‘ಶಿಷ್ಯನಿಗೆ ಗುರುಮಂತ್ರ ನೀಡಬೇಕು’ ಎಂದು ಎಲ್ಲಿಯ ವರೆಗೆ ಗುರುಗಳಿಗೆ ಅನಿಸುವುದಿಲ್ಲವೋ ಅಲ್ಲಿಯ ತನಕ ಶಿಷ್ಯನು ತಾಳ್ಮೆಯನ್ನಿಟ್ಟುಕೊಳ್ಳಬೇಕು

ಮಂತ್ರ ಎಂದರೆ ಅಕ್ಷರ ಅಥವಾ ಶಬ್ದಗಳ ಸಮೂಹವಾಗಿದೆ. ಮಂತ್ರ ಅಂದರೆ ತತ್ತ್ವವಾಗಿದ್ದು ಯೋಗ್ಯ ವ್ಯಕ್ತಿಯು ಮಂತ್ರಜಪಿಸಿದರೆ ಮಂತ್ರದಲ್ಲಿನ ತತ್ತ್ವವು ವ್ಯಕ್ತಿಯ ಜೀವನದ ಉದ್ಧಾರವನ್ನು ಮಾಡುತ್ತದೆ. ಅನನ್ಯ ಭಕ್ತಿಯಿಂದ ಮತ್ತು ಅತ್ಯಂತ ಏಕಾಗ್ರತೆಯಿಂದ ಮಂತ್ರ ಜಪಿಸಿದರೆ ವ್ಯಕ್ತಿಗೆ ಸಿದ್ಧಿಯು ಪ್ರಾಪ್ತವಾಗುತ್ತದೆ. ಆ ಜೀವಕ್ಕೆ ಅಂತಹ ಮಹಾನ್ ವ್ಯಕ್ತಿಯ (ಗುರುಗಳ) ಭೇಟಿಯಾಗುತ್ತದೆ. ತನಗೆ ಸಮಾಧಾನವಾಗುವ ತನಕ ಆ ಜೀವವು ಆ ವ್ಯಕ್ತಿಯ ಸೇವೆಯನ್ನು ಮಾಡುತ್ತದೆ. ಇಂತಹ ಸಮಯದಲ್ಲಿ ಶಿಷ್ಯನಿಗೆ ಗುರುಮಂತ್ರ ನೀಡಬೇಕು ಎಂದು ಎಲ್ಲಿಯ ತನಕ ಗುರುಗಳಿಗೆ ಅನಿಸುವುದಿಲ್ಲವೋ ಅಲ್ಲಿಯ ತನಕ ಶಿಷ್ಯನು ಸಂಯಮವನ್ನಿಟ್ಟುಕೊಳ್ಳಬೇಕು. ಅದರ ಪರಿಣಾಮವಾಗಿ ಅವನು ಓರ್ವ ಸಾಧಕನೆಂದು ಸಿದ್ಧನಾಗುತ್ತಾನೆ. ತದ್ವಿರುದ್ಧವಾಗಿ ಕೇವಲ ಗ್ರಂಥವನ್ನು ಅಧ್ಯಯನ ಮಾಡಿ ಸಾಧನೆಯನ್ನು ಆರಂಭಿಸುವುದು ಎಂದರೆ ವ್ಯರ್ಥ ಸಾಹಸ ಮಾಡಿದಂತಾಗುತ್ತದೆ. - ಪೂ. ಡಾ. ಓಂ ಉಲಗನಾಥನ್, ಚೆನೈ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಶಿಷ್ಯನಿಗೆ ಗುರುಮಂತ್ರ ನೀಡಬೇಕು’ ಎಂದು ಎಲ್ಲಿಯ ವರೆಗೆ ಗುರುಗಳಿಗೆ ಅನಿಸುವುದಿಲ್ಲವೋ ಅಲ್ಲಿಯ ತನಕ ಶಿಷ್ಯನು ತಾಳ್ಮೆಯನ್ನಿಟ್ಟುಕೊಳ್ಳಬೇಕು