ಸನಾತನದ ಕಾರ್ಯ ಯೋಗ್ಯವಿರುವುದರಿಂದಲೇ ವಾರಕರಿಯವರಿಂದ ಬೆಂಬಲ ! - ಹ.ಭ.ಪ. ಪ್ರಕಾಶ ಮಹಾರಾಜ ಜವಂಜಾಳ, ಅಧ್ಯಕ, ಮಹಾರಾಷ್ಟ್ರ ವಾರಕರಿ ಮಹಾಮಂಡಳ

ಪಂಢರಾಪುರದಲ್ಲಿ ವಾರಕರಿ ಸಂತ ಅಧಿವೇಶನ
ವಾರಕರಿ ಸಂತ ಅಧಿವೇಶನದಲ್ಲಿ ಪಾಲ್ಗೊಂಡ ಸಂತರು, ವಾರಕರಿ ಮತ್ತು ಗಣ್ಯರು
ಕಠಿಣ ಕಾಲದಲ್ಲಿಯೂ ಸನಾತನದ ಬೆಂಬಲಕ್ಕೆ ನಿಲ್ಲುವ ವಾರಕರಿ ಸಂಪ್ರದಾಯ
ಮತ್ತು ಸಂತರ ಚರಣಗಳಲ್ಲಿ ಸನಾತನ ಸಂಸ್ಥೆ ಕೃತಜ್ಞವಾಗಿದೆ !
ಪಂಢರಾಪುರ (ಸೋಲಾಪೂರ ಜಿಲ್ಲೆ) : ಕೇವಲ ಆರೋಪವಾಯಿತೆಂದು ಯಾರೂ ಅಪರಾಧಿ ಎಂದು ಹೇಳಲು ಸಾಧ್ಯವಿಲ್ಲ. ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ಸನಾತನದ ೬ ಸಾಧಕರ ಬಂಧನವಾಗಿತ್ತು; ಆದರೆ ಅವರೆಲ್ಲರೂ ಈ ಖಟ್ಲೆಯಿಂದ ನಿರಪಾಧಿಗಳಾಗಿ ಮುಕ್ತರಾದರು. ಇದು ಯಾವುದೇ ಮಾಧ್ಯಮದಿಂದ ಹೊರಬರಲಿಲ್ಲ. ಸನಾತನ ಸಂಸ್ಥೆಯು ಧರ್ಮದ ಯೋಗ್ಯ ಮತ್ತು ಒಳ್ಳೆಯ ಕಾರ್ಯ ಮಾಡುತ್ತಿದೆ. ಹಾಗಾಗಿ ಸನಾತನಕ್ಕೆ ನಮ್ಮ ಬೆಂಬಲವಿದೆ. ಸಂಸ್ಥೆಯ ವಕ್ತಾರರು ವಾರ್ತಾವಾಹಿನಿಗಳಲ್ಲಿ ಸುಸ್ಪಷ್ಟವಾಗಿ ಮಂಡಿಸುತ್ತಾರೆ, ಇದು ಶ್ಲಾಘನೀಯವಾಗಿದೆ, ಎಂದು ಮಹಾರಾಷ್ಟ್ರದ ವಾರಕರಿ ಮಹಾಮಂಡಲದ ಅಧ್ಯಕ್ಷರಾದ ಹ.ಭ.ಪ. ಪ್ರಕಾಶ ಮಹಾರಾಜ ಜವಂಜಾಳರವರು ಉದ್ಗರಿಸಿದ್ದಾರೆ. ಆಷಾಢ ಏಕಾದಶಿಯ ಹಿನ್ನೆಲೆಯಲ್ಲಿ ಪಂಢರಾಪುರದ ಏಕನಾಥ ಭವನದಲ್ಲಿ ಜುಲೈ ೧೭ ರಂದು ನೆರವೇರಿದ ವಾರಕರಿ ಸಂತ ಅಧಿವೇಶನದಲ್ಲಿ ಅವರು ಮಾತನಾಡುತ್ತಿದ್ದರು. ಈ ಅಧಿವೇಶನದಲ್ಲಿ ವಾರಕರಿ ಸಂಪ್ರದಾಯ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಮದಲ್ಲಿ ಎಲ್ಲರೂ ಸನಾತನವನ್ನು ನಿಷೇಧಿಸಬಾರದು ಎಂಬ ಠರಾವಿನೊಂದಿಗೆ ಇತರ ಠರಾವುಗಳನ್ನು ಹರ್ ಹರ್ ಮಹಾದೇವ್ ಜಯಘೋಷದೊಂದಿಗೆ ಒಮ್ಮತದಿಂದ ಸಮ್ಮತಿಸಿದರು.
ಅಧಿವೇಶನದ ಆರಂಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯಸಂಘಟಕರಾದ ಶ್ರೀ. ಸುನಿಲ್ ಘನವಟ್ ಇವರು ಪ್ರಾಸ್ತಾವಿಕ ಮಾತನಾಡುತ್ತಿದ್ದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಕಾರ್ಯ ಯೋಗ್ಯವಿರುವುದರಿಂದಲೇ ವಾರಕರಿಯವರಿಂದ ಬೆಂಬಲ ! - ಹ.ಭ.ಪ. ಪ್ರಕಾಶ ಮಹಾರಾಜ ಜವಂಜಾಳ, ಅಧ್ಯಕ, ಮಹಾರಾಷ್ಟ್ರ ವಾರಕರಿ ಮಹಾಮಂಡಳ