ಬುದ್ಧಿವಾದಕ್ಕಿಂತ ರೂಢಿಗಳನ್ನು ಪಾಲಿಸುವುದು ಹೆಚ್ಚು ಮಹತ್ವದ್ದಾಗಿದೆ

ಆಚಾರಗಳ ಒಂದು ವಿಧವೆಂದರೆ ರೂಢಿ. ರೂಢಿಗಳು ಮುಖ್ಯವಾಗಿ ಬಹುಜನ ಸಮಾಜದ ಜೀವನವನ್ನು ನಿಯಂತ್ರಿಸುತ್ತವೆ ಮತ್ತು ಅದು ಅತ್ಯಂತ ಯೋಗ್ಯವಾಗಿದೆ; ಏಕೆಂದರೆ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿಯೊಂದು ಕರ್ಮ-ಅಕರ್ಮದ, ವಿಶೇಷವಾಗಿ ಧರ್ಮದ ಬಗೆಗಿನ ಕರ್ಮ-ಅಕರ್ಮಗಳ ಬಗ್ಗೆ ವಿಚಾರ ಮಾಡಲು ಜ್ಞಾನದ ಅವಶ್ಯಕತೆಯಿರುವುದಿಲ್ಲ. ಇದಕ್ಕೆ ವಿರುದ್ಧವಾಗಿ ಅತೀಬುದ್ಧಿವಂತ ಬುದ್ಧಿಜೀವಿಗಳಿಗೆ ರೂಢಿಗಳ ವಿರುದ್ಧ ಸಮರ್ಥನೆ ಮಾಡುವುದು ಅವಶ್ಯಕವಾಗಿರುತ್ತದೆ. ಸಾಮಾನ್ಯ ಸಮಾಜವು (ಜನರು) ಬುದ್ಧಿವಾದಿಗಳ ಮಾತುಗಳನ್ನು ಕೇಳದೇ ರೂಢಿಗಳ ಅನುಕರಣೆಯನ್ನು ಮಾಡಬೇಕು. ರೂಢಿಗಳ ಬಗ್ಗೆ ಬುದ್ಧಿವಾದಿಗಳು ‘ಹಿಮಾಲಯದಷ್ಟು ದೊಡ್ಡ ತಪ್ಪಾಗುತ್ತಿದೆ’ ಎಂದು ಹೇಳಿ ಜಾಣ್ಮೆಯಿಂದ ಕೈತೊಳೆದುಕೊಳ್ಳುತ್ತಾರೆ; ಆದರೆ ಅದರಿಂದ ಹಿಂದೂ ಧರ್ಮಕ್ಕೆ ಹಿಮಾಲಯ ಧ್ವಂಸವಾದಷ್ಟು ಪ್ರಚಂಡ ಧರ್ಮಹಾನಿಯಾಗುತ್ತಿದೆ.’ - ಗುರುದೇವ ಡಾ. ಕಾಟೇಸ್ವಾಮೀಜಿ
. ಬುದ್ಧಿವಾದಿಗಳೇ, ಆಚಾರಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸದೇ ನಿಮಗೆ ಆಚರಿಸಲು ಸಾಧ್ಯವಾಗುವಷ್ಟು ಆಚಾರಗಳನ್ನು ಪಾಲಿಸಿ :ಸನಾತನಧರ್ಮದ ಆಚಾರ, ಕುಲಾಚಾರ ಇತ್ಯಾದಿ ಪರಂಪರೆಗಳನ್ನು ಆಚರಿಸಲು ನಮಗೆ ಬಹಳ ಕಠಿಣವಾಗುತ್ತದೆ, ಅದರಿಂದ ತೇಜ ಸಂವರ್ಧನೆಯಾಗುವುದಿಲ್ಲ, ಆತ್ಮಬಲ ಹೆಚ್ಚಾಗುವುದಿಲ್ಲ’ ಎಂದು ಕೆಲವರು ಹೇಳುತ್ತಾರೆ. ಇಂತಹವರು ಕೇವಲ ಬುದ್ಧಿವಾದದಲ್ಲಿ ಸಿಲುಕದೇ, ಭೋಗದ ಜಡವಾದದಲ್ಲಿ ಸಿಲುಕದೇ ಆಚರಿಸಲು ಸಾಧ್ಯವಾಗುವ ಆಚಾರಗಳನ್ನು ಪಾಲಿಸಬೇಕು. ಅವರು ಆಪದ್ಧರ್ಮವನ್ನು ಸಂಭಾಳಿಸಬೇಕು.’ - ಗುರುದೇವ ಡಾ. ಕಾಟೇಸ್ವಾಮೀಜಿ
. ಕೇವಲ ಮಾತು ಬೇಡ, ಕೃತಿಶೀಲರಾಗಿರಿ ! :ಹೇಗೆ ನಡೆದು ಕೊಳ್ಳಬೇಕು ಎಂಬುದರ ಬಗ್ಗೆ ಕೇವಲ ಮಾತುಗಳನ್ನಾಡಿ ಏನೂ ಉಪಯೋಗವಾಗುವುದಿಲ್ಲ, ಅದರ ಬದಲಿಗೆ ಹಾಗೆ ನಡೆದುಕೊಳ್ಳಬೇಕು. ‘ಯಃ ಕ್ರಿಯಾವಾನ ಸ ಪಂಡಿತಃ ಅಂದರೆ ಯಾರು ಕೃತಿಶೀಲರಾಗಿರು ತ್ತಾರೆಯೋ, ಅವರೇ ನಿಜವಾದ ಪಂಡಿತರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬುದ್ಧಿವಾದಕ್ಕಿಂತ ರೂಢಿಗಳನ್ನು ಪಾಲಿಸುವುದು ಹೆಚ್ಚು ಮಹತ್ವದ್ದಾಗಿದೆ