ಸಾಧಕರೇ, ಸಾಧನೆಯಲ್ಲಿ ಅಡಚಣೆಯನ್ನುಂಟು ಮಾಡುವ ಬೇಕು-ಬೇಡ (ಇಷ್ಟಾನಿಷ್ಟ) ಎಂಬುದನ್ನು ಕಡಿಮೆಗೊಳಿಸಲು ಮನೋನಿಗ್ರಹ ಮಾಡಿ ಪ್ರಯತ್ನಿಸಿರಿ !

ಪೂ. ಉಮೇಶ ಶೆಣೈ
ಪ.ಪೂ. ಗುರುದೇವರು ಸಾಧಕರಿಗೆ ಸಾಧನೆ ಯಲ್ಲಿನ ಪ್ರತಿಯೊಂದು ಅಂಗವನ್ನೂ ಸವಿಸ್ತಾರವಾಗಿ ಹೇಳಿ ಅದನ್ನು ಕೃತಿಯಲ್ಲಿ ತರಲು ನಿರಂತರ ಬೆಂಬತ್ತುತ್ತಿದ್ದಾರೆ. ಸಾಧನೆಯ ದೃಷ್ಟಿಯಲ್ಲಿ ಯಾವುದೇ ವಿಷಯವನ್ನು ಹೇಳಲು ಅವರು ಬಾಕಿ ಇಟ್ಟಿಲ್ಲ; ಆದರೆ ಅದನ್ನು ಗುರುದೇವರ ಅಪೇಕ್ಷೆಯಂತೆ ಸಾಧನೆಗಾಗಿ ಉಪಯೋಗಿಸಲು ಸಾಧಕರು ಕೃತಿಯ ಸ್ತರದಲ್ಲಿ ಹಿಂದೆ ಬಿದ್ದರು.
೧. ಪಂಚಜ್ಞಾನೇಂದ್ರಿಯಗಳು, ಅದಕ್ಕೆ ಸಂಬಂಧಿಸಿದ ಬೇಕು-ಬೇಡಗಳ ಸಂವೇದನೆ ಮತ್ತು ಅದರ ಮೇಲೆ ನಿಯಂತ್ರಣವನ್ನಿಡಲು ಮಾಡಬೇಕಾದ ಪ್ರಯತ್ನ
ಪಂಚಜ್ಞಾನೇಂದ್ರಿಯಗಳು ಕಣ್ಣು, ಕಿವಿ, ಮೂಗು, ನಾಲಿಗೆ ಮತ್ತು ತ್ವಚೆಯಿಂದಾಗಿದೆ. ಇವುಗಳಿಂದ ನಮಗೆ ತಿಳಿಯದಂತೆಯೇ ನಮ್ಮ ಸಾಧನೆಯ ಮೇಲೆ ಪ್ರಭಾವ ವಿರುತ್ತದೆ. ಮನಸ್ಸು ಎಂಬ ಹೆಸರಿನ ರಂಗಭೂಮಿಯಲ್ಲಿ ನಾಟಕವಾಡುವ ಪಾತ್ರಧಾರಿಗಳೇ ಇವುಗಳು. ನಮ್ಮಲ್ಲಿ ಸಂಸ್ಕಾರವನ್ನು ನಿರ್ಮಾಣ ಮಾಡುವುದರಲ್ಲಿ ಇವುಗಳು ಮುಖ್ಯ ಭೂಮಿಕೆಯನ್ನು ನಿರ್ವಹಿಸುತ್ತವೆ. ಸಾಧನೆಯ ದೃಷ್ಟಿಯಲ್ಲಿ ಇವುಗಳನ್ನು ನಿಯಂತ್ರಣದಲ್ಲಿಡುವುದು ಅತ್ಯಂತ ಮಹತ್ವದ್ದಾಗಿದೆ. ‘ದೃಷ್ಟಾದೃಶ್ಯವಶಾತ್‌ಬದ್ಧಃ ’ ಅಂದರೆ ‘ಜೀವವು ದೃಶ್ಯದಿಂದ ಅದರಲ್ಲಿ ಬದ್ಧವಾಗುತ್ತದೆ.’ ದೃಶ್ಯದಿಂದ ಪಂಚೇಂದ್ರಿಯಗಳು ತಮ್ಮ ಕಾರ್ಯವನ್ನು ಆರಂಭಿಸುತ್ತವೆ. ಪದೇ ಪದೇ ಆಗುವ ಸಂಸ್ಕಾರ ಗಳಿಂದ ಇಚ್ಛೆ ನಿರ್ಮಾಣವಾಗಿ ನಾವು ಅದರಲ್ಲಿ ಆಸಕ್ತರಾಗುತ್ತೇವೆ. ಮೊದಲೇ ಆಗಿರುವ ಸಂಸ್ಕಾರ ಮತ್ತು ಹೊಸತಾಗಿ ನಿರ್ಮಾಣವಾಗುವ ಸಂಸ್ಕಾರಗಳ ಸಂಕೋಲೆಯಿಂದ ಹೊರಬರಲು ಕಠಿಣವಾಗುತ್ತದೆ. ಈ ಜಾಲವನ್ನು ನಾವೇ ಹರಡುತ್ತೇವೆ ಹಾಗೂ ನಾವೇ ಅದರಲ್ಲಿ ಸಿಲುಕುತ್ತೇವೆ.

೧ ಅ. ಕಣ್ಣುಗಳು
೧ ಅ ೧. ದೃಶ್ಯದಿಂದ ಪ್ರಭಾವಿತರಾಗಿ ಅದರಲ್ಲಿ ಸಿಲುಕಿಕೊಳ್ಳುವುದು ಹಾಗೂ ಅಂತರ್ಮನಸ್ಸಿನ ಸಂಸ್ಕಾರವು ಜಾಗೃತವಾಗಿ ಅದರ ಕಡೆಗೆ ಆಕರ್ಷಿಸಲ್ಪಡುವುದು : ಇಂದ್ರಿಯಗಳಲ್ಲಿ ನಾಲಿಗೆಯ ಹಾಗೆಯೇ ಕಣ್ಣುಗಳು ಸಹ ನಮ್ಮ ಬೇಕು-ಬೇಡಗಳಲ್ಲಿ ಮುಖ್ಯ ಪಾತ್ರವಾಗಿವೆ. ನೋಡಿದ ದೃಶ್ಯದಿಂದ ನಾವು ಪ್ರಭಾವಿತರಾಗಿ ಅದರಲ್ಲಿ ಸಿಲುಕಿಕೊಳ್ಳುತ್ತೇವೆ ಹಾಗೂ ದೃಶ್ಯದಲ್ಲಿ ಬದ್ಧರಾಗುತ್ತೇವೆ. ದೃಶ್ಯದಿಂದ ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳು ಜಾಗೃತವಾಗಿ ನಾವು ಅದರತ್ತ ಆಕರ್ಷಿತ ರಾಗುತ್ತೇವೆ. ದೃಶ್ಯದಿಂದ ಅಪೇಕ್ಷೆ ನಿರ್ಮಾಣವಾಗಿ ನಾವು ಅದನ್ನು ಹಿಂಬಾಲಿಸುತ್ತೇವೆ. ಆದ್ದರಿಂದ ಇಂದು ದೃಶ್ಯಮಾಧ್ಯಮಗಳು ಶಕ್ತಿಶಾಲಿಯಾಗಿವೆ. ಒಂದೇ ದೃಶ್ಯವನ್ನು ಪದೇ ಪದೇ ನೋಡಿದರೆ, ಆ ವಿಷಯದಲ್ಲಿ ಆಸಕ್ತಿ ನಿರ್ಮಾಣವಾಗಿ ಅದನ್ನು ಪಡೆಯಬೇಕೆಂಬ ಇಚ್ಛೆಯುಂಟಾಗುತ್ತದೆ. ಇಂದು ಜಾಹೀರಾತುಗಳ ವಿಶ್ವ ದಲ್ಲಿ ದೃಶ್ಯಮಾಧ್ಯಮಗಳ ಜಾಲದಲ್ಲಿ ಸಿಲುಕಿ ನಾವು ಅವಶ್ಯಕತೆಗಿಂತ ಹೆಚ್ಚು ವಸ್ತುಗಳನ್ನು ಖರೀದಿಸುತ್ತೇವೆ. ನಾಲಿಗೆಯ ರುಚಿಯನ್ನು (ಪದಾರ್ಥ) ಕಣ್ಣುಗಳಿಂದ ನೋಡಿದಾಗ ಅವುಗಳ ಬೇಕು-ಬೇಡಗಳ ಸಂವೇದನೆ ನಿರ್ಮಾಣವಾಗುತ್ತದೆ. ನಾಲಿಗೆ ಮತ್ತು ಕಣ್ಣುಗಳ ನಡುವೆ ಘನಿಷ್ಟ ಸಂಬಂಧವಿರುತ್ತದೆ. ಕೆಲವೊಮ್ಮೆ ಸುಂದರವಾದ ದೃಶ್ಯ, ವಸ್ತು ಮತ್ತು ತಿನ್ನುವ ಪದಾರ್ಥಗಳನ್ನು ನೋಡುತ್ತಲೇ ನಮ್ಮ ಬೇಕು-ಬೇಡ ಕೇಂದ್ರವು ಜಾಗೃತವಾಗಿ ನಾವು ಆ ಪದಾರ್ಥದತ್ತ ಆಕರ್ಷಿತರಾಗುತ್ತೇವೆ.
೧ ಅ ೨. ಸಾಧನೆಗೆ ಪೂರಕವಿಲ್ಲದ ದೃಶ್ಯಗಳಿಂದ ವಿಮುಖರಾಗಲು ಪ್ರಯತ್ನಿಸಬೇಕು ! : ಪಂಚಜ್ಞಾನೇಂದ್ರಿಯಗಳಲ್ಲಿ ಯಾವುದೇ ಇಂದ್ರಿಯ ಜಾಗೃತವಾದರೆ ಮನಸ್ಸು ಅದರತ್ತ ಆಕರ್ಷಿಸಲ್ಪಡುತ್ತದೆ; ಆದ್ದರಿಂದ ಮನೋನಿಗ್ರಹದಿಂದಲೇ ಇಂದ್ರಿಯನಿಗ್ರಹ ಮಾಡಬಹುದು. ಇಂದ್ರಿಯಗಳ ಮೇಲೆ ಮನಸ್ಸಿನ ನಿಯಂತ್ರಣವಿರಬೇಕು. ಮನಸ್ಸನ್ನು ಇಂದ್ರಿಯಗಳ ನಿಯಂತ್ರಣದಲ್ಲಿಡಬಾರದು. ಉತ್ತೇಜಿಸಲ್ಪಡುವುದು ದೋಷವಾಗಿದೆ’, ಎಂದು ಸ್ವೀಕರಿಸಿದರೆ, ನಾವು ನಮ್ಮ ಬೇಕು-ಬೇಡಗಳನ್ನು ಕಡಿಮೆಗೊಳಿಸಬಹುದು. ಎಲ್ಲ ಇಂದ್ರಿಯಗಳ ಮೇಲೆ ಕಣ್ಣುಗಳ ಪ್ರಭಾವ ಬೀಳುತ್ತದೆ. ಆದ್ದರಿಂದ ನಾವು ಯಾವುದೇ ದೃಶ್ಯದಲ್ಲಿ ಸಿಲುಕಬಾರದು. ಸಾಧನೆಗೆ ಪೂರಕವಿಲ್ಲದ ದೃಶ್ಯಗಳಿಂದ ವಿಮುಖರಾಗಲು ಪ್ರಯತ್ನಿಸಬೇಕು. ಇತರರ ಸೌಂದರ್ಯವು ನಮ್ಮನ್ನು ಆಕರ್ಷಿಸುತ್ತದೆ. ಅದರಿಂದ ಕಾಮವಾಸನೆ ಜಾಗೃತವಾಗ ಬಹುದು. ಇಲ್ಲಿ ನಾವು ಅತ್ಯಂತ ಜಾಗರೂಕತೆಯಿಂದ ಅದನ್ನು ನೋಡುವ ದೃಷ್ಟಿಯನ್ನೇ ಬದಲಾಯಿಸಬೇಕು. ಇದೇ ರೀತಿ ಕಿವಿ, ಮೂಗು ಮತ್ತು ತ್ವಚೆ ಸಹ ನಮಗೆ ತಿಳಿಯದಂತೆಯೇ ನಮ್ಮ ಮೇಲೆ ನಿಯಂತ್ರಣವನ್ನು ಸಾಧಿಸುತ್ತವೆ. ಸುಶ್ರಾವ್ಯ ಸಂಗೀತ ಮತ್ತು ಮಧುರ ಸ್ವರದ ಕಡೆಗೆ ನಾವು ಸ್ವಾಭಾವಿಕವಾಗಿಯೇ ಆಕರ್ಷಿಸುತ್ತೇವೆ. ಕರ್ಕಶ ಧ್ವನಿ ಅಥವಾ ಇತರರ ಮಾತು ನಮ್ಮನ್ನು ಬೇಕು-ಬೇಡಗಳ ಜಾಲದಲ್ಲಿ ಸಿಲುಕಿಸುತ್ತದೆ.
೧ ಆ. ಕಿವಿ
೧ ಆ ೧. ಸಾಧನೆಗೆ ಪೂರಕವಾಗಿರುವ ವಿಷಯ ಗಳತ್ತ ಗಮನ ಹರಿಸುವುದು ಮಹತ್ವದ್ದು ! : ಆಧ್ಯಾತ್ಮಿಕ ದೃಷ್ಟಿಯಿಂದ ‘ಏನು ಕೇಳಬೇಕು ಮತ್ತು ಏನು ಕೇಳ ಬಾರದು ?’, ಎಂಬುದನ್ನು ನಾವೇ ನಿರ್ಧರಿಸಬೇಕು. ನೋಡುವುದು ಮತ್ತು ಕೇಳುವುದು ಇದು ಕಣ್ಣುಗಳು ಮತ್ತು ಕಿವಿಗಳಿಗೆ ಸಂಬಂಧಿಸಿದ್ದಾಗಿದೆ. ಕೇಳಿದ ಒಳ್ಳೆಯ ವಿಷಯವನ್ನು ನೋಡುವ ಮತ್ತು ನೋಡಿದ ವಿಷಯ
ವನ್ನು ಕೇಳುವ ಇಚ್ಛೆಯಾಗುತ್ತದೆ. ಆದ್ದರಿಂದ ಸಾಧನೆಯ ದೃಷ್ಟಿಯಿಂದ ಅಂತಹ ವಿಷಯಗಳನ್ನು (ಭಜನೆ, ಸತ್ಸಂಗ, ಪ್ರವಚನ) ಇತ್ಯಾದಿ ಕೇಳಲು ಪ್ರಯತ್ನಿಸಬೇಕು.
೧ ಇ. ಮೂಗು : ಮೂಗು ನಮ್ಮನ್ನು ಸುವಾಸನೆಯತ್ತ ಆಕರ್ಷಿಸುತ್ತದೆ. ದುರ್ವಾಸನೆ ಯಾರಿಗೂ ಬೇಡವಾಗಿ ರುತ್ತದೆ. ಕೆಲವು ತಿಂಡಿಗಳ ಪರಿಮಳದಿಂದಲೇ ನಾವು ಅದರ ಕಡೆಗೆ ಆಕರ್ಷಿತರಾಗುತ್ತೇವೆ. ಹಾಗೆ ನೋಡಿದರೆ ಎಲ್ಲ ಪಂಚೇಂದ್ರಿಯಗಳು ಪರಸ್ಪರ ಪೂರಕವಾಗಿ ರುವುದರಿಂದ ನಾವು ಬೇಕು-ಬೇಡ ಎಂಬುದಕ್ಕೆ ಬಲಿಯಾಗುತ್ತೇವೆ.
೧ ಈ. ನಾಲಿಗೆ : ಪಂಚಜ್ಞಾನೇಂದ್ರಿಯಗಳಲ್ಲಿ ನಾಲಿಗೆ ಅತ್ಯಂತ ಮಹತ್ವದ್ದಾಗಿದೆ. ಅನೇಕ ತಿಂಡಿ ತಿನಿಸುಗಳನ್ನು ನೋಡಿ ಬೇಕು-ಬೇಡ ಎಂಬ ಸಂಸ್ಕಾರ ಜಾಗೃತವಾಗುತ್ತದೆ. ನಾಲಿಗೆಯಲ್ಲಿನ ಗ್ರಂಥಿಗಳು ಆ ಪದಾರ್ಥಗಳನ್ನು ನೋಡಿದಾಗಲೇ ಮನಸ್ಸಿಗೆ ಅದರ ಸಂವೇದನೆಯನ್ನು ತಲುಪಿಸಿ ನಮ್ಮ ಅಂತರ್ಮನಸ್ಸಿ ನಲ್ಲಿನ ಬೇಕು-ಬೇಡವೆಂಬ ಸಂಸ್ಕಾರವನ್ನು ಜಾಗೃತ ಗೊಳಿಸುತ್ತವೆ.
೧ ಈ ೧. ನಾಲಿಗೆಯಲ್ಲಿನ ರಂಧ್ರಗಳಿಗೆ ಎಲ್ಲ ಪದಾರ್ಥಗಳು ಇಷ್ಟವಾಗಬೇಕೆಂದು ಪ್ರಯತ್ನಪೂರ್ವಕ ಕೃತಿ ಮಾಡುವ ಅವಶ್ಯಕತೆಯಿದೆ ! : ಅದಕ್ಕಾಗಿ ಆಶ್ರಮ ವ್ಯವಸ್ಥೆಯು ಅತ್ಯಂತ ಯೋಗ್ಯವಾಗಿದೆ. ಆಶ್ರಮದಲ್ಲಿನ ಸಾತ್ತ್ವಿಕ ವಾತಾವರಣ ಮತ್ತು ತಿಂಡಿ-ತಿನಿಸುಗಳಿಂದ ಬೇಕು-ಬೇಡ ಎಂಬ ಸಂಸ್ಕಾರಕ್ಕೆ ಅಂಕುಶ ಬರುತ್ತದೆ. ರುಚಿಯ ಕೇಂದ್ರವು ಬೆರಳಿನಷ್ಟಿರುವ ನಾಲಿಗೆಯಲ್ಲಿದೆ. ಆದ್ದರಿಂದ ಪದಾರ್ಥ ಹೊಟ್ಟೆಗೆ ಹೋದನಂತರ ನಮಗೆ ರುಚಿ ತಿಳಿಯುವುದಿಲ್ಲ. ಅದಕ್ಕಾಗಿ ರುಚಿಯ ಸಂಸ್ಕಾರವು ನಾಲಿಗೆಯ ಗ್ರಂಥಿ ಗಳ ಮೂಲಕ ಆಗಬಾರದೆಂದು, ಗುರುದೇವರು ಊಟ-ತಿಂಡಿಯಾದ ಬಳಿಕ ಕನಿಷ್ಠ ೫ ಬಾರಿ ಬಾಯಿ ಮುಕ್ಕಳಿಸಲು ಹೇಳಿದ್ದಾರೆ. ನಾಲಿಗೆಯಲ್ಲಿನ ರಂಧ್ರಗಳಿಗೆ ಎಲ್ಲವೂ ಇಷ್ಟವಾಗಬೇಕೆಂದು ನಾವು ಪ್ರಯತ್ನಪೂರ್ವಕ ಕೃತಿ ಮಾಡಬೇಕು. ‘ಇವು ಬೇಕೋ, ಬೇಡವೋ’, ಎಂಬ ವಿಷಯದಲ್ಲಿ ನಾವು ಬಹಳ ವಿಚಾರ ಮಾಡುತ್ತೇವೆ; ಆದರೆ ಅದರಿಂದಾಗುವ ಹಾನಿಯ ವಿಷಯದಲ್ಲಿ ನಮ್ಮ ಚಿಂತನೆ ಅತ್ಯಂತ ಕಡಿಮೆಯಾಗುತ್ತದೆ. ಆರೋಗ್ಯದ ದೃಷ್ಟಿಯಿಂದ ಪಾಲಿಸಬೇಕಾದ ಪಥ್ಯದ ಕಡೆಗೆ ನಾವು ಗಮನ ಹರಿಸಲೇ ಬೇಕು.
೧ ಈ ೨. ತಿಂಡಿ-ತಿನಸುಗಳ ವಿಷಯದಲ್ಲಿನ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿದರೆ ಮಾತ್ರ ನಾವು ಸಾಧನೆಯಲ್ಲಿ ಸುಖ-ದುಃಖದ ಆಚೆಗೆ, ಅಂದರೆ ಆನಂದದ ಕಡೆಗೆ ಸಹಜವಾಗಿ ಹೋಗಬಹುದು ! : ‘ನನಗೆ ಇದೇ ತಿನ್ನಲು ಇಷ್ಟ , ಇದನ್ನು ತಿನ್ನಲು ನನಗೆ ಇಷ್ಟವಿಲ್ಲ. ಕೆಲವು ಪದಾರ್ಥಗಳು ಬೇಡವೆನಿಸುತ್ತವೆ’, ಇವೆಲ್ಲ ನಮ್ಮ ಸಂಸ್ಕಾರಜನ್ಯ ದೋಷವೇ ಆಗಿವೆ; ಆದರೆ ನಾವು ನಮ್ಮ ಅನುಕೂಲತೆಗಾಗಿ ಅವುಗಳನ್ನು ದೋಷವೆಂದು ಗಮನ ನೀಡುತ್ತಿಲ್ಲ. ‘ಯಾವುದೇ ಆಹಾರ ಬೇಕು ಅಥವಾ ಬೇಡ’, ಎಂದು ಹೇಳುವುದಕ್ಕಿಂತ ‘ಎಲ್ಲವೂ ಸಮಾನ’ವೆಂದು ಮನಸ್ಸಿನಲ್ಲಿ ಬಂದರೆ, ಈ ಬೇಕು-ಬೇಡವೆಂಬ ಸಂಸ್ಕಾರದ ಜಾಲದಿಂದ ನಾವು ಹೊರಗೆ ಬರಬಹುದು. ‘ಆಹಾರದಲ್ಲಿ ಬೇಕು-ಬೇಡ, ಎಂಬುದು ಏನೂ ಇರುವುದಿಲ್ಲ’, ಎಂಬ ನಿರ್ಣಯವನ್ನು ನಾವು ಮಾಡಿದರೆ, ಈ ಬೇಕು-ಬೇಡವೆಂಬ ಸಂಸ್ಕಾರದಿಂದ ಹೊರಗೆ ಬಂದು ಅಲ್ಲಿ ಸಹಜತೆ ನಿರ್ಮಾಣವಾಗಬಹುದು. ಬೇಕೆನಿಸುವ ಪದಾರ್ಥವನ್ನು ಅವಶ್ಯಕತೆಗನುಸಾರ ಎಷ್ಟು ಬೇಕೋ, ಅಷ್ಟು ತೆಗೆದುಕೊಂಡು ಬೇಡವೆನಿಸುವ ಪದಾರ್ಥವನ್ನು ಪ್ರಯತ್ನಪೂರ್ವಕ ತೆಗೆದುಕೊಂಡು ಹಾಗೂ ಅದರಲ್ಲಿ ರುಚಿಯನ್ನು ಹೆಚ್ಚಿಸಿ ಬೇಕು-ಬೇಡವೆಂಬಲ್ಲಿ ಸಮತೋಲನವನ್ನು ಸಾಧಿಸಬಹುದು; ಅಷ್ಟು ಮಾತ್ರವಲ್ಲ, ರುಚಿಯಿಂದ ನಿರ್ಮಾಣವಾದ ಹಳೆಯ ಸಂಸ್ಕಾರವನ್ನು ತೆಗೆದುಹಾಕಿ ಹೊಸ ಸಂಸ್ಕಾರವಾಗ ಬಾರದೆಂದು ಪ್ರಯತ್ನ ಮಾಡುವುದರಿಂದ ಬೇಕು-ಬೇಡವೆಂಬ ಜಾಲದಿಂದ ಹೊರಗೆ ಬರಲು ಸಾಧ್ಯ ವಾಗುವುದು. ಬೇಕು-ಬೇಡವೆಂಬ ಸಂಸ್ಕಾರದಿಂದ ನಮಗಾಗುವ ಸುಖ-ದುಃಖಗಳಿಂದ ನಮಗೆ ಹೊರಗೆ ಬರಲಿಕ್ಕಿದೆ. ‘ಇಂತಹದ್ದೇ ತಿಂಡಿ-ತಿನಸು ಬೇಕು’, ಎಂದು ಹೇಳಿದರೆ ಅದು ಸಿಗದಿದ್ದರೆ ಸಹಜ ವಾಗಿಯೇ ದುಃಖವಾಗುವುದು ಹಾಗೂ ಅದು ಸಿಕ್ಕಿದರೆ, ಸುಖ ವೆನಿಸುತ್ತದೆ. ನಮಗೆ ಸಾಧನೆಯಲ್ಲಿ ಸುಖ-ದುಃಖಗಳ ಆಚೆಗೆ ಅಂದರೆ ಆನಂದದ ಕಡೆಗೆ ಹೋಗಲಿಕ್ಕಿದೆ. ಇದನ್ನು ತಿಳಿದುಕೊಳ್ಳಲು ನಾವು ನಮ್ಮ ತಿಂಡಿ-ತಿನಸುಗಳ ದೃಷ್ಟಿಕೋನದಲ್ಲಿ ಬದಲಾವಣೆ ಮಾಡಿದರೆ ಅದು ಸಹಜವಾಗಿ ಆಗಲು ಸಾಧ್ಯವಿದೆ.
೧ ಈ ೩. ಮನೋನಿಗ್ರಹ ಮಾಡುವುದರಿಂದ ತಿಂಡಿ-ತಿನಸುಗಳ ಮೇಲೆ ಸಂಪೂರ್ಣ ನಿಯಂತ್ರಣ ಪಡೆಯುವ ಕೆಲವು ಸಂತರ ಉದಾಹರಣೆಗಳು : ಭಗವಾನ್ ಶ್ರೀಧರಸ್ವಾಮಿಗಳು ತನಗೆ ಸಿಕ್ಕಿದ ಭಿಕ್ಷೆಯನ್ನು ನದಿಯ ನೀರಿನಲ್ಲಿ ಮುಳುಗಿಸಿ ವಸ್ತ್ರದಲ್ಲಿ ಕಟ್ಟುತ್ತಿದ್ದರು ಹಾಗೂ ಅದನ್ನು ಮರಕ್ಕೆ ಬಡಿದು ಅದರಲ್ಲಿನ ಸತ್ತ್ವ ಮತ್ತು ರುಚಿಯನ್ನು ತೆಗೆದು ತಿನ್ನಲು ಎಷ್ಟು ಬೇಕೋ, ಅಷ್ಟೇ ಮೂರು ಬೊಗಸೆಗಳಷ್ಟು ತೆಗೆದುಕೊಳ್ಳುತ್ತಿ ದ್ದರು ಹಾಗೂ ಉಳಿದಿರುವುದನ್ನು ಜಾನುವಾರುಗಳಿಗೆ ಕೊಡುತ್ತಿದ್ದರು. ಗುರುದೇವ ಡಾ. ಕಾಟೇಸ್ವಾಮೀಜಿ ಇವರು ತಮ್ಮ ತಿಂಡಿ-ತಿನಸುಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಹೀಗೆ ಮಾಡುವುದರಿಂದ ಮನೋನಿಗ್ರಹ ಆಗಲು ಸಾಧ್ಯವಿದೆ. ಎಷ್ಟು ಆಸೆಯಿದ್ದರೂ ಅದು ನಾಶವಾಗಬಹುದು. ಪ.ಪೂ. ರಾಮಭಾವೂ ಸ್ವಾಮಿಯವರು ತಮ್ಮ ಊಟದ ವಿಷಯ ದಲ್ಲಿ ಸಂಪೂರ್ಣ ವಿಜಯ ಸಾಧಿಸಿದ್ದಾರೆ. ಅವರು ಕೇವಲ ಹಾಲು-ಬಾಳೆಹಣ್ಣು ತೆಗೆದುಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ಅವರು ಒಂದೇ ಒಂದು ತೊಟ್ಟು ನೀರನ್ನು ಕುಡಿದಿಲ್ಲ. ಇಂತಹ ಅನೇಕ ಸಂತ-ಮಹಾತ್ಮರ ಉದಾಹರಣೆಗಳು ನಮ್ಮ ಮುಂದೆ ಇವೆ.
೧ ಉ. ತ್ವಚೆ : ಸ್ಪರ್ಶ, ಗಾಳಿ, ಮಳೆ, ನೀರು, ಬಿಸಿಲು, ತಂಪು, ಉಷ್ಣತೆ, ಆಲಿಂಗನ ಇತ್ಯಾದಿ ಅನೇಕ ವಿಷಯಗಳಿಂದ ನಾವು ನಮ್ಮ ಬೇಕು-ಬೇಡಕ್ಕನುಸಾರ ಸುಖ ಅಥವಾ ದುಃಖವನ್ನು ಗಳಿಸುತ್ತೇವೆ.
೨. ಬೇಕು-ಬೇಡ ಇವುಗಳಿಗೆ ಸಂಬಂಧಿಸಿದ ಇತರ ವಿಷಯಗಳು
೨ ಅ. ವ್ಯಕ್ತಿ
೨ ಅ ೧. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿ ಕೊಂಡರೆ ಅವರ ಗುಣವೈಶಿಷ್ಟ್ಯಗಳನ್ನು ನಮ್ಮಲ್ಲಿ ತರಲು ಸಾಧ್ಯವಾಗುವುದು ಹಾಗೂ ಎಲ್ಲ ಮಾಯೆಯೇ ಆಗಿರುವುದರಿಂದ ವ್ಯಕ್ತಿಯಲ್ಲಿ ಭಾವನಾತ್ಮಕಸ್ತರದಲ್ಲಿ ಸಿಲುಕದೆ ಭಗವಂತನೇ ಅದರಿಂದ ಕಾಪಾಡುವನು : ಕೇವಲ ಊಟ-ತಿಂಡಿಯಷ್ಟೇ ಅಲ್ಲ, ಬೇಕು-ಬೇಡ ಇದರಲ್ಲಿ ವ್ಯಕ್ತಿ, ವಸ್ತು, ಸ್ಥಳ, ಕಾಲ, ಉಡುಗೆ, ಸೇವೆ ಇತ್ಯಾದಿಗಳೂ ಬರುತ್ತವೆ. ಒಬ್ಬ ವ್ಯಕ್ತಿಯ ವಿಷಯದಲ್ಲಿ ನಮಗೆ ಒಳ್ಳೆಯದೆನಿಸಿದರೆ, ಇತರರೊಂದಿಗೆ ನಮಗೆ ಹೊಂದಾಣಿಕೆ ಆಗುವುದಿಲ್ಲ. ಅದಕ್ಕಾಗಿ ನಾವು ಕೆಲವ ರನ್ನು ದೂರವೇ ಇಡುತ್ತೇವೆ, ಕೆಲವರನ್ನು ನಾವು ಅತ್ಯಂತ ಸಮೀಪ ಇಟ್ಟುಕೊಳ್ಳುತ್ತೇವೆ. ಸೇವೆಯ ಲ್ಲಿಯೂ ನಮ್ಮೊಂದಿಗೆ ಸೇವೆ ಮಾಡುವವರೊಂದಿಗೆ ನಾವು ಹೊಂದಾಣಿಕೆ ಮಾಡಿಕೊಳ್ಳುತ್ತೇವೆ; ಆದರೆ ಇತರರೊಂದಿಗೆ ಅಷ್ಟು ಸಾಮೀಪ್ಯವಿರುವುದಿಲ್ಲ. ಮಹಾಪ್ರಸಾದ ತೆಗೆದುಕೊಳ್ಳುವಾಗ ಸಹ ಅವರೊಂದಿಗೆ ಕುಳಿತುಕೊಳ್ಳುತ್ತೇವೆ. ನಾವು ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡರೆ ಅವರ ಗುಣವೈಶಿಷ್ಟ್ಯ ಗಳನ್ನು ನಮ್ಮಲ್ಲಿ ತರಬಹುದು. ನಾವು ಎಷ್ಟು ಜನ ರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುತ್ತೇವೆಯೋ, ಅಷ್ಟು ವಿವಿಧ ಪ್ರಕಾರದ ವ್ಯಕ್ತಿಗಳ ಸ್ಪಂದನದೊಂದಿಗೆ ನಾವು ನಮ್ಮ ಸ್ಪಂದನಗಳನ್ನು ಹೊಂದಾಣಿಕೆ ಮಾಡಿಕೊಳ್ಳಲು ನಾವು ಕಲಿಯುತ್ತೇವೆ. ಇಂತಹ ವ್ಯಕ್ತಿಗಳಿಂದ ಬರುವ ಸಕಾರಾತ್ಮಕ ಅಥವಾ ನಕಾರಾತ್ಮಕ ಸ್ಪಂದನ ಗಳನ್ನು ಗ್ರಹಣ ಮಾಡಿ ನಾವು ಮನಸ್ಸಿನ ಸಂಸ್ಕಾರವನ್ನು ಬದಲಾಯಿಸಬೇಕಾಗುತ್ತದೆ. ಅದರಿಂದ ವ್ಯಕ್ತಿಗಳಿಗೆ ಸಂಬಂಧಿಸಿ ನಮ್ಮ ಬೇಕು-ಬೇಡದಿಂದ ನಾವು ಅಲಿಪ್ತ ರಾಗಿರಬೇಕು. ಕೆಲವು ವ್ಯಕ್ತಿಗಳ ಸಹವಾಸದಿಂದ ನಾವು ಸುಖ ಅಥವಾ ದುಃಖವನ್ನು ಅನುಭವಿಸುತ್ತಾ ಇರುತ್ತೇವೆ. ಕೆಲವು ವ್ಯಕ್ತಿಗಳಲ್ಲಿ ನಾವು ಭಾವನಾತ್ಮಕ ಸ್ತರ ದಲ್ಲಿ ಸಿಲುಕಿಕೊಳ್ಳುತ್ತೇವೆ. ‘ನನ್ನ ಮಗ, ಮಗಳು ಮತ್ತು ಸಂಬಂಧಿಕರು ಇವೆಲ್ಲ ಮಾಯೆಯೇ ಆಗಿರುವುದ ರಿಂದ ಅದರಲ್ಲಿ ಸಿಲುಕಿಕೊಳ್ಳದೆ ಎಲ್ಲದರಿಂದ ಭಗವಂತನೇ ನಮ್ಮನ್ನು ಕಾಪಾಡುತ್ತಾನೆ’, ಎಂಬ ಭಾವ ವನ್ನಿಟ್ಟುಕೊಳ್ಳಬೇಕು.
೨ ಅ ೨. ಸಾಧನೆಯ ದೃಷ್ಟಿಯಿಂದ ನಮ್ಮಲ್ಲಿ ಬದಲಾವಣೆಯಾಗಲು ಪ್ರತಿಯೊಂದು ವ್ಯಕ್ತಿಯೂ ಭಗವಂತನು ಕೊಟ್ಟಿರುವ ಪೂರಕ ವ್ಯವಸ್ಥೆಯಾಗಿದ್ದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಮತ್ತು ಗುಣಸಂವರ್ಧನೆಯ ದೃಷ್ಟಿಯಿಂದ ಹೆಚ್ಚೆಚ್ಚು ವ್ಯಕ್ತಿಗಳ ಸಂಪರ್ಕದಲ್ಲಿರುವುದು ಅತ್ಯಂತ ಮಹತ್ವದ್ದಾಗಿದೆ ! : ಇಲ್ಲಿ ಗಮನದಲ್ಲಿಡಬೇಕಾದ ವಿಷಯವೆಂದರೆ, ಪ್ರತಿಯೊಂದು ವ್ಯಕ್ತಿ ನಮ್ಮ ಸಾಧನೆಗಾಗಿ ಪೂರಕವೇ ಆಗಿರುತ್ತಾನೆ. ಮನಸ್ಸಿನಲ್ಲಿ ಸಕಾರಾತ್ಮಕ ಸ್ಪಂದನಗಳನ್ನು ನಿರ್ಮಾಣ ಮಾಡುವ ಪ್ರಯತ್ನದಲ್ಲಿ ನಮ್ಮ ನಕಾರಾತ್ಮಕ ಮನಃಸ್ಥಿತಿಗಿಂತ ವ್ಯಕ್ತಿ ಸಹ ಮಹತ್ವದ್ದಾಗಿದೆ. ಇಂತಹ ವ್ಯಕ್ತಿ ಇಲ್ಲದಿದ್ದರೆ, ನಮ್ಮಲ್ಲಿರುವ ಸಂಸ್ಕಾರವು ಹೇಗೆ ಜಾಗೃತವಾಗಬಹುದು ? ಪ್ರತಿಯೊಬ್ಬ ವ್ಯಕ್ತಿ ನಮ್ಮ ಮುಂದಿರುವ ಕನ್ನಡಿಯೇ ಆಗಿದ್ದಾನೆ. ಬಿಂಬ-ಪ್ರತಿ ಬಿಂಬ ಈ ನ್ಯಾಯಕ್ಕನುಸಾರ ಪ್ರತಿಯೊಂದು ವ್ಯಕ್ತಿಯೂ ನಮಗೆ ನಮ್ಮನ್ನೇ ಪರಿಚಯಿಸಿಕೊಳ್ಳಲು ಸಹಾಯ ಮಾಡುತ್ತಾನೆ. ಸಾಧನೆಯ ದೃಷ್ಟಿಯಿಂದ ನಾವೇ ನಮ್ಮನ್ನು ಬದಲಾಯಿಸಿಕೊಳ್ಳಲು ಪ್ರತಿಯೊಂದು ವ್ಯಕ್ತಿಯೆಂದರೆ, ಭಗವಂತನೇ ನೀಡಿದ ಪೂರಕ ವ್ಯವಸ್ಥೆಯಾಗಿದೆ ಎಂದು ತಿಳಿಯಬೇಕು. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಹಾಗೂ ಗುಣ ಸಂವರ್ಧನೆಯ ದೃಷ್ಟಿಯಿಂದ ನಾವು ಹೆಚ್ಚೆಚ್ಚು ವ್ಯಕ್ತಿ ಗಳ ಸಂಪರ್ಕದಲ್ಲಿರುವುದು ಸಾಧನೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಅದಕ್ಕಾಗಿ ಗುರುದೇವರು ಆಶ್ರಮವ್ಯವಸ್ಥೆಯನ್ನು ನಿರ್ಮಿಸಿ ಅನೇಕ ಸಾಧಕರ ಸಹವಾಸದ ಲಾಭ ಪಡೆಯುವ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದ್ದರಿಂದ ಎಲ್ಲರೊಂದಿಗೆ ನಾವು ನಮ್ಮ ಸ್ಪಂದನ ವನ್ನು (ಸಂಸ್ಕಾರ) ಸರಿಪಡಿಸಿಕೊಳ್ಳಬೇಕು.
೨. ಆ. ಸೇವೆ
೨ ಆ ೧. ಸೇವೆಯಲ್ಲಿನ ಬೇಕು-ಬೇಡದಿಂದಾಗಿ ಸಾಧನೆಯಲ್ಲಿ ಅಪರಿಮಿತ ಹಾನಿಯಾಗುವುದು ಹಾಗೂ ನಮ್ಮ ಕ್ಷಮತೆಯಿಂದಲ್ಲ, ಗುರುದೇವರ ಸಂಕಲ್ಪದಿಂದ ಎಲ್ಲರ ಸೇವೆ ಯೋಗ್ಯರೀತಿಯಲ್ಲಿ ಆಗುತ್ತಿದೆಯೆಂದು ನಿರಂತರ ಗಮನದಲ್ಲಿಡುವ ಅವಶ್ಯಕತೆಯಿರುವುದು : ಸೇವೆಯ ದೃಷ್ಟಿಯಿಂದಲೂ ನಾವು ಬೇಕು-ಬೇಡ ವೆಂಬುದರಲ್ಲಿ ಸಿಲುಕುತ್ತೇವೆ. ‘ನನಗೆ ಇದೇ ಸೇವೆ ಬೇಕು, ಬೇರೆ ಬೇಡ’, ಈ ಪ್ರವೃತ್ತಿಯಿಂದಾಗಿ ನಮ್ಮ ಸಾಧನೆಯಲ್ಲಿ ಅಪರಿಮಿತ ಹಾನಿಯಾಗುತ್ತದೆ. ಸೇವೆಯ ವಿಷಯದಲ್ಲಿ ಜಿಜ್ಞಾಸೆ, ಕಲಿಯುವ ವೃತ್ತಿ ಮತ್ತು ತಳಮಳ ಇವುಗಳಲ್ಲಿ ನಾವು ಹಿಂದೆ ಬೀಳುತ್ತೇವೆ. ಗುರುದೇವರು ನಮಗೆ ವಿವಿಧ ಸೇವೆಗಳನ್ನು ಒದಗಿಸಿ ಕೊಟ್ಟಿದ್ದಾರೆ, ಎಲ್ಲ ಸೇವೆಗಳಲ್ಲಿ ಅವರು ನಮ್ಮನ್ನು ಸಕ್ಷಮರನ್ನಾಗಿ ಮಾಡುತ್ತಿದ್ದಾರೆ. ಗುರುದೇವರು ನಮ್ಮೆಲ್ಲರಿಗೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಇತ್ಯಾದಿ ವರ್ಣಗಳ ಸೇವೆಗಳನ್ನು ಒದಗಿಸಿ ನಮಗೆ ವರ್ಣಾಶ್ರಮ ವ್ಯವಸ್ಥೆಯ ಎಲ್ಲ ಹಂತದಲ್ಲಿ ಮುಂದೆ ಹೋಗಲು ಆಶ್ರಮದಲ್ಲಿ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅವರವರ ಕ್ಷಮತೆಗನುಸಾರ ಎಲ್ಲ ಸೇವೆಗಳು ಆಶ್ರಮದಲ್ಲಿ ದೊರಕುತ್ತವೆ. ಅಷ್ಟೇ ಅಲ್ಲ, ನಮ್ಮನ್ನು ಒಂದು ಸೇವೆಯಲ್ಲಿ ಪರಿಪೂರ್ಣಗೊಳಿಸುವ ಸಲುವಾಗಿ ಗುರುದೇವರು ಅನೇಕ ಸೇವೆಗಳನ್ನು ನಮ್ಮ ಕ್ಷಮತೆಗನುಸಾರ ಒದಗಿಸಿಕೊಟ್ಟಿದ್ದಾರೆ. ಸೇವೆಯ ಮತ್ತು ಸಾಧನೆಯ ದೃಷ್ಟಿಯಿಂದ ಅವರು ನಮ್ಮಿಂದ ಸಮಷ್ಟಿ ಸೇವೆ ಮತ್ತು ಸಾಧನೆ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ಕ್ಷಮತೆ ಯಿಂದಲ್ಲ, ಗುರುದೇವರ ಸಂಕಲ್ಪದಿಂದ ನಮ್ಮೆಲ್ಲರ ಸೇವೆಗಳು ಯೋಗ್ಯ ರೀತಿಯಲ್ಲಿ ಆಗುತ್ತಿದೆಯೆಂದು ನಾವು ನಿರಂತರ ಗಮನದಲ್ಲಿಡಬೇಕು.
೨ ಆ ೨. ಪ್ರತಿಯೊಂದು ಸೇವೆಯನ್ನು ಕಲಿಯುವ ದೃಷ್ಟಿಯಿಂದ ಸ್ವೀಕರಿಸಿ ಗುರುಕಾರ್ಯವೆಂದು ತಳಮಳದಿಂದ ಮಾಡಿದರೆ, ಮನಸ್ಸು ಸ್ವೀಕರಿಸುವ ಸ್ಥಿತಿಗೆ ಬರುವುದು : ಪ್ರತಿಯೊಂದು ಸೇವೆಯನ್ನು ಜಿಜ್ಞಾಸೆಯಿಂದ ಕಲಿತು, ಕಲಿಯುವ ದೃಷ್ಟಿಯಿಂದ ಸ್ವೀಕರಿಸಿ ಗುರುಕಾರ್ಯವೆಂದು ತಳಮಳದಿಂದ ಮಾಡಿದರೆ ಮನಸ್ಸು ಸ್ವೀಕರಿಸುವ ಸ್ಥಿತಿಗೆ ಬರುತ್ತದೆ; ಆದ್ದರಿಂದ ಇಂದು ನಮ್ಮ ಸಂಸ್ಥೆಯಲ್ಲಿ ಹೆಚ್ಚೆಚ್ಚು ಸಾಧಕರು ಎಲ್ಲ ಸೇವೆಗಳಲ್ಲಿ ಕ್ಷಮತೆಯ ಆಚೆಗಿನ ಸೇವೆಮಾಡಿ ಗುರುದೇವರ ಸಂಕಲ್ಪದ ಆನಂದ ಪಡೆಯುತ್ತಿದ್ದಾರೆ. ‘ಎಲ್ಲವೂ ಗುರುದೇವರ ಸಂಕಲ್ಪದಿಂದಲೇ ನಡೆದಿದೆ’, ಎಂಬ ಭಾವವಿದ್ದರೆ ಸಾಧನೆಯಲ್ಲಿ ಅಡ್ಡ ಬರುವ ಬೇಕು-ಬೇಡವೆಂಬ ಗೋಡೆ ಕಳಚಿ ಬೀಳುವುದು.
೨ ಆ ೩. ಗುರುದೇವರು ದೊರಕಿಸಿದ ಆಶ್ರಮವ್ಯವಸ್ಥೆಯಿಂದ ತೃಪ್ತರಾಗಿ ಅದನ್ನು ಸ್ವೀಕಾರ ಮಾಡಬೇಕು ! : ಅನೇಕ ವಸ್ತುಗಳು, ಉಡುಗೆಗಳು, ಸ್ಥಳ, ಕಾಲ ಮತ್ತು ವ್ಯವಸ್ಥೆ ಇವುಗಳಲ್ಲಿಯೂ ನಾವು ಬೇಕು-ಬೇಡವೆಂಬುದರಲ್ಲಿ ಸಿಲುಕಿರುತ್ತೇವೆ. ನಮಗೆ ವಸ್ತು ಮತ್ತು ಉಡುಗೆಯ ಎಷ್ಟು ಅವಶ್ಯಕತೆಯಿದೆಯೋ, ಅಷ್ಟರಲ್ಲಿಯೇ ತೃಪ್ತರಾಗಬೇಕು. ಇಷ್ಟೆಲ್ಲ ತ್ಯಾಗ ಮಾಡಿದ ನಂತರ ಇಷ್ಟು ಸಣ್ಣ ವಿಷಯದಲ್ಲಿ ಸಿಲುಕಿಕೊಳ್ಳುವುದರಲ್ಲಿ ಅರ್ಥವಿಲ್ಲ. ನನ್ನ ಉಡುಪು, ನನ್ನ ಕಪಾಟು, ನನ್ನ ಕೋಣೆ, ನನ್ನ ಲೇಖನಿ, ನನ್ನ ಸಂಚಾರಿವಾಣಿ, ನನ್ನ ಕುರ್ಚಿ, ನನ್ನ ಹಾಸಿಗೆ ಇಂತಹ ಅನೇಕ ವಿಷಯ ಗಳಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಇದರಿಂದ ಹೊರಗೆ ಗುರುದೇವರು ದೊರಕಿಸಿಕೊಟ್ಟಿರುವ ವ್ಯವಸ್ಥೆ ಯಲ್ಲಿಯೇ ತೃಪ್ತರಾಗಿ ಅದನ್ನು ಸ್ವೀಕರಿಸಬೇಕು. ಇದರಲ್ಲಿಯೂ ಗುರುದೇವರು ನಮಗೆ ಯಾವುದೇ ವಿಷಯದಲ್ಲಿ ಯಾವುದೇ ಕೊರತೆಯನ್ನುಂಟು ಮಾಡಿಲ್ಲ. ನಮ್ಮ ಸ್ವಂತದ ಮನೆಯಲ್ಲಿ ನಮ್ಮ ಮಕ್ಕ ಳಿಂದಲೂ ಆಗದಿರುವಂತಹ ಸಾಧನೆಗೆ ಪೂರಕವಾದ ವ್ಯವಸ್ಥೆಯನ್ನು ಗುರುದೇವರು ನಮಗೆ ಆಶ್ರಮದಲ್ಲಿ ಒದಗಿಸಿಕೊಟ್ಟಿದ್ದಾರೆ. ಇಂದು ಸೇವೆ ಮತ್ತು ಸಾಧನೆ ಮಾಡುವ ಸಾಧಕರಿಗೆ ಆಶ್ರಮ ದುರ್ಲಭವಾಗಿದೆ. ಅದರಲ್ಲಿ ನಮ್ಮ ಆಶ್ರಮ ವ್ಯವಸ್ಥೆಯೆಂದರೆ ಹಿಂದೂ ರಾಷ್ಟ್ರದ ಪ್ರತಿಕೃತಿಯೇ ಆಗಿದೆ. ಅದಕ್ಕಾಗಿ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು ! ಆಶ್ರಮ ವ್ಯವಸ್ಥೆಯ ಪೂರ್ಣ ಲಾಭವನ್ನು ಯೋಗ್ಯ ರೀತಿಯಲ್ಲಿ ಸಾಧನೆ ಮಾಡಿ ಅನುಭವಿಸೋಣ.
೩. ಮನಸ್ಸು ಲಗಾಮಿಲ್ಲದ ಕುದುರೆಯಂತೆ ಇಚ್ಛಾನುಸಾರ ಓಡಾಡುತ್ತಿರುವಾಗ 
ಬುದ್ಧಿಯೆಂಬ ಲಗಾಮು ಆ ಕುದುರೆಯನ್ನು ವಶದಲ್ಲಿಟ್ಟುಕೊಳ್ಳಬೇಕು !
ಬೇಕು-ಬೇಡವೆಂಬ ಹೆಸರಿನ ಅವಿದ್ಯೆಯ ಆವರಣ ದಿಂದ ನಮಗೆ ತಿಳಿಯದಂತೆಯೇ ಸಾಧನೆಯಲ್ಲಿ ಬಹಳಷ್ಟು ಹಾನಿಯಾಗುತ್ತದೆ. ಪ.ಪೂ. ಗುರುದೇವರು ಹೇಳಿದಂತೆ ಮನಸ್ಸಿನ ವಿರುದ್ಧ ನಡೆಯುವುದೆಂದರೆ, ಸಾಧನೆ .’ ಈ ಬೇಕು-ಬೇಡವೆಂಬ ಕ್ಷೇತ್ರದಲ್ಲಿಯೂ ನಾವು ಸಹಜವಾಗಿ ಮನಸ್ಸಿನ ವಿರುದ್ಧ ಹೋಗ ಬಹುದು. ಮನಸ್ಸು ನಿಯಂತ್ರಣವಿಲ್ಲದ ಕುದುರೆ ಯಂತೆ ಇಚ್ಛಾನುಸಾರ ಓಡಾಡುತ್ತಿರುವಾಗ ಬುದ್ಧಿ
ಯೆಂಬ ಲಗಾಮು ಆ ಕುದುರೆಯನ್ನು ವಶದಲ್ಲಿಟ್ಟು ಕೊಳ್ಳಬೇಕು. ಹಾಗಾಗದಿದ್ದರೆ ಬೇಕು-ಬೇಡವೆಂಬ ಸಂಸ್ಕಾರವು ಪ್ರಬಲವಾಗಿ ಆ ಸಂಸ್ಕಾರದಿಂದ ನಮ್ಮ ಮೇಲೆ ಅವಿದ್ಯೆಯ ಆವರಣ ಹೆಚ್ಚಾಗಿ ನಾವು ಆತ್ಮಾನಂದದಿಂದ ವಂಚಿತರಾಗುತ್ತೇವೆ.
೪. ಸ್ವಭಾವದೋಷ ಮತ್ತು ಅಹಂ-ನಿರ್ಮೂಲನ ಪ್ರಕ್ರಿಯೆಯನ್ನು ಹಮ್ಮಿಕೊಂಡಿರುವುದರಿಂದ ಬೇಕು-ಬೇಡ ಕೇಂದ್ರದ ಮೇಲೆ ನಿಯಂತ್ರಣವಿಡಲು ಸಾಧ್ಯವಾಗುವುದು ಸಾಧನೆಯೆಂದರೆ, ಆತ್ಮದ ಸುತ್ತಲಿರುವ ಅವಿದ್ಯೆಯ ಆವರಣವನ್ನು ಅಳಿಸಿ ಆತ್ಮಾನಂದವನ್ನು ಪಡೆಯುವ ಒಂದು ಪದ್ಧತಿ. ಅದಕ್ಕಾಗಿ ಗುರುದೇವರು ನಮಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಮತ್ತು ಗುಣಸಂವರ್ಧನೆ’ ಎಂಬ ಅಮೂಲ್ಯವಾದ ಪ್ರಕ್ರಿಯೆಯನ್ನೇ ಕೊಟ್ಟಿದ್ದಾರೆ. ಅದರ ಒಂದು ಭಾಗವೆಂದರೆ ಬೇಕು-ಬೇಡ ಕೇಂದ್ರವನ್ನು ನಿಯಂತ್ರಿಸುವುದು !
ಸೂರ್ಯನ ಮೇಲೆ ಮೋಡ ಕವಿಯುವ ಹಾಗೆ ಅಥವಾ ನಿರ್ಮಲವಾದ ನೀರಿನ ಮೇಲೆ ಹಾವಸೆ (ಪಾಚಿ) ಬರುವ ಹಾಗೆ ನಾವು ನಮ್ಮ ಮೂಲ ಚೈತನ್ಯದಿಂದ ಬೇಕು-ಬೇಡ ಈ ಅವರಣದಿಂದಾಗಿ ವಂಚಿತರಾಗಿದ್ದೇವೆ.
೫. ಸಾಧನೆಯಲ್ಲಿ ಇಂದ್ರಿಯನಿಗ್ರಹಕ್ಕೆ ಮಹತ್ವ ವಿದ್ದು ಸಾಧನೆಯ ತಳಮಳವಿದ್ದರೆ ಮನೋನಿಗ್ರಹವು ಸಹಜವಾಗಿ ಆಗುವುದು
ಗುರುಕೃಪೆಯಿಂದ ನಾವೆಲ್ಲರೂ ಮನೆ, ಸಂಸಾರ, ವ್ಯವಹಾರ, ಉದ್ಯೋಗ ಮತ್ತು ಮಾಯೆಯ ಆಕರ್ಷಣೆ ಇವೆಲ್ಲವನ್ನೂ ತ್ಯಾಗ ಮಾಡಿ ಬಂದಿದ್ದೇವೆ. ಇದೇನೂ ಸಾಮಾನ್ಯ ತ್ಯಾಗವಲ್ಲ. ಗುರುದೇವರ ಕೃಪೆಯಿಂದಲೇ ಇದು ನಮಗೆ ಸಹಜವಾಗಿ ಸಾಧ್ಯವಾಯಿತು; ಆದರೆ ನಮ್ಮ ಅಂತರ್ಮನಸ್ಸಿನ ಬೇಕು-ಬೇಡದಿಂದಾಗಿ ಇಷ್ಟು ತ್ಯಾಗ ಮಾಡಿದರೂ ಇನ್ನೂ ಅನೇಕ ಬೇಕು-ಬೇಡ ವೆಂಬ ತೀವ್ರತೆಯಿಂದ ಬಂಧಿಸಲ್ಪಟ್ಟಿದ್ದೇವೆ. ಇದು ಅಸಾಧ್ಯವಲ್ಲ; ಆದರೆ ಇದರತ್ತ ಗಮನಹರಿಸಲು ನಾವು ಕಡಿಮೆ ಬೀಳುತ್ತಿದ್ದೇವೆ. ಮೋಹವೆಂದರೆ ಕೇವಲ ಸಂಸಾರ ಮತ್ತು ವ್ಯವಹಾರದ ಮೇಲೆ ಮಾತ್ರವಲ್ಲ. ನಮ್ಮ ಬೇಕು-ಬೇಡವೆಂಬುದು ಸಹ ಒಂದು ಮೋಹವೇ ಆಗಿದೆ. ಆದ್ದರಿಂದ ಸಣ್ಣ ಸಣ್ಣ ವಿಷಯಗಳ ದೃಢವಾದ ಸಂಸ್ಕಾರಗಳು ನಮ್ಮ ಮೇಲಾಗಿವೆ. ‘ಮನ ಎವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ ’ ಅಂದರೆ ‘ನಮ್ಮ ಮನಸ್ಸೇ ನಮ್ಮ ಬಂಧನದ ಹಾಗೂ ಮೋಕ್ಷದ ಕಾರಣವಾಗಿದೆ.’ ಸಾಧನೆಯಲ್ಲಿ ಇಂದ್ರಿಯ ನಿಗ್ರಹಕ್ಕೆ ಪ್ರಾಮುಖ್ಯತೆಯಿಂದ ಮಹತ್ವ ನೀಡಲಾಗಿದೆ. ಈ ಇಂದ್ರಿಯಗಳಿಂದಾಗಿ ಅಂತರ್ಮನಸ್ಸಿನಲ್ಲಿ ಪ್ರಬಲವಾದ ಸಂಸ್ಕಾರ ಕೇಂದ್ರಗಳು ನಿರ್ಮಾಣವಾಗಿ ನಾವು ನಿಜವಾದ ಆನಂದದಿಂದ (ಚೈತನ್ಯದಿಂದ) ವಂಚಿತರಾಗುತ್ತೇವೆ. ಮನಸ್ಸೇ ಈ ಇಂದ್ರಿಯಗಳಿಗೆ ಬಲಿಯಾಗಿರುವುದರಿಂದ ನಾವು ಮನೋನಿಗ್ರಹ ವನ್ನೇ ಮಾಡಬೇಕು. ಸಾಧನೆಯ ತಳಮಳವಿದ್ದರೆ ಮನೋನಿಗ್ರಹವು ಸಹಜವಾಗಿ ಸಾಧ್ಯವಿದೆ.
೬. ಮುಂಬರುವ ಘೋರ ಆಪತ್ಕಾಲದ ಬಗ್ಗೆ ವಿಚಾರ ಮಾಡಿದರೆ, 
ಬೇಕು-ಬೇಡವೆಂಬ ಸಂಸ್ಕಾರದಿಂದ ಹೊರಗೆ ಬರುವುದು ಆವಶ್ಯಕವಾಗಿದೆ !
ನಾವು ಪ್ರಯತ್ನಪೂರ್ವಕ ಈ ಬೇಕು-ಬೇಡ ವೆಂಬುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತೇವೆ. ಆಗ ಸಹಜವಾಗಿಯೇ ಮನಸ್ಸಿಗೆ ದುಃಖವಾಗುತ್ತದೆ; ಆದರೆ ನಿಯಮಿತವಾಗಿ ಈ ಪ್ರಯತ್ನವನ್ನು ಮುಂದು ವರಿಸಿದರೆ, ಅದು ಸಹಜವಾಗಿ ನಡೆದು ಬೇಕು-ಬೇಡವೆಂಬ ಸಂಸ್ಕಾರವನ್ನು ಜಯಿಸಬಹುದು. ಮುಂಬರುವ ಘೋರ ಆಪತ್ಕಾಲದ ವಿಚಾರ ಮಾಡಿ ದರೆ ಈ ಬೇಕು-ಬೇಡವೆಂಬ ಸಂಸ್ಕಾರದಿಂದ ಹೊರಗೆ ಬರುವುದು ಅತ್ಯಾವಶ್ಯಕವಾಗಿದೆ. ಇದು ಅಸಾಧ್ಯ ವೇನೂ ಅಲ್ಲ. ಮನೋನಿಗ್ರಹ ಮಾಡಿ ಸಾಧನೆಯಲ್ಲಿನ ಹಾನಿಯತ್ತ ಗಮನಹರಿಸಿದರೆ ಇದು ಸಹಜವಾಗಿ ಸಾಧ್ಯವಾಗುವುದು. ಅನೇಕ ವಿಚಾರಗಳನ್ನು ತ್ಯಜಿಸಿ ಬಂದಿರುವ ಸಾಧಕರಿಗೆ ಇದು ಖಂಡಿತ ಸಾಧ್ಯವಾಗುವುದು. ಇದುವರೆಗೆ ಬಹುಶ್ಯ ನಮ್ಮ ಗಮನ ಅದರ ಕಡೆಗೆ ಹೋಗಿರಲಿಕ್ಕಿಲ್ಲ. ಇನ್ನಾದರೂ ಅದರ ಬಗ್ಗೆ ಚಿಂತನೆ ಮಾಡಿ ಕೃತಿ ಮಾಡಿದರೆ, ಅದು ನಮ್ಮ ಆಧ್ಯಾತ್ಮಿಕ ಪ್ರಗತಿಗೆ ಪೂರಕವಾಗಬಹುದು. ಇದು ತಕ್ಷಣ ಮಾಡುವ ಕೃತಿಯಲ್ಲ. ಹಂತಹಂತವಾಗಿ ಹಾಗೂ ಸಹಜತೆಯಿಂದ ಅದನ್ನು ಮಾಡಲಿಕ್ಕಿದೆ. ನಮಗೆ ಅದೆಲ್ಲವನ್ನು ಸಾಧ್ಯಗೊಳಿಸಿ ಮನಸ್ಸಿಗೆ ನಿಧಾನವಾಗಿ ಹೊಡೆದು ಅದರಲ್ಲಿ ಬದಲಾವಣೆ ಮಾಡಲಿಕ್ಕಿದೆ.
೭. ಬೇಕು-ಬೇಡವೆಂಬ ವಿಷಯದಲ್ಲಿ ಮನೋನಿಗ್ರಹವೇ ಯೋಗ್ಯವಾದ 
ಉಪಾಯವಾಗಿದ್ದು ಅದು ಆಧ್ಯಾತ್ಮಿಕ ಸಾಧನೆಯ ಬಲದಿಂದಲೇ ಸಾಧ್ಯವಾಗುವುದು !
ಇಂದ್ರಿಯನಿಗ್ರಹಕ್ಕಾಗಿ ಸಾಧನೆಯ ಹೊರತು ಬೇರೆ ಪರ್ಯಾಯವಿಲ್ಲ. ಬೇಕು-ಬೇಡವೆಂಬುದರ ಯೋಗ್ಯವಾದ ಉಪಾಯವೆಂದರೆ ಮನೋನಿಗ್ರಹವಾಗಿದೆ. ಅದು ಆಧ್ಯಾತ್ಮಿಕ ಸಾಧನೆಯ ಬಲದಿಂದಲೇ ಸಾಧ್ಯವಾಗುತ್ತದೆ. ಸಾಮಾನ್ಯ ವ್ಯಕ್ತಿಗೂ ಪಂಚ ಜ್ಞಾನೇಂದ್ರಿಯದ ಮೇಲೆ ನಿಯಂತ್ರಣ ಪಡೆಯಲು ಸಾಧ್ಯವಾಗುವುದಿಲ್ಲ. ಇದೆಲ್ಲ ಮನಸ್ಸಿನ ಆಟವಾಗಿದ್ದು ಅದು ಅಂತರ್ಮನಸ್ಸಿನಲ್ಲಿನ ಸಂಸ್ಕಾರಗಳ ಪ್ರಕ್ರಿಯೆ ಯಾಗಿದೆ. ಜನ್ಮಜನ್ಮಾಂತರದ ಸಂಸ್ಕಾರಗಳ ಮೇಲೆ ನಿಯಂತ್ರಣವನ್ನು ಪಡೆಯಲು ಗುರುದೇವರು ನಮಗೆ ಅಷ್ಟಾಂಗ ಸಾಧನೆಯನ್ನು ಕೊಟ್ಟಿದ್ದಾರೆ. ವಸ್ತು ಮತ್ತು ವಿಷಯಗಳತ್ತ ಆಕರ್ಷಿತರಾಗುವುದಕ್ಕಿಂತ ಅದರ ನಿರ್ಮಾಪಕನತ್ತ ಅಂದರೆ ಭಗವಂತನತ್ತ ಆಕರ್ಷಿತರಾದರೆ ಈ ಬೇಕು-ಬೇಡವೆಂಬ ತೊಂದರೆಯಿಂದ ನಾವು ಮುಕ್ತರಾಗಬಹುದು. ಈ ಬೇಕು-ಬೇಡವನ್ನು ನಾವು ದೇಹಕ್ಕಾಗಿ ಮಾಡುತ್ತಾ ಇರುತ್ತೇವೆ. ಇದು ಅಹಂ ಆಗು ತ್ತದೆ. ಈ ಸುಪ್ತ ಅಹಂನಿಂದ ನಾವು ಹೊರಗೆ ಬರಬೇಕು.
೮. ಮನಸ್ಸನ್ನು ನಿರ್ಮಲಗೊಳಿಸಿ ಶೂನ್ಯ ಸ್ಥಿತಿಗೆ ತರಲು ಬೇಕು-ಬೇಡವೆಂಬುದನ್ನು ಜಯಿಸದೆ ಪರ್ಯಾಯವಿಲ್ಲ !
ಮಡಕೆಯಲ್ಲಿನ ಸಣ್ಣ ರಂದ್ರವು ಅದರಲ್ಲಿನ ನೀರನ್ನು ಬರಿದಾಗಿಸುತ್ತದೆ. ಅದೇ ರೀತಿ ನಮ್ಮ ಸಾಧನೆಯಲ್ಲಿನ ಸಣ್ಣ ವಿಷಯಗಳು ನಮಗೆ ಹಾನಿ ಮಾಡುತ್ತವೆ. ಬೇಕು-ಬೇಡವೆಂಬುದು ಸ್ವೇಚ್ಛೆ ಯಾಗಿದೆ. ಪರೇಚ್ಛೆ ಮತ್ತು ಈಶ್ವರೇಚ್ಛೆಯಿಂದ ಚೈತನ್ಯ ನಿರ್ಮಾಣವಾಗುತ್ತದೆ. ನಮ್ಮ ಮನಸ್ಸನ್ನು ನಿರ್ಮಲಗೊಳಿಸಿ ಶೂನ್ಯ ಸ್ಥಿತಿಗೆ ತರಲು ನಮ್ಮ ಬೇಕು-ಬೇಡ ಗಳನ್ನು ಜಯಿಸದೆ ಪರ್ಯಾಯವಿಲ್ಲ. ಅದಕ್ಕಾಗಿ ಆಧ್ಯಾತ್ಮಿಕ ಸಾಧನೆಯ ಬಲವೇ ಬೇಕು.
ಈ ಲೇಖನವನ್ನು ಶ್ರೀಕೃಷ್ಣನೇ ನನ್ನ ಮನಸ್ಸಿನಲ್ಲಿದ್ದು ಬರೆಯಿಸಿಕೊಂಡಿರುವುದರಿಂದ ಅದನ್ನು ಶ್ರೀಕೃಷ್ಣ ಮತ್ತು ಗುರುದೇವರ ಚರಣಕಮಲಗಳಲ್ಲಿ ಅರ್ಪಿಸುತ್ತೇನೆ.’ - (ಪೂ.) ಕೆ.ಉಮೇಶ ಶೆಣೈ, ಸನಾತನ ಆಶ್ರಮ, ದೇವದ ಪನವೇಲ್. (೨೮.೧.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಸಾಧನೆಯಲ್ಲಿ ಅಡಚಣೆಯನ್ನುಂಟು ಮಾಡುವ ಬೇಕು-ಬೇಡ (ಇಷ್ಟಾನಿಷ್ಟ) ಎಂಬುದನ್ನು ಕಡಿಮೆಗೊಳಿಸಲು ಮನೋನಿಗ್ರಹ ಮಾಡಿ ಪ್ರಯತ್ನಿಸಿರಿ !