ಫಲಕ ಪ್ರಸಿದ್ಧಿಗಾಗಿ

. ಶಿವಸೇನೆಯಂತೆ ಎಲ್ಲ ಹಿಂದೂ ಸಂಘಟನೆಗಳು
ಹಿಂದೂ ರಾಷ್ಟ್ರವನ್ನು ಗೌರವಿಸಬೇಕು !
ನಮ್ಮ ದೇಶವು ಯಾವುದಾದರೂ ಒಂದು ಮಾರ್ಗವನ್ನು ಸ್ವೀಕರಿಸಲೇ ಬೇಕಾಗಿದೆ ಹಾಗೂ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದೇ ಬೇರೆ ಪರ್ಯಾಯವಿಲ್ಲವೆಂದು ಶಿವಸೇನೆ ಪಕ್ಷಪ್ರಮುಖರಾದ ಶ್ರೀ. ಉದ್ಧವ ಠಾಕರೆ ಹೇಳಿದ್ದಾರೆ.
. ಐಸಿಸ್ ಭಯೋತ್ಪಾದನೆ ಈಗ ಹಿಂದುತ್ವದ
ಮೂಲಕ್ಕೆ ಕೊಡಲಿಯೇಟು ಹಾಕಿದೆ !
ಐಸಿಸ್ ಸೇರಲು ಮುಂಬಯಿಯಿಂದ ಹೊರದೇಶಕ್ಕೆ ತೆರಳಲು ಪ್ರಯತ್ನಿಸುತ್ತಿದ್ದ ೪ ಮತಾಂಧ ಯುವಕರ ವಿಚಾರಣೆಯ ಸಂದರ್ಭದಲ್ಲಿ ಐಸಿಸ್ ಸಂಘಟನೆಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಕೆಲವು ನಾಯಕರನ್ನು ಗುರಿ ಮಾಡಿಕೊಂಡಿರುವ ಮಾಹಿತಿಯು ಬೆಳಕಿಗೆ ಬಂದಿದೆ. ಇಂತಹ ಅನೇಕ ಸಂಶಯಾಸ್ಪದ ಐಸಿಸ್ ಭಯೋತ್ಪಾದಕರನ್ನು ದೇಶದ ವಿವಿಧ ಸ್ಥಳಗಳಿಂದ ಬಂಧಿಸಲಾಗಿದೆ.
. ಭಾರತಾದ್ಯಂತ ಕಾಶ್ಮೀರದಂತಹ ಸ್ಥಿತಿ
ನಿರ್ಮಾಣವಾಗುವ ಮೊದಲು ಎಚ್ಚರಗೊಳ್ಳಿರಿ !
ಉತ್ತರಪ್ರದೇಶದ ಅಲೀಗಡ್‌ನ ಬಾಬರಿ ಮಂಡಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆದ ಗಲಭೆಯ ಬಳಿಕ ಅಲ್ಲಿ ವಾಸಿಸುತ್ತಿದ್ದ ಅನೇಕ ಹಿಂದೂ ಕುಟುಂಬಗಳು ಮನೆ-ಅಂಗಡಿ ಮುಂಗಟ್ಟುಗಳನ್ನು ಬಿಟ್ಟು ಓಡಿಹೋಗಿದ್ದಾರೆ. ಇದನ್ನು ಗಮನಿಸಿದಾಗ ಭಾರತದ ವಿವಿಧ ಸ್ಥಳಗಳಲ್ಲಿ ೧೯೯೦ ರ ಸಮಯದ ಕಾಶ್ಮೀರದ ಇತಿಹಾಸ ಪುನರಾವೃತ್ತಿಯಾಗುತ್ತಿರುವ ಬಗ್ಗೆ ಚರ್ಚಿಸಲಾಗುತ್ತಿದೆ.
. ದೇಶದ್ರೋಹಿಗಳನ್ನು ಬೆಂಬಲಿಸುವ
ಪಿಡಿಪಿ ರಾಜಕೀಯ ಪಕ್ಷವನ್ನು ನಿಷೇಧಿಸಿ !
ಬುರಹಾನ ವಾನಿಯನ್ನು ಹತ್ಯೆ ಮಾಡುವ ಅವಶ್ಯಕತೆಯೇನಿತ್ತು ? ಸೇನೆಯ ಈ ಕಾರ್ಯದಿಂದಾಗಿಯೇ ಕಾಶ್ಮೀರದ ಪರಿಸ್ಥಿತಿ ಇಷ್ಟೊಂದು ಹದಗೆಟ್ಟಿತೆಂದು ಪೀಪಲ್ಸ ಡೆಮೊಕ್ರೆಟಿಕ್ ಪಕ್ಷದ(ಪಿಡಿಪಿ) ಶಾಸಕ ಮುಝಫ್ಫರ್ ಬೇಗ ಭಾಜಪ ಪಕ್ಷದ ಮೇಲೆ ಆರೋಪ ಹೊರಿಸಿದ್ದಾರೆ.
. ದಾದ್ರಿ ಹತ್ಯಾಕಾಂಡದ ಕುರಿತು
ಮಾತನಾಡುವವರು ಈಗೇಕೆ ಸುಮ್ಮನಿದ್ದಾರೆ ?
ಜಿಹಾದಿ ಭಯೋತ್ಪಾದಕರ ಭಯದಿಂದ ಕಾಶ್ಮೀರದಿಂದ ಸುಮಾರು ೬೦೦ ಹಿಂದೂಗಳು ಪಲಾಯನ ಮಾಡಿರುವ ಆಘಾತಕಾರಿ ಸುದ್ದಿಯು ಈಗ ಬಯಲಾಗಿದೆ. ಈ ಹಿಂದೂಗಳೆಲ್ಲ ಕೇಂದ್ರ ಮತ್ತು ರಾಜ್ಯ ಸರಕಾರದ ನೌಕರರಾಗಿದ್ದು, ಇವರೆಲ್ಲರಿಗೂ ಮಾನ್ಯ ಪ್ರಧಾನಮಂತ್ರಿಗಳ ಯೋಜನೆಯಡಿ ನೌಕರಿಯನ್ನು ನೀಡಲಾಗಿತ್ತು. ಇವರೆಲ್ಲರೂ ಈಗ ಜಮ್ಮುವಿಗೆ ತೆರಳಿದ್ದಾರೆ.
. ಭಾರತೀಯ ರಾಜಕಾರಣಿಗಳಿಗೆ ಸತ್ಯ ಮತ್ತು
ಜನರ ಭದ್ರತೆಗಿಂತ ರಾಜಕಾರಣವು ಮಹತ್ವದ್ದಾಗಿದೆ !
ಫ್ರಾನ್ಸ್‌ನಲ್ಲಿ ಟ್ರಕ್ ಮೂಲಕ ನಡೆದ ಜಿಹಾದಿ ದಾಳಿಯ ಬಳಿಕ ಫ್ರಾನ್ಸ್ ಮುಸ್ಲಿಂ ಭಯೋತ್ಪಾದನೆಯ ಕರಿನೆರಳಿನಲ್ಲಿದೆ ಎಂದು ಫ್ರಾನ್ಸ್‌ನ ರಾಷ್ಟ್ರಾಧ್ಯಕ್ಷ ಫ್ರಾಂಸ್ವಾ ಓಲಾಂದ ಹೇಳಿದ್ದಾರೆ. ಆದರೆ ಭಯೋತ್ಪಾದನೆ ಯಿಂದ ತತ್ತರಿಸಿರುವ ಭಾರತ ದೇಶದ ರಾಜಕಾರಣಿಗಳು ಸತ್ಯವನ್ನು ಸ್ವೀಕರಿಸಲು ಹಿಂಜರಿಯುತ್ತಿದ್ದಾರೆ.
. ನಮಸ್ಕಾರ ಎಂದರೇನು ?

ನಮಸ್ಕಾರ ಶಬ್ದವು ‘ನಮಃ’ ಈ ಮೂಲ ಧಾತುವಿನಿಂದ ಉತ್ಪನ್ನ ವಾಗಿದೆ. ‘ನಮಃ’ ಈ ಶಬ್ದದ ಅರ್ಥವು ನಮನ ಮಾಡುವುದು, ವಂದನೆ ಮಾಡುವುದು ಎಂದಾಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕ ಪ್ರಸಿದ್ಧಿಗಾಗಿ