ಆಚಾರಧರ್ಮದಿಂದ ವ್ಯಾವಹಾರಿಕ ಮತ್ತು ರಾಷ್ಟ್ರೀಯ ಜೀವನದ ಉತ್ಕರ್ಷವೂ ಆಗುತ್ತದೆ !

ಆಚಾರಗಳ ಪಾಲನೆಯಿಂದ ಕೇವಲ ಆಧ್ಯಾತ್ಮಿಕ ಲಾಭವಷ್ಟೇ ಆಗು ತ್ತದೆ ಎಂದೇನಿಲ್ಲ, ಅದರೊಂದಿಗೆ ವ್ಯಕ್ತಿಯ ವ್ಯಾವಹಾರಿಕ ಜೀವನದ ಉತ್ಕರ್ಷವೂ ಆಗುತ್ತದೆ. ಉದಾ. ‘ಸತ್ಯದಿಂದ ನಡೆದುಕೊಳ್ಳಬೇಕು’ ಎಂಬ ಆಚಾರದ ಪಾಲನೆಯಿಂದ ವ್ಯಕ್ತಿಗೆ ಸುಳ್ಳು ಮಾತನಾಡಿದ ಪಾಪವು ತಗಲುವುದಿಲ್ಲ, ಮಾತ್ರ ವಲ್ಲದೇ ಅವನಲ್ಲಿ ನೈತಿಕತೆ ಮತ್ತು ಸುಸಂಸ್ಕೃತತೆ ಎಂಬ ಗುಣಗಳ ವಿಕಾಸವೂ ಆಗುತ್ತದೆ. ಆಚಾರಗಳ ಪಾಲನೆಯಿಂದ ವ್ಯಕ್ತಿಗೆ ಒಂದು ರೀತಿಯ ಶಿಸ್ತು ಬರುತ್ತದೆ. ಶಿಸ್ತುಬದ್ಧತೆಯು ಆದರ್ಶ ಜೀವನಪದ್ಧತಿಯ ಒಂದು ಮಹತ್ವದ ಗುಣವಾಗಿದೆ.

ಆಚಾರವು ಹಿಂದೂಗಳ ಶ್ರದ್ಧೆಯ ಮತ್ತು ಸಂಸ್ಕೃತಿಯ ನಿಯಮ ವಾಗಿದೆ. ವಿವಿಧ ಉಪಾಸನಾ ಪಂಥ ಮತ್ತು ಸಂಪ್ರದಾಯಗಳಲ್ಲಿನ ಹಿಂದೂಗಳ ಧರ್ಮಾಚರಣೆಯ ಪದ್ಧತಿಗಳು ವಿಭಿನ್ನವಾಗಿದ್ದರೂ, ಸದಾಚಾರ ಅಥವಾ ಶಿಷ್ಟಾಚಾರ ಇವು ಧರ್ಮದ ಒಂದು ಪ್ರಮಾಣ ವೆಂದು ಪರಿಗಣಿಸಲ್ಪಟ್ಟಿರುವುದರಿಂದ ಧರ್ಮದ ಈ ಸಮಾನ ನಿಯಮದಿಂದ ಹಿಂದೂಗಳು ಪರಸ್ಪರ ಬಂಧಿಸಲ್ಪಟ್ಟಿದ್ದಾರೆ. ಹಿಂದೂಗಳ ಧಾರ್ಮಿಕ ಒಗ್ಗಟ್ಟಿನ ಮೇಲೆ ಹಿಂದೂಗಳ ಐಕ್ಯವು ಅವಲಂಬಿಸಿಕೊಂಡಿದೆ. ಐಕ್ಯದ ಮೇಲೆ ಸಮಾಜದ ಉನ್ನತಿ ಮತ್ತು ಪರ್ಯಾಯವಾಗಿ ರಾಷ್ಟ್ರದ ಉತ್ಕರ್ಷವೂ ಅವಲಂಬಿಸಿಕೊಂಡಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಆಚಾರಧರ್ಮದಿಂದ ವ್ಯಾವಹಾರಿಕ ಮತ್ತು ರಾಷ್ಟ್ರೀಯ ಜೀವನದ ಉತ್ಕರ್ಷವೂ ಆಗುತ್ತದೆ !