ಸಾಧಕರೇ, ಪೂ. ಮೆನರಾಯ ಮತ್ತು ಪೂ. (ಸೌ.) ಮೆನರಾಯ ಇವರ ಧ್ಯಾನದ ಸಮಯದಲ್ಲಿ ನಾಮಜಪಕ್ಕೆ ಕುಳಿತು ತಮ್ಮ ಆಧ್ಯಾತ್ಮಿಕ ಉಪಾಯಗಳ ಪರಿಣಾಮವನ್ನು ಹೆಚ್ಚಿಸಿರಿ !

೧. ಸಾಧಕರಿಗೆ ಆಗುವ ವಿವಿಧ ಆಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗಲು
 ಬೇರೆಬೇರೆ ಉಪಾಯಗಳನ್ನು ಹೇಳುವ ಪ.ಪೂ. ಗುರುದೇವರು !
ಸದ್ಯ ಹೆಚ್ಚಿನ ಸಾಧಕರಿಗೆ ಆಧ್ಯಾತ್ಮಿಕ ಕಾರಣಗಳಿಂದಾಗಿ ತೊಂದರೆಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ನಿದ್ದೆ ಮಂಪರು ಬರುವುದು, ತಲೆ ತಿರುಗುವುದು, ದಣಿವಾಗುವುದು, ಏನೂ ತೋಚದಿರುವುದು, ತಲೆ ಭಾರ ವಾಗುವುದು, ತನ್ನ ಸಾಧನೆಯ ಬಗ್ಗೆ ನಕಾರಾತ್ಮಕತೆ ನಿರ್ಮಾಣವಾಗುವುದು ಇತ್ಯಾದಿಗಳಿಂದಾಗಿ ಸೇವೆ ಮತ್ತು ಸಾಧನೆ ಇವುಗಳಲ್ಲಿ ವ್ಯತ್ಯಯ ಬರುತ್ತಿದೆ. ಸಾಧಕರ ತೊಂದರೆಯ ತೀವ್ರತೆ ಹೆಚ್ಚಾಗುತ್ತಿರುವಾಗಲೇ ಕೃಪಾಮಯಿ ಪ.ಪೂ. ಗುರುದೇವರು ಸಾಧಕರ ತೊಂದರೆಗಳು ಕಡಿಮೆಯಾಗಲು ವಿವಿಧ ಉಪಾಯ ಹೇಳಿ ಅವರ ಮೇಲೆ ಅಪಾರ ಕೃಪೆಯ ಸುರಿಮಳೆ ಸುರಿಸುತ್ತಿದ್ದಾರೆ.

೨. ಸಂತರು ಧ್ಯಾನಕ್ಕೆ ಕುಳಿತಾಗ ಸಾಧಕರು ನಾಮಜಪಕ್ಕೆ ಕುಳಿತುಕೊಳ್ಳುವ ಮಹತ್ವ !
ರಾಮನಾಥಿ ಆಶ್ರಮದಲ್ಲಿರುವ ಸನಾತನದ. ಸಂತರಾದ ಪೂ. ಭಗವಂತರಾಯ ಮೆನರಾಯ ಮತ್ತು ಪೂ. (ಸೌ.) ಸೂರಜಕಾಂತಾ ಮೆನರಾಯ ಇವರು ಪ್ರತಿದಿನ ೭ ಗಂಟೆ ಧ್ಯಾನಕ್ಕೆ ಕುಳಿತುಕೊಳ್ಳುತ್ತಾರೆ. ಈ ಧ್ಯಾನದ ಸಮಯದಲ್ಲಿ ಸಾಧಕರು ಬೇರೆ ಕಡೆಗೆ ಎಲ್ಲಿಯೂ ಕುಳಿತು ನಾಮಜಪ ಮಾಡಿದ್ದಲ್ಲಿ ಅವರಿಗೆ ಬೇರೆ ನಾಮಜಪದ ತುಲನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಲಾಭವಾಗುತ್ತದೆ.
೩. ಸಾಧಕರು ಸಂತರ ನಾಮಜಪದಲ್ಲಿರುವ ಸಾಮರ್ಥ್ಯದ ಲಾಭ ಮಾಡಿಕೊಳ್ಳಬೇಕು !
ಸಾಧಕರು ಪೂ. ಮೆನರಾಯ ಮತ್ತು ಪೂ. (ಸೌ.) ಮೆನರಾಯ ಇವರ ಧ್ಯಾನದ ಸಮಯದಲ್ಲಿ ನಾಮಜಪಕ್ಕೆ ಕುಳಿತುಕೊಂಡಲ್ಲಿ ಅವರು ಸದ್ಯ ಮಾಡುತ್ತಿರುವ ಉಪಾಯಗಳ ಒಟ್ಟು ಗಂಟೆಯ ಅರ್ಧದಷ್ಟು ಸಮಯ ನಾಮಜಪ ಮಾಡಿದರೆ ಅದು ಸಾಕಾಗುವುದು. (ಉದಾ. ಒಬ್ಬ ಸಾಧಕನಿಗೆ ಪ್ರತಿದಿನ ೪ ಗಂಟೆ ನಾಮಜಪ ಮಾಡಲು ಹೇಳಿದ್ದಲ್ಲಿ ಪೂ. ಮೆನರಾಯ ಮತ್ತು ಪೂ. (ಸೌ.) ಮೆನರಾಯ ಇವರ ಧ್ಯಾನಕ್ಕೆ ಕುಳಿತುಕೊಳ್ಳುವ ಸಮಯಕ್ಕೆ ನಾಮಜಪಕ್ಕೆ ಕುಳಿತುಕೊಂಡಲ್ಲಿ ಅವನಿಗೆ ೨ ಗಂಟೆಯಲ್ಲಿಯೇ ೪ ಗಂಟೆ ನಾಮಜಪ ಮಾಡಿದ ಲಾಭವಾಗುವುದು.)
ಮೇಲಿನ ರೀತಿಯಲ್ಲಿ ಅರ್ಧ ಕಾಲಾವಧಿ ನಾಮಜಪ ಮಾಡಿದ ನಂತರವೂ ಸಾಧಕರ ಆಧ್ಯಾತ್ಮಿಕ ತೊಂದರೆಯ ತೀವ್ರತೆ ಕಡಿಮೆಯಾಗದಿದ್ದರೆ ಆವಶ್ಯಕತೆಗನುಸಾರ ಅವರು ನಾಮಜಪದ ಗಂಟೆಗಳನ್ನು ಹೆಚ್ಚಿಸಬೇಕು. ಗುರುಸೇವೆಯ ಮೇಲೆ ಪರಿಣಾಮವಾಗಬಾರದೆಂದು ನಾಮಜಪದ ಸಮಯ ಆರಿಸುವಾಗ ಆದಷ್ಟು ಧರ್ಮಪ್ರಸಾರ ಮತ್ತು ಇತರ ಸಮಷ್ಟಿ ಸೇವೆಗಾಗಿ ಅನುಕೂಲವಿರುವ ಸಮಯವನ್ನು ಆರಿಸಬಾರದು. ನೌಕರಿ, ವ್ಯವಸಾಯ ಮಾಡುವ ಅಥವಾ ಇತರ ಕೆಲವು ಕಾರಣಗಳಿಂದಾಗಿ ಸಾಧಕರು ಕೆಳಗಿನ ಸಮಯಗಳಲ್ಲಿ ನಾಮಜಪ ಮಾಡುವುದು ಸಾಧ್ಯವಾಗದಿದ್ದಲ್ಲಿ ಅವರು ತಮ್ಮ ಅನುಕೂಲದಂತೆ ಮೊದಲಿನಂತೆಯೇ ನಾಮಜಪಕ್ಕೆ ಕುಳಿತುಕೊಳ್ಳಬೇಕು. ಈ ಬಗ್ಗೆ ಯಾವುದೇ ಸಂದೇಹ ಇದ್ದಲ್ಲಿ ಜವಾಬ್ದಾರ ಸಾಧಕರೊಂದಿಗೆ ಮಾತನಾಡಬೇಕು.
೪. ಪೂ. ಮೆನರಾಯ ಮತ್ತು ಪೂ. (ಸೌ.) ಮೆನರಾಯ ಇವರು ಧ್ಯಾನಕ್ಕೆ ಕುಳಿತುಕೊಳ್ಳುವ ಸಮಯ
೫. ಸಾಧಕರೇ, ಪ.ಪೂ. ಗುರುದೇವರ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸಿರಿ !
ಇದೊಂದು ಸಂಭಾವ್ಯ ಆಪತ್ಕಾಲದಲ್ಲಿಯೂ ಎಲ್ಲೆಡೆಯ ಸಾಧಕರ ರಕ್ಷಣೆಯಾಗಬೇಕು ಹಾಗೂ ನಾಮಜಪದ ಸಮಯ ಅಲ್ಪವಾಗಿ ಸಾಧಕರು ಹೆಚ್ಚೆಚ್ಚು ಸಮಯ ಸತ್ಸೇವೆಗೆ ನೀಡಬೇಕೆಂದು ಪ.ಪೂ. ಗುರುದೇವರು ಎಲ್ಲ ಸಾಧಕರಿಗೆ ನೀಡಿದ ಆನಂದವಾರ್ತೆಯೇ ಆಗಿದೆ.
ಸಾಧಕರು ತಮ್ಮ ಸಾಧನೆಯನ್ನು ಹೆಚ್ಚಿಸುವುದೇ ಸದ್ಗುರುಗಳ ಚರಣಗಳಲ್ಲಿ ನಿಜವಾದ ಕೃತಜ್ಞತೆ ಸಲ್ಲಿಸುವುದಾಗಿದೆ !
ಸಾಧಕರೇ, ಇನ್ನು ಮುಂದೆ ನಿಯಮಿತವಾಗಿ ಮತ್ತು ಮನಃಪೂರ್ವಕವಾಗಿ ನಾಮಜಪ ಮಾಡಿ ಪ.ಪೂ. ಡಾಕ್ಟರರ ಸಂಕಲ್ಪದ ಲಾಭ ಮಾಡಿಕೊಳ್ಳಿರಿ ! - (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಪೂ. ಮೆನರಾಯ ಮತ್ತು ಪೂ. (ಸೌ.) ಮೆನರಾಯ ಇವರ ಧ್ಯಾನದ ಸಮಯದಲ್ಲಿ ನಾಮಜಪಕ್ಕೆ ಕುಳಿತು ತಮ್ಮ ಆಧ್ಯಾತ್ಮಿಕ ಉಪಾಯಗಳ ಪರಿಣಾಮವನ್ನು ಹೆಚ್ಚಿಸಿರಿ !