ಧರ್ಮಾಚರಣೆ ಮತ್ತು ಹದಿನಾರು ಸಂಸ್ಕಾರಗಳು ಮಾನವನನ್ನು ‘ಕೊಹಿನೂರ’ (ವಜ್ರ) ಮಾಡುತ್ತವೆ


ಯಸ್ಯೆ ತೆ ಷೋಡಶ ಸಂಸ್ಕಾರಾಃ ಭವಂತಿ
ಸ ಬ್ರಾಹ್ಮಣಃ ಸಾಯುಜ್ಯಂ ಸಲೋಕತಾಂ ಪ್ರಾಪ್ನೋತಿ ॥
ಅರ್ಥ : ಯಾವ ಬ್ರಾಹ್ಮಣನಿಗೆ ಹದಿನಾರು ಸಂಸ್ಕಾರಗಳಾಗಿವೆಯೋ ಅವನಿಗೆ ಸಾಯುಜ್ಯ ಅಥವಾ ಸಲೋಕ ಮುಕ್ತಿಯು ಸಿಗುತ್ತದೆ.
ಯಸ್ಯ ತು ಖಲು ಸಂಸ್ಕಾರಾಣಾಮೆಕೆದೇಶೋಪ್ಯಷ್ಟವಾತ್ಮಗುಣಾ ಅಥ ಸ ಬ್ರಾಹ್ಮಣ ಸಾಯುಜ್ಯ ಸಾಲೋಕ್ಯಂ ಚ ಗಚ್ಛತಿ ಗಚ್ಛತಿ ॥
- ಗೌತಮಸೂತ್ರ, ಪ್ರಶ್ನೆ ೧, ಅಧ್ಯಾಯ ೮, ಸೂತ್ರ ೨೬
ಅರ್ಥ : ಯಾರಿಗೆ ೪೦ ಸಂಸ್ಕಾರಗಳಲ್ಲಿ ಕೆಲವು ಸಂಸ್ಕಾರಗಳಾಗಿವೆಯೋ ಮತ್ತು ದಯೆ, ಕ್ಷಮೆ, ಅನಸೂಯಾ, ಶೌಚ, ಅನಾಯಾಸ, ಮಂಗಲ, ಅಕಾರ್ಪಣ್ಯ, ಅಸ್ಪ ೃಹಾಗಳೆಂಬ ಎಂಟು ಅತ್ಮಗುಣಗಳಿವೆಯೋ ಅವನಿಗೆ ಖಂಡಿತ ಬ್ರಹ್ಮದೇವನೊಂದಿಗೆ ಸಾಯುಜ್ಯ ಮತ್ತು ಸಲೋಕ ಮುಕ್ತಿ ಸಿಗುತ್ತದೆ.
ವಿವರಣೆ :ಧರ್ಮಾಚರಣೆ ಮತ್ತು ಹದಿನಾರು ಸಂಸ್ಕಾರಗಳಿಂದಅಂತಃಕರಣವನ್ನು ಶುದ್ಧಗೊಳಿಸಬೇಕೆಂದು ಧರ್ಮಶಾಸ್ತ್ರಜ್ಞರ ಆದೇಶವಾಗಿದೆ. ಗಣಿಯಿಂದ ತೆಗೆದ ವಜ್ರಕ್ಕೆ ಬದಿಗಳನ್ನು ಕೆತ್ತಿ ಅದರ ತೇಜವನ್ನು ಹೆಚ್ಚಿಸಿದ ಮೇಲೆಯೇ ಅದು ಕೊಹಿನೂರ (ವಜ್ರ) ಆಗುತ್ತದೆ. ಸಂಸ್ಕಾರಗಳು ಮನುಷ್ಯನನ್ನು ಕೊಹಿನೂರನ್ನಾಗಿಸುತ್ತವೆ. ಸಂಸ್ಕಾರ ಗಳಿಲ್ಲದಿದ್ದರೆ ಅವನು ಕಲ್ಲಿದ್ದಲಾಗಿಯೇ ಉಳಿಯಬಹುದು.’ - ಗುರುದೇವ ಡಾ. ಕಾಟೇಸ್ವಾಮೀಜಿ (ಮೇಲಿನ ಶ್ಲೋಕಗಳಿಂದ ಹಿಂದೂಗಳ ಧರ್ಮ ಗ್ರಂಥಗಳಲ್ಲಿ ಸಂಸ್ಕಾರಗಳ ಮಹತ್ವ ಹೇಳಿರುವುದು ಸ್ಪಷ್ಟವಾಗುತ್ತದೆ.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಾಚರಣೆ ಮತ್ತು ಹದಿನಾರು ಸಂಸ್ಕಾರಗಳು ಮಾನವನನ್ನು ‘ಕೊಹಿನೂರ’ (ವಜ್ರ) ಮಾಡುತ್ತವೆ