ನೇತೃತ್ವಗುಣ ಮತ್ತು ಪ್ರೇಮಭಾವ ಗುಣಗಳಿಂದ ತುಂಬಿದ ಮತ್ತು ಇತರರ ಆನಂದದಲ್ಲಿ ಆನಂದ ಪಡೆಯುವ ಶೇ. ೬೫ ಆಧ್ಯಾತ್ಮಿಕ ಮಟ್ಟದ ಶ್ರೀ. ರಮಾನಂದ ಗೌಡ !

೧. ಕನ್ನಡ ಗ್ರಂಥಗಳಿಗಾಗಿ ಜಾಹೀರಾತುಗಳನ್ನು ಪಡೆಯಲು ಆಯೋಜಿಸುವುದು ಮತ್ತು
ಸೇವೆಯಲ್ಲಿನ ಅಡಚಣೆಗಳನ್ನು ಕೇಳಿ ಅದಕ್ಕೆ ಉಪಾಯಯೋಜನೆ ಹೇಳುವುದು
ಶ್ರೀ. ರಮಾನಂದ ಗೌಡ
ಶ್ರೀ. ಯಶವಂತ ಕಣಗಲೆಕರ್
೧.೧೨.೨೦೧೫ ರಂದು ನಾನು ಸೇವೆಯ ನಿಮಿತ್ತ ಮಂಗಳೂರಿಗೆ ತಲುಪಿದೆ. ಸೇವೆಯ ಬಗ್ಗೆ ನಿರ್ದಿಷ್ಟವಾಗಿ ಮಾತುಕತೆ ಆಗಿರಲಿಲ್ಲ. ಶ್ರೀ. ರಮಾನಂದ ಗೌಡರು ನನಗೆ ಬರಲು ಸಂದೇಶ ನೀಡುವಾಗ, ಕಾಕಾ, ನೀವು ಕರ್ನಾಟಕಕ್ಕೆ ಬನ್ನಿರಿ. ನೀವು ಬಂದನಂತರ ನಿಮ್ಮಿಂದ ಹೇಗೆ  ಲಾಭವನ್ನು ಮಾಡಿಕೊಳ್ಳಬಹುದೆಂದು ನಾವು ನಿರ್ಧರಿಸೋಣ, ಎಂದು ಹೇಳಿದ್ದರು. ನಾನು ತಲುಪುವ ಮೊದಲೇ ರಮಾನಂದಣ್ಣ ನನ್ನ ದಾರಿ ಕಾಯುತ್ತಿದ್ದರು. ಅವರಿಗೆ  ಬೇರೆ ಸೇವೆಗಾಗಿ ಜಿಲ್ಲೆಯಲ್ಲಿ ಹೋಗಲಿಕ್ಕಿತ್ತು. ಸಮಯ ಅಲ್ಪವಿತ್ತು. ನನ್ನ ಆಯೋಜನೆಯನ್ನು ಮಾಡಲಿಕ್ಕಾಗಿ ಅವರು ಕಾದು ನಿಂತಿದ್ದರು. ನಾನು ಬಂದಿದ್ದು ತಿಳಿದ ತಕ್ಷಣ ಅವರು ನನ್ನ ಕೋಣೆಗೆ ಬಂದರು. ನನ್ನ ಕುಶಲೋಪರಿಯ ನಂತರ, ಸೇವೆಯ ಆಯೋಜನೆ  ಹೇಗೆ ಮಾಡಬಹುದು ? ಎಂದು ಕೇಳಿಕೊಂಡರು. ಮುಂಬರುವ ಕನ್ನಡ ಗ್ರಂಥಗಳಿಗಾಗಿ ಜಾಹೀರಾತು ಪಡೆಯುವುದೆಂದು ನಿರ್ಧರಿಸಲಾಯಿತು.
ಸೇವೆಯ ಸಂದರ್ಭದಲ್ಲಿ ಕಾರ್ಯಪದ್ಧತಿಯಂತೆ ಲೆಕ್ಕಪತ್ರ ವಿಭಾಗದಲ್ಲಿ ವಿಚಾರಿಸಿ  ಉಡುಪಿ ಜಿಲ್ಲೆಯಲ್ಲಿ ನನ್ನ ಸೇವೆಯ ವ್ಯವಸ್ಥೆ ಮಾಡಿ ಅವರು ತಮ್ಮ ಸೇವೆಗಾಗಿ ಹೊರಟು ಹೋದರು. ಪ್ರತಿದಿನ ರಾತ್ರಿ ಅವರ ಸಂಚಾರಿವಾಣಿ ಕರೆ ಬರುತ್ತಿತ್ತು ಮತ್ತು ಅಡಚಣೆಗಳನ್ನು ಕೇಳಿ ಅವರು ಅವುಗಳಿಗೆ ಪರಿಹಾರೋಪಾಯಗಳನ್ನು ಹೇಳುತ್ತಿದ್ದರು.
೨. ಗ್ರಂಥದ ಸಂದರ್ಭದಿಂದ ಜಾಹೀರಾತುಗಳನ್ನು ಪಡೆಯುವ ಅಭಿಯಾನವನ್ನು ಪ್ರಥಮ ಬಾರಿ
ಅಳವಡಿಸಿಯೂ ಉತ್ತಮ ಬೆಂಬಲ ದೊರೆಯುವುದು ಮತ್ತು ಈ ಸೇವೆಯಲ್ಲಿ ಎಲ್ಲಿ ಕಡಿಮೆ ಬಿದ್ದೆ,
ಎಂಬುದರ ಅರಿವಾಯಿತು, ಎಂದು ಅಣ್ಣನವರು ಹೇಳುವುದು
ಎಂಟು ದಿನಗಳ ಸೇವೆಯ ನಂತರ ಮುಂಬರುವ ಎಲ್ಲ ಕನ್ನಡ ಗ್ರಂಥಗಳಿಗಾಗಿ ಜಾಹೀರಾತುಗಳು ದೊರೆತವು, ಹಾಗೆಯೇ ಕೆಲವು ಆಂಗ್ಲ ಗ್ರಂಥಗಳಿ ಗಾಗಿಯೂ ಜಾಹಿರಾತುಗಳು ದೊರೆತವು. ಕರ್ನಾಟಕದಲ್ಲಿ ಗ್ರಂಥಗಳಿಗಾಗಿ ಜಾಹೀರಾತು ಪಡೆಯುವ ಅಭಿಯಾನವನ್ನು ಇದೇ ಮೊದಲ ಬಾರಿ ಅಳವಡಿಸಲಾಗಿತ್ತು. ಶ್ರೀ. ರಮಾನಂದಣ್ಣನವರಿಗೆ ಎಷ್ಟು ಆನಂದವಾಯಿತೆಂದರೆ ಅವರು ಸಂಚಾರಿವಾಣಿಯಲ್ಲಿಯೇ ನನಗೆ, ಕಾಕಾ, ‘ನಿಮಗೆ ಯಾವಾಗ ಇಚ್ಛೆಯಾಗುತ್ತದೆಯೋ ಆಗ ನೀವು ಕರ್ನಾಟಕ ರಾಜ್ಯಕ್ಕೆ ಬರಬಹುದು. ನಾವು ಎಲ್ಲಿ ಕಡಿಮೆ ಬಿದ್ದೆವು, ಎಂಬುದು ನಿಮ್ಮಿಂದ ನಮಗೆ ಅರಿವಾಯಿತು’ ಎಂದರು.
೩. ಸೇವೆಗಾಗಿ ಸಾಧಕರು ಲಭ್ಯವಿಲ್ಲದಿದ್ದಾಗ ಅದಕ್ಕಾಗಿ ಧರ್ಮಾಭಿಮಾನಿ
ವ್ಯಾಪಾರಸ್ಥರ ವ್ಯವಸ್ಥೆ ಮಾಡುವುದು
ಮಂಗಳೂರಿನಲ್ಲಿರುವಾಗ ನನ್ನೊಡನೆ ಹೋಗಲು ಸಾಧಕರು ಲಭ್ಯವಿರಲಿಲ್ಲ. ಆಗ ನನ್ನೊಂದಿಗೆ ಹೋಗಲು ರಮಾನಂದಣ್ಣನವರು ಧರ್ಮಾಭಿಮಾನಿ ಉದ್ಯಮಿಯ ವ್ಯವಸ್ಥೆ ಮಾಡಿದರು. ಕಾಕಾರೊಡನೆ ಸೇವೆ ಮಾಡುವಾಗ ಬಹಳಷ್ಟು ಕಲಿಯಲು ದೊರೆಯುತ್ತದೆ, ಎಂದು ಅವರಿಗೆ ಹೇಳಿದರು. ಉದ್ಯಮಿಯ ಚತುಷ್ಚಕ್ರ ವಾಹನದ ಏರ್ಪಾಡನ್ನೂ ಮಾಡಿದ್ದರು. ಅಲ್ಲಿಯೂ ಅನೇಕ ಜಾಹೀರಾತುಗಳು ದೊರೆತವು.
೪. ಸೇವೆಯ ಸಂದರ್ಭದಲ್ಲಿ ಕಲಿಯಲು ಸಿಕ್ಕಿದ ಅಂಶಗಳನ್ನು ಅಭ್ಯಾಸವರ್ಗ ತೆಗೆದುಕೊಂಡು ಹೇಳುವುದು
ನಾನು ಮಂಗಳೂರಿನಿಂದ ಮರಳಿ ಹೊರಡು ವಾಗ ಅವರು ನನ್ನನ್ನು ತಮ್ಮ ಕೋಣೆಗೆ ಕರೆದು, ಕಾಕಾ, ಸಮಾಜದಲ್ಲಿನ ಕೆಲವು ಜನರಿಗೆ ದೇವ-ಧರ್ಮ ಇಷ್ಟವಿರುವುದಿಲ್ಲ. ಅವರನ್ನು ಸಾಧನೆ ಯೆಡೆಗೆ ಹೇಗೆ ಹೊರಳಿಸುವುದು ? ಎಂದು ಕೇಳಿದರು. ಅದಕ್ಕೆ ನಾನು ಅಣ್ಣರಿಗೆ ವ್ಯಕ್ತಿತ್ವ ವಿಕಸನ ವಿಷಯದಲ್ಲಿ ಕೆಲವು ಅಂಶಗಳನ್ನು ಹೇಳಿದೆ ಮತ್ತು ಅವರು ಅವುಗಳನ್ನು ಕೂಡಲೇ ಬರೆದುಕೊಂಡರು. ಮಾತ್ರವಲ್ಲ ಮರುದಿನ ಜಿಲ್ಲೆಯಲ್ಲಿನ ಎಲ್ಲ ಸಾಧಕರನ್ನು ಕರೆದು ಒಂದು ಅಭ್ಯಾಸವರ್ಗ ಆಯೋಜಿಸಿದರು ಮತ್ತು ಅದರಲ್ಲಿ ಆ ಅಂಶಗಳನ್ನು ಹೇಳಿದರು.
೫. ಸಾಧಕರ ಆಧ್ಯಾತ್ಮಿಕ ಮಟ್ಟವನ್ನು ಸರಿಯಾಗಿ ಗುರುತಿಸುವುದು
ಆಧ್ಯಾತ್ಮಿಕ ಉನ್ನತಿಯಾಗುತ್ತಿರುವ ಸಾಧಕರೆಡೆಗೆ  ಸತತವಾಗಿ ಅವರ ಗಮನವಿರುತ್ತದೆ. ಯಾವ ಸಾಧಕನ ಆಧ್ಯಾತ್ಮಿಕ ಮಟ್ಟವು ಎಷ್ಟು ಶೇಕಡಾವಾರು ಆಯಿತು ?,
ಎಂಬುದನ್ನು ಅವರು ಸರಿಯಾಗಿ ಹೇಳಬಲ್ಲರು. ಅದರ ಬಗ್ಗೆ ನಾನು ಅವರನ್ನು, ತಾವು ಶೇಕಡಾವಾರು ಹೇಗೆ ನಿರ್ಧರಿಸುತ್ತೀರಿ, ಎಂದು ಕೇಳಿದಾಗ ಅವರು, ಗುರುಕೃಪೆ ಎಂದು ಹೇಳಿದರು. ಕರ್ನಾಟಕದಲ್ಲಿನ ಎಲ್ಲ ಸಾಧಕರಿಗೆ ಅವರ ಬಗ್ಗೆ ಗೌರವವಿದೆ.
೬. ಸತ್ಸಂಗದ ಮಾಧ್ಯಮದಿಂದ
ಕರ್ನಾಟಕ ರಾಜ್ಯದಾದ್ಯಂತ ಜಾಹೀರಾತು ಸೇವೆಯ ಬಗೆಗಿನ ಅಂಶಗಳನ್ನು
ಮಂಡಿಸಿ ಸೇವೆಯಲ್ಲಿ ವೇಗ ತರುವುದು
ಮಾರ್ಚ್ ೨೦೧೬ ರಲ್ಲಿ ಬೆಂಗಳೂರಿನಲ್ಲಿ ಸೇವೆಯ
ಆಯೋಜನೆಯಿತ್ತು. ಆಗ ಸತ್ಸಂಗದಲ್ಲಿ ಆದರ್ಶ ಜಾಹಿರಾತು ಸೇವೆಯ ವಿಷಯದಲ್ಲಿ ಶಿಬಿರ ಆಯೋಜಿಸಲಾಗಿತ್ತು. ಆಗ ರಮಾನಂದ ಅಣ್ಣರವರು ನನಗೆ ಕೆಲವು ಅಂಶಗಳನ್ನು ಮಂಡಿಸುವ ಅವಕಾಶ ನೀಡಿದರು. ಅಂಶಗಳನ್ನು ಮಂಡಿಸಿದಾಗ ಅವರು ನನ್ನನ್ನು ಬಹಳ ಪ್ರಶಂಸಿಸಿದರು. ಅವರು ನನಗೆ ಜಾಹೀರಾತು ಸೇವೆಯಿಂದ ಗುಣವೃದ್ಧಿ ಮತ್ತು ಆಧ್ಯಾತ್ಮಿಕ ಲಾಭ ಹೇಗೆ ಆಗುತ್ತದೆ ?, ಈ ವಿಷಯದ ಅಂಶಗಳನ್ನು ಕಳುಹಿಸಲು ಹೇಳಿದರು. ಕಳುಹಿಸಿದ ಅಂಶಗಳನ್ನು ಅಣ್ಣರವರು ಕನ್ನಡದಲ್ಲಿ ಅನುವಾದಿಸಿ ಸತ್ಸಂಗದಲ್ಲಿ ಮಂಡಿಸಲು ಪ್ರಾರಂಭಿಸಿದರು. ಆದ್ದರಿಂದ ಜಾಹೀರಾತು ಸೇವೆಯಲ್ಲಿ ವೇಗ ಬಂತು, ಎಂದು ಅಣ್ಣರವರು ಹೇಳಿದರು.
೭. ಸಂಚಾರಿವಾಣಿ ಸೆಟ್‌ಗಾಗಿ ಹಠ ಮಾಡುವ ಮಗನನ್ನು ಶಿಕ್ಷಿಸುವುದು ಮತ್ತು ನಂತರ ಅವನೊಡನೆ ಪ್ರೀತಿಯಿಂದ ಮಾತನಾಡುವುದು
ನಾನು ಅಣ್ಣರವರು ಯಾವತ್ತು ಯಾರ ಮೇಲೆಯೂ ಕೋಪಗೊಂಡಿದ್ದು ನೋಡಲಿಲ್ಲ. ಒಮ್ಮೆ ನಾನು ರಮಾನಂದಣ್ಣನವರು ವಾಸ್ತವ್ಯವಿರುವ ಕೋಣೆಯಲ್ಲಿದ್ದಾಗ ಅವರ ಚಿಕ್ಕ ಮಗನು ಪದೇ ಪದೇ ಸಂಚಾರಿವಾಣಿ ಸೆಟ್‌ಗಾಗಿ ಹಠ ಮಾಡುತ್ತಿದ್ದನು. ಆಗ ಸಂಭಾಷಣೆಯಲ್ಲಿ ವ್ಯತ್ಯಯ (ಅಡ್ಡಿ) ಬರುತ್ತಿತ್ತು. ಇದನ್ನು ನೋಡಿ ಅವರು ಮಗನನ್ನು ಶಿಕ್ಷಿಸಿದರು. ಸ್ವಲ್ಪ ಸಮಯದ ನಂತರ ಅವರು ಮಗನೊಂದಿಗೆ ಪ್ರೀತಿಯಿಂದ ಮಾತನಾಡಿದರು.
೮. ಇತರರ ಆನಂದದಲ್ಲಿ ಆನಂದ ಪಡೆಯುವುದರಿಂದ ಅಣ್ಣರಿಗೆ
ಯಾವುದೇ ದೋಷ ಸ್ಪರ್ಶ
ಮಾಡುತ್ತಿಲ್ಲ ಎಂದು ಅರಿವಾಗುವುದು
ವ್ಯಕ್ತಿತ್ವ ವಿಕಾಸದಲ್ಲಿ ಮಾನಸಿಕ ವಿಕಾಸವು ಬಹಳ ಮಹತ್ವದ ಘಟಕವಾಗಿದೆ. ಮಾನಸಿಕ ವಿಕಾಸ ಎಂದರೆ ಇತರರ ಆನಂದದಲ್ಲಿ ಆನಂದ ಪಡೆಯುವುದು ಮತ್ತು ಇದುವೇ ನೈಜ ಮನುಷ್ಯತ್ವ ! ರಮಾನಂದಣ್ಣನವರಿಗೆ ಮಾತ್ರ ಇದು ಸಾಧ್ಯವಾಗಿದೆ. ಇದರ ಕಾರಣವೇನೆಂದರೆ ಕೋಪ, ದ್ವೇಷ, ಮತ್ತು ಮತ್ಸರ ಈ ದೋಷಗಳು ಅವರ ಅಂತರ್ಮನಸ್ಸನ್ನೇ ಸ್ಪರ್ಶಿಸಿ ಇಲ್ಲ. ನಮ್ಮೆಲ್ಲ ಸಾಧಕರ ಮನಸ್ಸುಗಳು ಅದೇ ರೀತಿ ನಿರ್ಮಲವಾಗಲಿ, ಎಂಬುದೇ ಶ್ರೀ ಗುರುಚರಣಗಳಲ್ಲಿ ಪ್ರಾರ್ಥನೆ !
- ಶ್ರೀ. ಯಶವಂತ ಕಣಗಲೆಕರ್, ಬೆಳಗಾವಿ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನೇತೃತ್ವಗುಣ ಮತ್ತು ಪ್ರೇಮಭಾವ ಗುಣಗಳಿಂದ ತುಂಬಿದ ಮತ್ತು ಇತರರ ಆನಂದದಲ್ಲಿ ಆನಂದ ಪಡೆಯುವ ಶೇ. ೬೫ ಆಧ್ಯಾತ್ಮಿಕ ಮಟ್ಟದ ಶ್ರೀ. ರಮಾನಂದ ಗೌಡ !