ಪುಣೆಯ ಕಾರ್ಯಾಗಾರದ ಸಾಧಕರಿಗೆ ನಿದ್ದೆಯಲ್ಲಿಯೇ ಗುರುಪೂರ್ಣಿಮೆಯ ಸೇವೆಯ ಬಗ್ಗೆ ಮಾರ್ಗದರ್ಶನ ಮಾಡುವುದು, ನಿದ್ದೆಯಲ್ಲಿದ್ದ ಕಾರಣ ‘ಏನು ಮಾರ್ಗದರ್ಶನ ಮಾಡಿದೆ ?’ ಎಂಬ ಅರಿವಿಲ್ಲದಿರುವುದು; ಆದರೆ ಪಕ್ಕದಲ್ಲಿದ್ದ ಸಾಧಕಿಯು ಅರ್ಥಪೂರ್ಣ ಮಾರ್ಗದರ್ಶನ ಮಾಡಿರುವುದಾಗಿ ಹೇಳಿದಾಗ ಪ.ಪೂ. ಗುರುದೇವರೇ ಮಾಡಿಸಿದರು ಎಂಬ ಅರಿವಾಗುವುದು

(ಪೂ.) ಕು. ಸ್ವಾತಿ ಖಾಡ್ಯೆ
‘ನಾನು ಕುಂಭಮೇಳದ ನಿಮಿತ್ತ ಉಜ್ಜೈನಿಯಲ್ಲಿದ್ದೆನು. ೧೯.೪.೨೦೧೬ ರಂದು ಮುಂಬರುವ ಗುರುಪೂರ್ಣಿಮೆ ನಿಮಿತ್ತ ಪುಣೆಯಲ್ಲಿ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ಕೊನೆಯಲ್ಲಿ ಉಜ್ಜೈನಿಯಿಂದ ಸಾಧಕರಿಗೆ ಮಾರ್ಗದರ್ಶನ ಮಾಡಬೇಕಿತ್ತು. ಮಾರ್ಗದರ್ಶನ ಪ್ರಾರಂಭವಾಗಲು ಇನ್ನೂ ಸ್ವಲ್ಪ ಸಮಯ ಉಳಿದಿತ್ತು.  ನನಗೆ ಸ್ವಲ್ಪ ಆಯಾಸವೆನಿಸುತ್ತಿತ್ತು. ಆಗ ‘ಮಾರ್ಗದರ್ಶನ ಪ್ರಾರಂಭವಾಗುವ ತನಕ ಸ್ವಲ್ಪ ವಿಶ್ರಾಂತಿ ಪಡೆದುಕೊಳ್ಳೋಣ’ ಎಂಬ ವಿಚಾರ ಬಂದು ಸ್ವಲ್ಪ ಹೊತ್ತು ಮಲಗಿದೆನು. ನಾನು ಗಾಢ ನಿದ್ದೆಯಲ್ಲಿದ್ದೆ. ನಿಗದಿ ಪಡಿಸಿದ ಸಮಯಕ್ಕೆ ಕು. ವೈಭವಿ ಭೋವರ್‌ರವರು ಕರೆ ಮಾಡಿದರು. ನಾನು ನಿದ್ದೆಯಲ್ಲೇ ಅದನ್ನು ತೆಗೆದುಕೊಂಡೆ ಹಾಗೂ ನಿದ್ದೆಯಲ್ಲೇ ಪುಣೆಯ ಸಾಧಕರಿಗೆ ಮೊದಲೇ ನಿರ್ಧರಿಸಿದಂತೆ ಮಾರ್ಗದರ್ಶನ ಮಾಡಿದೆನು.  ಅರ್ಧ ಘಂಟೆ ಮಾರ್ಗದರ್ಶನ ಮಾಡಿದ ಬಳಿಕ ನನಗೆ ಎಚ್ಚರವಾಯಿತು. ಆಗ ನನ್ನ ಪಕ್ಕದಲ್ಲಿ ಓರ್ವ ಸಾಧಕಿಯಿದ್ದಳು (ಕು. ತೃಪ್ತಿ). ನಾನು ಅವಳನ್ನು, ‘ನಾನು ಈಗ ಸಂಚಾರಿವಾಣಿಯಲ್ಲಿ ಏನು ಹೇಳಿದೆ ?’ ಎಂದು ಕೇಳಿದೆ ಅದಕ್ಕೆ ಅವಳು ‘ಅಕ್ಕ, ನೀವು ವಿಷಯಾನುಸಾರವಾಗಿ ಯೋಗ್ಯವಾದುದ್ದನ್ನೇ ಮಾತನಾಡಿದಿರಿ’ ಎಂದು ಹೇಳಿದಳು. ಅದಾದ ನಂತರ ನನಗೆ, ಈಗ ನಾನೇನು ಮಾತನಾಡಿದೆನೋ, ಅದನ್ನು ಸಾಕ್ಷಾತ್ ಗುರುದೇವರೇ ನನ್ನಿಂದ ಹೇಳಿಸಿದರು’ ಎಂದು ಅರಿವಾಯಿತು.
- (ಪೂ.) ಕು. ಸ್ವಾತಿ ಖಾಡ್ಯೆ, ಉಜ್ಜೈನಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !