ಗುರುಗಳ ದೃಷ್ಟಿಕೋನದಲ್ಲಿ ಗುರುಗಳು !

ಯಾರಲ್ಲಿ ಅಹಂಕಾರವಿಲ್ಲವೋ, ಯಾರು ಗುರುಗಳ ಹೆಸರಿನಲ್ಲಿ ಕಾರ್ಯವನ್ನು ಮಾಡುವನೆಂದು ಗುರುಗಳಿಗೆ ನಂಬಿಕೆಯೆನಿಸುತ್ತದೆಯೋ ಅಂತಹವನನ್ನೇ ಗುರುಗಳು ‘ಗುರುಪದವಿಯಲ್ಲಿ’ ಕೂರಿಸುತ್ತಾರೆ.
೧. ‘ಗುರುಪ್ರಾಪ್ತಿಯಾದ ನಂತರ ಕೇವಲ ಆರು ತಿಂಗಳುಗಳಲ್ಲಿಯೇ ಬಾಬಾರವರ ಗುರುಗಳಾದ ಶ್ರೀ ಅನಂತಾನಂದ ಸಾಯೀಶರು ದರ್ಶನಕ್ಕೆ ಬರುವವರಿಗೆ ವಿವಿಧ ಶಬ್ದಗಳಲ್ಲಿ ಮುಂದಿನಂತೆ ಹೇಳತೊಡಗಿದರು.
ಅ. ಮೊದಲು ಭಕ್ತರಾಜನಿಗೆ ನಮಸ್ಕರಿಸಿ, ಅನಂತರವೇ ನನಗೆ ನಮಸ್ಕರಿಸಿ.
ಆ. ಭಕ್ತರಾಜನಿಗೆ ನಾನು ಎಲ್ಲ ಕೊಟ್ಟಿದ್ದೇನೆ. ಅವನಿಗೆ ಶರಣಾಗಿ. ನನ್ನನ್ನು ಗೌರವಿಸುವಂತೆ ಅವನನ್ನು ಗೌರವಿಸಿ.
ಇ. ಒಮ್ಮೆ ಸತ್ಯನಾರಾಯಣನ ಪ್ರಸಾದವೆಂದು ದಿನಕರನ (ಬಾಬಾರ ಪೂರ್ವಾಶ್ರಮದ ಹೆಸರು ‘ದಿನಕರ’ ಎಂದಾಗಿತ್ತು) ಎಂಜಲು ತಟ್ಟೆಯ ಅನ್ನವನ್ನು ಶ್ರೀಸಾಯೀಶರು ಎಲ್ಲರಿಗೂ ಹಂಚಿದರು.
೨. ಒಮ್ಮೆ ಶ್ರೀ ಅನಂತಾನಂದ ಸಾಯೀಶರು ದಿನಕರನಿಗೆ, ‘ನೀನು ಅಸಲನ್ನು ಹಂಚದಿದ್ದರೆ ಅದನ್ನು ನನ್ನ ಬಳಿ ಇಟ್ಟುಕೊಳ್ಳುತ್ತೇನೆ  ನೀನು ಎಲ್ಲರಿಗೆ ಬಡ್ಡಿಯನ್ನಾದರು ಹಂಚು’ ಎಂದು ಹೇಳಿದರು. ‘ಅಸಲು ಹಂಚದಿದ್ದರೆ’ ಎಂದರೆ ಸ್ವಂತದ ಆಧ್ಯಾತ್ಮಿಕ ಸಾಮರ್ಥ್ಯವನ್ನು ಖರ್ಚು ಮಾಡುವುದಿಲ್ಲವಾದರೆ ‘ಬಡ್ಡಿಯನ್ನಾದರು ಹಂಚು’ ಎಂದರೆ ಇತರರಿಗೆ ನಾಮಸ್ಮರಣೆಯನ್ನಾದರೂ ಮಾಡಲು ಹೇಳು.
೩. ಒಮ್ಮೆ ಗುರುಗಳು ದಿನಕರನಿಗೆ ಹೀಗೆ ಹೇಳಿದರು : ‘ಅಬ್ ತೇರಾ ಧಂದಾ ಚಲತಾ ಹೈ ಯಾ ಮೇರಾ, ಜರಾ ದೇಖ್ ತೋ !’ ಅಂದರೆ ವ್ಯವಹಾರದಲ್ಲಿ ನಿನ್ನ ಔಷಧಿ ಮಾರಾಟದ ವ್ಯಾಪಾರವು ನಡೆಯುತ್ತದೆಯೋ ಅಥವಾ ಅಧ್ಯಾತ್ಮದಲ್ಲಿನ ನನ್ನ ವ್ಯಾಪಾರ ನಡೆಯುತ್ತದೆಯೋ ನೋಡೋಣ !’ ಮುಂದೆ ಹೀಗೂ ಅನ್ನುತ್ತಿದ್ದರು ‘ಮೈ ತೆರೇ ದುಕಾನಕಾ ಹಿಸಾಬ ದೇಖನೇ ಆಯಾ ಕರೂಂಗಾ’ (ನಾನು ನಿನ್ನ ಅಂಗಡಿಯ ಲೆಕ್ಕಾಚಾರ ನೋಡಲು ಬರುವೆನು) ಅಂದರೆ ನನ್ನ ಗಮನ ನಿನ್ನೆಡೆ ಇರುವುದು.’
೪. ಗುರುಗಳು ಮಾಡಿದ ಶಿಷ್ಯನ ಸರ್ವೋತ್ತಮ ಪ್ರಗತಿ ಎಂದರೆ ಅವನನ್ನು ಪಾದ ಪೂಜೆಯ ಅಧಿಕಾರಿಯನ್ನಾಗಿ ಮಾಡುವುದು. ೧೯೮೭ ರಲ್ಲಿ ನಡೆದ ವಿಷ್ಣುಯಾಗದ ಸಮಯದಲ್ಲಿ ಬಾಬಾರವರೂ ತಮ್ಮ ಪರಮಶಿಷ್ಯರಾದ ಶ್ರೀರಾಮಜೀಭಯ್ಯಾ (ಪ.ಪೂ. ರಾಮಾನಂದ ಮಹಾರಾಜರು) ಮತ್ತು ಗುರುವಾಸಿ ಶ್ರೀಭಾವೂ ಬಿಡವಯಿಯವರಿಗೆ ಗುರು ಪದವಿಯ ಅಧಿಕಾರವನ್ನು ಕೊಡುವಾಗ ಅವರಿಗೆ ಅನುಕ್ರಮವಾಗಿ ‘ರಾಮಾನಂದ’ ಮತ್ತು ‘ಅಚ್ಯುತಾನಂದ’ ಎಂದು ನಾಮಕರಣ ಮಾಡಿದ್ದರು. ಶಿಷ್ಯರಿಗೆ ಗುರುಪದವಿಯನ್ನು ಪ್ರದಾನಿಸುವಾಗ ಬಾಬಾರವರು ಅವರಿಬ್ಬರನ್ನೂ ಯಜ್ಞಕುಂಡದ ಬಳಿ ಕರೆದು ತಮ್ಮ ಕೈಯಿಂದ ಶಾಲನ್ನು ಹೊದಿಸಿ, ಶ್ರೀಫಲ ಮತ್ತು ಧೋತರ-ವಸ್ತ್ರವನ್ನು ಕೊಟ್ಟು ಸನ್ಮಾನ ಮಾಡಿದರು ಮತ್ತು ಅವರನ್ನು ಪಾದಪೂಜೆಯ ಅಧಿಕಾರಿಗಳನ್ನಾಗಿ ಮಾಡಿದರು. ಹಾಗೆಯೇ ಇತರ ಎಲ್ಲ ಭಕ್ತರಿಗೆ ಇದು ತಿಳಿಯಬೇಕೆಂದು ತಾವು ಸ್ವತಃ ಈ ವಿಷಯವನ್ನು ಘೋಷಿಸಿದರು ಮತ್ತು ಎಲ್ಲರಿಗೂ ಅವರಿಬ್ಬರಿಗೂ ನಮಸ್ಕರಿಸಲು ಹೇಳಿದರು. ನಾಮಕರಣದ ವೃತ್ತಾಂತವನ್ನು ಪರವೂರಿನಲ್ಲಿರುವ ಭಕ್ತರಿಗೂ ತಿಳಿಸಿದರು.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗುರುಗಳ ದೃಷ್ಟಿಕೋನದಲ್ಲಿ ಗುರುಗಳು !