ಹೊಟ್ಟೆಯ ತೊಂದರೆ ದೂರಗೊಳಿಸಲು ಮಹರ್ಷಿಗಳು ಹೇಳಿದ ಉಪಾಯ

ಹೊಟ್ಟೆಯ ತೊಂದರೆಗಳನ್ನು ದೂರಗೊಳಿಸುವುದಕ್ಕಾಗಿ ಸಾಧ್ಯ ವಿದ್ದಲ್ಲಿ ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದ ರಲ್ಲಿ ೧೦ ಮೆಣಸಿನಕಾಳು ಹಾಗೂ ಮೂರು ಚಿಟಿಕೆಯಷ್ಟು ಅರಿಶಿಣ ಪುಡಿಯನ್ನು ಹಾಕಿ ರಾತ್ರಿಯಿಡೀ ಈ ಮಿಶ್ರಣವನ್ನು ಇಟ್ಟು ಮರುದಿನ ಬೆಳಿಗ್ಗೆ ಅದನ್ನು ಕುಡಿಯಬೇಕು, ಎಂದು ಮಹರ್ಷಿಗಳು ಹೇಳಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸಾಧಕರ ಹೊಟ್ಟೆಯ ತೊಂದರೆಗಳು ಬಹಳಷ್ಟು ಹೆಚ್ಚಾಗಿರುವುದು ಕಂಡುಬರುತ್ತಿದೆ. ಇದರ ಬಗ್ಗೆ ಮಹರ್ಷಿಗಳಲ್ಲಿ ವಿಚಾರಿಸಿದಾಗ ಅವರು ೧೪.೭.೨೦೧೬ ರಂದು ಚೆನ್ನೈಯಲ್ಲಾದ ನಾಡಿವಾಚನದಲ್ಲಿ (ಸಪ್ತರ್ಷಿ ನಾಡಿಪಟ್ಟಿವಾಚನ ಸಂ. ೮೭ ರಲ್ಲಿ) ಮುಂದಿನಂತೆ ಉಪಾಯವನ್ನು ತಿಳಿಸಿದರು ಮತ್ತು ಅವರು ಹೀಗೆ ಹೇಳಿದರು -
ಸಾಧಕರ ಈ ತೊಂದರೆಗಳು ಮುಖ್ಯವಾಗಿ ಕೆಟ್ಟ ಶಕ್ತಿಗಳ ತೊಂದರೆಯಿಂದ ಆಗುತ್ತಿದೆ. ಅವರ ಹೊಟ್ಟೆಯಲ್ಲಿ ವಿಷ ಸಂಗ್ರಹವಾಗಿರುವುದರಿಂದ ಹೀಗಾಗುತ್ತಿದೆ. ಅವರು ರಾತ್ರಿ ಸಾಧ್ಯವಾದಷ್ಟು ಒಂದು ತಾಮ್ರದ ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ೧೦ ಮೆಣಸಿನಕಾಳು ಹಾಗೂ ಮೂರು ಚಿಟಿಕೆಯಷ್ಟು ಅರಿಶಿಣವನ್ನು ಹಾಕಿ ಅದನ್ನು ಕಲಸಿ ರಾತ್ರಿಯಿಡೀ ಹಾಗೆಯೇ ಇಡಬೇಕು.
ಮರುದಿನ ಬೆಳಿಗ್ಗೆ ಮುಖಮಾರ್ಜನವಾದ ಬಳಿಕ ಈ ನೀರನ್ನು ಕಾಳುಮೆಣಸಿನೊಂದಿಗೆ ಕುಡಿಯಬೇಕು. ಬಳಿಕ ಹೊಟ್ಟೆಯ ಮೇಲೆ ಕೈಯನ್ನು ಗೋಲಾಕಾರವಾಗಿ ತಿರುಗಿಸಿ ಶ್ರೀ ಗಣೇಶನ ಸ್ಮರಣೆಯನ್ನು ಮಾಡಿ, ‘ಜೀರ್ಣಯಾಮಿ ಶ್ರೀಕೃಷ್ಣಾರ್ಪಣಮಸ್ತು ’ ಎಂದು ಮೂರು ಸಲ ಹೇಳಬೇಕು. ಇದರ ಅರ್ಥವೇನೆಂದರೆ - ಸ್ವೀಕರಿಸಿದ ಆಹಾರವು (ಶ್ರೀ ಗಣೇಶನ ಕೃಪೆಯಿಂದ) ನಾನು ಜೀರ್ಣಿಸಿಕೊಳ್ಳುತ್ತೇನೆ. ಈ ಆಹಾರ ಶ್ರೀಕೃಷ್ಣನ ಚರಣಗಳಿಗೆ ಅರ್ಪಯಾಗಲಿ. ಇದರಿಂದ ಸಾಧಕರಿಗೆ ದೇವತೆಗಳ ಆಶೀರ್ವಾದವೂ ದೊರೆಯುವುದು ಹಾಗೂ ಅವರ ವ್ಯಾಧಿ ದೂರವಾಗಲು ಸಹಾಯಕವಾಗುವುದು.
ಮೇಲಿನ ಉಪಾಯವನ್ನು ನಿರಂತರವಾಗಿ ಮೂರು ದಿನ ಮಾಡಬೇಕು. ಆದರೂ ಹೊಟ್ಟೆಯ ತೊಂದರೆಗಳು ದೂರವಾಗದಿದ್ದರೆ, ಮತ್ತೆ ಎರಡು-ಮೂರು ದಿನ ಈ ಉಪಾಯವನ್ನು ಮಾಡಬೇಕು.
- (ಪೂ.) ಸೌ. ಅಂಜಲಿ ಗಾಡಗೀಳ, ಚೆನ್ನೈ, ತಮಿಳುನಾಡು (೧೪.೭.೨೦೧೬, ಮಧ್ಯಾಹ್ನ ೨.೫೧)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹೊಟ್ಟೆಯ ತೊಂದರೆ ದೂರಗೊಳಿಸಲು ಮಹರ್ಷಿಗಳು ಹೇಳಿದ ಉಪಾಯ