ಅಂದಿನ ಕಾಂಗ್ರೆಸ್ ಸರಕಾರದ ಸಚಿವ ಕೆ. ರೆಹಮಾನ್ ಖಾನ್‌ರವರು ಡಾ. ಝಾಕಿರ್ ನಾಯಿಕ್‌ರನ್ನು ಬೆಂಬಲಿಸಿದ್ದು ಬಹಿರಂಗ !

ಹಿಂದೂ ಜನಜಾಗೃತಿ ಸಮಿತಿ ಹಾಗೂ
ಸುದರ್ಶನ್ ಟಿವಿ ವಿರುದ್ಧ ದೂರು ನೀಡಿದ ಡಾ. ಝಾಕಿರ್ !
ಕೆ. ರೆಹಮಾನ್ ಖಾನ್‌ರಂತಹ ಸಚಿವರು  ಜಿಹಾದಿಗಳನ್ನು ಬೆಂಬಲಿಸುತ್ತಾರೆ ಎಂಬುದನ್ನು ಗಮನದಲ್ಲಿಡಿ !
ಕೆ. ರೆಹಮನ್ ಖಾನ್
ಬರೆದ ಇದೇ ಆ ಪತ್ರ !
ನವ ದೆಹಲಿ : ಜಿಹಾದಿ ಉಗ್ರವಾದವನ್ನು ಬೆಂಬಲಿಸುವ ಡಾ. ಝಾಕಿರ್ ನಾಯಿಕ್‌ರವರು ಅಂದಿನ ಕಾಂಗ್ರೆಸ್ ಸರಕಾರದ ಕೇಂದ್ರ ಅಲ್ಪಸಂಖ್ಯಾತ ಕಾರ್ಯಸಚಿವ ಕೆ. ರೆಹಮಾನ್ ಖಾನ್‌ಗೆ ೩ ಡಿಸೆಂಬರ್ ೨೦೧೨ ರಂದು ಪತ್ರ ಬರೆದು ಹಿಂದೂ ಜನಜಾಗೃತಿ ಸಮಿತಿ ಹಾಗೂ ಸುದರ್ಶನ ಟಿವಿಯು ತಮ್ಮ ವಿರುದ್ಧ ನಡೆಸಿದ ಅವಮಾನದ ಅಭಿಯಾನದಿಂದ ರಕ್ಷಣೆ ಸಿಗಬೇಕೆಂದು ಕೇಳಿಕೊಂಡಿದ್ದನು ಮತ್ತು ಅದಕ್ಕನುಸಾರ ರೆಹಮಾನ್ ಖಾನ್‌ರು ಡಾ. ಝಾಕಿರ್‌ನನ್ನು ಬೆಂಬಲಿಸಿರುವುದು ಬೆಳಕಿಗೆ ಬಂದಿದೆ.
೧. ಈ ಪತ್ರದೊಂದಿಗೆ ಸಮಿತಿ ಹಾಗೂ ಸುದರ್ಶನ ಟಿವಿ ವಾಹಿನಿಯಲ್ಲಿ ಮಾಡಿದ ಆರೋಪಗಳಿಗೆ ಪುಷ್ಟಿ ನೀಡುವ ೨ ಧ್ವನಿಮುದ್ರಿಕೆಗಳನ್ನೂ ಡಾ. ಝಾಕಿರ್ ನಾಯಿಕ್‌ರವರು ಜೋಡಿಸಿದ್ದರು.
೨. ಈ ಪತ್ರ ದೊರೆತ ಮೇಲೆ ಕೇಂದ್ರ ಅಲ್ಪಸಂಖ್ಯಾತ ಕಾರ್ಯಮಂತ್ರಿ ಕೆ. ರೆಹಮಾನ್ ಖಾನ್ ಇವರು ಕಾಂಗ್ರೆಸ್ ಸರಕಾದ ಮಾಹಿತಿ ಮತ್ತು ಪ್ರಸಾರಣ ಸಚಿವ ಮನಿಷ ತಿವಾರಿಗೆ ೧೫.೨.೨೦೧೩ ರಂದು ಪತ್ರ ಬರೆದು ಅದರೊಂದಿಗೆ ಡಾ. ಝಾಕಿರ್ ನಾಯಿಕ್ ಇವರ ಪತ್ರ ಮತ್ತು ಎರಡು ಧ್ವನಿಮುದ್ರಿಕೆಗಳನ್ನೂ ಜೋಡಿಸಿದ್ದರು.

೩. ಈ ಪತ್ರದಲ್ಲಿ ರೆಹಮಾನ್ ಖಾನ್ ಇವರು ಮೇಲಿನ ವಾರ್ತಾವಾಹಿನಿಗಳು ತಮ್ಮ ಸ್ವಾರ್ಥಕ್ಕಾಗಿ ಡಾ. ಝಾಕಿರ್ ನಾಯಿಕ್ ಇವರನ್ನು ಉಗ್ರವಾದಕ್ಕೆ ಸಹಾನುಭೂತಿ ನೀಡುತ್ತಾರೆ ಎಂಬಂತೆ ತೋರಿಸಿ ಅವರ ಪ್ರತಿಷ್ಠೆಗೆ ಧಕ್ಕೆ ತರುತ್ತಿವೆ.
ಹಾಗಾಗಿ ಮನೀಷ ತಿವಾರಿಯವರು ಈ ಪ್ರಕರಣದಲ್ಲಿ ಗಮನ ಹರಿಸಿ ಎರಡು ಧರ್ಮದವರಲ್ಲಿ ದ್ವೇಷ ಉತ್ಪನ್ನವಾಗದಂತೆ ಹಾಗೂ ಧಾರ್ಮಿಕ ಭಾವನೆ ಕೆರಳಿಸದಂತೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಹೇಳಲಾಗಿದೆ. (ಈ ಪತ್ರದಿಂದ ಡಾ. ಝಾಕಿರ್ ನಾಯಿಕ್‌ಗೆ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಪೂರ್ಣ ರಕ್ಷಣೆ ಸಿಗುತ್ತಿತ್ತು. ಮುಂಬಯಿಯ ಮಾಜಿ ಪೊಲೀಸ್ ಆಯುಕ್ತ ಹಾಗೂ ಗುಪ್ತಚರ ದಳಗಳ ಪ್ರತಿಕೂಲ ವರದಿಗಳಿದ್ದರೂ ಡಾ. ಝಾಕಿರ್ ನಾಯಿಕ್ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಈಗ ಕೇಂದ್ರ ಸರಕಾರವು ಡಾ. ಝಾಕಿರ್ ನಾಯಿಕ್ ಮತ್ತು ಅವರ ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಬೇರುಗಳನ್ನು ಕಿತ್ತೆಸೆಯಬೇಕು ಮತ್ತು ರಾಷ್ಟ್ರವನ್ನು ಉಗ್ರವಾದದಿಂದ ರಕ್ಷಣೆ ನೀಡಬೇಕೆಂದು ಹಿಂದೂಗಳು ಅಪೇಕ್ಷಿಸುತ್ತಾರೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಅಂದಿನ ಕಾಂಗ್ರೆಸ್ ಸರಕಾರದ ಸಚಿವ ಕೆ. ರೆಹಮಾನ್ ಖಾನ್‌ರವರು ಡಾ. ಝಾಕಿರ್ ನಾಯಿಕ್‌ರನ್ನು ಬೆಂಬಲಿಸಿದ್ದು ಬಹಿರಂಗ !