ಸನಾತನ ಧರ್ಮಕ್ಕೆ ಹಾನಿಯನ್ನುಂಟು ಮಾಡುವ ಸಂಪ್ರದಾಯಗಳನ್ನು ಸಂಪೂರ್ಣ ಉಚ್ಚಾಟಿಸಬೇಕು ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ

ಬದ್ರಿನಾಥ (ಉತ್ತರಾಖಂಡ) : ಎಲ್ಲ ಧರ್ಮಗಳು ಸಮಾನವಾಗಿವೆ, ಎಂದು ಘೋಷಣೆ ನೀಡುತ್ತಾ ಇಂದು ಸನಾತನ ಧರ್ಮದ ಮೇಲೆ ಆಘಾತ ಮಾಡಲಾಗುತ್ತಿದೆ. ಅದಕ್ಕೆ ಹಾನಿಯನ್ನುಂಟು ಮಾಡಲಾಗುತ್ತಿದೆ. ಸನಾತನದಂತಹ ಬೇರೆ ಯಾವುದೇ ಧರ್ಮವಿಲ್ಲ. ಸನಾತನ ಧರ್ಮಕ್ಕೆ ಹಾನಿಯನ್ನುಂಟು ಮಾಡುವ ಹೊಸ ಸಂಪ್ರದಾಯಗಳನ್ನು ಸಂಪೂರ್ಣ ಉಚ್ಚಾಟಿಸುವ ಅವಶ್ಯಕತೆಯಿದೆ, ಎಂದು ಜ್ಯೋತಿಷ್ಯ ಹಾಗೂ ದ್ವಾರಕಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರು ಉದ್ಗರಿಸಿದರು. ಜ್ಯೋತಿಷ್ಯಪೀಠ ಬದ್ರಿಕಾಶ್ರಮದ ಸ್ಥಾಪನೆಗೆ ೨ ಸಾವಿರದ ೫೦೦ ವರ್ಷಗಳು ಪೂರ್ಣ ವಾಗಿರುವುದರ ನಿಮಿತ್ತದಲ್ಲಿ ಇಲ್ಲಿ ಜ್ಯೋತಿಷ್ಯ ಪೀಠ ಮಹಿಮಾ ಮಹೋತ್ಸವವನ್ನು ಆಯೋಜಿಸಲಾಗಿತ್ತು. ಮಹೋತ್ಸವದಲ್ಲಿ ಶಂಕರಾಚಾರ್ಯರು ಮಾರ್ಗದರ್ಶನ ಮಾಡಿದರು.  ಶಂಕರಾಚಾರ್ಯರು ಮಾತು ಮುಂದುವರಿಸುತ್ತಾ ಹೇಳಿದರು -
೧. ಎಷ್ಟರವರೆಗೆ ಭ್ರಷ್ಟಾಚಾರ ದೂರವಾಗುವುದಿಲ್ಲವೋ, ಅಷ್ಟರ ವರೆಗೆ ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ಸಂಕಟಗಳು ದೂರವಾಗುವುದಿಲ್ಲ. ಈ ಸಂಕಟಗಳು ಭ್ರಷ್ಟಾಚಾರದ ದುಷ್ಪರಿಣಾಮವೇ ಆಗಿವೆ. ಈಶ್ವರನ ಶಿಕ್ಷೆಯ ಭೀತಿಯಿಂದಲೇ ಭ್ರಷ್ಟಾಚಾರ ದೂರವಾಗಲು ಸಾಧ್ಯವಿದೆ.
೨. ಹಿಂದೂಗಳ ಅಸ್ತಿತ್ವವು ವರ್ಣಗಳಿಂದಾಗಿಯೇ ಉಳಿದಿದೆ, ಇಲ್ಲದಿದ್ದರೆ ಎಲ್ಲ ಹಿಂದೂಗಳು ಮುಸಲ್ಮಾನರಾಗುತ್ತಿದ್ದರು. ಒಬ್ಬನ ಧರ್ಮ ಪರಿವರ್ತನೆಯ ನಂತರ ಎಲ್ಲರ ಧರ್ಮಾಂತರ ಆಗುತ್ತಿತ್ತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಧರ್ಮಕ್ಕೆ ಹಾನಿಯನ್ನುಂಟು ಮಾಡುವ ಸಂಪ್ರದಾಯಗಳನ್ನು ಸಂಪೂರ್ಣ ಉಚ್ಚಾಟಿಸಬೇಕು ! - ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ