅವರ ತಂದೆಯವರ ಬಗ್ಗೆ ಮಾಹಿತಿಯನ್ನು ಖಾತ್ರಿಪಡಿಸಿ ಕೊಂಡರು. ಅವರ ಬಳಿ ಇನ್ನೋರ್ವ ಕಾರ್ಯಕರ್ತರ ಮಾಹಿತಿಯನ್ನೂ ಖಚಿತಪಡಿಸಿಕೊಂಡರು.
೭. ಈ ಸಮಯದಲ್ಲಿ ಪೊಲೀಸು ಅಧಿಕಾರಿಗಳು ‘ಒಂದು ಧ್ವನಿಚಿತ್ರಮುದ್ರಿಕೆಯು ತುಂಬಾ ಚೆನ್ನಾಗಿದೆ’ ಎಂದು ಹೇಳಿ ಅದರ ಬೇಡಿಕೆ ನೀಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮಂಗಳೂರಿನಲ್ಲಿ ಗುಪ್ತಚರ ಇಲಾಖೆಯ ಅಧಿಕಾರಿಗಳಿಂದ ಸನಾತನದ ಸಾಧಕ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರ ಬಗ್ಗೆ ವಿಚಾರಣೆ