ಇತರರೆಡೆಗೆ ನೋಡುವ ಗುರುಗಳ ದೃಷ್ಟಿಕೋನ !

ಯಾರಾದರೂ ಗುರುಗಳ ದರ್ಶನಕ್ಕೆಂದು ಬಂದರೆ, ಬಂದಿರುವ ವ್ಯಕ್ತಿಯು ಪ್ರಾಪಂಚಿಕ ದೃಷ್ಟಿಯಿಂದ ಎಷ್ಟು ಸುಖಿ ಅಥವಾ ದುಃಖಿಯಾಗಿದ್ದಾನೆ ಎಂಬುದನ್ನು ಗುರುಗಳು ನೋಡುವುದಿಲ್ಲ. ಅವರ ಮನಸ್ಸಿನಲ್ಲಿ ಇದರ ಬಗೆಗಿನ ವಿಚಾರವೇ ಬರುವುದಿಲ್ಲ. ‘ಅವನು ಹೇಗಾದರೂ ಆಗಿರಲಿ, ಅವನಿಗೆ ಮನುಷ್ಯಜನ್ಮ ದೊರಕಿದೆ ಮತ್ತು ಅವನು ನನ್ನ ಬಳಿ ಬಂದಿದ್ದಾನೆ. ಆದ್ದರಿಂದ ಅವನು ಖಂಡಿತವಾಗಿಯೂ ಪುಣ್ಯವಂತನೇ ಆಗಿರಬೇಕು’ ಎನ್ನುವುದೇ ಅವರ ದೃಷ್ಟಿಯಾಗಿರುತ್ತದೆ. ಏಕೆಂದರೆ ಆರೋಗ್ಯಸಂಪನ್ನ ಕಾಯಾ (ದೇಹ) ಮತ್ತು ಸಂತ ಸಮಾಗಮ (ಸಹವಾಸ) ಇವುಗಳನ್ನೇ ಗುರುಗಳು ಭಾಗ್ಯವೆಂದು ಭಾವಿಸುತ್ತಾರೆ. ಅವನ ಕಾಮನೆಗಳು ಪ್ರಾಪಂಚಿಕವಾಗಿದ್ದರೆ, ಅವು ಪೂರ್ಣವಾಗುವುದಿಲ್ಲವೇನು ? ಎಂಬ ಪ್ರಶ್ನೆಯು ಉದ್ಭವಿಸುತ್ತದೆ. ಇದು ಅವನ ಭಾವದ ಪ್ರಶ್ನೆಯಾಗಿದೆ. ಅವನ ಭಾವವು ಸಕಾಮವಾಗಿ ರಲಿ ಅಥವಾ ನಿಷ್ಕಾಮವಾಗಿರಲಿ, ಇವೆರಡೂ ಸತ್ತ್ವನಿಷ್ಠೆಯ ಬಗೆಗಿನ ಪಥ್ಯ ಒಂದೇ ಆಗಿರುತ್ತದೆ. ಅವರ ಆ ಸೇವೆಯಿಂದ ಸದ್ಗುರುಗಳು ಯಾವಾಗ ಸಂತುಷ್ಟರಾಗುತ್ತಾರೆಯೋ, ಆಗ ಆ ಕ್ಷಣದಲ್ಲಿಯೇ ಕಾಮನೆಗಳುಳ್ಳ ವ್ಯಕ್ತಿಯ ಕಾಮನೆಗಳು ಪೂರ್ಣವಾಗುತ್ತವೆ ಮತ್ತು ನಿಷ್ಕಾಮ ವ್ಯಕ್ತಿಯ ಪರಮಾರ್ಥವು ಪೂರ್ಣವಾಗುತ್ತದೆ. ನಿಷ್ಕಾಮ ಸೇವಕನು ಸಂಪೂರ್ಣ ಅಧಿಕಾರಿಯಾಗಿರದಿದ್ದರೆ ಅವನ ಪರಮಾರ್ಥವು ಪ್ರಾರಂಭವಾಗುತ್ತದೆ. ಕಾಮನೆಗಳುಳ್ಳವರ ವಾಸನೆಗಳನ್ನು ಪೂರೈಸುವ ಉದ್ದೇಶವನ್ನು ಏಕನಾಥೀ ಭಾಗವತದಲ್ಲಿ ೨೪ ನೇ ಅಧ್ಯಾಯದಲ್ಲಿನ ೨೯೮ ನೇ ದ್ವಿಪದಿಯಲ್ಲಿ ಮುಂದಿನಂತೆ ವಿವರಿಸಲಾಗಿದೆ - ‘ಸಕಾಮ ಭಕ್ತರ ಕಾಮನೆಗಳನ್ನು ಪೂರೈಸಿ ನಾನು ಅವರನ್ನು ನಿಷ್ಕಾಮರನ್ನಾಗಿ ಮಾಡುತ್ತೇನೆ ॥’ - ಪ.ಪೂ. ಕಾಣೇ ಮಹಾರಾಜರು, ನಾರಾಯಣಗಾವ, ಪುಣೆ ಜಿಲ್ಲೆ, ಮಹಾರಾಷ್ಟ್ರ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇತರರೆಡೆಗೆ ನೋಡುವ ಗುರುಗಳ ದೃಷ್ಟಿಕೋನ !