ಧಗಧಗಿಸುವ ಕಾಶ್ಮೀರ

ಒಂದು ಕಾಲದಲ್ಲಿ ಜಮ್ಮು - ಕಾಶ್ಮೀರವು ಭಾರತದ ನಂದನವನವೆಂದು ಪ್ರಸಿದ್ಧವಾಗಿತ್ತು. ಅಲ್ಲಿನ ನೈಸರ್ಗಿಕ ಸೌಂದರ್ಯದ ಮೇಲೆ ಮಾರುಹೋಗಿ ಹಲವಾರು ಪ್ರವಾಸಿಗರಿಗೆ ಆಕರ್ಷಣೆಯ ತಾಣವಾಗಿರುವ ಕಾಶ್ಮೀರವು ಎದೆ ಉಬ್ಬಿಸಿ ಮೆರೆಯುತ್ತಿತ್ತು; ಆದರೆ ಕಳೆದ ಎರಡು ದಶಕಗಳಿಂದ ಆ ಸೌಂದರ್ಯವೇ ನಿಸ್ತೇಜವಾಗುವ ಸ್ಥಿತಿಯುಂಟಾಗಿದೆ. ಜಿಹಾದಿ ಭಯೋತ್ಪಾದನೆಯಿಂದ ಕಾಶ್ಮೀರವು ರಕ್ತರಂಜಿತವಾಗಿದೆ. ಅಲ್ಲಿನ ಸಾಮಾಜಿಕ ವಾತಾವರಣ ಇರುಸು ಮುರಿಸಾಗುತ್ತಿರುವುದನ್ನು ಇಡೀ ದೇಶವೇ ನೋಡುತ್ತಿದೆ. ಪ್ರತಿನಿತ್ಯ ಸೇನಾದಳದ ಮೇಲಾಗುವ ಕಲ್ಲುತೂರಾಟ, ಭಾರತವಿರೋಧಿ ಘೋಷಣೆ, ಉಗ್ರರಿಗೆ ಪ್ರೋತ್ಸಾಹ ಇತ್ಯಾದಿ ಘಟನೆಗಳಿಂದ ಕಾಶ್ಮೀರವು ಭಾರತದಲ್ಲಿದೆಯೇ ಅಥವಾ ಶತ್ರುರಾಷ್ಟ್ರ ಪಾಕಿಸ್ತಾನದಲ್ಲಿದೆಯೇ, ಎಂಬ ಪ್ರಶ್ನೆ ಉದ್ಭವಿಸದೇ ಇರುವುದಿಲ್ಲ. ಹಿಜ್ಬುಲ್ ಮುಜಾಹಿದೀನ ಉಗ್ರ ಬುರ್ಹಾನ್ ವಾನಿಯನ್ನು ಚಕಮಕಿಯಲ್ಲಿ ಕೊಂದ ಬಳಿಕ ಕಾಶ್ಮೀರದಲ್ಲಿ ಬಂದ್ ನಡೆಸಲಾಯಿತು.
ಆ ಉಗ್ರನ ಅಂತಿಮ ಯಾತ್ರೆಯಲ್ಲಿ ೨೦ ಸಾವಿರ ದೇಶದ್ರೋಹಿ ಮುಸಲ್ಮಾನರು ಸೇರಿದ್ದರು. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮತಾಂಧರು ಒಟ್ಟಾದಾಗ ಯಾವಾಗಲೂ ಏನಾಗುತ್ತದೋ ಅದೇ ಈ ಸಲ ಸಹ ನಡೆಯಿತು. ಸೇನಾ ದಳ ಹಾಗೂ ಉಗ್ರರ ನಡುವೆ ಚಕಮಕಿ ನಡೆದು ೯೬ ಪೊಲೀಸರು ಗಾಯಗೊಂಡರು. ಯಾಕೂಬ್ ಮೆಮನ್‌ನನ್ನು ಗಲ್ಲಿಗೇರಿಸಿದ ನಂತರ ಅಲ್ಲಿ ಈ ಅಲೆ ಹಬ್ಬಿದೆ. ಉಗ್ರರನ್ನು ಬೆಂಬಲಿಸಿ ಸಾವಿರಾರು ಮುಸಲ್ಮಾನರು ರಸ್ತೆಯ ಮೇಲೆ ಶಕ್ತಿ ಪ್ರದರ್ಶನ ಮಾಡುತ್ತಾರೆ ಹಾಗೂ ಕಾನೂನು-ಸುವ್ಯವಸ್ಥೆಗೆ ತೊಂದರೆಯೊಡ್ಡುತ್ತಾರೆ. ಯಾವಾಗಲೂ ಉಗ್ರರ ದಾಳಿಯಲ್ಲಿ ಸಾವಿರಾರು ನಿರಪರಾಧಿಗಳು ಬಲಿಯಾಗುತ್ತಿರುವಾಗ ಚಕಾರ ಎತ್ತದವರು, ಮಾನವತೆಯ ಶತ್ರುಗಳಾದ ಉಗ್ರರ ಬೆಂಬಲಕ್ಕೆ ಒಂದೇ ರಾಗ ಹಾಡುತ್ತಾರೆ. ಜೆಎನ್‌ಯೂದಲ್ಲಿ ದೇಶದ್ರೋಹಿ ಘೋಷಣೆಯ ಪ್ರಕರಣದಿಂದ ಬೆಳಕಿಗೆ ಬಂದ ಪ್ರತ್ಯೇಕತಾವಾದಿ ಉಮರ್ ಖಾಲೀದಂತೂ ಈಗ ಬುರ್ಹಾನ್‌ಗೆ ಕ್ರಾಂತಿಕಾರಿ ಎಂಬ ಬಿರುದು ನೀಡಿದ್ದಾನೆ. ಉಗ್ರರು, ಪ್ರತ್ಯೇಕತಾವಾದಿಗಳು ಹಾಗೂ ದೇಶದ್ರೋಹಿಗಳಿಗೆ ನಂದನವನವಾಗಿರುವ ಕಾಶ್ಮೀರವೂ ಸೇರಿದಂತೆ
ಪೂರ್ಣ ಭಾರತದಲ್ಲಿ ಈ ಘಟನೆಯು ಪ್ರತಿನಿತ್ಯ ನಡೆಯುತ್ತಿದೆ. ಆಶ್ಚರ್ಯದ ಸಂಗತಿಯೆಂದರೆ, ಕಳೆದ ೨ ದಶಕಗಳ ಹಿಂದೆ ಕಾಶ್ಮೀರಿ ಹಿಂದೂ ಗಳನ್ನು ಅವರು ವಾಸಿಸುತ್ತಿದ್ದ ಮನೆಗಳಿಂದ ಸ್ಥಳಾಂತರಗೊಳಿಸಲಾಯಿತು. ಜಿಹಾದಿ ದೌರ್ಜನ್ಯಗಳಿಂದ ಅಕ್ಷರಶಃ ಕಾಶ್ಮೀರಿ ಹಿಂದೂಗಳ ವಂಶವಿಚ್ಛೇದನೆ ಯಾಗಿದೆ. ಈ ವಿಷಯದ ಬಗ್ಗೆ ಮಾತ್ರ ಯಾರಿಗೂ ಏನೂ ಅನಿಸುವುದಿಲ್ಲ ಹಾಗೂ ಸಾವಿರಾರು ಜನರು ಸೇರುವುದೂ ಇಲ್ಲ. ಉಗ್ರರ ಅಂತಿಮ ಯಾತ್ರೆಗೆ ಮಾತ್ರ ೨೦ ಸಾವಿರ ಜನರು ಸೇರುತ್ತಾರೆ, ಎಂಬುದು ಲಜ್ಜಾಸ್ಪದವಾಗಿದೆ.
ದೇಶಕ್ಕೆ ಅಪಾಯಕಾರಿಯಾಗಿರುವ ಉಗ್ರರ ಬೆಂಬಲ ಏಕೆ ?
ಸರಿ, ಯಾರಿಗೋಸ್ಕರ ಗಲಭೆ ನಡೆಸಲಾಯಿತೋ ಹಾಗೂ ೨೦ ಸಾವಿರ ದೇಶದ್ರೋಹಿಗಳು ಅಲ್ಲಿಗೆ ಬಂದು ಶಕ್ತಿ ಪ್ರದರ್ಶನ ನಡೆಸಿದರೂ, ಆ ಬುರ್ಹಾನ್ ವಾನಿಯು ಅಂತಹ ಮಹಾನ್ ಕಾರ್ಯವಾದರೂ ಏನು ಮಾಡಿದ್ದನು ? ೧೫ ನೇ ವಯಸ್ಸಿನಲ್ಲಿಯೇ ಪ್ರತ್ಯೇಕತಾವಾದಿಗಳೊಂದಿಗೆ ಸೇರಿ ಉಗ್ರವಾದಿ ಚಳುವಳಿಯಲ್ಲಿ ಸೇರಿದ ವಾನಿ ನಂತರ ಸಾಮಾಜಿಕ ಪ್ರಸಾರ ಮಾಧ್ಯಮದಿಂದ ಹಲವಾರು ಯುವಕರನ್ನು ಭಯೋತ್ಪಾದನೆಯ ಕಡೆಗೆ ಹೊರಳಿಸುವ ಪ್ರಯತ್ನ ನಡೆಸುತ್ತಿದ್ದನು. ಬೇರೆಯವರಲ್ಲಿಯೂ ಪ್ರತ್ಯೇಕತಾವಾದಿಯ ವಿಷ ಬಿತ್ತುವುದು, ಹಲವಾರು ಮಹಿಳೆ-ಯುವತಿ ಯರ ಮಾನಭಂಗ ಮಾಡುವುದು, ಹಿಜ್ಬುಲ್‌ನ ನಿಷ್ಠಾವಂತ ಉಗ್ರನಾದ ಬುರ್ಹಾನ್ ಪೊಲೀಸರ ಹಾಗೂ ಸೇನಾದಳದ ಬೇಕಾದ ಪಟ್ಟಿಯಲ್ಲಿದ್ದನು. ಅಂತಹ ಉಗ್ರನನ್ನು ಚಕಮಕಿಯಲ್ಲಿ ಕೊಲ್ಲುವುದು ದೊಡ್ಡ ಯಶಸ್ಸಾಗಿದೆ.
ಇದಕ್ಕೆ ಪ್ರತ್ಯೇಕತಾವಾದಿ ರಾಜಕೀಯ ಪಕ್ಷವೇ ಕಾರಣ !
ವಾಸ್ತವದಲ್ಲಿ ಪೊಲೀಸರ ಬಗ್ಗೆ ಎಲ್ಲ ಕಡೆಯಿಂದಲೂ ಪ್ರಶಂಸೆಯಾಗ ಬೇಕಾಗಿತ್ತು. ರಾಜ್ಯದಲ್ಲಿ ಎಲ್ಲ ಕಡೆ ಆನಂದ ವ್ಯಕ್ತವಾಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ. ಕಾಶ್ಮೀರವು ಅಶಾಂತಿ, ಗಲಭೆ, ಕಲ್ಲುತೂರಾಟ, ಸುಡು
ವುದು, ಘೋಷಣೆಯಿಂದ ತುಂಬಿ ಹೋಗಿದೆ. ನಿಜವಾದ ಭಾರತೀಯ ನಾದರೂ ಆ ರೀತಿ ನಡೆದುಕೊಳ್ಳುವುದಿಲ್ಲ. ಕಾಶ್ಮೀರದಿಂದ ಹಿಂದೂಗಳನ್ನು ನಿರಾಶ್ರಿತಗೊಳಿಸಿ ಅಲ್ಲಿ ಪಾಕ್ ವಂಶದವರು ವಾಸಿಸುತ್ತಿದ್ದಾರೆ. ಆದ್ದರಿಂದಲೇ ಕಾಶ್ಮೀರವು ಒಂದುವೇಳೆ ಭೌಗೋಳಿಕ ದೃಷ್ಟಿಯಿಂದ ಭಾರತಕ್ಕೆ ಸೇರಿದ್ದರೂ, ಅಲ್ಲಿನ ವಾತಾವರಣ ಮಾತ್ರ ಅದಕ್ಕೆ ಪೂರಕ ವಾಗಿಲ್ಲ. ಅಲ್ಲಿ ಮತಾಂಧರು ಅಘೋಷಿತ ಶರಿಯಾ ರಾಜ್ಯವನ್ನು ಪ್ರಾರಂಭಿಸಿದ್ದಾರೆ. ಪಾಕ್ ಪ್ರಭಾವಿ ರಾಜಕೀಯ ಪಕ್ಷಗಳು ಅವರನ್ನು ಗುಪ್ತವಾಗಿ ಉತ್ತೇಜಿಸುತ್ತಿವೆ. ಆದ್ದರಿಂದ ಈಗ ಕಾಶ್ಮೀರದಲ್ಲಿ ಶಾಂತಿಯನ್ನು ನೆಲಸಲು ಅಲ್ಲ; ಬದಲಾಗಿ ಕಾಶ್ಮೀರವು ಭಾರತದ ಭಾಗವಾಗಿರಲು ಪ್ರಯತ್ನಿಸುವುದು ಅಗತ್ಯವಾಗಿದೆ. ಸೇನಾ ದಳದವರು ಪರಾಕ್ರಮದಿಂದ ಯುದ್ಧ ಮಾಡಿ ಒಂದೊಂದು ಇಂಚು ಭೂಮಿಗಾಗಿ ಹೋರಾಡುತ್ತಿದ್ದರೂ, ಕಾಶ್ಮೀರವನ್ನು ಭಾರತದೊಂದಿಗೆ ಮಾನಸಿಕವಾಗಿ ಜೋಡಿಸಿಡಲು ಇಂದಿನ
ತನಕ ನಮ್ಮ ಸರಕಾರವು ಅಪೂರ್ಣವಾಗಿದೆ. ಆದ್ದರಿಂದಲೇ ಕಾಶ್ಮೀರದಲ್ಲಿ ಇಂದಿನ ತನಕ ಪ್ರತ್ಯೇಕತಾವಾದಿ ರಾಜಕೀಯ ಪಕ್ಷಗಳೇ ರಾಜ್ಯಭಾರನಡೆಸುತ್ತಿವೆ. ರಾಜ್ಯಸರಕಾರದ ನಿಷ್ಠೆಯೇ ಪಾಕ್‌ನೊಂದಿಗೆ ಸೇರಿರುವುದ ರಿಂದ ಅಲ್ಲಿನ ಸರಕಾರಿ, ಸಾಮಾಜಿಕ ಹಾಗೂ ಇತರ ಎಲ್ಲ ಹಂತಗಳಲ್ಲೂ ಪಾಕ್‌ನಿಷ್ಠೆ ಕಂಡುಬರುತ್ತಿದೆ.
ಪಾಕ್‌ಪರವಿರುವವರನ್ನು ಓಡಿಸಿ !
ಒಂದು ಕಾಲದಲ್ಲಿ ವಿದ್ವತ್ತು ಹಾಗೂ ಪಾಂಡಿತ್ಯಕ್ಕಾಗಿ ಸುಪ್ರಸಿದ್ಧವಾಗಿದ್ದ ಕಾಶ್ಮೀರವು ಈಗ ರಾಷ್ಟ್ರದ್ರೋಹಕ್ಕಾಗಿ ಕುಪ್ರಸಿದ್ಧವಾಗಿದೆ. ಅದರ ಬೇರು ದೆಹಲಿಯ ತನಕ ತಲುಪಿದೆ, ಎಂಬುದು ಜೆಎನ್‌ಯೂನ ದೇಶವಿರೋಧಿ ಘೋಷಣೆಗಳಿಂದ ಬೆಳಕಿಗೆ ಬಂದಿದೆ. ಈ ವಿಷ ಇನ್ನೂ ಮುಂದೆ ಹೋಗುವ ಮೊದಲೇ ಸರಕಾರವು ಅದರ ಮೇಲೆ ಏನಾದರೂ ಉಪಾಯ ಮಾಡಲಿ. ಇದು ಕೇವಲ ಒಂದು ರಾಜ್ಯದ ಪ್ರಶ್ನೆಯಲ್ಲ, ಸಂಪೂರ್ಣ ದೇಶದ್ದಾಗಿದೆ. ಪ್ರತ್ಯೇಕತಾವಾದಿಗಳಿಗೆ, ಮತಾಂಧರಿಗೆ ಇಷ್ಟೊಂದು ಪಾಕ್ ಪ್ರೇಮವಿದ್ದರೆ, ಅವರನ್ನು ನೇರವಾಗಿ ಪಾಕ್‌ಗೆ ಓಡಿಸಿ. ಇಲ್ಲಿನ ಸಾಮಾಜಿಕ ವಾತಾವರಣವನ್ನು ಕೆಡಿಸುವ ಅಧಿಕಾರ ಪಾಕ್ ಬೆಂಬಲಿಗರಿಗಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಉಗ್ರರನ್ನು ವೈಭವೀಕರಿಸುವ ಭಾಷಣ ಕೊಡುವುದು, ಅದಕ್ಕಾಗಿ ಶಕ್ತಿಪ್ರದರ್ಶನ ಮಾಡುವುದು, ಅವನೇನೋ ಮಹಾನ್ ಕಾರ್ಯ ಮಾಡಿದ್ದಾನೆ ಎಂಬುದಕ್ಕಾಗಿ ಅವನ ಅಂತಿಮ ಯಾತ್ರೆ ಮಾಡುವುದು, ಇತ್ಯಾದಿ ವಿಷಯಗಳಿಗೆ ಸರಕಾರವು ಕಾನೂನು ಮೂಲಕ ನಿರ್ಬಂಧ ಹೇರಲಿ. ಈಗಲಾದರೂ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲು ಸರಕಾರವು ಮುಂದಾಳತ್ವ ವಹಿಸಲಿ. ಭಾಜಪವು ಲೋಕಸಭೆ ಚುನಾವಣೆಯ ಮುನ್ನ ತನ್ನ ಘೋಷಣಾಪತ್ರದಲ್ಲಿ ೩೭೦ ನೇ ಅನುಚ್ಛೇದವನ್ನು ರದ್ದು ಪಡಿಸುವುದಾಗಿ ಆಶ್ವಾಸನೆ ನೀಡಿತ್ತು. ಅಧಿಕಾರಕ್ಕೆ ಬಂದ ಮೇಲೆ ಸರಕಾರಕ್ಕೆ ಅದು ಮರೆತು ಹೋಗಿರುವ ಚಿತ್ರಣ ಕಾಣಿಸುತ್ತಿದೆ. ಸರಕಾರವು ಇದನ್ನು ಗಂಭೀರವಾಗಿ ಪರಿಗಣಿಸಿ ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಓಡಿಸಿ, ಕಾಶ್ಮೀರಿ ಹಿಂದೂಗಳಿಗೆ ಅಲ್ಲಿ ಗೌರವಯುತವಾಗಿ ಪುನರ್ವಸತಿ ಕಲ್ಪಿಸಿ ಗಡಿಯಲ್ಲಿನ ಸುರಕ್ಷಾವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲು ಪ್ರಯತ್ನಿಸುವುದು ಅಗತ್ಯವಾಗಿದೆ. ಇಲ್ಲದಿದ್ದರೆ ಪರಿಸ್ಥಿತಿ ಇನ್ನೂ ಹದಗೆಟ್ಟು ಚಿರಂತನವಾಗಿ ಪಶ್ಚಾತ್ತಾಪ ಪಡಬೇಕಾಗುತ್ತದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧಗಧಗಿಸುವ ಕಾಶ್ಮೀರ