ಗೋಮಾತೆಯಿಂದಾಗಿ ತಂದೆಯ ಅರ್ಬುದ ರೋಗ ಗುಣವಾಯಿತು ! - ಶ್ರೀ. ಅನಂತ ಕಾಮತ್, ಉದ್ಯಮಿ, ಮಂಗಳೂರು

ಗೋಮಾತೆಯ ಮಹತ್ವವನ್ನು ತೋರಿಸುವ ಓರ್ವ ಹಿಂದುತ್ವನಿಷ್ಠ ಉದ್ಯಮಿಗೆ ಬಂದ ಅನುಭವ
ನನ್ನ ಜೀವನವೂ ಸಾಮಾನ್ಯರ ಹಾಗೆಯೇ ಇತ್ತು. ಸನಾತನ ಸಂಸ್ಥೆಯೊಂದಿಗೆ ಸಂಪರ್ಕವಾದ ನಂತರ ಪ.ಪೂ. ಗುರುದೇವರ ಕೃಪೆಯಿಂದ ನನಗೆ ಜೀವನದ ಅರ್ಥ ತಿಳಿಯಿತು. ಸಾಧನೆಯನ್ನು ಆರಂಭಿಸಿದೆನು. ಅದರೊಂದಿಗೆ ವ್ಯವಹಾರದ ಜೊತೆಗೆ ನಾನು ಒಂದು ಗೋಶಾಲೆಯನ್ನೂ ಆರಂಭಿಸಿದೆನು. ನನ್ನ ತಂದೆಯವರಿಗೆ ಅರ್ಬುದ ರೋಗ ಇದೆಯೆಂದು ತಿಳಿಯಿತು. ವೈದ್ಯರು ಅವರು ಹೆಚ್ಚೆಂದರೆ ೬ ತಿಂಗಳು ಬದುಕಬಹುದು, ಎಂದು ಹೇಳಿದ್ದರು. ಅವರನ್ನು ಆಸ್ಪತ್ರೆಯಿಂದ ಮನೆಗೆ ತಂದೆವು. ತಂದೆಯವರು ಸಂಪೂರ್ಣ ಶಾಕಾಹಾರಿಯಾಗಿದ್ದರು. ಅವರಿಗೆ ಯಾವುದೇ ವ್ಯಸನವಿರಲಿಲ್ಲ. ಅಲ್ಲದೇ, ಅವರು  ಪ್ರತಿದಿನ ೧ ಗಂಟೆ ವ್ಯಾಯಾಮ ಮಾಡುತ್ತಿದ್ದರು. ಹೀಗಿರುವಾಗ ಅವರಿಗೆ ಅರ್ಬುದ ರೋಗ ಹೇಗಾಯಿತು? ಎಂಬುದನ್ನು ನಾನು ವಿವಿಧ ಮಾಧ್ಯಮಗಳಿಂದ ಕಂಡು ಹಿಡಿಯಲು ಪ್ರಯತ್ನಿಸಿದೆನು. ಅನಂತರ ವ್ಯವಹಾರದ ನಿಮಿತ್ತ ನನಗೆ ಓರ್ವ ವ್ಯಕ್ತಿಯ ಪರಿಚಯವಾಯಿತು. ಅವರಿಂದ ವಿದೇಶಿ (ಜರ್ಸಿ) ಗೋವಿನಿಂದ ಉಚ್ಚ ರಕ್ತದೊತ್ತಡ, ಮಧುಮೇಹ, ಅರ್ಬುದರೋಗ ಇತ್ಯಾದಿ ಕಾಯಿಲೆಗಳು ಬರುತ್ತವೆ, ಎಂದು ತಿಳಿಯಿತು.
ಅನಂತರ ಅವರು ನನ್ನ ಗೋಶಾಲೆಯಲ್ಲಿ ೪೦ ಹಸುಗಳಲ್ಲಿ ೯ ಸಂಕರಿತ ತಳಿಗಳಿವೆಯೆಂದು ಹೇಳಿದ ತಕ್ಷಣ ನಾನು ಆ ೯ ಗೋವುಗಳನ್ನು ಇನ್ನೊಂದು ಗೋಶಾಲೆಗೆ ಕಳುಹಿಸಿದೆನು. ವ್ಯಾಪಾರಿ ಮಿತ್ರರು ನೀಡಿದ ಸಲಹೆಗನುಸಾರ ಪ್ರತಿದಿನ ತಂದೆಯವರಿಗೆ ದೇಶಿ ಗೋವಿನ ಹಾಲು ಮತ್ತು ಬೆಳಗ್ಗೆ ಗೋಮೂತ್ರ ನೀಡಲು ಆರಂಭಿಸಿದೆನು. ಅನಂತರ ೧೪ ತಿಂಗಳಲ್ಲಿ ತಂದೆಯವರ ಆರೋಗ್ಯ ಪರೀಕ್ಷಿಸಿದ ನಂತರ ಅವರ ಆರೋಗ್ಯ ಸುಧಾರಣೆಯಾಗಿರುವುದು ಅರಿವಾಯಿತು. ಅವರ ಪಿ.ಎಸ್.ಐ. ೨೮೨ ರಿಂದ ೦.೯ ಕ್ಕೆ ಬಂದಿತ್ತು. ಪ್ರಾರಂಭದಲ್ಲಿ ವೈದ್ಯರು ಇದನ್ನು ಸ್ವೀಕರಿಸಲಿಲ್ಲ. ಅವರು ತಂದೆಯವರ ವರದಿಯನ್ನು ಪುನಃ ಒಂದು ತಿಂಗಳಲ್ಲಿ ತೋರಿಸಲಿಕ್ಕೆ ಹೇಳಿದರು. ಅನಂತರವೂ ಅವರ ವರದಿ ಸಕಾರಾತ್ಮಕ ಆಗಿರುವುದು ಕಂಡುಬಂದಿತು. ಇದರಿಂದ ವೈದ್ಯರಿಗೂ ಆಶ್ಚರ್ಯವಾಯಿತು. ಕೇವಲ ಗೋಮಾತೆ ಮತ್ತು ಪ.ಪೂ. ಗುರುದೇವರ ಆಶೀರ್ವಾದದಿಂದಲೇ ಇದು ಸಾಧ್ಯವಾಗಿದೆ.
ಈಗ ನಮ್ಮಲ್ಲಿ ೬೭ ಗೋವುಗಳಿವೆ. ಗೋವುಗಳಿಂದ ಸಿಗುವ ಹಾಲಿನಿಂದ ಮಾತ್ರವಲ್ಲ, ಸೆಗಣಿ ಮತ್ತು ಗೋಮೂತ್ರದಿಂದಲೂ ಆರ್ಥಿಕ ಲಾಭ ಗಳಿಸಬಹುದು. ಇಂದು ಗೋಪಾಲನೆಯಿಂದ ದೂರ ಹೋಗಿರುವುದರಿಂದ ದೇಶಕ್ಕೆ ೨೦ ಲಕ್ಷಕೋಟಿ ಹಾನಿಯಾಗುತ್ತಿದೆ. ಆದ್ದರಿಂದ ಹೆಚ್ಚು ಪ್ರಮಾಣದಲ್ಲಿ ಗೋಮಾತೆಯ ಪಾಲನೆ ಮಾಡಿ ಲಾಭಗಳಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗೋಮಾತೆಯಿಂದಾಗಿ ತಂದೆಯ ಅರ್ಬುದ ರೋಗ ಗುಣವಾಯಿತು ! - ಶ್ರೀ. ಅನಂತ ಕಾಮತ್, ಉದ್ಯಮಿ, ಮಂಗಳೂರು