ಗುರುಪೂರ್ಣಿಮೆ (ವ್ಯಾಸಪೂಜೆ)

ಗುರುಪೂರ್ಣಿಮೆ - ೧೯ ಜುಲೈ ೨೦೧೬
ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.
ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಎಲ್ಲ ಗುರುಗಳ ಶಿಷ್ಯರು ಈ ದಿನದಂದು ಗುರುಗಳ ಪಾದಪೂಜೆಯನ್ನು ಮಾಡಿ ಅವರಿಗೆ ಗುರುದಕ್ಷಿಣೆಯನ್ನು ಅರ್ಪಿಸುತ್ತಾರೆ. ಈ ದಿನ ವ್ಯಾಸಪೂಜೆಯನ್ನು ಮಾಡುವ ಪದ್ಧತಿಯೂ ಇದೆ. ಗುರುಪರಂಪರೆಯಲ್ಲಿ ವ್ಯಾಸರನ್ನು ಸರ್ವಶ್ರೇಷ್ಠ ಗುರು ಎಂದು ಪರಿಗಣಿಸಲಾಗಿದೆ. ಎಲ್ಲ ಜ್ಞಾನದ ಉಗಮವು ವ್ಯಾಸರಿಂದಲೇ ಆಗುತ್ತದೆ ಎನ್ನುವುದು ಭಾರತೀಯರ ನಂಬಿಕೆಯಾಗಿದೆ.’ ಕುಂಭಕೋಣಮ್ ಮತ್ತು ಶೃಂಗೇರಿ ಇವು ದಕ್ಷಿಣ ಭಾರತದಲ್ಲಿನ ಶಂಕರಾಚಾರ್ಯರ ಪ್ರಸಿದ್ಧ ಪೀಠಗಳಾಗಿವೆ.
ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸುಸಂಧಿಯು ಲಭಿಸುತ್ತದೆ.
ಇಲ್ಲಿ ವ್ಯಾಸಪೂಜಾಮಹೋತ್ಸವ ನಡೆಯುತ್ತದೆ. ವ್ಯಾಸಮಹರ್ಷಿಗಳು ಮತ್ತೊಮ್ಮೆ ಶಂಕರಾಚಾರ್ಯರ ರೂಪದಲ್ಲಿ ಅವತರಿಸಿದರು ಎನ್ನುವುದು ಭಕ್ತರ ಶ್ರದ್ಧೆಯಾಗಿದೆ. ಆದುದರಿಂದ ಈ ದಿನ ಸಂನ್ಯಾಸಿಗಳು ವ್ಯಾಸಪೂಜೆ ಎಂದು ಶಂಕರಾಚಾರ್ಯರ ಪೂಜೆಯನ್ನು ಮಾಡುತ್ತಾರೆ. (ಆಧಾರ : ಸನಾತನದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಪೂರ್ಣಿಮೆ (ವ್ಯಾಸಪೂಜೆ)