ಪಂಚಮ 'ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಸಂತರು ಹಾಗೂ ಹಿಂದುತ್ವವಾದಿ ಧರ್ಮಾಭಿಮಾನಿಗಳು ಮಂಡಿಸಿದ ಪ್ರಖರ ವಿಚಾರಗಳು

ಹಿಂದೂ ಜನಜಾಗೃತಿ ಸಮಿತಿಯು ಜಗತ್ತಿನಲ್ಲಿ ಉತ್ಕೃಷ್ಟ ಕಾರ್ಯವನ್ನು ಮಾಡುತ್ತಿದೆ !
- ಮಹಂತ ಇಚ್ಛಾಗಿರಿ ಮಹಾರಾಜರು
ಹಿಂದೂ ಅಧಿವೇಶನವನ್ನು ಆಯೋಜಿಸಿರುವ ಹಿಂದೂ ಜನಜಾಗೃತಿ ಸಮಿತಿಯು ಜಗತ್ತಿನಲ್ಲಿ ಉತ್ಕೃಷ್ಟ ಕಾರ್ಯವನ್ನು ಕೈಗೊಳ್ಳುತ್ತಿದೆ. ಸನಾತನ ಸಂಸ್ಥೆಯ ರಾಮನಾಥಿಯಲ್ಲಿರುವ ಆಶ್ರಮವನ್ನು ನೋಡಿ ಭಾವಿ ಹಿಂದೂ ರಾಷ್ಟ್ರ ಹೇಗಿರಬಹುದು ಎನ್ನುವ ಕಲ್ಪನೆ ಬರುತ್ತದೆ, ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಒಂದು ವೇಳೆ ಸೆಕ್ಯುಲರ್ ವಿಶ್ವವಿದ್ಯಾಲಯಗಳು ಹಿಂದುತ್ವವನ್ನು ಕಲಿಸದಿದ್ದರೆ, ಹಿಂದೂಗಳಿಗೆ ಅವರ ವಿಶ್ವವಿದ್ಯಾಲಯ ನಿರ್ಮಿಸಲು ಅಧಿಕಾರ ನೀಡಿ ! - ಪ್ರಾ. ರಾಮೇಶ್ವರ ಮಿಶ್ರಾ
ಹಿಂದೂಗಳಲ್ಲಿ ಸ್ವಧರ್ಮ, ಪರಂಪರೆ, ಪೂರ್ವಜರ ಬಗ್ಗೆ ಗೌರವ ನಿರ್ಮಾಣವಾಗಲು ಭಾರತೀಯ ಇತಿಹಾಸದ ಪುನರ್‌ಲೇಖನವಾಗಬೇಕು. ಯುರೋಪಿನ  ಎಲ್ಲ ದೇಶಗಳಿಗೆ ೨೦೦ ವರ್ಷಗಳಿಗಿಂತ ಹೆಚ್ಚಿನ ಇತಿಹಾಸವಿಲ್ಲ. ಆದ್ದರಿಂದ ಯುರೋಪಿನ ಜನರು ಲಂಡನ್ನಿನ ರಾಜನನ್ನು ಕೇಂದ್ರಬಿಂದುವನ್ನಾಗಿರಿಸಿ ಇತಿಹಾಸವನ್ನು ಬರೆದಿದ್ದಾರೆ. ಭಾರತದಲ್ಲಿಯೂ ವಂಚಕ ಜನರು ಬರೆದ ಸುಳ್ಳು ಇತಿಹಾಸವನ್ನು ದೇಶವಾಸಿಯರ ಮೇಲೆ ಬಿಂಬಿಸುತ್ತಿದ್ದಾರೆ. ಇಂಗ್ಲೆಂಡ್, ಫ್ರಾನ್ಸ್ ದೇಶಗಳ ಇತಿಹಾಸ ಕಲಿಸುವುದರಿಂದ ಭಾರತ ಮಹಾನ್ ಹೇಗಾಗುವುದು ? ಒಂದು ವೇಳೆ ವಿಶ್ವವಿದ್ಯಾಲಯದಲ್ಲಿ ಹಿಂದೂಗಳ ನಿಜವಾದ ಇತಿಹಾಸ ಕಲಿಸದಿದ್ದರೆ ಹಿಂದೂಗಳಿಗೆ ಬೇರೆ ವಿಶ್ವವಿದ್ಯಾಲಯ ನಿರ್ಮಿಸುವ ಅಧಿಕಾರ ನೀಡಿ, ಎಂದು ಹಿಂದೂಗಳು ಹೇಳಬೇಕು. ಹಾಗಾಗಿ ಹಿಂದೂಗಳ ಗೌರವಶಾಲಿ ಇತಿಹಾಸದ ಪುನರ್‌ಲೇಖನವಾಗಿ ಸುಳ್ಳು ಪ್ರಚಾರಕ್ಕೆ ಪ್ರತ್ಯುತ್ತರ ನೀಡುವುದು ಆವಶ್ಯಕವಿದೆ.
ಧರ್ಮವು ರಾಷ್ಟ್ರವಾದದ ಬುನಾದಿಯಾಗಿದೆ. ಸಾಧನೆಯಿಲ್ಲದ ರಾಷ್ಟ್ರವಾದದಲ್ಲಿ ಅನೇಕ ಅಡಚಣೆಗಳು ಬರುತ್ತವೆ. ಜಗತ್ತಿನ ಎಲ್ಲ ದೇಶದ ಕಾನೂನು ಅವರ ಸಂಸ್ಕೃತಿಯ ಆಧಾರದಲ್ಲಿ ರಚಿಸಲಾಗಿದೆ. ಹೀಗಿರುವಾಗ ಭಾರತದಲ್ಲಿ ಏಕೆ ಹಾಗಾಗಬಾರದು ? ಸಾಧನೆಯಿಲ್ಲದ ರಾಷ್ಟ್ರವಾದವು ಪೊಳ್ಳಾಗಿದ್ದು, ವಿನಾಶದೆಡೆಗೆ ಒಯ್ಯುವುದು.

ಹಿಂದೂಗಳಲ್ಲಿ ಧರ್ಮಬಾಂಧವ್ಯ ನಿರ್ಮಾಣವಾಗಿ ಅವರ ರಾಷ್ಟ್ರವ್ಯಾಪಿ ಸಂಘಟನೆ ನಿರ್ಮಾಣವಾಗಬೇಕು !
- ಪೂ. ಡಾ. ಚಾರುದತ್ತ ಪಿಂಗಳೆ
ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಸಂಘಟಕರಾದ ಪೂ. ಡಾ. ಚಾರುದತ್ತ ಪಿಂಗಳೆಯವರು ಅಖಿಲ ಭಾರತೀಯ ಹಿಂದೂ ರಾಷ್ಟ್ರ ಸಂಘಟಕ ಅಧಿವೇಶನದ ಉದ್ದೇಶವನ್ನು ಸ್ಪಷ್ಟಪಡಿಸುವಾಗ, ‘‘ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂಗಳಲ್ಲಿ ಧರ್ಮಬಾಂಧವ್ಯವು ನಿರ್ಮಾಣವಾಗುವುದು ಆವಶ್ಯಕವಾಗಿದೆ. ಅದಕ್ಕಾಗಿ ಎಲ್ಲ ಕ್ಷೇತ್ರಗಳಲ್ಲಿರುವ ಹಿಂದೂಗಳ ರಾಷ್ಟ್ರವ್ಯಾಪಿ ಸಂಘಟನೆ ನಿರ್ಮಾಣವಾಗಬೇಕು. ಹಿಂದುತ್ವವಾದಿ ಕಾರ್ಯಕರ್ತರು ಹಿಂದೂ ಸಂಘಟನೆಯಲ್ಲಿ ಅಡೆತಡೆಯುಂಟು ಮಾಡುವ ಹುದ್ದೆ, ಮಾನಸನ್ಮಾನ, ಅಧಿಕಾರ ಈ ವಿಷಯಗಳಿಂದ ಹೆಚ್ಚಾಗುವ ಅಹಂಕಾರವನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಕಾಲಮಹಾತ್ಮೆಗನುಸಾರ ಮತ್ತು ಸಂತರ ಆಶೀರ್ವಾದದ ಬಲದಿಂದ ೨೦೨೩ ರಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆ ಖಂಡಿತವಾಗಿಯೂ ಆಗಲಿದ್ದು ಆ ಕಾರ್ಯದಲ್ಲಿ ತಮ್ಮತಮ್ಮ ಕ್ಷಮತೆಗನುಸಾರ ಯೋಗದಾನವನ್ನು ನೀಡುವುದೇ ಧರ್ಮಕಾರ್ಯವಾಗಿದೆ’’, ಎಂಬುದನ್ನು ಎಲ್ಲ ಹಿಂದೂಗಳು ಗಮನದಲ್ಲಿಡಬೇಕು.

ಪಾಶ್ಚಾತ್ಯ ಶಿಕ್ಷಣದ ಮೂಲಕ ಹಿಂದೂ ಧರ್ಮಶಾಸ್ತ್ರದ ಮೇಲೆ ಆಘಾತ ಮಾಡಲು ಸಂಚು !
- ಡಾ. ಶಿವನಾರಾಯಣ ಸೇನ್, ಪ.ಬಂಗಾಲ
ರಾಮನಾಥಿ (ಗೋವಾ) - ಇಂದು ಹಿಂದೂ ಧರ್ಮಶಾಸ್ತ್ರ ಮತ್ತು ಸಂಸ್ಕೃತಿಯ ಮೇಲೆ ಕೆಸರೆರಚಿ ಹಿಂದೂಗಳ ಬುದ್ಧಿಭ್ರಷ್ಟ ಮಾಡುವ ಸಂಚು ನಡೆಯುತ್ತಿದೆ. ಪ್ರಾಚೀನ ಹಿಂದೂ ಧರ್ಮಶಾಸ್ತ್ರದ ಮೇಲೆ ನಿತ್ಯವೂ ವಿವಿಧ ಮಾಧ್ಯಮಗಳಿಂದ ಆಘಾತಗಳಾಗುತ್ತಿವೆ. ಪ್ರಾಚೀನ ಧರ್ಮಶಾಸ್ತ್ರದಲ್ಲಿ ಹೇಳಿದ ಪ್ರತಿಯೊಂದು ಶಬ್ದವೂ ಸತ್ಯವಾಗಿದೆ; ಆದರೆ ಪಾಶ್ಚಾತ್ಯ ಶಿಕ್ಷಣ ಪದ್ಧತಿಯಿಂದಾಗಿ ನಾವು ಈ ಅಮೂಲ್ಯ ಕೊಡುಗೆಯನ್ನು ಮರೆತಿದ್ದೇವೆ. ಪ್ರಾಚೀನ ಶಾಸ್ತ್ರದಲ್ಲಿ ಹೇಳಿದ ಅನೇಕ ವಿಷಯಗಳು ಆಧುನಿಕ ವಿಜ್ಞಾನದ ಮೂಲಕ ಇಂದು ಪುನಃ ಸಿದ್ಧವಾಗುತ್ತಿವೆ. ಧರ್ಮಶಾಸ್ತ್ರವನ್ನು ಪ್ರಮಾಣವಾಗಿಟ್ಟು ಅದರ ಆಚರಣೆ ಮಾಡಿದರೆ ಭಾರತ ಪುನಃ ವೈಭವಶಾಲಿಯಾಗುವುದು ಇದರಲ್ಲಿ ಸಂದೇಹವಿಲ್ಲ, ಎಂದು ಕೋಲಕಾತಾ (ಪಶ್ಚಿಮ ಬಂಗಾಲ)ದ ಶಾಸ್ತ್ರ ಧರ್ಮ ಪ್ರಚಾರ ಸಭೆಯ ಕಾರ್ಯದರ್ಶಿ ಡಾ. ಶಿವನಾರಾಯಣ ಸೇನ್‌ರವರು ಪ್ರತಿಪಾದಿಸಿದರು. ಅವರು ಜೂನ್ ೨೩ ರಂದು ನಡೆದ ಅಖಿಲ ಭಾರತೀಯ ಹಿಂದೂ ಅಧಿವೇಶನದ ಅಂತರ್ಗತ ‘ಅಖಿಲ ಭಾರತೀಯ ಹಿಂದೂ ರಾಷ್ಟ್ರ ಸಂಘಟಕ ಅಧಿವೇಶನ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.

ಅರಬ್ ರಾಷ್ಟ್ರಗಳೊಂದಿಗೆ ಚೀನಾ ಮತ್ತು ರಷ್ಯಾಗಳೂ ಭಾರತದ್ದೇ ಭಾಗವಾಗಿದ್ದವು !
- ಪ್ರಾ. ಕುಸುಮಲತಾ ಕೆಡಿಯಾ, ಭೋಪಾಲ
ಭಾರತದ ದೈದಿಪ್ಯಮಾನ ಇತಿಹಾಸವನ್ನು ದೇಶದಿಂದ ಮುಚ್ಚಿಟ್ಟು ಯಾವ ರೀತಿ ಸಂಕುಚಿತಗೊಳಿಸಲಾಯಿತೆಂಬ ಬಗ್ಗೆ ಭೋಪಾಲ (ಮಧ್ಯಪ್ರದೇಶ)ದ ಧರ್ಮಪಾಲ ಶೋಧ ಪೀಠದ ಸಂಚಾಲಕರಾದ ಪ್ರಾ. ಕುಸುಮಲತಾ ಕೇಡಿಯಾರವರು ಮಾತನಾಡುತ್ತಾ, ‘‘ನಮಗೆ ಭಾರತದ ಗಡಿಯನ್ನು ೧೯೪೭ ರಲ್ಲಿ ತಯಾರಿಸಿದ ನಕಾಶೆಯ ಆಧಾರದಲ್ಲಿ ಹಿಮಾಲಯದ ವರೆಗೆ ಮಾತ್ರ ನೋಡುವ ಅಭ್ಯಾಸವಾಗಿದೆ. ಆದರೆ ಪ್ರತ್ಯಕ್ಷದಲ್ಲಿ ಭಾರತದ ಧರ್ಮಶಾಸ್ತ್ರಗಳು, ಪುರಾಣ ಇವುಗಳ ಆಧಾರ ಪಡೆದರೆ ಗಮನಕ್ಕೆ ಬರುವ ವಿಷಯವೆಂದರೆ, ಅಫ್ಘಾನಿಸ್ತಾನ, ತುರ್ಕಸ್ತಾನ, ಕಝಾಕಿಸ್ತಾನ, ಉಜಬೇಕಿಸ್ತಾನ ಸಹಿತ ಎಲ್ಲ ಅರಬ್ ಮತ್ತು ಮುಸಲ್ಮಾನ ರಾಷ್ಟ್ರಗಳು ಕೆಲವು ಸಾವಿರಾರು ವರ್ಷಗಳ ಹಿಂದೆ ಸಂಸ್ಕೃತ ಭಾಷೆ ಮಾತನಾಡುವ ದೇಶಗಳಾಗಿದ್ದವು. ಈ ದೇಶದ ಮರುಭೂಮಿಯ ಮರಳಿನ ಕೆಳಗೆ ಸಾವಿರಾರು ಸಂಸ್ಕೃತ ಗ್ರಂಥಗಳು ದೊರೆತಿವೆ. ಇವೆಲ್ಲ ದೇಶಗಳು ಬ್ರಹ್ಮ, ವಿಷ್ಣು ಮತ್ತು ಮಹೇಶ ಸಹಿತ ಎಲ್ಲ ದೇವತೆಗಳು ಮತ್ತು ಗಂಗಾ ನದಿಯ ಪೂಜಕವಾಗಿದ್ದವು. ಇಷ್ಟೇ ಅಲ್ಲದೇ ಜರ್ಮನಿ ಮತ್ತು ರಷ್ಯಾದಲ್ಲಿ ದೊರೆತ ಪ್ರತಿಮೆ ಮತ್ತು ಮೂರ್ತಿ ಭಾರತೀಯ  ಹೋಲಿಕೆಯಾಗುತ್ತವೆ. ಹಾಗಾಗಿ ಇವೆಲ್ಲ ದೇಶಗಳು ಭಾರತದ್ದೇ ಒಂದು ಭಾಗವಾಗಿದ್ದವು, ಎಂಬುದು ಸಿದ್ಧವಾಗುತ್ತದೆ. ಭಾರತವು ಸರ್ವಾಧಿಕ ಯೋಧರು ಮತ್ತು ಒಟ್ಟು ರಾಷ್ಟ್ರೀಯ ಉತ್ಪನ್ನವಿರುವ ದೇಶವಾಗಿತ್ತು. ಭಾರತೀಯ ಕಾಲಗಣನೆಗನುಸಾರ ಭಾರತವು ಸ್ವಾಭಾವಿಕ ‘ಸನಾತನ ಹಿಂದೂ ರಾಷ್ಟ್ರ’ವೇ ಆಗಿದೆ. ೧೯೨೨ ನೇ ಇಸ್ವಿಯ ತನಕ ಜಗತ್ತಿನ ನಕಾಶೆಯಲ್ಲಿ ಇರಾನ್, ಇರಾಕ್, ಕುವೈತ್, ಸಿರಿಯಾ, ಸಂಯುಕ್ತ ಅರಬ್ ಇತ್ಯಾದಿ ಅರಬ್ ರಾಷ್ಟ್ರಗಳ ಹೆಸರುಗಳೂ ಇರಲಿಲ್ಲ. ಇವೆಲ್ಲ ದೇಶಗಳ ಬಗ್ಗೆ ಭಾರತದ ಪುರಾಣಗಳಲ್ಲಿ ‘ಭಾರತೀಯ ಜನಪದ’ ಎಂಬ ಉಲ್ಲೇಖ ಕಂಡುಬರುತ್ತದೆ. ದುರ್ದೈವದಿಂದ ಸ್ವಾತಂತ್ರ್ಯಾನಂತರ ಭಾರತ ಸಂಸ್ಕೃತಿವಿರೋಧಿ ರಾಜಕಾರಣಿಗಳ ವಶಕ್ಕೆ ಹೋಯಿತು. ಹಾಗಾಗಿ ಈಗ ಭಾರತಕ್ಕೆ ಪುನಃ ಅದರ ಪುನರ್‌ವೈಭವ ಪ್ರಾಪ್ತ ಮಾಡಿಕೊಡುವ ಸಮಯ ಬಂದಿದೆ.

ಲವ್ ಜಿಹಾದ್ ಮಾಡುವವರ ಧ್ಯೇಯಧೋರಣೆ ಬದಲಾಗಿದೆ ! - ನ್ಯಾಯವಾದಿ ಚೇತನಾ ಶರ್ಮಾ, ಹಿಂದೂ ಸ್ವಾಭಿಮಾನ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷೆ, ಉತ್ತರಪ್ರದೇಶ
‘ಲವ್ ಜಿಹಾದ್’ ಬಗ್ಗೆ ಮಾತನಾಡುತ್ತಾ, ‘ಲವ್ ಜಿಹಾದ್ ಮಾಡುವ ಮುಸಲ್ಮಾನರ ಧ್ಯೇಯಧೋರಣೆ ಬದಲಾಗಿದ್ದು ಅನೇಕ ಪ್ರದೇಶಗಳಲ್ಲಿ ಹಿಂದೂ ಯುವಕರಿಗೆ ಔತಣಕೂಟಗಳಿಂದ ಅಮಲು ಪದಾರ್ಥಗಳಲ್ಲಿ ಸಿಲುಕಿಸಲಾಗುತ್ತಿದೆ. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಹಿಂದೂಗಳು ಜಾಗರೂಕ ಮತ್ತು ಸ್ವರಕ್ಷಣೆಗಾಗಿ ತರಬೇತಿ ಪಡೆಯುವುದು ಆವಶ್ಯಕವಾಗಿದೆ.’’

ದೇಶದಲ್ಲಿ ಹಿಂದೂಗಳು ಉಳಿದರೆ ಮಾತ್ರ ರಾಷ್ಟ್ರ ಉಳಿಯುವುದು !
- ಶ್ರೀ. ಹರಿಶಂಕರ ಜೈನ್, ಹಿರಿಯ ಹಿಂದುತ್ವನಿಷ್ಠ ನ್ಯಾಯವಾದಿ
ಇಂದು ಹಿಂದೂಗಳ ಶ್ರದ್ಧಾಸ್ಥಾನಗಳ ವಿಷಯದ ಅರ್ಜಿ ಬಗ್ಗೆ ಹಿಂದೂವಿರೋಧಿ ನಿರ್ಣಯ ತೆಗೆದುಕೊಳ್ಳಲಾಗುತ್ತಿದೆ; ಏಕೆಂದರೆ ನ್ಯಾಯ ನೀಡುವವರು ಜಾತ್ಯತೀತ ಶಿಕ್ಷಣ ವ್ಯವಸ್ಥೆಯಿಂದ ಬಂದಿರುತ್ತಾರೆ. ಅವರಿಗೆ ಆ ರೀತಿಯ ಸಂಸ್ಕಾರವಾಗಿರುತ್ತದೆ. ಈ ದೇಶದಲ್ಲಿ ಹಿಂದೂಗಳು ಉಳಿದರೆ ಮಾತ್ರ ದೇಶವು ಉಳಿಯುವುದು ಇಲ್ಲದಿದ್ದರೆ ಇಸ್ಲಾಮಿಕ್ ಸ್ಟೇಟ್‌ನಂತಹವರು ಅದನ್ನು ನಾಶ ಮಾಡುವರು.

ಹಿಂದೂಗಳು ಹಿಂದೂ ರಾಷ್ಟ್ರಕ್ಕಾಗಿ ಹೆಜ್ಜೆಯನ್ನಿಡಬೇಕು ! - ಸ್ವಾಮಿ ದಿವ್ಯ ಜೀವನದಾಸ ಮಹಾರಾಜ
ಹಿಂದೂಗಳು ಹಿಂದೂ ರಾಷ್ಟ್ರ ಸಮೀಪಿಸುವಂತಹ ಹೆಜ್ಜೆಯನ್ನಿಡಬೇಕು, ಎಂದು ಪೂ. ಸ್ವಾಮಿ ದಿವ್ಯ ಜೀವನದಾಸ ಮಹಾರಾಜರು ಪ್ರತಿಪಾದಿಸಿದರು. ಅವರು ಹಿಂದೂಗಳು ಮಾಡುತ್ತಿರುವ ಪಾಶ್ಚಾತ್ಯರ ಅಂಧಾನುಕರಣೆಯನ್ನು ಟೀಕಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಂಚಮ 'ಅಖಿಲ ಭಾರತೀಯ ಹಿಂದೂ ಅಧಿವೇಶನದಲ್ಲಿ ಸಂತರು ಹಾಗೂ ಹಿಂದುತ್ವವಾದಿ ಧರ್ಮಾಭಿಮಾನಿಗಳು ಮಂಡಿಸಿದ ಪ್ರಖರ ವಿಚಾರಗಳು